ರಾಯಚೂರು: ರಾಜ್ಯಾಧ್ಯಂತ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಶಿಕ್ಷಕರಿಗೆ ಇಂತಿಷ್ಟು ಮನೆಗಳೆಂದು ಸಮೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಹೀಗೆ ನಿಗದಿ ಪಡಿಸಿದ್ದಂತ ಮನೆಗಳ ಸಮೀಕ್ಷೆಯನ್ನು ಮೂರೇ ದಿನಗಳಲ್ಲಿ ಶಿಕ್ಷಕರೊಬ್ಬರು ರಾಯಚೂರಲ್ಲಿ ಮುಕ್ತಾಯಗೊಳಿಸಿದ್ದಾರೆ. ಇಂತಹ ಶಿಕ್ಷಕನಿಗೆ ರಾಯಚೂರು ಜಿಲ್ಲಾ, ತಾಲ್ಲೂಕು ಆಡಳಿತ ಅಭಿನಂದಿಸಿ ಗೌರವಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಸರ್ವಸ್ ಸಮಸ್ಯೆ ಎದುರಾಗಿತ್ತು. ಇದರ ನಡುವೆಯೂ ರಾಯಚೂರು ಜಿಲ್ಲೆಯ ಕಟ್ಟಾಟಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಮೂರೇ ದಿನಗಳಲ್ಲಿ ಸಮೀಕ್ಷೆ ಮುಗಿಸಿದ್ದಾರೆ. ಹೀಗೆ ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಸಿದಂತ ಶಿಕ್ಷಕ ಕೃಷ್ಣಮೂರ್ತಿಯನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.
ಅಂದಹಾಗೇ ಶಿಕ್ಷಕ ಕೃಷ್ಣಮೂರ್ತಿಗೆ 86 ಮನೆಗಳ ಸಮೀಕ್ಷೆಯನ್ನು ಮುಗಿಸಲು ನೀಡಲಾಗಿತ್ತು. ಸರ್ವರ್ ಸಮಸ್ಯೆಯ ನಡುವೆಯೂ ಶಿಕ್ಷಕ ಕೃಷ್ಣಮೂರ್ತಿ ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಸಿದ್ದಾರೆ. ಅಲ್ಲದೇ ಮನೆಯಲ್ಲಿ ಇಲ್ಲದವರನ್ನು ಸಂಪರ್ಕಿಸಿ ಸಮೀಕ್ಷೆ ಮುಕ್ತಾಯಗೊಳಿಸಿದ್ದಾರೆ.