ಚೆನ್ನೈ: ಇಂದು ಹೊಸ ರಾಜಕೀಯ ಪಕ್ಷವನ್ನು ನಟ ದಳಪತಿ ವಿಜಯ್ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರೀಯವಾಗೋ ನಿಟ್ಟಿನಲ್ಲಿ ಇನ್ಮುದಂ ಚಲನಚಿತ್ರಗಳಲ್ಲಿ ನಡಿಸೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ನಟನೆಗೆ ದಳಪತಿ ವಿಜಯ್ ಗುಡ್ ಬೈ ಹೇಳಿದ್ದಾರೆ.
ಈ ಕುರಿತಂತೆ ಹೊಸ ಪಕ್ಷ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಎರಡು ಚಿತ್ರಗಳನ್ನು ಈಗ ಒಪ್ಪಿಕೊಂಡಿದ್ದೇನೆ. ಅವುಗಳ ಶೂಟಿಂಗ್ ನಡೆಯುತ್ತಿದೆ. ಅವುಗಳಲ್ಲಿ ಭಾಗಿಯಾಗೋ ಕಾರಣ, ಸ್ವಲ್ಪ ದಿನ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದರು.
ಸದ್ಯ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿವೆ. ಅವುಗಳು ಮುಕ್ತಾಯಗೊಂಡ ನಂತ್ರ ನಾನು ಚಿತ್ರರಂಗದಲ್ಲಿ ನಟನೆ ಮಾಡೋದಿಲ್ಲ. ನನ್ನ ಹೊಸ ಪಕ್ಷ ತಮಿಳುಗ ವೆಟ್ರಿ ಕಳಗಂ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಯಾವ ಪಕ್ಷಕ್ಕೂ ಬೆಂಬಲ ನೀಡೋದಿಲ್ಲ. ಮುಂಬರುವಂತ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯೋದಾಗಿ ತಿಳಿಸಿದರು.