Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟಿಕೆಟ್ ದಲ್ಲಾಳಿಗಳಿಗೆ ಬಿಗ್ ಶಾಕ್: IRCTC ಪೋರ್ಟಲ್‌ನಿಂದ 3 ಕೋಟಿ ನಕಲಿ ಖಾತೆಗಳ ಕಿತ್ತೆಸೆದ ರೈಲ್ವೆ ಇಲಾಖೆ!

26/03/2026 6:52 AM

ಹೆಚ್ಚಾದ ತೂಕ ಇಳಿಸಿಕೊಳ್ಳಬೇಕೇ? ನಿಮ್ಮ ಆಹಾರ ಕ್ರಮದಲ್ಲಿರಲಿ ಈ 5 ಡ್ರೈ ಫ್ರೂಟ್ಸ್!

26/03/2026 6:45 AM

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ !

26/03/2026 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ದೇವಸ್ಥಾನ ಹಾಗೂ ರೈತರ ಜಮೀನು ‘ವಕ್ಫ್’ಗೆ ಸೇರ್ಪಡೆ ಇಲ್ಲ: ಸಚಿವ ಜಮೀರ್ ಅಹಮದ್ ಸ್ಪಷ್ಟನೆ
KARNATAKA

BIG NEWS: ದೇವಸ್ಥಾನ ಹಾಗೂ ರೈತರ ಜಮೀನು ‘ವಕ್ಫ್’ಗೆ ಸೇರ್ಪಡೆ ಇಲ್ಲ: ಸಚಿವ ಜಮೀರ್ ಅಹಮದ್ ಸ್ಪಷ್ಟನೆ

By kannadanewsnow0918/12/2024 8:19 PM

ಬೆಳಗಾವಿ ಸುವರ್ಣಸೌಧ : ದೇವಸ್ಥಾನ ಹಾಗೂ ರೈತರ ಜಮೀನುಗಳನ್ನು ವಕ್ಫ್ಗೆ ಸೇರ್ಪಡೆ ಮಾಡುವುದಿಲ್ಲ. ಒಂದು ವೇಳೆ ವಕ್ಫ್ ಆಸ್ತಿ ಸಂಬಂಧವಾಗಿ ನೋಟಿಸು ನೀಡಿದ್ದರೆ, ಆ ನೋಟಿಸಗಳನ್ನು ಹಿಂಪಡೆಯುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ, ವಿರೋಧ ಪಕ್ಷದ ನಾಯಕರು ನಿಯಮ 69 ಅಡಿ, ರೈತರ ಜಮೀನು, ಮಠ-ಮಂದಿರ ಜಾಗ, ಸಾರ್ವಜನಿಕರ ಆಸ್ತಿ, ಸರ್ಕಾರಿ ಕಟ್ಟಡಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ, ಗುರುವಾರ ವಿಧಾನಸಭೆಯ ಕಲಾಪದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಉತ್ತರಿಸಿದರು.

ಒಂದು ವೇಳೆ ವಕ್ಫ್ ಜಾಗದಲ್ಲಿಯೇ ದೇವಸ್ಥಾನ ನಿರ್ಮಿಸಿದ್ದರೂ ಕೂಡ, ಸರ್ಕಾರ ಅದನ್ನು ಮುಟ್ಟುವುದಿಲ್ಲ. ಬದಲಿಗೆ ದೇವಸ್ಥಾನಕ್ಕೆ ಮರಳಿ ಆ ಜಾಗವನ್ನು ನೀಡಲಾಗುವುದು. ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಸಹ ವಕ್ಫ್ ಸೇರ್ಪಡೆ ಮಾಡುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕಳೆದ ಜೂನ್ ತಿಂಗಳ 25 ತಾರೀಖಿನಂದು ವಿಜಯಪುರ ಜಿಲ್ಲೆಯಲ್ಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ಕಂದಾಯ ಅಧಿಕಾರಿಗಳು ವಕ್ಫ್ ಆಸ್ತಿ ಅತಿಕ್ರಮಣಕ್ಕೆ ನೋಟಿಸು ನೀಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿ ರಾಜ್ಯದ್ಯಂತ ಗೊಂದಲ ಮೂಡಿಸಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಸಮುದಾಯದ ಸೇವೆಗಾಗಿ ಮುಸ್ಲಿಂ ದಾನಿಗಳು ನೀಡಿದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ 1.28 ಲಕ್ಷ ಎಕರೆ ವಕ್ಫ್ ಆಸ್ತಿ ಇರುವುದಾಗಿ ದಾಖಲೆಗಳಲ್ಲಿದೆ. ಈ ಜಮೀನಿನಲ್ಲಿ 47,263 ಎಕರೆ ಇನಾಂ ರದ್ದತಿ ಹಾಗೂ 23,623 ಎಕರೆ ಭೂ ಸುಧಾರಣೆ ಕಾಯ್ದೆ ಅನುಸಾರ ಉಳುವವರಿಗೆ ಮಂಜೂರು ಮಾಡಲಾಗಿದೆ. ಸುಮಾರು 3000 ಎಕರೆ ವಕ್ಫ್ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರಕವೇ ವಶಪಡಿಸಿಕೊಂಡಿದೆ. ಸುಮಾರು 17,969 ಎಕರೆ ವಕ್ಫ್ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಶೇ.95 ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಶೇ.5 ರಷ್ಟು ಜಮೀನನ್ನು ಅನ್ಯ ಕೋಮಿನವರ ಸುಪರ್ಧಿಯಲ್ಲಿದೆ ಎಂದರು.

ವಕ್ಫ್ ಕಾಯ್ದೆಯು ಸ್ವಾತಂತ್ರö್ಯ ಬರುವ ಮುಂಚೆ ಅಂದರೆ 1830ರಲ್ಲಿ ರಚನೆಯಾಗಿದೆ. ಬ್ರಿಟೀಷ್‌ರು 1923ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಿದರು. ಸ್ವಾತಂತ್ರö್ಯ ನಂತರ 1954ರಲ್ಲಿ ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಜಾರಿಗೊಳಿಸಿದೆ. 1988 ಹಾಗೂ 2017 ರಲ್ಲಿ ಸರ್ವೋಚ್ಛ ನ್ಯಾಯಾಲಯ ವಕ್ಫ್ ಕುರಿತು ಆದೇಶ ನೀಡಿ, ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದೆ. ಈ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಪಡೆದು ಹಿಂದಿನ ಸರ್ಕಾರಗಳು ಕ್ರಮ ಕೈಗೊಂಡಿವೆ. ಕೇಂದ್ರ ಸರ್ಕಾರವು ಸಹ ವಕ್ಫ್ ಆಸ್ತಿಗಳ ರಕ್ಷಣೆಗೆ ರೂ.325 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ರೂ.6 ಕೋಟಿಯನ್ನು ಕರ್ನಾಟಕಕ್ಕೆ ನೀಡಿದೆ. ಇದನ್ನು ಬಳಿಸಿ ಹಿಂದಿನ ಸರ್ಕಾರ ವಕ್ಫ್ ಜಮೀನುಗಳ ಜಿಪಿಎಸ್ ಮ್ಯಾಪಿಂಗ್ ಹಾಗೂ ಫ್ಲಾಗಿಂಗ್ ಕಾರ್ಯಕ್ಕೆ ಚಾಲನೆ ನೀಡಿತ್ತು. ಈ ವಿಚಾರದಲ್ಲಿ ವಿನಾಕಾರಣ ರಾಜಕೀಯ ಸಲ್ಲದು. ಕಾಯ್ದೆ ಅನುಸಾರ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ನೋಟಿಸು ನೀಡುವ ಕೆಲಸ ಮಾಡಿವೆ. ಮೈಸೂರು ಮುನೇಶ್ವರ ನಗರದಲ್ಲಿ ವಕ್ಫ್ ಜಾಗದಲ್ಲಿ ವಾಸವಾಗಿರುವ ಕುಟುಂಬಗಳನ್ನು ಒಕ್ಕಲು ಎಬ್ಬಿಸುವುದಿಲ್ಲ. ದಿವಾನ್ ವಿಶ್ವೇಶ್ವರಯ್ಯನವರು ಓದಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶಾಲೆಯ ವಿವಾದನ್ನು ಸರ್ಕಾರ ಪರಿಹರಿಸಿದೆ. ಶಾಲೆಗೆ ಜಮೀನು ಮಂಜೂರು ಮಾಡಿ ಪಹಣಿಯನ್ನು ನೀಡಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಕಲ್ಯಾಣ ಕರ್ನಾಟಕದ 18 ಹೊಸ ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ: ಅಜಯ್ ಸಿಂಗ್

ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಜ.31, 2025 ರವರೆಗೆ ವಿಸ್ತರಿಸಿದ EPFO – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ಹೆಚ್ಚಾದ ತೂಕ ಇಳಿಸಿಕೊಳ್ಳಬೇಕೇ? ನಿಮ್ಮ ಆಹಾರ ಕ್ರಮದಲ್ಲಿರಲಿ ಈ 5 ಡ್ರೈ ಫ್ರೂಟ್ಸ್!

26/03/2026 6:45 AM2 Mins Read

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ !

26/03/2026 6:41 AM1 Min Read

ALERT : ಚಹಾ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆಗಳು ಎದುರಾಗಬಹುದು !

26/03/2026 6:30 AM1 Min Read
Recent News

ಟಿಕೆಟ್ ದಲ್ಲಾಳಿಗಳಿಗೆ ಬಿಗ್ ಶಾಕ್: IRCTC ಪೋರ್ಟಲ್‌ನಿಂದ 3 ಕೋಟಿ ನಕಲಿ ಖಾತೆಗಳ ಕಿತ್ತೆಸೆದ ರೈಲ್ವೆ ಇಲಾಖೆ!

26/03/2026 6:52 AM

ಹೆಚ್ಚಾದ ತೂಕ ಇಳಿಸಿಕೊಳ್ಳಬೇಕೇ? ನಿಮ್ಮ ಆಹಾರ ಕ್ರಮದಲ್ಲಿರಲಿ ಈ 5 ಡ್ರೈ ಫ್ರೂಟ್ಸ್!

26/03/2026 6:45 AM

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ !

26/03/2026 6:41 AM

ALERT : ಚಹಾ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆಗಳು ಎದುರಾಗಬಹುದು !

26/03/2026 6:30 AM
State News
KARNATAKA

ಹೆಚ್ಚಾದ ತೂಕ ಇಳಿಸಿಕೊಳ್ಳಬೇಕೇ? ನಿಮ್ಮ ಆಹಾರ ಕ್ರಮದಲ್ಲಿರಲಿ ಈ 5 ಡ್ರೈ ಫ್ರೂಟ್ಸ್!

By kannadanewsnow5726/03/2026 6:45 AM KARNATAKA 2 Mins Read

ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಹೆಚ್ಚಿನವರು ಬೊಜ್ಜು ಅಥವಾ ಅತಿಯಾದ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.…

ರಾಜ್ಯದ `SC-ST’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ !

26/03/2026 6:41 AM

ALERT : ಚಹಾ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆಗಳು ಎದುರಾಗಬಹುದು !

26/03/2026 6:30 AM

ರಾಜ್ಯದಲ್ಲಿ ‘ಪೊಲೀಸ್ ನೇಮಕಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ!

26/03/2026 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.