ತುಮಕೂರು: ಜಿಲ್ಲೆಯಲ್ಲಿ ಟಾಟಾ ಏಸ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಶಾಲಾ ಮಕ್ಕಳಿಗೆ ಗಾಯವಾಗಿರುವಂತ ಘಟನೆ ನಡೆದಿದೆ. 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೌಡನಕುಂಟೆ ಬಳಿಯಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿರುವಂತ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕು ಚಿಂಪುಗಾನಹಳ್ಳಿ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಎಂಬುವರು 35 ಮಕ್ಕಳನ್ನು ತುಂಬಿಕೊಂಡು ಟಾಟಾ ಏಸ್ ನಲ್ಲಿ ಪ್ರವಾಸಕ್ಕೆ ತಾವೇ ಚಾಲನೆ ಮಾಡಿಕೊಂಡು ಕರೆದೊಯ್ಯುತ್ತಿದ್ದರು. ಈ ವೇಳೆ ಗೌಡನಕುಂಟೆಯ ಬಳಿಯಲ್ಲಿ ವಾಹನ ಪಲ್ಟಿಯಾಗಿದೆ. ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಕೊರಟಗೆರೆ, ತುಮಕೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
BREAKING: ರಾಸಲೀಲೆ ವೀಡಿಯೋ ವೈರಲ್ ಕೇಸ್: ತುಮಕೂರಿನ ಮಧುಗಿರಿ ಡಿವೈಎಸ್ಪಿ ಸಸ್ಪೆಂಡ್
ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ಬಗ್ಗೆ ಮಾಹಿತಿ: ಸಚಿವ ಪ್ರಿಯಾಂಕ್ ಖರ್ಗೆ