ನವದೆಹಲಿ: ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ನೀರಿಗಾಗಿ ಆಹಾಕಾರವೆದ್ದಿದೆ. ಇದರ ನಡುವೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕುಡಿಯೋದಕ್ಕೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕ್ಯಾತೆ ತೆಗೆದಿದೆ.
ಇಂದು ದೆಹಲಿಯ ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯ ವೇಳೆಯಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ, ತಮಿಳುನಾಡು ಮಾತ್ರ ಕುಡಿಯೋದಕ್ಕಾಗಿ ನೀರು ಬಿಡುಗಡೆ ಮಾಡುವಂತೆ ತಮ್ಮ ವಾದವನ್ನು ಮಂಡಿಸಿತು.
ತಮಿಳುನಾಡಿನಿಂದ ಮತ್ತೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕ್ಯಾತೆ ತೆಗೆದಿದ್ದು, ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿತು. ಕುಡಿಯಲು 0.5 ಟಿಎಂಸಿ ನೀರು ಸಾಕು. ಕುಡಿಯೋ ನೀರಿನ ನೆಪದಲ್ಲಿ ನೀರು ಬಿಡುಗಡೆಗಾಗಿ ನಿರಾಕರಸಿಬಾರದು ಎಂಬುದಾಗಿ ವಾದಿಸಿತು. ಅಲ್ಲದೇ ತಮ್ಮ ತಿಂಗಳ ನೀರಿನ ಪಾಲಾಗಿರುವಂತ 2.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿತು.
ಇಂದು ನಡೆದಂತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಒತ್ತಾಯಿಸಿತು. ಆದ್ರೇ ಕರ್ನಾಟಕ ಸರ್ಕಾರ ಮಾತ್ರ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲವೆಂದು ವಾದ ಮಾಡಿತು.
ಕರ್ನಾಟಕ ಹಾಗೂ ತಮಿಳುನಾಡಿನ ಎರಡು ವಾದವನ್ನು ಆಲಿಸಿದಂತ ಸಿಎಂ ಡಬ್ಲ್ಯೂಸಿಯು ಮತ್ತೊಂದು ಸುತ್ತಿನ ಸಭೆ ನಡೆಸಿ, ತೀರ್ಮಾನ ಕೈಗೊಳ್ಳೋದಕ್ಕಾಗಿ ಮೇ.16ರವರೆಗೆ ಸಮಯ ನಿಗದಿ ಪಡಿಸಿದೆ.