ಸುಭಾಷಿತ :

Tuesday, February 18 , 2020 1:48 PM

ಬಳಸಿದ ಟೀ ಬ್ಯಾಗ್ ನ್ನು ಬಿಸಾಡೋ ಬದಲು ಹೀಗೆ ಬಳಸಿ ನೋಡಿ…


Thursday, January 30th, 2020 1:59 pm

ಸ್ಪೆಷಲ್ ಡೆಸ್ಕ್ : ಟೀ ಬ್ಯಾಗ್ ಬಳಸಿ ಸುಮ್ಮನೆ ಬಿಸಾಕೋ ಬದಲು ಅದನ್ನು ಮುಖಕ್ಕೆ ಹಚ್ಚಿದರೆ ಹಲವು ಪ್ರಯೋಜನಗಳಿವೆ. ತುರಿಕೆ, ಗಾಯ, ನೋವು ಹೀಗೆ ಎಲ್ಲವೂ ಕಡಿಮೆಯಾಗುತ್ತದೆ.

ಮುಖದ ಚರ್ಮದ ಮೇಲೆ ಸುಟ್ಟಗಾಯ ಇದ್ದರೆ ಬಳಕೆ ಮಾಡಿದ ಟೀ ಬ್ಯಾಗ್ ನ್ನು ಮುಖದ ಮೇಲೆ ಇಡಿ. ಇದರಿಂದ ಗಾಯ ಮರೆಯಾಗುತ್ತದೆ.
ಮುಖದ ಮೇಲೆ ಊತ ಕಾಣಿಸಿಕೊಂಡರೆ ಅದರ ಮೇಲೆ ಚಹಾ ಬ್ಯಾಗ್ ಗಳನ್ನ ಇಟ್ಟರೆ ಊತ ಕಡಿಮೆಯಾಗುತ್ತದೆ.
ಮಕ್ಕಳಿಗೆ ಸೊಳ್ಳೆ ಕಡಿದು ಉರಿಯುತ್ತಿದ್ದರೆ ಅದರ ಮೇಲೆ ಟೀ ಬ್ಯಾಗ್ ನ್ನು ಇಟ್ಟರೆ ತುರಿಕೆ ಕಡಿಮೆಯಾಗುತ್ತದೆ.
ಡ್ರೈ ಸ್ಕಿನ್ ಸಮಸ್ಯೆಯುಳ್ಳವರು ಸ್ನಾನ ಮಾಡುವ ನೀರಿನಲ್ಲಿ ಚಹಾ ಬ್ಯಾಗ್ ಹಾಕಿ ಸ್ನಾನ ಮಾಡಿದರೆ ಉತ್ತಮ.
ಬಳಕೆಯಾದ ಚಹಾ ಬ್ಯಾಗ್ ನ್ನು ಮತ್ತೆ ನೀರಿನಲ್ಲಿ ಕುದಿಸಿ ಮೈಗೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.
ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಆಗಿದ್ದರೆ ಟೀ ಬ್ಯಾಗ್ ನ್ನು ಕಣ್ಣಿನ ಮೇಲೆ ಇಡಿ. ಇದು ರಕ್ತ ಪರಿಚಲನೆ ಹೆಚ್ಚುವಂತೆ ಮಾಡಿ ಡಾರ್ಕ್ ಸರ್ಕಲ್ ಇಲ್ಲದಂತೆ ಮಾಡುತ್ತದೆ.
ಅಷ್ಟೇ ಯಾಕೆ ಚಹಾ ಬ್ಯಾಗ್ ನ್ನು ನೀರಿಗೆ ಹಾಕಿ ಅದನ್ನು ತಲೆಗೆ ಹಚ್ಚಿದರೆ ಸಹ ಕೂದಲು ಸಾಫ್ಟ್ ಆಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions