ಕರಾಚಿ : ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಿಲ್ಲುವಂತೆ ಕಾಣುತ್ತಿಲ್ಲ. ಬಲೂಚಿಸ್ತಾನ ಪ್ರಾಂತ್ಯದ ಬಂದರು ನಗರ ಗ್ವಾದರ್ನಲ್ಲಿ ಗುರುವಾರ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಗ್ವಾದರ್ ಪೊಲೀಸ್ ಠಾಣೆಯ ಎಸ್ಎಚ್ಒ ಮೊಹ್ಸಿನ್ ಅಲಿ ಅವರ ಪ್ರಕಾರ, ಅಪರಿಚಿತ ಬಂದೂಕುಧಾರಿಗಳು ಸುರ್ಂದರ್ ಪ್ರದೇಶದ ಗ್ವಾದರ್ ಫಿಶ್ ಹಾರ್ಬರ್ ಬಳಿಯ ವಸತಿ ಕ್ವಾರ್ಟರ್ಸ್ನಲ್ಲಿ ವಿವೇಚನೆಯಿಲ್ಲದೆ ಗುಂಡು ಹಾರಿಸಿದರು. ಮೃತರು ಮತ್ತು ಗಾಯಗೊಂಡವರು ಪಂಜಾಬ್ನ ಖಾನೆವಾಲ್ ಜಿಲ್ಲೆಯವರಾಗಿದ್ದು, ಈ ಪ್ರದೇಶದ ಕ್ಷೌರಿಕ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಇನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಮಾತನಾಡಿ, ಉಗ್ರರು ಮತ್ತು ಅವರ ಸಹಚರರನ್ನ ಬಂಧಿಸಲು ಎಲ್ಲಾ ರೀತಿಯ ಬಲವನ್ನ ಬಳಸಲಾಗುವುದು ಎಂದು ಹೇಳಿದರು.
Job Alert : ಉದ್ಯೋಗ ನಿರೀಕ್ಷಿತರಿಗೆ ಗುಡ್ ನ್ಯೂಸ್ : ‘SBI’ನಲ್ಲಿ 12,000 ಖಾಲಿ ಹುದ್ದೆಗಳಿಗೆ ನೇಮಕಾತಿ
ಮದ್ಯಪಾನ ಮಾಡುವ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಹೊಸ ಅಧ್ಯಯನ ; ಈ ಸತ್ಯ ಗೊತ್ತಾದ್ರೆ ಕಥೆ ಅಷ್ಟೆ?