ಬೆಂಗಳೂರು: ಹೆಬ್ಬಾಳದ ಸಿಂಧಿಶಾಲೆಯಲ್ಲಿನ 7ನೇತರಗತಿ ಪಠ್ಯೇತರ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಪಾಠವನ್ನು ಹೇಳಿಕೊಡುವುದಕ್ಕೆ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಹೆಬ್ಬಾಳದ ಸಿಂಧಿಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಅಡಳಿತ ಮಂಡಳಿ ವಿರುದ್ದ ಮಕ್ಕಳ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತ ಆಗ್ರಹಿಸಿದ್ದಾರೆ. ಇದಲ್ಲದೇ ಖಾಸಗಿ ಶಾಲೆ ಒಕ್ಕೂಟ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಶಾಲೆ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಕ್ಕಳಿಗೆ ನಟಿ ತಮನ್ನಾ ಭಾಟಿಯಾ ಅವರ ಪಾಠದ ಬಗ್ಗೆ ಅವಶ್ಯಕತೆ ಇರೋದು ಆದ್ರೂ ಏನು, ಅವರಿಂದ ತಿಳಿದುಕೊಳ್ಳುವ ಸಾಧನೆ ಏನಿದೇ ಅಂತ ಹಲವು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.