ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಈ ಕಾರಣಕ್ಕಾಗಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರುವುದು ಒಳ್ಳೆಯದು.
ಕಾರ್ಮಿಕ ವರ್ಗಕ್ಕೆ ಸಲಹೆಗಳು
- ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆ ನೀರಿನ ವ್ಯವಸ್ಥೆ ಮಾಡಬೇಕು.
- 20 ನಿಮಿಷಗಳಿಗೊಮ್ಮೆ ಒಂದು ಲೋಟ ಅಥವಾ ಅಧಕ್ಕಿಂತ ಹೆಚ್ಚು ನೀರು ಕುಡಿಯಬೇಕು.
- ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿರಬೇಕು.
- ಹೊರಾಂಗಣ ಚಟುವಟಿಕೆಗಳಲ್ಲಿ ಕೆಲಸಗಾರರಿಗೆ ಪ್ರತಿ ಗಂಟೆಗೆ 5 ನಿಮಿಷಗಳ ಬಿಡುವು ನೀಡಬೇಕು.
- ಸೂರ್ಯನ ಕಿರಣಗಳು ನೇರವಾಗಿ ಮೈಮೇಲೆ ಬೀಳದಂತೆ ಕೆಲಸಾಗರರು ಎಚ್ಚರವಹಿಸಬೇಕು.
- ಶ್ರಮದಾಯಕ, ಹೊರಾಂಗಣ ಚಟುವಟಿಕೆಗಳನ್ನು ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು.
- ಗರ್ಭಿಣಿಯರು, ನಿಗದಿತ ಅನಾರೋಗ್ಯ ಸಮಸ್ಯೆಗೆ ಔಷಧೋಪಚಾರ ಪಡೆಯುತ್ತಿರುವವರು ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಈ ಕಾರಣಕ್ಕಾಗಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರುವುದು ಒಳ್ಳೆಯದು. #summerdays #healthcare pic.twitter.com/8ptL0vCFuX
— DIPR Karnataka (@KarnatakaVarthe) March 3, 2025
ಬಿಸಿಲ ಬೇಗೆಗೆ ದೇಹದ ಬಗೆಗಿರಲಿ ಈ ವಿಶೇಷ ಕಾಳಜಿ
- ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಬೆಳಗ್ಗೆ ಅಥವಾ ಸಂಜೆ ಅವಧಿಯಲ್ಲಿ ಸೀಮಿತಗೊಳಿಸಬೇಕು.
- ಸಭೆ, ಸಮಾರಂಭಗಳಿದ್ದಲ್ಲಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು.
- ಉತ್ತಮ ಗಾಳಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು.
- ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.
ಬಿಸಿಲ ಬೇಗೆಗೆ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚೆನ್ನಾಗಿ ಗಾಳಿ ಬರುವ, ಹೆಚ್ಚು ತಂಪಿರುವ ಸ್ಥಳಗಳಲ್ಲಿ ನೀವು ಅಧಿಕ ಸಮಯ ಕಳೆಯಿರಿ. ಮನೆಯ ಕಿಟಕಿಗಳಿಗೆ ಕರ್ಟನ್ ಹಾಕಿಸಿ. ಬಿಸಿಲಿನಲ್ಲಿ ಹೆಚ್ಚು ಓಡಾಡದಿರಿ. ಮನೆಯ ಹೊರಗಿನ ಕೆಲಸಗಳನ್ನು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮುಗಿಸಿಕೊಳ್ಳಿ. #summerdays #healthcare pic.twitter.com/Em66Xwr9nW
— DIPR Karnataka (@KarnatakaVarthe) March 3, 2025
ಬೇಸಿಗೆಯಲ್ಲಿ ಈ ಸಲಹೆ ಪಾಲಿಸಿ
- ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ
- ಮಧ್ಯಾಹ್ನದ ವೇಳೆ ಅಡುಗೆ ಮಾಡುವುದನ್ನು ತಪ್ಪಿಸಿ
- ಮದ್ಯಪಾನ, ಚಹಾ, ಕಾಫಿ, ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶ ಇರುವ ಪಾನೀಯಗಳಿಂದ ದೂರವಿರಿ.
- ಮಧ್ಯಾಹ್ನದ ಅವಧಿಯಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆ ಕೈಗೊಳ್ಳಬೇಡಿ.
- ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲು ತೆರೆದಿಡಿ
- ನಿಲುಗಡೆ ಮಾಡಿರುವ ವಾಹನಗಳ ಒಳಗೆ ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ಬಿಡಬೇಡಿ.
ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಈ ಕಾರಣಕ್ಕಾಗಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರುವುದು ಒಳ್ಳೆಯದು. #summerdays #healthcare pic.twitter.com/CLnh3ojCTn
— DIPR Karnataka (@KarnatakaVarthe) March 3, 2025
ಬೇಸಿಗೆಯ ಬಿಸಿಲಿನಲ್ಲಿ ಈ ಕ್ರಮವನ್ನು ಅನುಸರಿಸಿ
- ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುತ್ತಿರಿ.
- ಪ್ರಯಾಣಿಸುವಾಗ ನೀರಿನ ಬಾಟಲ್ ಕೊಂಡೊಯ್ಯಿರಿ
- ಓಆರ್ ಎಸ್, ನಿಂಬೆ ಜ್ಯೂಸ್, ಮಜ್ಜಿಕೆಯಂತಹ ಪಾನೀಯ ಸೇವಿಸಿ.
- ಹೆಚ್ಚು ನೀರಿನ ಅಂಶವಿರುವ ಹಣ್ಣು, ತರಕಾರಿಗಳನ್ನು ತಿನ್ನಿ
- ಹಗುರ ಮತ್ತು ಸಡಿಲವಾದ ಹತ್ತಿ ಬಟ್ಟೆಯನ್ನು ಧರಿಸಿ
- ಬಿಸಿನಲ್ಲಿ ಹೊರಗಡೆ ಹೋಗುವುದು ಅನಿವಾರ್ಯವಾದರೇ ಟೋಪಿ, ಕೊಡೆಯಿಂದ ರಕ್ಷಣೆ ಪಡೆಯಿರಿ.
ಬಿಸಿಲ ಬೇಗೆಗೆ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚೆನ್ನಾಗಿ ಗಾಳಿ ಬರುವ, ಹೆಚ್ಚು ತಂಪಿರುವ ಸ್ಥಳಗಳಲ್ಲಿ ನೀವು ಅಧಿಕ ಸಮಯ ಕಳೆಯಿರಿ. ಮನೆಯ ಕಿಟಕಿಗಳಿಗೆ ಕರ್ಟನ್ ಹಾಕಿಸಿ. ಬಿಸಿಲಿನಲ್ಲಿ ಹೆಚ್ಚು ಓಡಾಡದಿರಿ. ಮನೆಯ ಹೊರಗಿನ ಕೆಲಸಗಳನ್ನು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮುಗಿಸಿಕೊಳ್ಳಿ.#summerdays #healthcare pic.twitter.com/UVwJJCCc4O
— DIPR Karnataka (@KarnatakaVarthe) March 3, 2025
ಮಂಡ್ಯದಲ್ಲಿ ದೇವರ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಬೆಂಗಳೂರಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ‘ವುಮೆನ್ ವಾಕಥಾನ್’ ಆಯೋಜನೆ