ಕೊರೋನಾ ಗೆದ್ದ ಮಿಲ್ಕಿ ಬ್ಯೂಟಿಯಿಂದ ವೈದ್ಯರಿಗೆ ಧ್ಯನ್ಯವಾದ – Kannada News Now


Film Other Film

ಕೊರೋನಾ ಗೆದ್ದ ಮಿಲ್ಕಿ ಬ್ಯೂಟಿಯಿಂದ ವೈದ್ಯರಿಗೆ ಧ್ಯನ್ಯವಾದ

ಹೈದರಾಬಾದ್​: ಕೊರೊನಾ ಸೋಂಕಿಗೊಳಗಾಗಿದ್ದ ನಟಿ ತಮನ್ನಾ ಬಾಟಿಯಾ ಇದೀಗ ವೈರಸ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿ, ಮುಂಬೈ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಹೈದರಾಬಾದ್​ಗೆ ಜಾಹೀರಾತು ಚಿತ್ರೀಕರಣಕ್ಕಾಗಿ ಬಂದಿದ್ದ ವೇಳೆ ಅವರು ಸೋಂಕಿಗೊಳಗಾಗಿದ್ದರು. ಹೀಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಅಕ್ಟೋಬರ್ 6ರಂದು ಡಿಸ್ಚಾರ್ಜ್​ ಆಗಿದ್ದರು.

ಇದೀಗ ತಮನ್ನಾ ತನಗೆ ಚಿಕಿತ್ಸೆ ನೀಡಿರುವ ವೈದ್ಯರು ಹಾಗೂ ನರ್ಸ್​​ಗಳೊಂದಿಗೆ ಫೋಟೋ ಟ್ವಿಟರ್​​ನಲ್ಲಿ ಹಾಕಿಕೊಂಡಿದ್ದು, ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಬಗ್ಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ನಾನು ತುಂಬಾ ಅನಾರೋಗ್ಯದಿಂದ ಭಯಭೀತಳಾಗಿದ್ದೇನು. ಆದರೆ ಇದೀಗ ಆರೋಗ್ಯವಾಗಿದ್ದು, ದೇವರ ದಯೆ, ವೈದ್ಯರ ಕಾಳಜಿ ನನ್ನನ್ನು ಬಲಿಷ್ಠಗೊಳಿಸಿದೆ ಎಂದಿದ್ದಾರೆ. ಜೊತೆಗೆ ಹಾರೈಸಿದ ಅಭಿಮಾನಿಗಳಿಗೂ ಧನ್ಯವಾದಗಳು ಎಂದಿದ್ದಾರೆ.
error: Content is protected !!