ಯಾದಗಿರಿ: ಬಸ್ ನಿಲ್ದಾಣದಲ್ಲಿದ್ದಂತ ಬಸವಣ್ಣನ ಪೋಟೋ ತೆಗೆದು ಏಸು ಕ್ರಿಸ್ತನ ಪೋಟೋ ಹಾಕುವಂತೆ ವ್ಯಕ್ತಿಯೊಬ್ಬ ಕಿರಿಕ್ ಮಾಡಿದಂತ ಘಟನೆ ಸುರಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಬಸ್ ನಿಲ್ದಾಣದಲ್ಲಿ ಕ್ರೈಸ್ತ ಅನುಯಾಯಿಯೊಬ್ಬ ವಿಶ್ವಗುರು ಬಸವಣ್ಣನಿಗೆ ಅವಹೇಳನಕಾರಿಯಾಗಿ ಮಾತನಾಡಿರೋದಾಗಿ ತಿಳಿದು ಬಂದಿದೆ.
ಬಸ್ ನಿಲ್ದಾಣದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದಂತ ವ್ಯಕ್ತಿ, ಕ್ರೈಸ್ತ ಧರ್ಮದವರಿಗೆ ಅನ್ಯಾಯವಾಗಿದೆ. ಬಸ್ ನಿಲ್ದಾಣದಲ್ಲಿನ ಬಸವಣ್ಣನ ಪೋಟೋ ತೆಗೆದು, ಜೀಸಸ್ ಪೋಟೋ ಹಾಕುವಂತೆ ಮೊಂಡಾಟ ಮೆರೆದಿದ್ದಾನೆ.
ಬಸ್ ನಿಲ್ದಾಣದಲ್ಲೇ ರಂಪಾಟ ಮಾಡುವ ವೇಳೆ ಸಾರ್ವಜನಿಕರು ವೀಡಿಯೋ ಮಾಡಿಕೊಂಡಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ. ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮಕ್ಕಾಗಿ ಜನ ಆಗ್ರಹಿಸಿದ್ದಾರೆ.
ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ: ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚನೆ
ವಾಲ್ಮೀಕಿ ನಿಗಮದ ಅಧಿಕ್ಷಕ ಆತ್ಮಹತ್ಯೆ ಕೇಸ್ : ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ : ಎನ್.ರವಿಕುಮಾರ್