ಚಾಮರಾಜನಗರ: ಆ ಶಿವನ ದೇಗುಲವನ್ನು ಮೈಸೂರಿನ ಮಹಾರಾಜರ ಕಾಲದಲ್ಲಿ ಕಟ್ಟಿಸಲಾಗಿತ್ತು. ಸರಿಯಾದ ನಿರ್ವಹಣೆಯಿಲ್ಲದೇ ಪಾಳುಪಿದ್ದಿತ್ತು. ಈ ಪಾಳುಬಿದ್ದ ದೇಗುಲವನ್ನೇ ತಮ್ಮ ರೆಸ್ಟೋರೆಂಟ್ ಮಾಡಿಕೊಂಡ ಪುಂಡರು, ಶಿವಲಿಂಗದ ಮೇಲೆ ಮದ್ಯದ ಬಾಟಲಿಯನ್ನು ಇರಿಸಿ ಕುಡಿದು, ವಿಕೃತಿ ಮೆರೆದಿರುವಂತ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿ ನಡೆದಿದೆ.
ಚಾಮರಾಜನಗರದ ಉಪ್ಪಾರ ಬೀದಿಯಲ್ಲಿ ಮೈಸೂರಿನ ಮಹಾರಾಜರ ಕಾಲದಲ್ಲಿ ಕಟ್ಟಿಸಿರುವಂತ ಶಿವನ ದೇಗುಲವೊಂದು ಪಾಳು ಬಿದ್ದಿತ್ತು. ಈ ದೇಗುಲವನ್ನೇ ಕುಡುಕರು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಪಾಳು ಬಿದ್ದಂತ ದೇಗುಲದಲ್ಲಿ ಮೀಸೆ ಚಿಗುರುವ ಮುನ್ನವೇ ಮದ್ಯಕ್ಕೆ ದಾಸರಾಗಿರುವಂತ ಪಡ್ಡೆ ಹುಡುಗರು ಕುಡಿಯುವ ಅಡ್ಡೆಯನ್ನಾಗಿಸಿಕೊಂಡಿದ್ದಾರೆ.
ಶಿವನ ಲಿಂಗದ ಮೇಲೆ ಮದ್ಯದ ಬಾಟಲಿಯನ್ನು ಇರಿಸಿ ಕುಡಿಯುತ್ತಿದ್ದಂತ ಸಂದರ್ಭದಲ್ಲೇ ಮಾದ್ಯಮದವರ ಕ್ಯಾಮರಾ ಕಂಡು ಅಲ್ಲಿಂದ ಪರಾರಿಯಾದಂತ ಘಟನೆ ನಡೆದಿದೆ. ಪೊಲೀಸರು ಗಸ್ತು ತಿರುಗುತ್ತಿದ್ದರೇ ಹೀಗೆ ಆಗುತ್ತಿರಲಿಲ್ಲ ಎಂಬುದು ಸ್ಥಳೀಯರ ಆರೋಪ. ಅಲ್ಲದೇ ದೇಗುಲವನ್ನು ಶುದ್ಧಗೊಳಿಸಿ, ಪುಂಡರ ಹಾವಳಿಯನ್ನು ತಪ್ಪಿಸಿ. ಮಟ ಮಟ ಮಧ್ಯಾಹ್ನವೇ ಹಾದಿ ಬೀದಿಯಲ್ಲಿ ಈ ಪುಂಡರು ಕುಡಿದು ತೂರಾಡೋದು ಜಾಸ್ತಿ ಆಗಿದೆ ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.