ಶಿವಮೊಗ್ಗ: ಸಾಗರ ಸುಭಾಷ್ ನಗರ ಯುವಕಸಂಘದ ವತಿಯಿಂದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆಯಿತು.
ಶಿವಮೊಗ್ಗ ಜಿಲ್ಲೆಯ ಸಾಗರದ ಸುಭಾಷ್ ನಗರ ಯುವಕ ಸಂಘದ ವತಿಯಿಂದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಶುಕ್ರವಾರದಂದು ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.
ಇದರ ಮುಖ್ಯ ಅತಿಥಿಗಳಾಗಿ ಸುಭಾಷ್ ನಗರ ಯುವಕ ಸಂಘದ ಗೌರವಾಧ್ಯಕ್ಷರಾದ ಮಂಜುನಾಥ್ ಎಸ್.ಡಿ, ಅಧ್ಯಕ್ಷರಾದ ಮಹೇಶ್ ಜಿ ಆಚಾರ್, ನಗರಸಭೆ ಅಧ್ಯಕ್ಷರಾದ ಮೈತ್ರಿ ವೀರೇಂದ್ರ ಪಾಟೀಲ್, ನಗರಸಭೆ ಮಾಜಿ ಸದಸ್ಯರಾದ ಪುರುಷೋತ್ತಮ, ಎಸ್. ಎಲ್ ಮಂಜುನಾಥ್, ವಕೀಲರಾದ ಪ್ರೇಮ್ ಸಿಂಗ್, ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಹಾಜರಿದ್ದರು.
ಇದೇ ವೇಳೆ ನಾಟಿ ವೈದ್ಯರಾದ ಬಿ.ಕೆ ನಾರಾಯಣ ಭಟ್, ಅಮೃತ ಕ್ಲಿನಿಕ್ ವೈದ್ಯರಾದ ಡಾ. ಬಿ. ಗಿರೀಶ್ ಭಟ್ ಹಾಗೂ ಯೋಗ ಪಟು ಕುಮಾರಿ ಸನ್ನಿಧಿ ಎಸ್.ವಿ ಅವರನ್ನು ಸುಭಾಷ್ ನಗರ ಯುವಕರ ಸಂಘದಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಭಾಷ್ ನಗರ ಯುವಕ ಸಂಘದ ಪದಾಧಿಕಾರಿಗಳಾದ ಶ್ಯಾಮ್, ಗುರುಪ್ರಸಾದ್, ನರೇಶ್, ಅರುಣ್ ಕುಮಾರ್, ರವಿ, ಪ್ರಜಿತ್, ಸಂದೀಪ್, ಸುನೀಲ್ ಡ್ಯಾನಿ, ಕಾರ್ತಿಕ್, ಪವನಕುಮಾರ್, ಭರತ್, ರಾಜು, ಅನಿಲ್, ಅನಿಶ್, ಶಿವರಾಜ ಹಾಗೂ ರಾಘು ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಾಗರತ್ನ ಪ್ರಾರ್ಥಿಸಿದರು, ಪ್ರತೀಕ್ಷಾ ಆರ್ ನಿರೂಪಿಸಿದರು.
ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಮಹಿಳೆಯ ಬಗ್ಗೆ ಗಾಳಿಗಿಂತ ವೇಗವಾಗಿ ಸುದ್ದಿ ಹರಡುತ್ತದೆ: ಸುಪ್ರೀಂ ಕೋರ್ಟ್
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ