ಬೆಂಗಳೂರು : 2024-25 ನೇ ಸಾಲಿನಲ್ಲಿ 1-10 ನೇ ತರಗತಿ ಶಾಲಾ ಮಕಳ ಎತ್ತರ (Height) ಮತ್ತು ತೂಕ (Weight) ವನ್ನು ಅಳತೆ ಮಾಡಿ ದಾಖಲೆ ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಪತ್ರದಲ್ಲಿರುವ ಸೂಚನೆಯಂತೆ, ಸಂಬಂಧಿಸಿದಂತೆ, 2024-25 ನೇ ಸಾಲಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಅಡಿ ತರಗತಿವಾರು ಪ್ರತಿ ಮಗುವಿನ ಎತ್ತರ (Height) 2 ซี (Weight) ಅಳತೆ ಮಾಡಿ, ವಿವರವನ್ನು ಶಾಲಾ ಹಂತದಲ್ಲಿ ಸರಿಯಾಗಿ ದಾಖಲೆಸಿ ವರದಿಮಾಡುವಂತೆ ಈ ಮೂಲಕ ಸೂಚಿಸಿದೆ.
ಆದ್ದರಿಂದ, ಶಾಲೆಗಳು ಪ್ರಾರಂಭವಾಗಿ ಜುಲೈ ಮೊದಲನೇ ವಾರದಲ್ಲಿ ಎಲ್ಲಾ 1-10 ನೇ ತರಗತಿಗಳ ಮಕ್ಕಳ ಎತ್ತರ (Height) ಮತ್ತು ತೂಕ (Weight) ಅಳತೆಯನ್ನು ಶಾಲೆಯ ದೈಹಿಕ ಶಿಕ್ಷಕರು ಅಥವಾ ತರಗತಿ ಶಿಕ್ಷಕರ ಸಹಾಯದಿಂದ ಮಾಡಿಸಿ ದಾಖಲಿಸುವ ಕ್ರಮ ವಹಿಸಲು ಸೂಚಿಸಲಾಗಿದೆ. ಅದೇ ರೀತಿ ಫೆಬ್ರವರಿ-2025 ಮಾಹೆಯೊಳಗಾಗಿ ಮತ್ತೊಮ್ಮೆ ಎಲ್ಲಾ ಶಾಲೆಗಳಲ್ಲಿ 1-10 ನೇ ತರಗತಿಗಳ ಮಕ್ಕಳ ಎತ್ತರ (Height) ಮತ್ತು ತೂಕ (Weight) ಅಳತೆಯನ್ನು ಶಾಲೆಯ ದೈಹಿಕ ಶಿಕ್ಷಕರು ಅಥವಾ ತರಗತಿ ಶಿಕ್ಷಕರ ಸಹಾಯದಿಂದ ದಾಖಲಿಸುವ ಕ್ರಮ ವಹಿಸಲು ಸೂಚಿಸಲಾಗಿದೆ. ಸೆದರಿ ದಾಖಲೆಗಳನ್ನು ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧ-1, 2 ಹಾಗೂ 3 ನಮೂನೆಗಳಲ್ಲಿ ಶಾಲಾವಾರು ಮಾಹಿತಿಯನ್ನು ತಾಲ್ಲೋಕು ದೈಹಿಕ-ಆರೋಗ್ಯ ಶಿಕ್ಷಣ ಅಧಿಕಾರಿಗಳು (TPO) ಸಂಗ್ರಹಿಸಿ, ಕ್ರೂಢೀಕರಿಸಿ, ದೃಢೀಕರಿಸಿ, ತಾಲೂಕು ಪಂಚಾಯತ್ ಪಿ.ಎಂ.ಪೋಷಣ್, ಸಹಾಯಕ ನಿರ್ದೇಶಕರಿಗೆ ತಪ್ಪದೇ ಸಲ್ಲಿಸುವುದು.
ಸದರಿ ಸಹಾಯಕ ನಿರ್ದೇಶಕರು ತಾಲ್ಲೋಕು ಹಂತದ ವರದಿಯನ್ನು ದೃಢೀಕರಣದೊಂದಿಗೆ ಜಿಲ್ಲಾ ಪಂಚಾಯತ್ ಹಂತಕ್ಕೆ ಸಲ್ಲಿಸುವುದು. ಇದಕ್ಕಾಗಿ ಜಿಲ್ಲಾ ಹಂತದ ಕ್ರೋಢೀಕರಣ “ನಮೂನೆಗಳನ್ನು ಒದಗಿಸಿದೆ. ಜಿಲ್ಲಾ ಪಂಚಾಯತ್ ಪಿ.ಎಂ.ಪೋಷಣ್ ಶಿಕ್ಷೆಣಾಧಿಕಾರಿಗಳು ತಾಲ್ಲೂಕುವಾರು ಸಲ್ಲಿಸಿರುವ ಮಾಹಿತಿಯನು ಕ್ರೋಢಿಕರಿಸಿ ರಾಜ್ಯ ಪಿ.ಎಂ.ಪೋಷಣ್ ನಿರ್ದೇಶಕರ ಕಛೇರಿಗೆ ದಿನಾಂಕ: 31.07.2024 ರೊಳಗೆ ಸಲ್ಲಿಸುವುದು.
ಈ ವಿಧಾನದಲ್ಲಿ ಪ್ರತಿ ಶಾಲೆ, ತಾಲ್ಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ (Health Check-up) ವರದಿಯನ್ನು ನಿಗಧಿತ ನಮೂನೆಗಳಲ್ಲಿ ಸಲ್ಲಿಸುವ ಕ್ರಮವನ್ನು ಹಾಗೂ MIS Web Portal ನಲ್ಲಿ ಪ್ರತಿ ತ್ರೈಮಾಸಿಕ School Health Programme ರಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು (ಶಾಲಾ ಹಂತದಲ್ಲಿ), ತಾಲ್ಲೋಕು ದೈಹಿಕ-ಆರೋಗ್ಯ ಶಿಕ್ಷಣ ಅಧಿಕಾರಿಗಳು, ಪಿ.ಎಂ.ಪೋಷಣ್- ಸಹಾಯಕ ನಿರ್ದೇಶಕರು (ತಾಲ್ಲೂಕು ಹಂತದಲ್ಲಿ) ಮತ್ತು ಇದರ ಮೇಲ್ವಿಚಾರಣೆಯನ್ನು ಹಾಗೂ ಜಿಲ್ಲಾ ವರದಿಗಳನ್ನು ಸಲ್ಲಿಸುವ ಕ್ರಮವನ್ನು ಶಿಕ್ಷಣಾಧಿಕಾರಿಗಳು, ಪಿ.ಎಂ.ಪೋಷಣ್, ಜಿಲ್ಲಾ ಪಂಚಾಯತ್ ಕ್ರಮಬದ್ದವಾಗಿ ಕೈಗೊಂಡು ರಾಜ್ಯ ಕಛೇರಿಗೆ ವರದಿ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.