ರಾಯಚೂರು: ಮುನ್ನೂರು ಕಾಪು (ಬಲಿಜ) ಸಮಾಜ ವತಿಯಿಂದ ಪ್ರತಿ ವರ್ಷ ರಾಯಚೂರಿನಲ್ಲಿ ಆಯೋಜಿಸುವ “ಕಾರ ಹುಣ್ಣಿಮೆ ಮುಂಗಾರು ಸಾಂಸ್ಕೃತಿಕ ಹಬ್ಬದ” ನಿಮಿತ್ಯ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರೋಂದಿಗೆ ತೆಲಂಗಾಣ ಮುಖ್ಯಮಂತ್ರಿಗಳಾದ ಅನುಮೂಲ ರೇವಂತ್ ರೆಡ್ಡಿ ಅವರಿಗೆ ಮಾಜಿ ಶಾಸಕ ಎ ಪಾಪರೆಡ್ಡಿ ಅವರು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಹೈದರಾಬಾದ್ ನಲ್ಲಿ ಮುಖ್ಯಮಂತ್ರಿ ಅವರ ನಿವಾಸಕ್ಕೆ ರವಿ ಬೋಸರಾಜು ಅವರೊಂದಿಗೆ ಸಮಾಜದ ಮುಖಂಡರು ಭೇಟಿ ನೀಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದರು.
ಕಾರ ಹುಣ್ಣಿಮೆ ಹಬ್ಬವು ಸಮಾಜದ ಪರಂಪರೆ, ಸಂಸ್ಕೃತಿ ಹಾಗೂ ಐತಿಹಾಸಿಕ ಮಹತ್ವವನ್ನು ಪ್ರತಿಬಿಂಬಿಸುವಂತಹ ಒಂದು ಮಹತ್ವದ ಉತ್ಸವವಾಗಿದೆ. ತಾವು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಮುಖ್ಯಮಂತ್ರಿಗಳು ಆಹ್ವಾನಕ್ಕೆ ಪ್ರತಿಕ್ರಿಯಿಸಿ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಇಂತಹ ರೈತ ಪರವಾಗಿರುವ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ದೇಶದ ಬೆನ್ನೆಲುಬಾದ ಅನ್ನದಾತ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಅನುಮೂಲ ರೇವಂತ್ ರೆಡ್ಡಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್, ಮುಖಂಡರಾದ ಉಪ್ಪೆಟ್ಟು ಗೋವಿಂದರೆಡ್ಡಿ, ನಗರ ಸಭೆ ಸದಸ್ಯರಾದ ತಿಮ್ಮಾರೆಡ್ಡಿ, ವೆಂಕಟೇಶ ರೆಡ್ಡಿ, ಬಂಗಿ ನರಸರಡ್ಡಿ, ಮಂಜು ಶ್ರೀನಿವಾಸ, ಮಹೇಂದ್ರ ರೆಡ್ಡಿ, ಬಂಗಿ ಮುನಿರೆಡ್ಡಿ, ನರಸ ರೆಡ್ಡಿ, ಶ್ರೀನಿವಾಸ್, ಪ್ರವೀಣ್, ಶೇಖರ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Mock drill: ನಾಳೆ ಬೆಂಗಳೂರಿನ 2 ಕಡೆ ಮಾಕ್ ಡ್ರಿಲ್: ಮೊಳಗಲಿದೆ ಯುದ್ಧದ ಸೈರನ್!
BIG NEWS: KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: KPSC ಸ್ಪಷ್ಟನೆ