ಶಿವಮೊಗ್ಗ : ಶಿಕ್ಷಕರ ಸಂಘಗಳು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ ತಿಳಿಸಿದರು.
ಇಂದು ಶಿವಮೊಗ್ಗದ ಸಾಗರದ ನಗರದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಮಹಾಸಭೆ ಮತ್ತು ಶೈಕ್ಷಣಿಕ ಕರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಗಳು ಉತ್ತಮವಾಗಿ ಕೆಲಸ ಮಾಡಿದೆ. ಸಾಗರ ತಾಲ್ಲೂಕಿನಲ್ಲಿ ಹಾಲಿ ಅಧ್ಯಕ್ಷ ಮಾಲತೇಶಪ್ಪ ಅವರ ನೇತೃತ್ವದಲ್ಲಿ ಸಂಘವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಉತ್ತಮ ಕೆಲಸ ಮಾಡಿದ ಅಧ್ಯಕ್ಷರನ್ನು, ಸಂಘವನ್ನು ಅಭಿನಂದಿಸುವುದು ಎಲ್ಲರ ಕರ್ತವ್ಯ. ಸಂಘಟನೆ ಪ್ರಾರಂಭವಾಗಿ 55 ವರ್ಷವಾಗಿದ್ದು, ರಾಜ್ಯದಲ್ಲಿ ಶಿಕ್ಷಕರ ಸಂಘವು ಉತ್ತಮ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲಕಾಲಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಇಂತಹ ಕರ‍್ಯಾಗಾರಗಳ ಮೂಲಕ ಚಿಂತನ ಮಂಥನ ಅಗತ್ಯ ಎಂದು ಹೇಳಿದರು.

ಹಿರಿಯ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ತಾಲ್ಲೂಕಿನಲ್ಲಿ ಶಿಕ್ಷಕ ಸಮೂಹ ಉತ್ತಮ ಕೆಲಸ ಮಾಡುತ್ತಿದೆ. ಮರ‍್ನಾಲ್ಕು ಜನ ಶಿಕ್ಷಕರು ಮಾಡುವ ಲೋಪದಿಂದ ಬಹುದೊಡ್ಡ ಶಿಕ್ಷಕ ಸಮೂಹ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವು ಕಡೆಗಳಲ್ಲಿ ಶಿಕ್ಷಕರು ಕುಡಿದು ಶಾಲೆಗೆ ಬರುತ್ತಾರೆ ಎನ್ನುವ ದೂರುಗಳಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ. ಪೋಷಕರು, ಸಮಾಜ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿ ಕೊಂಡಿದೆ. ಅದನ್ನು ನಿಜಗೊಳಿಸಲು ನಿಮ್ಮ ಪ್ರಯತ್ನ ಸದಾ ಇರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾಲತೇಶ್, ತಾಲ್ಲೂಕಿನಲ್ಲಿ ಶಿಕ್ಷಕ ಸಮೂಹ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಅರ್ಹನಿಶಿ ದುಡಿಯುತ್ತಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಕರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಸದ್ಗುರು ಟೀರ‍್ಸ್ ಕಾರ್ನರ್ ಮೂಲಕ ಶಿಕ್ಷಕರಿಗೆ ಅನೇಕ ಶೈಕ್ಷಣಿಕ ಮಾಹಿತಿ ನೀಡಲಾಗುತ್ತಿದೆ. ಶಿಕ್ಷಕರಿಗೆ ಬೇಕಾದ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸಲಾಗುತ್ತಿದೆ. ಶಿಕ್ಷಕರಿಗೆ ಸಮಸ್ಯೆ ಬಂದಾಗ ಸಂಘವು ಹೋರಾಟದಿಂದ ಹಿಂದೆ ಸರಿದಿಲ್ಲ. ಶಿಕ್ಷಕರ ಎಲ್ಲ ಬೇಡಿಕೆಗಳಿಗೆ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಕ್ಷಕ ಸ್ನೇಹಿ ಕಾರ್ಯಕ್ರಮಗಳನ್ನು ಸಂಘವು ಹಂತಹAತವಾಗಿ ನಡೆಸಿಕೊಂಡು ಬರುತ್ತದೆ ಎಂದು ತಿಳಿಸಿದರು.

ಶಿಕ್ಷಕರಲ್ಲಿ ಆರ್ಥಿಕ ನಿರ್ವಹಣೆ ಕುರಿತು ಶಂಕರ್ ಶಿಕಾರಿಪುರ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಡಾ. ಅನ್ನಪೂರ್ಣ, ಭೂಮೇಶ್, ಜಗನ್ನಾಥ್ ಕೆ., ದೇವೇಂದ್ರಪ್ಪ, ಪೃಥ್ವಿ ಭದ್ರಾವತಿ, ಗಣಪತಿ ಸೊರಬ, ಮಂಜುನಾಥ, ಭೂಕೇಶ್ವರಪ್ಪ, ಕವಿರಾಜ್, ವಿಕ್ಟೋರಿಯಾ ಫರ್ನಾಂಡಿಸ್, ಗವಿಯಪ್ಪ ಎಲ್.ಟಿ., ಹೂವಪ್ಪ, ಮೂರ್ತಿ ಎಂ.ವೈ. ಇನ್ನಿತರರು ಹಾಜರಿದ್ದರು. ದಿನೇಶ್ ಎನ್.ಕೆ. ಸ್ವಾಗತಿಸಿದರು. ಮನೋಹರ ಟಿ.ವಿ. ವಂದಿಸಿದರು. ಶಂಕರ್ ಜಿ.ಕೆ. ನಿರೂಪಿಸಿದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ, ನಿವೃತ್ತ ಶಿಕ್ಷಕರಿಗೆ, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಬಾಣಸವಾಡಿ ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್‌ಗೆ ಸ್ಥಳ ಪರಿಶೀಲಿಸಿದ ಸಚಿವ ಕೆ.ಜೆ.ಜಾರ್ಜ್
BREAKING : ದೆಹಲಿಯಲ್ಲಿ ಉಗ್ರ ದಾಳಿಗೆ ‘LeT’ ಸಂಚು ; ಪಂಜಾಬ್-ಕಾಶ್ಮೀರದಲ್ಲಿ 2 ಐಇಡಿಗಳು ಪತ್ತೆ!








