shivamogga – Kannada News Now


State

ಶಿವಮೊಗ್ಗ: ಜೂ.15 ರಿಂದ ಅ.15ರ ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆಯ ಮಾರ್ಗದಲ್ಲಿ ಅಂದರೆ ಶಿವಮೊಗ್ಗ-ತೀರ್ಥಹಳ್ಳಿ, ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಆಗುಂಬೆ ಘಾಟಿಯಲ್ಲಿ ಅಧಿಕ ಭಾರದ ವಾಹನಗಳು ಸಂಚಾರ ನಡೆಸಿದರೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ ಹೀಗಾಗಿ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿದ್ದಾರೆ.

ಪರ್ಯಾಯ ಮಾರ್ಗಗಳು: 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
* ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕೆರೆಕಟ್ಟೆ ಕಾರ್ಕಳ-ಉಡುಪಿ-ಮಂಗಳೂರು
* ಶಿವಮೊಗ್ಗ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹುಲಿಕಲ್-ಹೊಸಂಗಡಿ-ಸಿದ್ದಾಪುರ-ಉಡು

State

ಶಿವಮೊಗ್ಗ : ನಾಳೆಯಿಂದ ನಗರದಲ್ಲಿ ಹೊಟೇಲ್ ಓಪನ್ ಆಗಲಿದೆ. ಇದಕ್ಕಾಗಿ ಅಂತಿಮ ಹಂತದ ಭರದ ಸಿದ್ಧತೆಯನ್ನು ಜಿಲ್ಲೆಯಲ್ಲಿನ ಹೋಟೆಲ್ ಗಳಲ್ಲಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಕೊರೋನಾ ಭೀತಿಯ ಮುಂಜಾಗ್ರತಾ ಕ್ರಮ ಕೂಡ ಅನುಸರಿಸಿಕೊಂಡು ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಹೋಟೆಲ್ ಗಳು ಗ್ರಾಹಕರಿಗೆ ಹೋಟೆಲ್ ಸವಿ ರುಚಿಯ ತಿನಿಸುಗಳನ್ನು ಉಣಬಡಿಸಲಿವೆ.

ರಾಜ್ಯ ಸರ್ಕಾರ ನಾಳೆಯಿಂದ ರಾಜ್ಯಾದ್ಯಂತ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲೂ ಹೋಟೆಲ್ ಓಪನ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಹೋಟೆಲ್ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವಂತ ಹೋಟೆಲ್ ಮಾಲೀಕರು, ನಾಳೆಯಿಂದ ಗ್ರಾಹಕರಿಗೆ ಸೇವೆ ನೀಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ಅಂದಹಾಗೇ ನಾಳೆಯಿಂದ ತೆರೆಯಲಿರುವ ಹೋಟೆಲ್ ಗಳಲ್ಲಿ ಒಂದು ಟೇಬಲ್ ನಲ್ಲಿ ಒಬ್ಬರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಟೇಬಲ್ ಭರ್ತಿಯಾದ ನಂತ್ರ, ಮತ್ತೆ ಯಾರಿಗೂ ಹೋಟೆಲ್ ಒಳ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಒಬ್ಬರಾದ ನಂತ್ರ ಒಬ್ಬರಿಗೆ ಅವಕಾಶ ನೀಡುವ ಮೂಲಕ ಕೊರೋನಾ ಭೀತಿಯ ನಡುವೆಯೂ ಹೋಟೆಲ್ ಗಳು ತೆರೆಯಲಿವೆ. ಈ ಮೂಲಕ ಹೋಟೆಲ್ ಸವಿ ರುಚಿಯ ತಿಂಡಿ ತಿನಿಸುಗಳ ಸವಿರುಚಿ ಸವಿಯಲು ಅವಕಾಶ ದೊರೆಯಲಿದೆ.

State

ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ದಾಖಲಾಗಿದ್ದಂತ 17 ಜನರು, ಸಂಪೂರ್ಣವಾಗಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದು ಜಿಲ್ಲೆಯಲ್ಲಿ ಇದೇ ಮೊದಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 41 ಕೊರೋನಾ ಸೋಂಕಿತರಲ್ಲಿ ಕಳೆದ ನಿನ್ನೆ 5 ಜನರು, ಇಂದು 17 ಜನರು ಗುಣಮುಖರಾಗುವ ಮೂಲಕ, ಸಕ್ರೀಯ ಕೊರೋನಾ ಸೋಂಕಿತರ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ. 

ಈ ಕುರಿತಂತೆ ಮಾಹಿತಿ ನೀಡಿದ ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಗುರುಪಾದಪ್ಪ, ಕೊರೋನಾ ಸೋಂಕಿಗೆ ತುತ್ತಾಗಿದ್ದಂತ ಜಿಲ್ಲೆಯ ವಿವಿಧ ಭಾಗದ 17 ಜನರು ಇಂದು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಂತಹ 17 ಜನರನ್ನು ಕೊನೆಯ ಹಂತದ ಎಲ್ಲಾ ಪರೀಕ್ಷೆಯನ್ನು ಮುಗಿಸಿದ ನಂತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಂದಾಹಾಗೇ ತೀರ್ಥಹಳ್ಳಿಯ ಆರು ಜನರು, ಶಿವಮೊಗ್ಗ ತಾಲೂಕಿನ ನಾಲ್ಕು ಜನರು, ಹೊಸನಗರದ ಮೂವರು, ಶಿಕಾರಿಪುರದ ಒಬ್ಬರು, ಸೊರಬಾದ ಇಬ್ಬರು ಮತ್ತು ಸಾಗರದ ಒಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾದವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಳೆದ ನಿನ್ನೆ 6 ಜನರಿಗೆ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 34ಕ್ಕೆ ಬಂದು ನಿಂತಿದ್ದು, ಇಂದು 17 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಸಕ್ರೀಯ ಸೋಂಕಿತರ ಸಂಖ್ಯೆ 17ಕ್ಕೆ ಬಂದು ನಿಂತಿದೆ.

State

ಶಿವಮೊಗ್ಗ : ಜೂನ್ 1ರ ನಾಳೆಯಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಬೆಳಿಗ್ಗೆ 5.30ಕ್ಕೆ ಶಿವಮೊಗ್ಗದಿಂದ ಬೆಂಗಳೂರಿನತ್ತ ರೈಲು ಹೊರಡಲಿದೆ. ಇಂತಹ ರೈಲಿನಲ್ಲಿ ತೆರಳಲು ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಆದ್ರೇ.. ಸಾಮಾಜಿಕ ಅಂತರದ ಸಲುವಾಗಿ ಟಿಕೆಟ್ ಬುಕ್ಕಿಂಗ್ ಸಂಖ್ಯೆ ಕಡಿತಗೊಂಡಿದೆ.

ಲಾಕ್ ಡೌನ್ ನಿಂದಾಗಿ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇಂತಹ ರೈಲು ಸಂಚಾರ ಜೂನ್ 1ರ ನಾಳೆಯಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಅಧಿಕಾರಿಗಳು ಸಖಲ ಸಿದ್ಧತೆ ಮಾಡಿಕೊಂಡಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಿಗ್ಗೆ 5.30ಕ್ಕೆ ಜನ ಶತಾಬ್ದಿ ರೈಲು ಹೊರಡಸಿದೆ.

ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಪ್ರತಿ ಬೋಗಿಗೆ 54 ಪ್ರಯಾಣಿಕರಿಗಷ್ಟೇ ಸಂಚರಿಸಲು ಅವಕಾಶ ದೊರೆಯಲಿದೆ. ಅಲ್ಲದೇ ನಾಳೆ ಹೊರಡಲಿರುವ ಜನ ಶತಾಬ್ದಿ ರೈಲಿನಲ್ಲಿ ಕೇವಲ 648 ಜನರಿಗೆ ಮಾತ್ರವೇ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿದೆ. ರೈಲು ನಿಲುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ರೈಲ್ವೆ ಇಲಾಖೆ ಸ್ಪಷ್ಟ ಪಡಿಸಿದೆ.

State

ಶಿವಮೊಗ್ಗ : ಇಂದು ನಗರದ ವಿವಿಧ ಬಡಾವಣೆಗಳಲ್ಲಿನ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಚಾಲನೆ ನೀಡಿದರು.

ನಗರದ ಶಾಂತಿನಗರ ಭಾಗದಲ್ಲಿ ನೀರಾವರಿ ಇಲಾಖೆಯಿಂದ 65 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆಯ ಗುದ್ದಲಿ ಪೂಜೆ ನರೆವೇರಿಸಿದರು. ನಗರದ ಪುರಲೆ ಭಾಗದಲ್ಲಿ ನೀರಾವರಿ ಇಲಾಖೆಯಿಂದ 52 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆಯ ಚಾಲನೆ ನೀಡಿದರು.

ಶಿವಮೊಗ್ಗ ನಗರದ ವಿದ್ಯಾನಗರ ಭಾಗದಲ್ಲಿ ನೀರಾವರಿ ಇಲಾಖೆಯಿಂದ ವಿವಿಧ ಯೋಜನೆಗಳಿಗೆ, ಮಿಲಘಟ್ಟ ಭಾಗದಲ್ಲಿ 1 ಕೋಟಿ 15 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿ ಅಭಿವೃದ್ಧಿ ಯೋಜನೆಯ ಗುದ್ದಲಿ ಪೂಜೆ ನೆರವೇರಿಸಿದರು.

State

ಶಿವಮೊಗ್ಗ : ಮೇ.22ರಂದು ಶಿವಮೊಗ್ಗಕ್ಕೆ ಪಂಜಾಬ್ ನಿಂದ ಬಂದಿದ್ದಂತ ಮೂವರನ್ನು ಮೊದಲು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಏಳು ದಿನ ಕ್ವಾರಂಟೈನ್ ಅವಧಿ ಮುಗಿಸಿದ ನಂತ್ರ, ಮನೆಗೆ ಕಳುಹಿಸಿ, ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಹೀಗೆ ಮಾಡಲಾಗಿದ್ದಂತ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ, ಅವರನ್ನು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಸೋಂಕಿತರಿದ್ದಂತ ಹಳ್ಳಿಯನ್ನು ಹೊಸ ಕಂಟೈನ್ಮೆಂಟ್  ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.

ಪಂಜಾಬ್ ಗೆ ತೆರಳಿದ್ದಂತ ನಗರದ ಮೂವರು ವ್ಯಕ್ತಿಗಳು, ರೈಲಿನಲ್ಲಿ ಬೆಂಗಳೂರಿಗೆ ಬಂದು. ಅಲ್ಲಿಂದ ಶಿವಮೊಗ್ಗಕ್ಕೆ ಮೇ.22ರಂದು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಆಗಮಿಸಿದ್ದರು. ಇಂತಹ ಮೂವರನ್ನು ಮೊದಲು ಸರ್ಕಾರಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. 7 ದಿನಗಳ ನಂತ್ರ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಈ ಮೂವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿತ್ತು. ಹೀಗಾಗಿ ಅವರನ್ನು ಕೋವಿಡ್-19 ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಹೋಂ ಕ್ವಾರಂಟೈನ್ ನಲ್ಲಿದ್ದಂತ ಶಿವಮೊಗ್ಗ ತಾಲೂಕಿನ ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್ ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೇ ಹಕ್ಕಿಪಿಕ್ಕಿ ಕ್ಯಾಂಪ್ ಗೆ ಬರುವ ದಾರಿಗಳನ್ನು ಬಂದ್ ಮಾಡಿ ಯಾರೂ ಮನೆಯಿಂದ ಹೊರ ಬರದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತಿರ್ಥಹಳ್ಳಿಯ ಹಳ್ಳಿಬೈಲು, ಶಿವಮೊಗ್ಗ ನಗರದ ತುಂಗಾನಗರ, ಬಾಳೆಕೊಪ್ಪ, ಶಿಕಾರಿಪುರದ ತರಲಘಟ್ಟ, ಸೊರಬಾದ ಹಳೆ ಸೊರಬ ಮತ್ತು ಹಕ್ಕಿಪಿಕ್ಕಿ ಕ್ಯಾಂಪ್ ಸೇರಿದಂತೆ 6 ಕಂಟೈನ್ಮೆಂಟ್ ಝೋನ್ ಗಳಿದ್ದಾವೆ.

State

ಶಿವಮೊಗ್ಗ : ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮಾಸ್ಕ್ ಧರಿಸದವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕಾನೂನು ಜಾರಿಗೆ ತಂದಿತ್ತು. ಇದನ್ನು ಚಾಚು ತಪ್ಪದೇ ಜಾರಿಗೆ ತಂದಿರುವ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು, ಒಂದು ಲಕ್ಷಕ್ಕೂ ಅಧಿಕ ದಂಡವನ್ನು ವಸೂಲಿ ಮಾಡಿದ್ದಾರೆ.

ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು, ಮಾಸ್ಕ್ ಧರಿಸದೇ ರಸ್ತೆಗಿಳಿದ ಜನರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರು, ಪೊಲೀಸರು, ತಾಹಶೀಲ್ದಾರರಿಗೂ ದಂಡವನ್ನು ವಿಧಿಸಿದ್ದಾರೆ.

ತಂಬಾಕು ಪದಾರ್ಥ ಜಗಿದು ರಸ್ತೆಯ ಮೇಲೆ ಉಗುಳಿದ ಮೂವರಿಂದ ತಲಾ ರೂ.1500 ದಂಡ ವಿಧಿಸಿದ್ದಾರೆ. ಇದಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಂತ 321 ಜನರಿಗೂ ದಂಡ ಹಾಕಿದ್ದಾರೆ. ಇದಲ್ಲದೇ ಮಾಸ್ಕ್ ಧರಿಸದೇ ಹೊರ ಬಂದಿದ್ದಂತವರಿಗೂ ದಂಡ ವಿಧಿಸುವ ಮೂಲಕ, ಬರೋಬ್ಬರಿ ರೂ.1,33,600 ದಂಡವನ್ನು ಪಾಲಿಕೆ ಅಧಿಕಾರಿಗಳು ದಂಡ ಸಂಗ್ರಹಿಸಿದ್ದಾರೆ.

State

ಶಿವಮೊಗ್ಗ : ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಡುವುಕೊಟ್ಟಿದ್ದಂತ ಕೊರೋನಾ ಸೋಂಕು. ಮತ್ತೆ ಇಂದು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದಂತ ಭದ್ರಾವತಿ ಮೂಲಕ ಮಹಿಳೆಗೂ ಇಂದು ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಇಂದು ಹೊಸ ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ರಾಜ್ಯದಲ್ಲಿ ಹೊಸದಾಗಿ 178 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

ಇನ್ನೂ ಇಂದು ಕಾಣಿಸಿಕೊಂಡಿರುವ 178 ಜನ ಕೊರೋನಾ ಸೋಂಕಿತರಲ್ಲಿ ಶಿವಮೊಗ್ಗ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ. ಭದ್ರಾವತಿ ಮೂಲದ ಮಹಿಳೆಯೊಬ್ಬರನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇಂತಹ ಮಹಿಳೆಗೆ 14 ದಿನಗಳ ನಂತ್ರ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಅಂದಹಾಗೇ ಶಿವಮೊಗ್ಗದಲ್ಲಿ ಇಂದು ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಇವರಲ್ಲಿ 4 ಜನರು ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಸಕ್ರೀಯ ಸೋಂಕಿತರ ಸಂಖ್ಯೆ 31ಕ್ಕೆ ಮುಟ್ಟಿದೆ.

 

State

ಶಿವಮೊಗ್ಗ : ಮುಸ್ಲೀಂ ಪವಿತ್ರ ಹಬ್ಬ ರಂಜಾನ್ ನಾಳೆ ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕರ್ಪ್ಯೂ ಘೋಷಣೆ ಮಾಡಿತ್ತು. ಹೀಗಾಗಿ ರಂಜಾನ್ ಹಬ್ಬದ ಖರೀದಿಗಾಗಿ ತೊಂದರೆ ಆಗುವ ಕಾರಣದಿಂದಾಗಿ, ನಾಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಗರದಲ್ಲಿ ಮೀನು, ಚಿಕನ್, ಮಾಂಸ ಖರೀದಿಸಲು ಅನುಮತಿ ನೀಡಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದ ಸಾಗರ ತಾಲೂಕು ಉಪ ವಿಭಾಗಾಧಿಕಾರಿ ನಾಗರಾಜ್, ನಾಳೆ ಮುಸ್ಲೀಮರ ಪವಿತ್ರ ಹಬ್ಬ ರಂಜಾನ್ ಆಚರಣೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಪೂರ್ಣ ಕರ್ಪ್ಯೂ ನಿಂದಾಗಿ ಅಗತ್ಯ ವಸ್ತು ಖರೀದಿಸೋದು ಹೇಗೆ ಎಂಬ ಚಿಂತೆಯಲ್ಲಿ ತಾಲೂಕಿನ ಮುಸ್ಲೀಂ ಬಾಂಧವರು ಇದ್ದರು. ರಂಜಾನ್ ಹಬ್ಬಕ್ಕೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ, ನಾಳೆ ತಾಲೂಕಿನಲ್ಲಿ ಮೀನು, ಚಿಕನ್, ಮಟನ್ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಹೀಗಾಗಿ ನಾಳೆ ಸಾಗರ ನಗರದಲ್ಲಿನ ಮೀನು, ಮಟನ್, ಚಿಕನ್ ಮಾರಾಟ ಮಳಿಗೆಗಳು ತೆರೆದಿರುತ್ತವೆ. ರಂಜಾನ್ ಆಚರಣೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದ್ರೇ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸೋದ ಕಡ್ಡಾಯವಾಗಿದೆ. ಈ ಮೂಲಕ ನಾಳೆ ಸಂಪೂರ್ಣ ಕರ್ಪ್ಯೂ ಇರುವ ಮೂಲಕ ಚಿಕನ್, ಮಟನ್, ಮೀನು ಹೇಗೆ ಖರೀದಿಸೋದು ಎನ್ನುವ ಚಿಂತೆಯಲ್ಲಿದ್ದಂತ ಮುಸ್ಲೀಂ ಬಾಂಧವರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

-ವಸಂತ ಬಿ ಈಶ್ವರಗೆರೆ

State

ಶಿವಮೊಗ್ಗ : ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎಸ್ಪಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಮೂರು ಮಂದಿ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿದ್ದಾರೆ. ಇನ್ನುಳಿದಂತೆ ಯಾವುದೇ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿರುವುದಿಲ್ಲ. ಆದರೆ ಮುಂಜಾಗರೂಕತಾ ಕ್ರಮವಾಗಿ ಈಗಾಗಲೇ 11ಮಂದಿ ಪೊಲೀಸ್ ಅಧಿಕಾರಿಗಳ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಕರ್ತವ್ಯಕ್ಕಾಗಿ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಾಮಾನ್ಯವಾಗಿದ್ದು, ಆದರೂ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಹೊರ ಜಿಲ್ಲೆಯ ಅಧಿಕಾರಿಗಳು ಹೆಚ್ವುವರಿ ಕರ್ತವ್ಯ ವಹಿಸಿಕೊಂಡಿಲ್ಲ. ಎಲ್ಲಾ ಸರ್ಕಾರಿ ಕಚೇರಿಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪರೀಕ್ಷೆಯಲ್ಲಿ ಹೆಚ್ಚಳ: ಜಿಲ್ಲೆಯಲ್ಲಿ ಇದುವರೆಗೆ 5172 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರ ಪೈಕಿ 4828 ಫಲಿತಾಂಶ ಬಂದಿದ್ದು, 320 ಬರಬೇಕಿದೆ. 4804 ನೆಗೆಟಿವ್ ಬಂದಿದೆ. ಹೊರ ರಾಜ್ಯಗಳಿಂದ ಆಗಮಿಸಿದ್ದ 1158 ಜನರನ್ನು ಕ್ವಾರೆಂಟೈನ್ ಮಾಡಿ ಪರೀಕ್ಷೆ ನಡೆಸಲಾಗಿದೆ. 943 ಫಲಿತಾಂಶ ಬಂದಿದೆ. ಪ್ರಸ್ತುತ ಜಿಲ್ಲೆಗೆ ಪ್ರತಿದಿನ 50ರಿಂದ 70ಮಂದಿ ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ ಎಂದರು.

ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 329 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಂಡು ಬಂದಿದ್ದ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎಲ್ಲರ ಗಂಟಲ ದ್ರವ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಂಪರ್ಕ ಹೊಂದಿದ್ದವರ ತಪಾಸಣೆ ನಡೆಸಲಾಗುವುದು.

ಅಂತರ ಜಿಲ್ಲಾ ಪಯಣಕ್ಕೆ ಪಾಸ್ ಬೇಡ: ರಾಜ್ಯದಲ್ಲಿ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತರ ಜಿಲ್ಲಾ ಪಯಣಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ. ಖಾಸಗಿ ವಾಹನಗಳಲ್ಲಿ ಸಹ ಜನರು ಮಾರ್ಗಸೂಚಿ ಪ್ರಕಾರ ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಪ್ರಕರಣ ದಾಖಲು: ಕೋವಿಡ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪಾಸಿಟಿವ್ ಬಂದಿರುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಕರ್ತವ್ಯದಲ್ಲಿದ್ದ ತಂಡವನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಮನವಿ: ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಯಾರೂ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮಾಸ್ಕ್ ಧರಿಸಬೇಕು. ಜಿಲ್ಲೆಯ ಜನರು ಜಾಗರೂಕರಾಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.