ಬೆಂಗಳೂರು: ಬೆಂಗಳೂರು ಕೇಂದ್ರದ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರದ ಪ್ರೆಂಚ್ ಭಾಷೆಯ ಉಪನ್ಯಾಸಕಿಯಾದ ತಗಡೂರು ಹಾಲಪ್ಪಗೌಡ ಸುಜಾತ (ಟಿ.ಪಿ.ಸುಜಾತ ಸ್ವಾಮಿ) ಅವರಿಗೆ ಪಿಎಚ್ಡಿ ನೀಡಲಾಗಿದೆ.
ಎರಡು ಮಹಾ ಸಾಂಕ್ರಾಮಿಕ ರೋಗಗಳಾದ 1918 ರ ಸ್ಪ್ಯಾನಿಷ್ ಜ್ವರ ಮತ್ತು 2019 ರ ಕೋವಿಡ್- 19 ರ ಸಂದರ್ಭದಲ್ಲಿ ರಾಷ್ಟ್ರದ ಮುಖ್ಯಸ್ಥರ ಪಾತ್ರದ ಹೋಲಿಕೆ ಕುರಿತು ಡಾ.ಮನಮೋಹನ್ ಸಿಂಗ್ ವಿವಿ ಪ್ರೊ.ಜ್ಯೋತಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದು, ಈ ಪ್ರಬಂಧಕ್ಕೆ ಪಿಎಚ್ಡಿ ದೊರೆತಿದೆ.
ತಗಡೂರು ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಸುಪುತ್ರಿಯಾಗಿರುವ ಟಿ.ಪಿ.ಸುಜಾತ ಅವರು ಹೈಕೋರ್ಟ್ ವಕೀಲರಾದ ಕುಮಾರಸ್ವಾಮಿ ಸ್ವಾಮಿ ಅವರ ಪತ್ನಿ.
ಪ್ರೆಂಚ್ ಭಾಷೆಯಲ್ಲಿಯೇ ಅಧ್ಯಯನ ಮಾಡಿ ಪ್ರಬಂಧ ಮಂಡನೆ ಮಾಡಿ ಪಿಎಚ್ಡಿ ಪಡೆದಿರುವ ಟಿ.ಪಿ.ಸುಜಾತ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಸ್ಣಳೀಯ ಸಂಘ ಸಂಸ್ಥೆಗಳು, ತಗಡೂರು, ಮಾರನಗೆರೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಶಿವಮೊಗ್ಗದ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ; ಇಲ್ಲಿದೆ ಪುಲ್ ಡೀಟೆಲ್ಸ್








