ಮುಂಬೈ : ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಜಿಯೋಸಿನಿಮಾ, ಟಾಟಾ ಐಪಿಎಲ್-2024ರ ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆಯೊಂದಿಗೆ ಮತ್ತೊಂದು ಯಶಸ್ವಿ ಆವೃತ್ತಿಗೆ ತೆರೆ ಎಳೆದಿದೆ. ಇದು ಟಾಟಾ ಐಪಿಎಲ್-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಪ್ರಗತಿಯಾಗಿದೆ. ಜಿಯೋಸಿನಿಮಾ ಐಪಿಎಲ್ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆಯ ಸಮಯವನ್ನು ದಾಖಲಿಸಿದೆ.
ಅಮೋಘವಾದ ಟೂರ್ನಿಯ ಮೊದಲ ದಿನದ ಅದ್ಭುತ ಆರಂಭವನ್ನು ನಂತರದಲ್ಲು ಮುಂದುವರಿಸಿರುವ ಜಿಯೋಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿತು. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ವೀಕ್ಷಣೆಗಳು ಮತ್ತು ಎಆರ್/ವಿಆರ್ ಮೂಲಕ ಕ್ರೀಡಾಂಗಣದಂಥ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯು ಸರಾಸರಿ ಸಮಯವನ್ನು 75 ನಿಮಿಷಗಳಿಗೆ ಮುಟ್ಟುವಂತೆ ಮಾಡಿದ್ದರಿಂದ ಸಂಪರ್ಕಿತ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.
ಜಿಯೋಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಆರಂಭಿಸಿತ್ತು. ಟಾಟಾ ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳವಾಗಿದೆ. ಜಿಯೋಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ, ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್ಫಾರ್ಮ್ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯಕ್ಕೆ ಕಾರಣವಾಯಿತು.
“ಭಾರತದಲ್ಲಿ ಕ್ರೀಡೆಗಳನ್ನು ಸವಿಯುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಟಾಟಾ ಐಪಿಎಲ್-2024 ಅನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸ್ತುತಿಯು ಹೆಚ್ಚಿನ ಜನರನ್ನು ತಲುಪುತ್ತಿದೆ ಮತ್ತು ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂಬ ಭರವಸೆಯನ್ನು ನಮಗೆ ನೀಡುತ್ತಿದೆ. ಜಿಯೋಸಿನಿಮಾವನ್ನು ಹೆಚ್ಚು ಬೇಡಿಕೆಯಿರುವ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿ ಮಾಡುವ ಹಾದಿಯಲ್ಲಿ ನಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ನಮ್ಮ ಪಾಲುದಾರರು, ಪ್ರಾಯೋಜಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ವಯಾಕಾಮ್18ರ ವಕ್ತಾರರು ಹೇಳಿದ್ದಾರೆ.
ಈ ಆವೃತ್ತಿಯಲ್ಲಿ ಜಿಯೋಸಿನಿಮಾ ಆರು ಪ್ರಮುಖ ಗ್ರಾಹಕ ಬ್ರಾಂಡ್‌ಗಳಾದ ಡ್ರೀಮ್11, ಥಮ್ಸ್ ಅಪ್, ಪಾರ್ಲೆ ಪ್ರಾಡಕ್ಟ್ಸ್, ಬ್ರಿಟಾನಿಯಾ, ದಾಲ್ಮಿಯಾ ಸಿಮೆಂಟ್ಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್‌ನಿಂದ ಸಂಪೂರ್ಣ ಹೊಸ ಹಂತಕ್ಕೆ ಆರಂಭಿಕ ಪಂದ್ಯದ ಪ್ರಸ್ತುತಿಯನ್ನು ತೆಗೆದುಕೊಂಡಿತು. ಹೊಸದಾಗಿ ಪರಿಚಯಿಸಲಾದ ಜಿಯೋಸಿನಿಮಾದ ಬ್ರ್ಯಾಂಡ್ ಸ್ಪಾಟ್‌ಲೈಟ್ ಅಡಿಯಲ್ಲಿ ಮೊದಲ ಆರು ಓವರ್‌ಗಳಲ್ಲೇ ಟಾಟಾ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಿತು. ಋತುವಿನ ಅಂತ್ಯದ ವೇಳೆಗೆ ಜಿಯೋಸಿನಿಮಾ ದಾಖಲೆಯ 28 ಪ್ರಾಯೋಜಕರು ಮತ್ತು 1400ಕ್ಕೂ ಹೆಚ್ಚು ಜಾಹೀರಾತುದಾರರನ್ನು ಹೊಂದಿತ್ತು.
ಅತ್ಯುತ್ತಮ ದರ್ಜೆಯ ಕ್ರೀಡಾ ವಿಷಯವನ್ನು ನೀಡುವ ಜಿಯೋಸಿನಿಮಾದ ಬದ್ಧತೆಯು ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024ರೊಂದಿಗೆ ಮುಂದುವರಿಯುತ್ತದೆ. ವೀಕ್ಷಕರು ಸಾವಿರಾರು ಗಂಟೆಗಳ ಲೈವ್ ಮತ್ತು ಬೇಡಿಕೆಯ ಕ್ರೀಡೆಯೊಂದಿಗೆ ಒಲಿಂಪಿಕ್ಸ್‌ನ ವರ್ಧಿತ ವೀಕ್ಷಣೆಯ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೀಕ್ಷಿಸಬಹುದು. ವಯಾಕಾಮ್18ರ ಪ್ಯಾರಿಸ್-2024ರ ಸಮಗ್ರ ಕವರೇಜ್, ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರು ನೋಡಲೇಬೇಕಾದ ಸ್ಪರ್ಧೆಗಳು, ಒಲಿಂಪಿಕ್ಸ್ ಇತಿಹಾಸದ ಶ್ರೇಷ್ಠ ಪ್ರದರ್ಶನಗಳು, ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ಭಾರತೀಯರು ಸಾಧಿಸಬಹುದಾದ ಅಭೂತಪೂರ್ವ ಹೆಗ್ಗುರುತುಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.
ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.
ಪುರಿ ಜಗನ್ನಾಥನ ಉತ್ಸವದ ವೇಳೆ ಘೋರ ದುರಂತ: ಪಟಾಕಿ ಸಿಡಿದು ಮೂವರು ಸಾವು, 32 ಮಂದಿಗೆ ಗಾಯ
BREAKING : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಹೊತ್ತಿ ಉರಿದ ಪ್ಲಾಸ್ಟಿಕ್ ಗಮ್ ಟೇಪ್ ತಯಾರಿಕಾ ಕಾರ್ಖಾನೆ