ಹಾವೇರಿ: ಛತ್ರಿ ಹಿಡಿದು ಕೆಲಸ ಮಾಡಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮಾಡಿರುವ ಘಟನೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡದ ನೆಲ ಮಹಡಿವರೆಗೆ ಕೂಡ ಮಳೆ ಸೋರುತ್ತಿದ್ದು, ಇದರಿಂದ ನೌಕರರು ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಇದಲ್ಲದೇ ಕಚೇರಿಯ ಕಡತಗಳನ್ನು ನೌಕರರು ರಕ್ಷಿಸಿಕೊಳ್ಳಲು ಪರದಾಡಬೇಕಾದ ಸನ್ನಿವೇಶ ಕಂಡು ಬಂದಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ಪ್ರತಿಗಳು ಒದೆಯಾಗಿದ್ದು, ಕಚೇರಿಯ ಸನ್ನಿವೇಶಕ್ಕೆ ಕೈನ್ನಡಿಯಾಗಿದೆ. ಈ ಹಿಂದೆ ಕಚೇರಿಯಲ್ಲಿ ಅಳವಡಿಕೆ ಮಾಡಿದ್ದ ಸೋಲಾರ್ ಪ್ಯಾನಲ್ ಸಂದರ್ಭದಲ್ಲಿ ಆಗಿದ್ದ ಎಡವಯಟ್ಟು ಕಚೇರಿಯ ಮಾಳಿಗೆ ಸೋರುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಅಧಿಕಾರಿಗಳು ಸರಿಯಾಗಿ ಮೇಲ್ಚಾವಣಿಯನ್ನು ದುರಸ್ತಿ ಮಾಡುವಂತೆ ಸೂಚನೆ ನೀಡಿದ್ದರು ಕೂಡ ಇಲ್ಲಿ ತನಕ ಯಾವುದೇ ಕಾರ್ಯಕ್ಕೆ ಮುಂದಾಗದೇ ಇರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಸರ್ಕಾರಿ ಕಚೇರಿಯ ಪರಿಸ್ಥಿತಿ ಹೀಗಾದ್ರೆ, ಬೇರೆಯದ್ದು ಏನು ಕತೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆಯನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.