ಶಿವಮೊಗ್ಗ: ರೈತರೊಬ್ಬರಿಂದ ಜಮೀನು ಸಮತಟ್ಟು ಮಾಡೋದಕ್ಕೆ ಅನುಮತಿ ನೀಡಲು 3000 ಲಂಚ ಸ್ವೀಕರಿಸುತ್ತಿದಾಗಲೇ ತಾಳಗುಪ್ಪ ಆರ್ ಐ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಹಿಡಿದಿದ್ದಾರೆ. ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ತಾಳಗುಪ್ಪ ಹೋಬಳಿಯ ಶಿರೂರು ಗ್ರಾಮದ ಮುಂಡಿಗೆಹಳ್ಳಿಯ ರೈತ ಹೆಚ್.ಎಸ್ ಕೃಷ್ಣಮೂರ್ತಿ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ತಮ್ಮ ಶಿರೂರು ಗ್ರಾಮದ ಸರ್ವೆ ನಂಬರ್.125ರಲ್ಲಿ ತಗ್ಗು ಉಬ್ಬುಗಳಿಂದ ಕೂಡಿದ್ದಂತ ಎರಡು ಎಕರೆ ಜಮೀನಿನನ್ನು ಸಮತಟ್ಟ ಮಾಡುತ್ತಿದ್ದಾಗ, ಆರ್.ಐ ಮಂಜುನಾಥ್ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದರು. ಅಲ್ಲದೇ ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ತಿಳಿಸಿದ್ದಾರೆ.
ದಿನಾಂಕ 20-03-2025ರಂದು ಆರ್ ಐ ಮಂಜುನಾಥ್ ಅವರಿಗೆ ಲಂಚದ ಹಣವಾಗಿ ಪೋನ್ ಪೇ ಮೂಲಕ ರೂ.2500, ದಿನಾಂಕ 02-04-2025ರಂದು 500 ಹಣವನ್ನು ಪಡೆದಿರುತ್ತಾರೆ. ಮತ್ತೆ ರೂ.3000 ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ನೀಡಿರುತ್ತಾರೆ.
ಈ ದೂರು ಆಧರಿಸಿ ಇಂದು ಮಧ್ಯಾಹ್ನ 3.05ರ ಸುಮಾರಿಗೆ ಸಾಗರ ತಾಲ್ಲೂಕಿನ ಶಿರೂರು ಆಲಳ್ಳಿ ಗ್ರಾಮದ ಸುಳ್ಳೂರು ಕೆರಿಯಪ್ಪ ಎಂಬುವರ ಜಮೀನಿನ ಹತ್ತಿರದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ಕೃಷ್ಣಮೂರ್ತಿಯಿಂದ 3000 ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಆರ್ ಐ ಮಂಜುನಾಥ್ ಅನ್ನು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಅವರ ವಿರುದ್ಧ ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ( ತಿದ್ದುಪಡಿ ಕಾಯಿದೆ-2018)ರ ಅನುಸಾರ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೀರಬಸಪ್ಪ ಎಲ್ ಕುಸಲಾಪುರ ಅವರು ವಿಚಾರಣೆ. ತನಿಖೆಯನ್ನು ನಡೆಸುತ್ತಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಏಪ್ರಿಲ್.10ರಂದು ಮಹಾವೀರ ಜಯಂತಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ
BREAKING: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ