Tag: home appliances | #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ನವದೆಹಲಿ: ತಾಷ್ಕೆಂಟ್ನಲ್ಲಿ ನಡೆದ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಜಿಲ್ಲಿ ದಲಬೆಹೆರ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತರಾದ ಜಿಲ್ಲಿ ಸ್ನ್ಯಾಚ್ನಲ್ಲಿ 69 ಕೆಜಿ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 88ಕೆಜಿ ಭಾರವನ್ನೆತ್ತುವ ಮೂಲಕ ಒಟ್ಟೂ 157 ಕೆಜಿಗೆ ಮುಗಿಸಿದರು.
ಇದೇ ಟೂರ್ನಮೆಂಟ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದು, . ಕಂಚಿನ ಪದಕ ಗಳಿಸಿದ ಚಾನು ಈ ಹಿಂದಿನ ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು.
26 ವರ್ಷದ ಭಾರತೀಯ ವೇಟ್ಲಿಫ್ಟರ್ ಸ್ನ್ಯಾಚ್ನಲ್ಲಿ 86 ಕೆಜಿ ಎತ್ತಿದ್ದರೆ ಕ್ಲೀನ್ ಆಂಡ್ ಜರ್ಕ್ ನಲ್ಲಿ 119 ಕೆಜಿ ಭಾರವೆತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆರು ಕಡ್ಡಾಯ ಅರ್ಹತಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುವ ಚಾನು ಟೋಕಿಯೊ ಒಲಿಂಪಿಕ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ರಾಮನಗರ: ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಫುಡ್ ಇಲ್ಲ, ಬೆಡ್ ಇಲ್ಲ, ಮನಿನೂ ಇಲ್ಲ ಎಂದು ಬಿಲ್ ಬರುವ ಮೇಳೆ ಎಲ್ಲವೂ ಮಾಡಿ ಕೊಡ್ತಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವ್ರು, ” ಕೊರೊನಾ ಸೋಂಕಿನ ಕುರಿತು ಸರ್ಕಾರ ಸೂಕ್ತ ಮಂಜಾಗ್ರತೆ ತೆಗೆದುಕೊಂಡಿಲ್ಲ. ಬಿಜೆಪಿ ಮಂತ್ರಿಗಳು ಹೇಳೋದು ಬರೀ ಸುಳ್ಳು. ಅವ್ರ ಮೇಲೆ ನನಗೆ ನಂಬಿಕೆ ಇಲ್ಲ” ಎಂದರು.
ಕ್ವಾರೆಂಟೈನ್ ವ್ಯವಸ್ಥೆ ಅವ್ಯವಸ್ಥೆಯಿಂದ ಗಮನ ಸೆಳೆಯುತ್ತೀವೆ. ಇನ್ನು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಫುಡ್ ಇಲ್ಲ, ಬೆಡ್ ಇಲ್ಲ, ಮನಿನೂ ಇಲ್ಲ ಎಂದು ಬಿಲ್ ಬರುವ ಮೇಳೆ ಎಲ್ಲವೂ ಮಾಡಿ ಕೊಡ್ತಾರೆ ಎಂದು ಕಿಡಿಕಾರಿದ್ರು.
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ನ 10ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ಗೆಲುವು ಸಾಧಿಸಿದ ಕೊಹ್ಲಿ ಪಡೆ ಹ್ಯಾಟ್ರಿಕ್ ಜಯ ಗಳಿಸಲು ಕಾತುರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಆಲ್ರೌಂಡರ್ ಡೇನಿಯಲ್ ಕ್ರಿಸ್ಚಿಯನ್ ಬದಲಿಗೆ ಯುವ ಬ್ಯಾಟ್ಸ್ಮನ್ ರಜತ್ ಪಾಟಿದಾರ್ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್ಸಿಬಿ ಕೇವಲ 3 ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿದೆ.
ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್. ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಕೋಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಿಧ್ ಕೃಷ್ಣ, ವರುಣ್ ಚಕ್ರವರ್ತಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಭವಾಗ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸಾರ್ವಜನಿಕ ಪ್ರವೇಶವನ್ನ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ಸುತ್ತೋಲೆ ಗೊರಡಿಸಿರುವ ಸರ್ಕಾರ, ʼವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಸಚಿವಾಲಯ, ಸಚಿವ ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಿದ ಭೇಟಿ ಹೊರತುಪಡಿಸಿ ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿದೆʼ ಎಂದಿದೆ.
ಸಚಿವಾಲಯದ ಸಿಬ್ಬಂದಿ, ಅಧಿಕಾರಿ ಮತ್ತು ಸಾರ್ವಜನಿಕರ ಆರೋಗ್ಯ ಹಾಗೂ ಆಡಳಿತದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಭೇಟಿಗೆ ಪೂರ್ವಾನುಮತಿ ಪತ್ರವನ್ನ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಇನ್ನು ಮಧ್ಯಾಹ್ನ 3.30ರ ಬಳಿಕವೇ ಈ ಭೇಟಿಗೆ ಅವಕಾಶ ನೀಡಬೇಕು ಎಂದು ಸರ್ಕಾರ ತಿಳಿಸಿದೆ.
ಧಾರವಾಡ : ಕೊರೋನಾ 2ನೇ ಅಲೆ ರಾಜ್ಯಾಧ್ಯಂತ ಅಬ್ಬರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗುಂಪು ಸೇರೋದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಹೀಗಿದ್ದೂ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಪರೀಕ್ಷೆ ನಡೆಸಲು ಮುಂದಾಗಿ, ಪೊಲೀಸರ ದಾಳಿಯ ಮೂಲಕ ಸ್ಥಗಿತಗೊಂಡಿರುವ ಘಟನೆ ಧಾರವಾಡದ ಉಪ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಧಾರವಾಡ ನಗರದ ಶ್ರೀನಗರ ವೃತ್ತದಲ್ಲಿರುವಂತ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಎಂಬ ಖಾಸಗಿ ಶಿಕ್ಷಣ ಸಂಸ್ಥೆಯೊಂದು, ಕೊರೋನಾ ಮಾರ್ಗಸೂಚಿಯನ್ನು ಗಾಳಿಗೆ ತೂರಿ, ಇಂದು ಪರೀಕ್ಷೆ ಬರೆದು Rank ಬಂದ್ರೇ.. ಬಹುಮಾನ ನೀಡಲಾಗುವುದು ಎಂಬುದಾಗಿ ಪ್ರಚಾರ ನಡೆಸಿತ್ತು. ಇದರಿಂದಾಗಿ ಕೊರೋನಾ ನಿಯಮವನ್ನು ಮೀರಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಆಗಮಿಸಿದ್ದರು.
ಇಂತಹ ವಿಷಯ ತಿಳಿದು ಖಾಸಗಿ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ಮಾಡಿದಂತ ಪೊಲೀಸರು, ಕೊರೋನಾ ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸುತ್ತಿದ್ದಂತ ಸಂಬಂಧ ಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪರೀಕ್ಷೆಗೆ ಹಾಜರಾಗಿದ್ದಂತ ವಿದ್ಯಾರ್ಥಿಗಳನ್ನು ದಾಳಿಯ ಮೂಲಕ ಪರೀಕ್ಷೆ ಸ್ಥಗಿತಗೊಳಿಸಿ, ವಿದ್ಯಾಕಾಶಿ ಕರಿಯರ್ ಅಕಾಡೆಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೂರ್ಣಸ್ಥಾಲಿ: ಪಶ್ಚಿಮ ಬಂಗಾಳದ 180 ಸ್ಥಾನಗಳಲ್ಲಿ ಐದು ಹಂತಗಳಲ್ಲಿ ಬಿಜೆಪಿ 122ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಒತ್ತಿ ಹೇಳಿದರು. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಶಾ, “ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವ್ರು ನಂದಿಗ್ರಾಮ್ನಲ್ಲಿರುವ ಬಿಜೆಪಿ ಅಭ್ಯರ್ಥಿಯ ಎದುರು ಸೋಲಾನುಭವಿಸಿ, ಅಲ್ಲಿಂದ ಎದ್ದು ಹೋಗ್ತಾರೆ” ಎಂದು ಹೇಳಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಐದು ಹಂತದ ಚುನಾವಣೆಯ ನಂತ್ರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರುತ್ಸಾಹಗೊಂಡಿದ್ದಾರೆ. ಯಾಕಂದ್ರೆ, 122ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ. ‘ನಂದಿಗ್ರಾಮ್ʼನಿಂದ ಚುನಾವಣೆಯಲ್ಲಿ ಸುವೇಂದು ಅಧಿಕಾರಿ (ಬಿಜೆಪಿ ಅಭ್ಯರ್ಥಿ) ಗೆಲ್ಲುತ್ತಾರೆ. ಬ್ಯಾನರ್ಜಿಯನ್ನ ಅವರ ನಿಲುವಿಗೆ ಅನುಗುಣವಾಗಿ ದೊಡ್ಡ ಸೋಲಿನೊಂದಿಗೆ ಕಳುಹಿಸ್ಭೇಕು” ಎಂದರು.
ಇನ್ನು “ಮೇ 2ರ ಮೊದ್ಲೆ ದೀದಿ ಕಾಲಿಗಾದ ಗಾಯ ಗುಣವಾಗುತ್ತೆ. ಅವ್ರು ನಡೆದುಕೊಂಡು ಹೋಗಿ ತಮ್ಮ ರಾಜೀನಾಮೆಯನ್ನ ರಾಜ್ಯಪಾಲರಿಗೆ ನೀಡ್ತಾರೆ. ಮಮತಾ ದೀದಿಗಿಂತ ಬಿಜೆಪಿ ಮುಂದಿದೆ” ಎಂದು ಹೇಳಿದರು. ಇನ್ನು ಬಾಂಬ್, ಗನ್ ಮತ್ತು ಗನ್ʼಪೌಡರ್ ಮಾದರಿಯನ್ನ ವಿಶ್ವಾಸ, ಬೆಳವಣಿಗೆ ಮತ್ತು ಅಭಿವೃದ್ಧಿ ಮತ್ತು ವ್ಯಾಪಾರದೊಂದಿಗೆ ಬದಲಾಯಿಸಲು ನಾವು ಬಯಸುತ್ತೇವೆ ಎಂದರು.
” ದೀದಿಗೆ ಬಂಗಾಳದ ಅಭಿವೃದ್ಧಿಗೆ ಯಾವುದೇ ಕಾರ್ಯಸೂಚಿ ಇಲ್ಲ. ದೀದಿ ಬಂಗಾಳದಲ್ಲಿ 12 ನಿಮಿಷಗಳನ್ನ ಕಳೆದ್ರೆ, ಅವ್ರು ಮೋದಿ ಮತ್ತು ನನ್ನನ್ನ ನಿಂದಿಸೋಕೆ 10 ನಿಮಿಷಗಳನ್ನ ಕಳೆಯುತ್ತಾರೆ. ಇನ್ನುಳಿದ 2 ನಿಮಿಷಗಳ ಕಾಲ ಭದ್ರತಾ ಪಡೆಗಳನ್ನ ಶಪಿಸ್ತಾರೆ. ಹಾಗಾಗಿನೇ ಇಂದು ಬಂಗಾಳದ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೊರಟಿದ್ದಾರೆ. ಹಾಗಾಗಿನೇ ಅಧಿಕಾರ ಸ್ವೀಕರಿಸಲಿರುವ ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ, ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿಗೆ ಉದ್ಯೋಗ ನೀಡುವ ಕೆಲಸವನ್ನ ಮಾಡ್ಬೇಕು ಎಂದು ನಿರ್ಧರಿಸಿದೆ ಎಂದರು.
ಟೆಲ್ಅವಿವ್: ಇಸ್ರೇಲ್ ನಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.
‘ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಪ್ರೊ. ಹೆಜಿ ಲೆವಿ ಅವರು ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ. ಇದರಿಂದಾಗಿ ತೆರೆದ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಿರುವುದಿಲ್ಲ.’ ಇದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.
ದೊಡ್ಡ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮಾಸ್ಕ್ ಧರಿಸಬೇಕು , ಅದೇ ರೀತಿ ಒಳಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಅಬ್ಬರಿಸುತ್ತಿದೆ. ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸಾಲಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ.. ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದೆ ಬೇರೆ.. ಅದೇನ್ ಅಂತ ಮುಂದೆ ಓದಿ..
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕುರಿತಂತೆ ಇಂದು ಕಂದಾಯ ಸಚಿವ ಆರ್ ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಸಚಿವರು, ಅಧಿಕಾರಿಗಳನ್ನು ಒಳಗೊಂಡು ಸಿಎಂ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಮಾರ್ಗವಲ್ಲ. ಇದರ ಬದಲಾಗಿ ಪರ್ಯಾಯ ಮಾರ್ಗದ ಮೂಲಕ ಕೊರೋನಾ ನಿಯಂತ್ರಕ್ಕೂ ಕ್ರಮ ಕೈಗೊಳ್ಳುವಂತ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್, ಕೊರೋನಾ ನಿಯಂತ್ರಣಕ್ಕಾಗಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡೋ ಪ್ರಶ್ನೆಯೇ ಇಲ್ಲ. ಇದರ ಬದಲಾಗಿ ಕೊರೋನಾ ನಿಯಂತ್ರಣಗಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮವನ್ನು ತರಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು, ಸದ್ಯದಲ್ಲೇ ಕಠಿಣ ನಿಯಮವನ್ನು ಜಾರಿಗೊಳಿಸಲಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಟಫ್ ರೂಲ್ಸ್ ಮಾತ್ರವೇ ಜಾರಿಗೆ ತರಗಲಾಗುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಅಬ್ಬರಿಸುತ್ತಿದೆ. ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸಾಲಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ.. ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದೆ ಬೇರೆ.. ಅದೇನ್ ಅಂತ ಮುಂದೆ ಓದಿ..
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕುರಿತಂತೆ ಇಂದು ಕಂದಾಯ ಸಚಿವ ಆರ್ ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಸಚಿವರು, ಅಧಿಕಾರಿಗಳನ್ನು ಒಳಗೊಂಡು ಸಿಎಂ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಮಾರ್ಗವಲ್ಲ. ಇದರ ಬದಲಾಗಿ ಪರ್ಯಾಯ ಮಾರ್ಗದ ಮೂಲಕ ಕೊರೋನಾ ನಿಯಂತ್ರಕ್ಕೂ ಕ್ರಮ ಕೈಗೊಳ್ಳುವಂತ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್, ಕೊರೋನಾ ನಿಯಂತ್ರಣಕ್ಕಾಗಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡೋ ಪ್ರಶ್ನೆಯೇ ಇಲ್ಲ. ಇದರ ಬದಲಾಗಿ ಕೊರೋನಾ ನಿಯಂತ್ರಣಗಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮವನ್ನು ತರಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು, ಸದ್ಯದಲ್ಲೇ ಕಠಿಣ ನಿಯಮವನ್ನು ಜಾರಿಗೊಳಿಸಲಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಟಫ್ ರೂಲ್ಸ್ ಮಾತ್ರವೇ ಜಾರಿಗೆ ತರಗಲಾಗುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ನವದೆಹಲಿ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಲಸಿಕೆ ಅಭಿಯಾನವೂ ಹೆಚ್ಚುತ್ತಿದ್ದು, ಇದೀಗ ದೇಶದಲ್ಲಿ ಕೇವಲ 92 ದಿನಗಳಲ್ಲಿ 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ. ಅಮೆರಿಕ 97 ದಿನಗಳನ್ನು ತೆಗೆದುಕೊಂಡರೆ, ಚೀನಾ 108 ದಿನಗಳನ್ನು ತೆಗೆದುಕೊಂಡಿದೆ.
ವಿಶ್ವದ ಅತ್ಯಂತ ದೊಡ್ಡ ಲಸಿಕಾ ಅಭಿಯಾನದ ಭಾಗವಾಗಿ ದೇಶದಲ್ಲಿ 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. 18,15,325 ಸೆಷನ್ಸ್ ಗಳಲ್ಲಿ 12, 26, 22, 590 ಡೋ್ಸ್ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೊದಲ ಡೋಸ್ ಪಡೆದ 91, 28, 146 ಆರೋಗ್ಯ ಕಾರ್ಯಕರ್ತರು, ಎರಡನೇ ಡೋಸ್ ಪಡೆದ 57, 08, 223 ಆರೋಗ್ಯ ಕಾರ್ಯಕರ್ತರನ್ನು ಇದು ಒಳಗೊಂಡಿದೆ. ಅಲ್ಲದೇ, 60 ಕ್ಕಿಂತ ಹೆಚ್ಚು ವಯಸ್ಸಿನ 4,55,94,522 ಫಲಾನುಭವಿಗಳಿಗೆ ಮೊದಲ ಹಾಗೂ 38, 91, 294 ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಲಾಗಿದೆ.
45 ರಿಂದ 60 ವರ್ಷದೊಳಗಿನ 4, 04,74,993 ಮತ್ತು 10, 81,759 ಫಲಾನುಭವಿಗಳಿಗೆ ಕ್ರಮವಾಗಿ ಒಂದು ಹಾಗೂ ಎರಡನೇ ಡೋಸ್ ನೀಡಲಾಗಿದೆ.
ನವದೆಹಲಿ: ಭಾರತೀಯ ಪ್ರಜೆಗೆ ಆಧಾರ್ ಕಾರ್ಡ್ ತುಂಬಾನೇ ಮುಖ್ಯ ದಾಖಲೆ. ಯಾಕಂದ್ರೆ, ಈ ಆಧಾರ್ ಕಾರ್ಡ್ ಮೂಲಕ ನೀವು ಅನೇಕ ಸರ್ಕಾರಿ ಯೋಜನೆಗಳನ್ನ ಸುಲಭವಾಗಿ ಪಡೆಯಬಹುದು. ಇಂತಹ ಅತ್ಯಮುಲ್ಯ ಆಧಾರ್ ಕಳೆದುಹೋದ್ರೆ, ಒಂದ್ವೇಳೆ ಅದು ದುರುಪಯೋಗ ಪಡೆಸಿಕೊಂಡ್ರೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿನೇ ಯುಐಡಿಎಐ ನಿಮ್ಮ ಆಧಾರ್ ಕಾರ್ಡ್ ಲಾಕ್ ಸೌಲಭ್ಯವನ್ನ ಪರಿಚಯಿಸಿದ್ದು, ಇದನ್ನ ಉಪಯೋಗಿಸಿಕೊಂಡು ನೀವು ನಿಮ್ಮ ಆಧಾರ್ ಕಾರ್ಡ್ʼನ್ನ ಲಾಕ್ ಮಾಡ್ಬೋದು. ಇದ್ರಿಂದಾಗೋ ದುರುಪಯೋಗವನ್ನೂ ತಡೆಗಟ್ಟಬೋದು.
ಅಂದ್ಹಾಗೆ, ನೀವು ಮನೆಯಿಂದಲೇ ನಿಮ್ಮ ಆಧಾರ್ ಕಾರ್ಡ್ʼನ್ನು ಲಾಕ್ ಮಾಡ್ಬೋದು ಮತ್ತು ಅನ್ಲಾಕ್ ಮಾಡ್ಬೋದು. ಒಮ್ಮೆ ನಿಮ್ಮ ಆಧಾರ್ ಕಾರ್ಡ್ʼನ್ನ ನೀವು ಲಾಕ್ ಮಾಡಿದ್ರೆ, ನಿಮ್ಮ ಆಧಾರ್ ಕಾರ್ಡ್ ಡೇಟಾವನ್ನ ಯಾರೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆಧಾರ್ ಕಾರ್ಡ್ ಲಾಕ್ ಮಾಡುವ ಪ್ರಕ್ರಿಯೆ ಏನು..?
* ಮೊದಲನೆಯದಾಗಿ, ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1947ಗೆ GETOTP SMS ಕಳುಹಿಸಿ.
* ನಂತರ, ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ.
* ‘LOCKUID ಆಧಾರ್ ಸಂಖ್ಯೆ’ ಎಂದು ಬರೆದು ನೀವು ಈ ಒಟಿಪಿಯನ್ನ ಮತ್ತೆ 1947ಗೆ ಕಳುಹಿಸಬೇಕು.
* ಇದರ ನಂತ್ರ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತೆ.
ಆಧಾರ್ ಅನ್ಲಾಕ್ ಮಾಡುವ ಪ್ರಕ್ರಿಯೆ ಏನು..?
* ನೀವು ನಿಮ್ಮ ಆಧಾರ್ ಕಾರ್ಡ್ʼನ್ನ ಅನ್ಲಾಕ್ ಮಾಡಲು, ಮೊದಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1947 ಗೆ GETOTP SMS ಕಳುಹಿಸಬೇಕು.
* ಇದರ ನಂತರ, ನಿಮ್ಮ ಸಂಖ್ಯೆಗೆ ಒಟಿಪಿ ಬರುತ್ತದೆ.
* ನೀವು UNLOCKUID ಆಧಾರ್ ಸಂಖ್ಯೆ ಮತ್ತು OTP ಯನ್ನ 1947 ಗೆ ಕಳುಹಿಸಬೇಕು.
* ಇದರ ನಂತರ ನಿಮ್ಮ ಆಧಾರ್ ಕಾರ್ಡ್ ಅನ್ಲಾಕ್ ಆಗುತ್ತೆ.
ಬೆಂಗಳೂರು : ಕೊಡಗಿನ ಏಕೈಕ ಅಂತರಾಷ್ಟ್ರೀಯ ಮಹಿಳಾ ಹಾಕಿ ಎಂಪೈರ್ ಆಗಿದ್ದ, ಅತ್ಯುತ್ತಮ ಹಾಕಿಪಟು ಮುಂಡಂಡ ಅನುಪಮ(ತಾಮನೆ: ಪುಚ್ಚಿಮಂಡ) ವಿಧಿವಶರಾಗಿದ್ದಾರೆ.
ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಮಹಾಮಾರಿ ಕೊರೋನಾ ಇವರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಇವರು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದಿ.ಪುಚ್ಚಿಮಂಡ ಶಿವಪ್ಪ ಅವರ ಪುತ್ರಿಯಾಗಿದ್ದಾರೆ.
ನವದೆಹಲಿ : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿದ್ದು. ಕೋವಿಡ್ ಸೋಂಕಿತರಿಗಾಗಿ ಬೆಡ್ ಹಾಗೂ ಆಕ್ಸಿಜನ್ ಅಭಾವ ಕೂಡ ಎದುರಾಗಿದೆ ಎಂದು ಸಿಎಂ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಕಳೆದ 24 ಗಂಟೆಯಲ್ಲಿ 25 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದು ದಿನದ ಅವಧಿಯಲ್ಲಿ ಪ್ರಕರಣಗಳ ಏರುಗತಿಯ ದರ 24 % ರಿಂದ 30% ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿರುವ ಕೇಜ್ರಿವಾಲ್, ಕೇವಲ 100 ಐಸಿಯು ಬೆಡ್ಗಳ ಉಳಿದುಕೊಂಡಿವೆ. ಆಕ್ಸಿಜನ್ ಕೂಡ ಕೊರತೆ ಎದುರಾಗಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ 7000 ಬೆಡ್ಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಇನ್ನೆರಡು ದಿನಗಳಲ್ಲಿ ಯಮುನಾ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಆಕ್ಸಿಜನ್ ಒಳಗೊಂಡ 6000 ಬೆಡ್ಗಳನ್ನು ನಾವು ಸಿದ್ಧಪಡಿಸುತ್ತೇವೆ. ಅದೇ ರೀತಿ ಕಾಮನ್ ವೆಲ್ತ್ ಆಟಗಳ ಗ್ರಾಮ ಹಾಗೂ ಕೆಲವು ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಡಿ ಮಾರ್ಪಡಿಸುತ್ತೇವೆ ಎಂದು ಸಿಎಂ ಹೇಳಿದರು.
ನವದೆಹಲಿ: ಕೊರೊನಾ ವೈರಸ್ ಸೋಂಕಿನ ಪರಿಣಾಮ ತೀವ್ರವಾಗಿದ್ದು, ದೇಶದ ಪ್ರತಿಯೊಂದು ರಾಜ್ಯಗಳಲ್ಲಿಯೂ ಕೊರೊನಾ ಉಲ್ಭಣವಾಗ್ತಿದೆ. ಕೊರೊನಾದ 2ನೇ ಅಲೆಯೂ ಮೊದಲಿಗಿಂತ ಹೆಚ್ಚು ಅಪಾಯಕಾರಿಯಾಗಿದ್ದು, ವೈದ್ಯರ ಪ್ರಕಾರ ಹೊಸ ಇದು ಹೆಚ್ಚು ಸಾಂಕ್ರಾಮಿಕ ಮಾತ್ರವಲ್ಲ, ಅನೇಕ ಗಂಭೀರ ರೋಗಲಕ್ಷಣಗಳನ್ನ ಸಹ ತಂದಿದೆ. ಹೆಚ್ಚಿನವ್ರಲ್ಲಿ ಕೊರೊನಾದ ಸೌಮ್ಯ ಚಿಹ್ನೆಗಳು ಕಂಡು ಬರ್ತಿವೆ. ಕೆಲವರು ಮನೆಯಲ್ಲಿಯೇ ಚಿಕಿತ್ಸೆಯಿಂದ ಚೇತರಿಸಿಕೊಂಡ್ರೆ ಮತ್ತೆ ಹಲವರ ಸ್ಥಿತಿ ಗಂಭೀರವಾಗಿರುತ್ತೆ. ಇನ್ನು ಹಲವರು ಆಸ್ಪತ್ರೆಗೆ ದಾಖಲಾಗ್ಲೇಬೇಕು.
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ನೀವು ಈ ಐದು ರೀತಿಯ ರೋಗಲಕ್ಷಣಗಳನ್ನ ನೋಡುತ್ತಿದ್ರೆ, ದಯವಿಟ್ಟು ನಿರ್ಲಕ್ಷಿಸಲೇ ಬೇಡಿ. ಈ ಲಕ್ಷಣಗಳು ಬಹಿರಂಗವಾದ ಕೂಡಲೇ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆಯಿದೆ.
ಲಕ್ಷಣ 1:ಉಸಿರಾಟದ ತೊಂದರೆ- ಉಸಿರಾಟದ ತೊಂದರೆ ಅಥವಾ ಎದೆ ನೋವು ಕರೋನಾ ಸೋಂಕಿನ ಅಪಾಯಕಾರಿ ಲಕ್ಷಣಗಳಲ್ಲಿ ಒಂದಾಗಿದೆ. ಕರೋನಾ ವೈರಸ್ ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಉಸಿರಾಟದ ಸೋಂಕಾಗಿದ್ದು, ಶ್ವಾಸಕೋಶದ ಮೇಲೆ ವೈರಸ್ ದಾಳಿ ಮಾಡಿದಾಗ, ಉಸಿರಾಡಲು ಕಷ್ಟವಾಗುತ್ತೆ.
ಲಕ್ಷಣ 2: ಆಮ್ಲಜನಕದ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ – ಕೊರೊನಾ ಸೋಂಕಿಗೆ ಒಳಗಾದಾಗ ದೇಹದ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದಕ್ಕೆ ಕಾರಣವೆಂದ್ರೆ, ಕೊರೊನಾ ಸೋಂಕಿತ ರೋಗಿಯ ಶ್ವಾಸಕೋಶದ ಗಾಳಿಯ ಚೀಲದಲ್ಲಿನ ದ್ರವವು ತುಂಬುತ್ತದೆ. ಇದರಿಂದಾಗಿ ದೇಹದಲ್ಲಿನ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸುವುದು ಮುಖ್ಯ.
ಲಕ್ಷಣ 3: ಮೆದುಳಿನ ಕಾರ್ಯಚಟುವಟಿಕೆಯಲ್ಲಿ ತೊಂದರೆ – ಕೊರೊನಾ ಸೋಂಕಿನ ಹೊಸ ಒತ್ತಡವು ಮೆದುಳಿನ ಮೇಲೆ ನೇರವಾಗಿ ದಾಳಿ ಮಾಡುತ್ತೆ. ಕೊರೊನಾ ವೈರಸ್ ಅನೇಕ ರೋಗಿಗಳಲ್ಲಿ ಮೆದುಳಿನ ಕಾರ್ಯ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ, ಸೋಮಾರಿತನ, ಚಡಪಡಿಕೆ ಮತ್ತು ಮೂರ್ಚೆ ಮುಂತಾದ ಲಕ್ಷಣಗಳು ರೋಗಿಗಳಲ್ಲಿ ಕಾಣಿಸಿಕೊಳ್ಳುತ್ವೆ. ಮಾತನಾಡುವಾಗ ನೀವು ದಿಗ್ಭ್ರಮೆಗೊಳ್ಳಲು ಪ್ರಾರಂಭಿಸಿದ್ರೆ, ಅದನ್ನ ಲಘುವಾಗಿ ತೆಗೆದುಕೊಳ್ಳಬೇಡಿ ಮತ್ತು ಆಸ್ಪತ್ರೆಗೆ ಹೋಗಿ.
ಲಕ್ಷಣ 4:ಎದೆ ನೋವು – ಕೊರೊನಾ ವೈರಸ್ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಈ ಕಾರಣದಿಂದಾಗಿ ಎದೆ ನೋವಿನ ದೂರುಗಳು ಬರಬಹುದು. SARS-COV2 ಅನೇಕ ಸಂದರ್ಭಗಳಲ್ಲಿ ಶ್ವಾಸಕೋಶದ ಲೋಳೆಪೊರೆಯ ಒಳಪದರವನ್ನ ಆಕ್ರಮಿಸುತ್ತದೆ. ಈ ಕಾರಣದಿಂದಾಗಿ, ಎದೆಯಲ್ಲಿ ನೋವು ಮತ್ತು ಸುಡುವ ಸಂವೇದನೆ ಪ್ರಾರಂಭವಾಗುತ್ತದೆ. ಅಂತಹ ಸಮಸ್ಯೆಯಿದ್ದಲ್ಲಿ, ತಕ್ಷಣ ಆಸ್ಪತ್ರೆಗೆ ಹೋಗಬೇಕು.
ಲಕ್ಷಣ 5: ತುಟಿ ಅಥವಾ ಮುಖದ ಮೇಲೆ ನೀಲಿ ಬಣ್ಣ: ಕೊರೊನಾ ಸಕಾರಾತ್ಮಕ ರೋಗಿಯ ತುಟಿಗಳು ಮತ್ತು ಮುಖದ ಮೇಲೆ ನೀಲಿ ಬಣ್ಣ ಬರುತ್ತದೆ. ಇದರರ್ಥ ಕೊರೊನಾ ಸೋಂಕಿತನ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿದೆ. ಇದನ್ನ ವೈದ್ಯಕೀಯ ಭಾಷೆಯಲ್ಲಿ ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ. ಹೈಪೋಕ್ಸಿಯಾದಲ್ಲಿ ನಮ್ಮ ಅಂಗಾಂಶಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ಇದರಿಂದಾಗಿ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಖ ಮತ್ತು ತುಟಿಗಳಲ್ಲಿ ನೀಲಿ ಗುರುತುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.
ನವದೆಹಲಿ : ಮಾಜಿ ಸೇನಾ ಮುಖ್ಯಸ್ಥ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಭಾರತದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಭಯಾನಕ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಆದರೆ ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಸಾಕ್ಷಿಯಾಗಿದ್ದರೂ ನಡೆಯುತ್ತಿರುವ ಚುನಾವಣಾ ರ್ಯಾಲಿಗಳು, ರೈತರ ಪ್ರತಿಭಟನೆ ಮತ್ತು ಇತರ ಘಟನೆಗಳನ್ನು ದೂಷಿಸಿದ್ದಾರೆ.
ಜನರಲ್ ವೇದ್ ಮಲಿಕ್ ಅವರು ಭಾನುವಾರ ಟ್ವೀಟ್ ಮಾಡಿ, ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶ ದಾಖಲಾದ ಸಾವುನೋವುಗಳಿಗಿಂತ ಪ್ರತಿದಿನ ಭಾರತದಲ್ಲಿ ಹೆಚ್ಚಿನ ಜನರು ಸಾಯುತ್ತಿದ್ದಾರೆ ಎಂದು ಹೇಳಿದರು.
ಅವರು ಹೇಳಿದರು, “ನಮ್ಮ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿದೆ. ನಿನ್ನೆ ಸಾಂಕ್ರಾಮಿಕ ರೋಗದಿಂದಾಗಿ 1338 ಭಾರತೀಯರು ಸತ್ತರು: ಇದು ಕಾರ್ಗಿಲ್ ಯುದ್ಧದಲ್ಲಿ ಸಾವನ್ನಪ್ಪಿದ್ದಕ್ಕಿಂತ 2.5 ಪಟ್ಟು ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ರ್ಯಾಲಿಗಳು ಮತ್ತು ಕೃಷಿ ಕಾನೂನುಗಳ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಬಿಡಾರ ಹೂಡಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ಜನರಲ್ ವೇದ್ ಮಲಿಕ್, “ಚುನಾವಣಾ ರ್ಯಾಲಿಗಳು, ನಂಬಿಕೆ ಕಾರ್ಯಕ್ರಮಗಳು, ರೈತ ಪ್ರತಿಭಟನೆ, ಸಂಪನ್ಮೂಲಗಳ ಬಗ್ಗೆ ಒಳಜಗಳದಿಂದಾಗಿ ಭಾರತಕ್ಕೆ ಕೊರೋನಾ ಹೆಚ್ಚುತ್ತಿದೆ ಎಂದು ಹೇಳಿದರು.
ಜನರಲ್ ವೇದ್ ಮಲಿಕ್ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಭಾನುವಾರ 2.61 ಲಕ್ಷ ಕೋವಿಡ್-19 ಪ್ರಕರಣಗಳ ಅತಿದೊಡ್ಡ ಏಕ ದಿನದ ಏರಿಕೆಯನ್ನು ಕಂಡಿತು, ಇದು ದೇಶದ ಕೊರೋನಾ ಸೋಂಕಿತರ ಸಂಖ್ಯೆಯನ್ನು 1.47 ಕೋಟಿಗೆ ಏರಿಕೆ ಮಾಡಿದೆ. ಕಳೆದ ೨೪ ಗಂಟೆಗಳಲ್ಲಿ ೧,೫೦೧ ಸಾವುನೋವುಗಳು ದಾಖಲಾಗಿರುವುದರಿಂದ ಭಾರತದಲ್ಲಿ ಸಾವಿನ ಸಂಖ್ಯೆ ೧,೭೭,೧೫೦ ಕ್ಕೆ ಏರಿದೆ.
ಮಂಗಳೂರು : ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 35 ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಏಪ್ರಿಲ್ 30ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಗರ್ಭಿಣಿ ಮಹಿಳೆಯರು ಹಾಗೂ ಎರಡು ವರ್ಷದೊಳಗಿನ ಮಕ್ಕಳಿರುವಂತ ತಾಯಂದಿರಿಗೆ, ಆರೋಗ್ಯದ ಹಿತದೃಷ್ಠಿಯಿಂದ ಮನೆಯಿಂದಲೇ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಮೂಲಕ ಕರ್ತವ್ಯ ನಿರ್ವಹಿಸುವಂತೆ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಮೊದಲ ಕೊರೋನಾ ಅಲೆಯ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗೆ ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಆಗಬಾರದು ಎನ್ನುವ ಕಾರಣದಿಂದಾಗಿ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನವದೆಹಲಿ : ದೇಶಾದ್ಯಂತ ಕೊರೋನಾ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ದೇಶದಲ್ಲಿ ಚೇತರಿಕೆ ಪ್ರಮಾಣಕ್ಕಿಂತ ಕೊರೋನಾ ಸೋಂಕು ಹರಡುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಜನರ ಸ್ಥಿತಿ ಚಿಂತಾಜನಕವಾಗಿದೆ, ಈ ಸಂದರ್ಭದಲ್ಲಿ ರಾಷ್ಟ್ರೀಯ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಬೇಕಾದ ಅಗತ್ಯ ಹೆಚ್ಚಿದೆ ಎಂದಿದ್ದಾರೆ.
ಇಷ್ಟೇ ಅಲ್ಲದೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವುದು ಒಳ್ಳೆಯದಲ್ಲ ಕೂಡಲೇ ಈ ರ್ಯಾಲಿಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿತರು ಎರಡು ಲಕ್ಷ ಗಡಿ ದಾಟಿದ್ದಾರೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 2,61,500 ಪ್ರಕರಣಗಳು ದಾಖಲಾಗಿದ್ದು, 1501 ಮಂದಿ ಸಾವಿಗೀಡಾಗಿದ್ದಾರೆ.
ಯಾದಗಿರಿ : ಕೊರೋನಾ ಸೋಂಕಿನ ಕಾರಣದಿಂದಾಗಿ ಜಾತ್ರೆ, ಧಾರ್ಮಿಕ ಆಚರಣೆಗಳಂತ ಗುಂಪು ಸೇರುವ ಕಾರ್ಯಕ್ರಮ ನಿಷೇಧವಿದೆ. ಹೀಗಿದ್ದೂ ಜಿಲ್ಲೆಯಲ್ಲಿ ಆತ್ಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆದಿದೆ. ರಥದ ಮೇಲ್ಬಾಗ ಮುರಿದು ಬಿದ್ದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳಿಚಕ್ರದಲ್ಲಿ ನಡೆದಿದೆ.
ಇಂದು ಕೊರೋನಾ ಸೋಂಕಿನ ಕಾರಣದಿಂದಾಗಿ ಜಾತ್ರಾ ಮಹೋತ್ಸವಕ್ಕೆ ನಿಷೇಧವಿದ್ದರೂ, ನಿಷೇಧದ ನಡುವೆಯೂ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಆತ್ಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆದಿದೆ.
ಇಂತಹ ಜಾತ್ರಾ ಮಹೋತ್ಸವದಲ್ಲಿ ಭಕ್ತರು ರಭಸವಾಗಿ ರಥವನ್ನು ಎಳೆಯುವಂತ ಸಂದರ್ಭದಲ್ಲಿ ರಥದ ಮೇಲ್ಬಾಗ ಮುರಿದು, ರಥ ಎಳೆಯುತ್ತಿದ್ದವರ ಮೇಲೆ ಬಿದ್ದ ಪರಿಣಾಮ, ಐವರು ತೀವ್ರವಾಗಿ ಗಾಯಗೊಂಡಿದ್ದರೇ, ಇನ್ನೂ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ರಥೋತ್ಸವದ ವೇಳೆ ಉಂಟಾಗ ಅವಘಡದಿಂದಾಗಿ ಗಂಭೀರವಾಗಿ ಗಾಯಗೊಂಡವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಜಿಟಲ್ ಡೆಸ್ಕ್ : ಕರ್ಪೂರ, ಲವಂಗ, ಅಜ್ವೈನ್ ಮತ್ತು ಕೆಲವು ಹನಿ ನೀಲಗಿರಿ ಎಣ್ಣೆಯ ಸಂಯೋಜನೆಯ ವಾಸನೆಯು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸಂದೇಶವು ಹೇಳಿಕೊಂಡಿದೆ. ವೈರಲ್ ಸಂದೇಶದ ಜೊತೆಗೆ ಒಂದು ಸಣ್ಣ ಬಿಳಿ ಬಟ್ಟೆಯ ಮೇಲೆ ಮೇಲೆ ಉಲ್ಲೇಖಿಸಿದ ಪದಾರ್ಥಗಳನ್ನು ತೋರಿಸುವ ಫೋಟೋ ಇದೆ.
ಕೋವಿಡ್-19 ರ ಎರಡನೇ ಅಲೆಯ ನಡುವೆ ದೇಶದ ಹಲವಾರು ರಾಜ್ಯಗಳು ಭಾರಿ ಆಮ್ಲಜನಕ ಕೊರತೆಯನ್ನು ಅನುಭವಿಸುತ್ತಿರುವಾಗ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ. ಆದಾಗ್ಯೂ, ಈ ಮಾಹಿತಿಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳು ಸಿಗಲಿಲ್ಲ. ಎದೆ ತಜ್ಞರೊಂದಿಗೆ ಈ ಕುರಿತು ಮಾಹಿತಿ ಕೇಳಿದಾಗ ಈ ಮಾಹಿತಿ ಸುಳ್ಳು ಎಂಬುದು ತಿಳಿದು ಬಂದಿದೆ.
ವೈರಲ್ ಪೋಸ್ಟ್ ನಲ್ಲಿರುವ ಸಂಪೂರ್ಣ ಸಂದೇಶವು ಹೀಗಿತ್ತು, “ಕರ್ಪೂರ, ಲವಂಗ್, ಅಜ್ವೈನ್, ಕೆಲವು ಹನಿನೀಲಗಿರಿ ಎಣ್ಣೆ ಜೊತೆಯಾಗಿ ಸೇರಿಸಿ ಒಂದು ಟವೆಲ್ ನಲ್ಲಿ ಕಟ್ಟಿ. ಮತ್ತು ಹಗಲು ಮತ್ತು ರಾತ್ರಿಯಿಡೀ ಅದರ ವಾಸನೆಯನ್ನು ಸೇವಿಸಿ. ಆಮ್ಲಜನಕದ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.” ಎಂಬ ಮಾಹಿತಿ ಹಂಚಿಕೆಯಾಗಿತ್ತು.
ಆಮ್ಲಜನಕದ ಮಟ್ಟ ಕಡಿಮೆ ಇದ್ದಾಗ ಲಡಾಖ್ ನಲ್ಲಿ ಪ್ರವಾಸಿಗರಿಗೆ ಈ ಪಾಟ್ಲಿಯನ್ನು ಸಹ ನೀಡಲಾಗುತ್ತದೆ. ಅನೇಕ ಆಂಬ್ಯುಲೆನ್ಸ್ ಗಳು ಈಗ ಇವುಗಳನ್ನು ಸಹ ಇಟ್ಟುಕೊಂಡಿವೆ.” ಎಂದು ತಿಳಿದು ಬಂದಿದೆ. ಅಲ್ಲದೇ ಇದೇ ಸಂದೇಶವನ್ನು ಗುಜರಾತಿಯಲ್ಲೂ ಹಂಚಿಕೊಳ್ಳಲಾಗಿದೆ ಮತ್ತು ಫೇಸ್ ಬುಕ್ ಮತ್ತು ಟ್ವಿಟರ್ ಎರಡರಲ್ಲೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
Camphor, lavang, ajwain, few drops eucalyptus oil. Make potli and keep smelling it throughout the day. This helps increase oxygen levels & congestion.
This potli is given to tourists in Ladakh when oxygen levels are low.
ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಕರ್ಪೂರ ಮತ್ತು ಇತರ ಉತ್ಪನ್ನಗಳ ಬಳಕೆಯ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಹುಡುಕಿದಾಗ ಈ ಬಗ್ಗೆ ದೃಢೀಕರಿಸುವ ಯಾವುದೇ ಪ್ರಬಂಧಗಳು ಸಿಗಲಿಲ್ಲ ಎಂದು ತಿಳಿದು ಬಂದಿದೆ. ಇದು ಒಂದು ಮಿಥ್ಯೆ. ಕರ್ಪೂರದ ವಾಸನೆಯಿಂದ ಆಮ್ಲಜನಕದ ಮಟ್ಟ ಹೆಚ್ಚಾಗುವುದಿಲ್ಲ. ಕರ್ಪೂರದ ವಾಸನೆಯು ಮೂಗಿನ ಹಾದಿಯಲ್ಲಿನ ತಡೆಗಳನ್ನು ತೆರವುಗೊಳಿಸುತ್ತದೆ, ಅದು ಉತ್ತಮ ಗಾಳಿಯ ಹರಿವಿನ ಭಾವನೆಯನ್ನು ನೀಡುತ್ತದೆ,” ಎಂದು ಡಾ. ಅಗರ್ವಾಲ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಸ್ಜೆಗೆಡ್ ವಿಶ್ವವಿದ್ಯಾಲಯವು ಪ್ರಕಟಿಸಿದ ಒಂದು ವರದಿಯು, “ಸ್ವಯಂಸೇವಕರ ಮಾದರಿಯ ಮೇಲೆ ಕರ್ಪೂರದ ಆವಿಗಳನ್ನು (ನೀಲಗಿರಿ ಮತ್ತು ಮೆಂಥಾಲ್ ಆವಿಗಳಲ್ಲಿ ಒಂದಾಗಿ) ಉಸಿರಾಡುವುದು, ವಾಸ್ತವವಾಗಿ ಗಾಳಿಯ ಹರಿವಿಗೆ ಮೂಗಿನ ಪ್ರತಿರೋಧದ ಮೇಲೆ ಪರಿಣಾಮ ಬೀರದಿದ್ದರೂ, ಮೂಗಿನಲ್ಲಿ ಗಾಳಿಯ ನ ಸಂವೇದನೆಯನ್ನು ಹೆಚ್ಚಿಸಿತು” ಎಂದು ಹೇಳಿತು.
ಕರ್ಪೂರದ ದೈನಂದಿನ ಗರಿಷ್ಠ ಚಿಕಿತ್ಸಕ ಡೋಸ್ ಸುಮಾರು 1.43 ಮಿಗ್ರಾಂ ಎಂದು ವರದಿ ಹೇಳಿದೆ. ಮುಖ್ಯವಾಗಿ ಆಕಸ್ಮಿಕ ಸೇವನೆಯಿಂದ ಮನುಷ್ಯರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಕರ್ಪೂರದ ಪರಿಣಾಮದ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಅದು ಹೇಳಿದೆ.
ಕರ್ಪೂರ, ಲವಂಗ, ಅಜ್ವೈನ್ ಮತ್ತು ನೀಲಗಿರಿ ತೈಲದ ವಾಸನೆಯು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ವಾದವು ಸುಳ್ಳು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಕರ್ಪೂರವು ಸಂಶ್ಲೇಷಿತವಾಗಿ ಉತ್ಪತ್ತಿಯಾಗುತ್ತದೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು . ಆದುದರಿಂದ ಇದನ್ನು ಬಳಸುವಾಗ ಎಚ್ಚರದಿಂದಿರಿ ಎಂದು ತಜ್ಞರು ಸಲಗೆ ನೀಡುತ್ತಾರೆ,
ಡಿಜಿಟಲ್ ಡೆಸ್ಕ್ : ಇಂಗ್ಲಿಷ್ ಭಾಷೆ ಶಿಕ್ಷಣ, ಉದ್ಯೋಗ, ತಾಂತ್ರಿಕ ಪ್ರಗತಿ ಮತ್ತು ಸಮುದಾಯಗಳನ್ನು ಒಟ್ಟುಗೂಡಿಸುವ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ, ವಿಶೇಷವಾಗಿ ಭಾಷಾ-ಸಂಸ್ಕೃತಿ ಪ್ರತಿನಿಧಿಸುವ ದೇಶದಲ್ಲಿ, ಅದು ಸಂವಹನಕ್ಕೆ ಸಾಮಾನ್ಯ ನೆಲೆಯಾಗಬಹುದು. ನಿರರ್ಗಳವಾಗಿ ಸಂವಹನ ನಡೆಸಲು, ಭಾಷೆಯನ್ನು ಕಲಿಯುವಾಗ, ಆಗಾಗ್ಗೆ ಅಡಿಪಾಯದ ಮಟ್ಟದಲ್ಲಿ ಕಡೆಗಣಿಸಲಾಗುವ ವಿರಾಮ ಚಿಹ್ನೆಗಳು, ಲೇಖನಗಳು, ಮಾತಿನ ಭಾಗಗಳು ಸೇರಿದಂತೆ ಮೂಲಭೂತ ವ್ಯಾಕರಣ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ.
ಪ್ರಬುದ್ಧವಾಗಿ ಇಂಗ್ಲೀಷ್ ಭಾಷೆ ಮೇಲೆ ಹಿಡಿತ ಸಾಧಿಸಲು ಏನು ಮಾಡಬೇಕು ನೋಡೋಣ…
1. ವಿದ್ಯಾರ್ಥಿಗಳು ತಮ್ಮ ಅಕ್ಷರಶಃ ಗ್ರಹಿಕೆಯನ್ನು ಸುಧಾರಿಸಲು ಆರಂಭಿಕ ಶ್ರೇಣಿಗಳಲ್ಲಿ “foot the bill” ಅಥಬಾ “sells like hot cakes”” ನಂತಹ ಸಾಮಾನ್ಯವಾಗಿ ಬಳಸುವ ಕ್ರಿಯಾಪದ ನುಡಿಗಟ್ಟುಗಳ ಪರಿಚಯವನ್ನು ಹೊಂದಿರಬೇಕು.
2. ಸಾಮಾಜಿಕ ನೆಟ್ ವರ್ಕಿಂಗ್ ಪ್ಲಾಟ್ ಫಾರ್ಮ್ ಗಳು ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳಿಂದ ಪ್ರೇರಿತವಾದ ಜಗತ್ತಿನಲ್ಲಿ, ಶಾರ್ಟ್ ಹ್ಯಾಂಡ್ ಸಂವಹನದೊಂದಿಗೆ ಸಂಕ್ಷಿಪ್ತ ರೂಪಗಳ ಬಳಕೆ ಹೆಚ್ಚಾಗಿದೆ, ಅದು ಜನಪ್ರಿಯತೆಯನ್ನು ಗಳಿಸಿದೆ. ವಿಕಸನಗೊಳ್ಳುತ್ತಿರುವ ಪ್ರಕಾರ ಈ ಸಂಕ್ಷಿಪ್ತ ರೂಪಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರಬೇಕು, ಆದರೆ ಅಧಿಕೃತ ಮತ್ತು ಅನೌಪಚಾರಿಕ ಸಂವಹನದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಸಹ ಅವರಿಗೆ ನಿರ್ಣಾಯಕವಾಗಿದೆ. ಅವರು ಪದಗಳು ಮತ್ತು ಇಂಗ್ಲಿಷ್ ವ್ಯಾಕರಣದ ಸರಿಯಾದ ಬಳಕೆಯ ತಿಳುವಳಿಕೆಯನ್ನು ಹೊಂದಿರಬೇಕು, ಇದನ್ನು ಸಾಮಾನ್ಯವಾಗಿ ದೈನಂದಿನ ಸಂವಹನದಲ್ಲಿ ಬಳಸುವ ಸಂಕ್ಷಿಪ್ತ ರೂಪಗಳ ಮೂಲಕ ವಿವರಿಸಲು ಸಾಧ್ಯವಿಲ್ಲ.
3. ವಿದ್ಯಾರ್ಥಿಗಳು ಹೆಚ್ಚಾಗಿ ಹೋಮೋಫೋನ್ ಗಳೊಂದಿಗೆ ಹೆಣಗಾಡುತ್ತಾರೆ ಮತ್ತು ಸರಿಯಾದ ಅರ್ಥವನ್ನು ಒಂದೇ ರೀತಿಯಲ್ಲಿ ಮಾತನಾಡುವ ಆದರೆ ವಿಭಿನ್ನವಾಗಿ ಬರೆಯುವ ಪದಗಳೊಂದಿಗೆ ಕನ್ ಫ್ಯೊಸ್ ಅಗುತ್ತಾರೆ. ಭಾಷೆಯಲ್ಲಿ ಉತ್ತಮ ಆದೇಶವನ್ನು ಖಚಿತಪಡಿಸಿಕೊಳ್ಳಲು ಅವರು ಈ ಕ್ಷೇತ್ರದಲ್ಲಿ ಸ್ಪಷ್ಟತೆಯನ್ನು ಹೊಂದಿರುವುದು ಮುಖ್ಯ.
4. ವಿದ್ಯಾರ್ಥಿಗಳು ವಾಕ್ಯಗಳ ದೀರ್ಘ ಪದವಿನ್ಯಾಸವನ್ನು ಬಳಸುವುದನ್ನು ತಪ್ಪಿಸಬೇಕು ಮತ್ತು ಸಂದೇಶವನ್ನು ಕಡಿಮೆ ವಾಕ್ಯದಲ್ಲಿ ಪಡೆಯಲು ಸಂಕ್ಷಿಪ್ತ ಮತ್ತು ಗರಿಗರಿಯಾದ ಪದಗಳ ಗುಂಪನ್ನು ಬದಲಾಯಿಸಬೇಕು.
5. ಓದುವಿಕೆಯು ಬರೆಯಲು ಒಂದು ಪ್ರಮುಖ ಅಂಶವಾಗಿದೆ ಮತ್ತು ಸ್ವಾಭಾವಿಕವಾಗಿ, ವಾಕ್ಯಗಳ ನಿರಂತರವಾಗಿ ಓದುವುದು ಮತ್ತು ಅವುಗಳಿಂದ ಪದಗುಚ್ಛಗಳನ್ನು ಬರವಣಿಗೆಯಲ್ಲಿ ಹೀರಿಕೊಳ್ಳುವುದು ಉತ್ತಮ ಬರವಣಿಗೆ ಕೌಶಲ್ಯಗಳಿಗೆ ಕಾರಣವಾಗುತ್ತದೆ . ಪಠ್ಯದ ದೀರ್ಘ ತುಣುಕುಗಳನ್ನು ಓದಲು ಆರಂಭಿಕ ಶ್ರೇಣಿಗಳಲ್ಲಿಯೂ ಪ್ರೋತ್ಸಾಹಿಸಬೇಕು.
6. ತಮ್ಮ ಬರವಣಿಗೆಯ ಮಾದರಿಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯೆಯನ್ನು ನೀಡುವ ವಿದ್ಯಾರ್ಥಿಗಳು, ತಮ್ಮ ಸ್ವಂತ ಬರವಣಿಗೆಯನ್ನು ವಿಶ್ಲೇಷಿಸುವವರಿಗಿಂತ ಹೆಚ್ಚು ತ್ವರಿತವಾಗಿ ಸುಧಾರಿಸುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅವರ ಬರವಣಿಗೆಯ ಬಗ್ಗೆ ರಚನಾತ್ಮಕ ಮತ್ತು ವಿವರವಾದ ಪ್ರತಿಕ್ರಿಯೆಯನ್ನು ನೀಡುವುದು ಮುಖ್ಯ.
7. ಇಂಗ್ಲಿಷ್ ನಲ್ಲಿ ವೈವಿಧ್ಯಮಯ ಶೈಲಿಯ ಬರವಣಿಗೆಗಳಿವೆ, ಅವುಗಳನ್ನು ವಿದ್ಯಾರ್ಥಿಗಳು ಕಲಿಯಬೇಕು ಮತ್ತು ಅಳವಡಿಸಿಕೊಳ್ಳಬೇಕು, ಇದು ಲಿಖಿತ ಸಂವಹನದ ಪ್ರಸ್ತುತತೆ, ಸಂದರ್ಭ ಮತ್ತು ಪ್ರಕಾರದ ಆಧಾರದ ಮೇಲೆ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಸಾಮಾಜಿಕ ಮಾಧ್ಯಮ ಪುಟದ ಸೃಜನಶೀಲ ವಿಷಯದಲ್ಲಿ ಬಳಸುವ ಇಂಗ್ಲಿಷ್ ಶೈಲಿಯು ಮೇಲ್ ಮೂಲಕ ಅಧಿಕೃತ ಸಂವಹನದಿಂದ ಭಿನ್ನವಾಗಿರುತ್ತದೆ.
2016 ರ ಎಎಸ್ಇಆರ್ ಅಧ್ಯಯನವು ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯಲ್ಲಿ ಸ್ಥಿರವಾದ ಕುಸಿತವಾಗಿದೆ ಮತ್ತು 8 ನೇ ತರಗತಿಯ 60.2% ವಿದ್ಯಾರ್ಥಿಗಳು 2009 ರಲ್ಲಿ ಇಂಗ್ಲಿಷ್ ನಲ್ಲಿ ಸರಳ ವಾಕ್ಯಗಳನ್ನು ಓದಬಹುದು, ಇದು 2014 ರಲ್ಲಿ 46.7% ಗೆ ಇಳಿಯಿತು ಮತ್ತು 2016 ರಲ್ಲಿ 45.2% ಗೆ ಇಳಿಯಿತು. ಆದ್ದರಿಂದ, ಸವಾಲುಗಳನ್ನು ಜಯಿಸಲು ಮತ್ತು ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ಮಾತನಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುವ ದೃಢವಾದ ತಿಳುವಳಿಕೆಯನ್ನು ಹೊಂದಲು ವ್ಯವಸ್ಥಿತ ವಿಧಾನದ ಮೂಲಕ ಇಂಗ್ಲಿಷ್ ಕಲಿಯುವುದು ಬಹಳ ಮುಖ್ಯ.
ಬೆಂಗಳೂರು : ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವಂತ ಅನಿರ್ಧಿಷ್ಟಾವಧಿಯ ಮುಷ್ಕರ 12ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುವಂತ ಯಾವುದೇ ಮಾತನಾಡದೇ, 6ನೇ ವೇತನ ಆಯೋಗದಂತೆ ವೇತನ ಜಾರಿ ಬಿಲ್ ಖುಲ್ ಇಲ್ಲ ಅಂದಿದೆ. ಇದರ ನಡುವೆ ಮುಷ್ಕರ ಮುಂದುವರೆದಿದ್ದು, ಇಂದು ಮುಷ್ಕರದ ನಡುವೆ ಮಧ್ಯಾಹ್ನ 1 ಗಂಟೆಯ ವೇಳೆ ರಾಜ್ಯಾಧ್ಯಂತ 6,110 ಸಾರಿಗೆ ಬಸ್ ಸಂಚಾರ ಆರಂಭಿಸಿವೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ರಾಜ್ಯಾಧ್ಯಂತ KSRTC 2746 ಬಸ್, BMTC 1191 ಬಸ್ ಗಳು, NEKRTC 1086 ಬಸ್, NWKRTC 1087 ಸೇರಿದಂತೆ ಒಟ್ಟು 6110 ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ.
ಅಂದಹಾಗೇ ಸಾರಿಗೆ ನೌಕರರ ಮುಷ್ಕರ ಈಡೇರಿಸೋ ಬಗ್ಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದು ಡೆಡ್ ಲೈನ್ ನೀಡಿದ್ದರು. ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ತೀರ್ವಗೊಳಿಸುವುದಾಗಿ ತಿಳಿಸಿದ್ದರು. ನಾಳೆಯಿಂದ ಸಾರಿಗೆ ನೌಕರರು ಜೈಲ್ ಭರೋ ಚಳುವಳಿ ಕೂಡ ನಡೆಸಲಿದ್ದಾರೆ ಎಂಬುದಾಗಿ ತಿಳಿಸಿದ್ದರು.
ನ್ಯೂಸ್ ಡೆಸ್ಕ್ : ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ತಂತ್ರಜ್ಞಾನ ಅಥವಾ ಪಿಡಿಎಫ್ ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಪ್ರಮುಖ ಸಾಫ್ಟ್ ವೇರ್ ಕಂಪನಿ ಅಡೋಬ್ ಇಂಕ್ ನ ಸಹ-ಸಂಸ್ಥಾಪಕ ಚಾರ್ಲ್ಸ್ “ಚಕ್” ಗೆಶ್ಕೆ – 81 ನೇ ವಯಸ್ಸಿನಲ್ಲಿ ನಿಧನರಾದರು.
ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಉಪನಗರ ಲಾಸ್ ಆಲ್ಟೋಸ್ ನಲ್ಲಿ ವಾಸಿಸುತ್ತಿದ್ದ ಗೆಶ್ಕೆ ಶುಕ್ರವಾರ ನಿಧನರಾದರು ಎಂದು ಕಂಪನಿ ತಿಳಿಸಿದೆ.
“ಇದು ಇಡೀ ಅಡೋಬ್ ಸಮುದಾಯ ಮತ್ತು ತಂತ್ರಜ್ಞಾನ ಉದ್ಯಮಕ್ಕೆ ದೊಡ್ಡ ನಷ್ಟವಾಗಿದೆ, ಅವರಿಗೆ ಗೆಶ್ಕೆ ದಶಕಗಳಿಂದ ಮಾರ್ಗದರ್ಶಿ ಮತ್ತು ನಾಯಕರಾಗಿದ್ದಾರೆ,” ಎಂದು ಅಡೋಬ್ ಸಿಇಒ ಶಂತನು ನರೇನ್ ಕಂಪನಿಯ ಉದ್ಯೋಗಿಗಳಿಗೆ ಇಮೇಲ್ ನಲ್ಲಿ ಬರೆದಿದ್ದಾರೆ.
“ಅಡೋಬ್ ನ ಸಹ-ಸಂಸ್ಥಾಪಕರಾಗಿ, ಚಕ್ ಮತ್ತು ಜಾನ್ ವಾರ್ನಾಕ್ ಉತ್ತಮಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಿದರು, ಅದು ಜನರು ಏನನ್ನು ಇಷ್ಟಪಡುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎಂಬುದನ್ನು ಕ್ರಾಂತಿಕಾರಿಗೊಳಿಸಿದ್ದಾರೆ” ಎಂದು ಶ್ರೀ ನರೇನ್ ಹೇಳಿದರು.
“ಅವರ ಮೊದಲ ಉತ್ಪನ್ನ ಅಡೋಬ್ ಪೋಸ್ಟ್ ಸ್ಕ್ರಿಪ್ಟ್, ಇದು ಕಾಗದದ ಮೇಲೆ ಪಠ್ಯ ಮತ್ತು ಚಿತ್ರಗಳನ್ನು ಮುದ್ರಿಸಲು ಆಮೂಲಾಗ್ರ ಹೊಸ ಮಾರ್ಗವನ್ನು ಒದಗಿಸಿದ ಮತ್ತು ಡೆಸ್ಕ್ ಟಾಪ್ ಪ್ರಕಾಶನ ಕ್ರಾಂತಿಯನ್ನು ಹುಟ್ಟುಹಾಕಿದ ಒಂದು ನವೀನ ತಂತ್ರಜ್ಞಾನವಾಗಿತ್ತು. ಚಕ್ ಕಂಪನಿಯಲ್ಲಿ ನಾವಿನ್ಯತೆಗಾಗಿ ಅವಿರತ ಚಾಲನೆಯನ್ನು ನೀಡಿದರು, ಇದರ ಪರಿಣಾಮವಾಗಿ ಸರ್ವವ್ಯಾಪಿ ಪಿಡಿಎಫ್, ಅಕ್ರೋಬ್ಯಾಟ್, ಇಲಸ್ಟ್ರೇಟರ್, ಪ್ರೀಮಿಯರ್ ಪ್ರೊ ಮತ್ತು ಫೋಟೋಶಾಪ್ ಸೇರಿದಂತೆ ಕೆಲವು ಪರಿವರ್ತನಾತ್ಮಕ ಸಾಫ್ಟ್ ವೇರ್ ಆವಿಷ್ಕಾರಗಳು ಉಂಟಾದವು” ಎಂದು ಅವರು ಹೇಳಿದರು.
ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ ನಂತರ, ಗೆಶ್ಕೆ ಜೆರಾಕ್ಸ್ ಪಾಲೋ ಆಲ್ಟೊ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಅವರು ವಾರ್ನಾಕ್ ಅವರನ್ನು ಭೇಟಿಯಾದರು ಎಂದು ಮರ್ಕ್ಯುರಿ ನ್ಯೂಸ್ ವರದಿ ಮಾಡಿದೆ. ೧೯೮೨ ರಲ್ಲಿ ಕಂಪನಿಯನ್ನು ತೊರೆದು ಅಡೋಬ್ ಅನ್ನು ಕಂಡುಕೊಂಡರು, ಒಟ್ಟಿಗೆ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಮಾಡಿದರು.
2009 ರಲ್ಲಿ, ಅಧ್ಯಕ್ಷ ಬರಾಕ್ ಒಬಾಮಾ ಗೆಶ್ಕೆ ಮತ್ತು ವಾರ್ನಾಕ್ ಗೆ ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ ಯನ್ನು ನೀಡಿದರು. 1992ರಲ್ಲಿ, ಗೆಶ್ಕೆ ಅಪಹರಣದಿಂದ ಬದುಕುಳಿದರು ಎಂದು ಮರ್ಕ್ಯುರಿ ನ್ಯೂಸ್ ವರದಿ ಮಾಡಿದೆ.
ಒಂದು ಬೆಳಿಗ್ಗೆ ಕೆಲಸಕ್ಕೆ ಬಂದ ಇಬ್ಬರು ವ್ಯಕ್ತಿಗಳು ಆಗ 52 ವರ್ಷದ ಗೆಶ್ಕೆಯನ್ನು ಗನ್ ಪಾಯಿಂಟ್ ನಲ್ಲಿ ಹಿಡಿದು ಕ್ಯಾಲಿಫೋರ್ನಿಯಾದ ಹೋಲಿಸ್ಟರ್ ಗೆ ಕರೆದೊಯ್ದರು, ಅಲ್ಲಿ ಅವರನ್ನು ನಾಲ್ಕು ದಿನಗಳ ಕಾಲ ಬಂಧಿಸಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದೆ. ದಿನವೊಂದಕ್ಕೆ 14 ಸಾವಿರಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ತಿಳಿದು ಬರುತ್ತಿದೆ. ಈ ಮೊದಲು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಹೋಂ ಐಸೋಲೇಷನ್ ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ತೀರಾ ತುರ್ತು ಸಂದರ್ಭದಲ್ಲಿ ಮಾತ್ರವೇ ಸೋಂಕಿತರಿಗೆ ಮಾತ್ರವೇ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿತರಾಗಿದ್ದು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ಇಲ್ಲವೇ ಕೊರೋನಾ ರೋಗದ ಲಕ್ಷಣಗಳಾಗಲಿ, ಸೋಂಕಿತರ ಸಂಪರ್ಕಿತರಾಗಿದ್ದರೇ, ನೀವು ಯಾವ ಔಷಧಿ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಮುಂದೆ ಓದಿ..
ದಿನೇ ದಿನೇ ಕೊರೋನಾ ಸೋಂಕಿನ 2ನೇ ಅಲೆ ರಾಜ್ಯದಲ್ಲಿ ಆರ್ಭಟಿಸುತ್ತಿದೆ. ಸೋಂಕಿನ ನಿಯಂತ್ರಮಕ್ಕಾಗಿ ರಾಜ್ಯ ಸರ್ಕಾರ ಕೊರೋನಾ ಕರ್ಪ್ಯೂನಂತಹ ನಿಯಂತ್ರಣ ಕ್ರಮ ಕೈಗೊಂಡರು, ನಿಯಂತ್ರಣ ಮೀರಿ, ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಮಧ್ಯೆ ಮದುವೆ ಸಮಾರಂಭಕ್ಕೆ ಜನ ಸೇರೋದಕ್ಕೆ ಮಿತಿಯನ್ನು ರಾಜ್ಯ ಸರ್ಕಾರ ಏರಿದೆ. ಒಂದು ವೇಳೆ ಈ ನಿಮಯ ಮೀರಿದ್ರೆ ಮದುವೆ ಮನೆಯವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸೋದಾಗಿ ಖಡಕ್ ಎಚ್ಚರಿಕೆ ನೀಡಿದೆ. ಅಲ್ಲದೇ ಕಲ್ಯಾಣಮಂಟಪ ಬುಕ್ ಮಾಡೋದಕ್ಕೆ ಜಿಲ್ಲಾಧಿಕಾರಿಗಳ ಅನುಮತಿಯನ್ನು ಕಡ್ಡಾಯಗೊಳಿಸಿದೆ.
ಈ ಎಲ್ಲಾ ನಿಯಂತ್ರಣ ಕ್ರಮಗಳ ಮಧ್ಯೆಯೂ ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸದಾಗಿ ದಿನವೊಂದಕ್ಕೆ 14 ಸಾವಿರಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲುತ್ತಿದೆ. ಹೀಗೆ ಕೊರೋನಾ ಸೋಂಕಿತರಾದಂತವರಿಗೆ ಹೋಂ ಐಸೋಲೇಷನ್ ನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರೇ, ಮತ್ತೆ ಕೆಲವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಹೀಗೆ ಹೋಂ ಐಸೋಲೇಷನ್ ನಲ್ಲಿ ಸೋಂಕಿತರಾದವರು, ಸೋಂಕಿತರ ಸಂಪರ್ಕದಿಂದಾಗಿ ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿರೋರು ಯಾವ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು ಎನ್ನುವ ಪಟ್ಟಿಯನ್ನು ಬಿಬಿಎಂಪಿಯು ಹೋಂ ಐಸೋಲೇಷನ್ ಮೆಡಿಕಲ್ ಕಿಟ್ ನಲ್ಲಿ ತಿಳಿಸಿದೆ. ಹಾಗಾದ್ರೇ ರೋಗದ ಲಕ್ಷಣಗಳಿದ್ದರೇ, ಇಲ್ಲದಿದ್ದಲೇ ಯಾವ ಔಷಧಿ ತೆಗೆದುಕೊಳ್ಳಬೇಕು ಎನ್ನುವ ಪಟ್ಟಿ ಈ ಕೆಳಗಿದೆ ನೋಡಿ..
ರೋಗ ಲಕ್ಷಣಗಳು ಇರದವರು, ಸೋಂಕಿತರ ಸಂಪರ್ಕಿತರು/For Asymptomatic ( No Symptoms )
10 ದಿನಗಳ ಕಾಲ – ವಿಟಮಿನ್ ಸಿ ಮಾತ್ರೆ (ಚೀಪುವುದು) 1-0-0 ತೆಗೆದುಕೊಳ್ಳುವುದು
10 ದಿನಗಳ ಕಾಲ – ಬಿ ಕಾಂಪ್ಲೆಕ್ಸ್ ಮಾತ್ರೆ ( ನುಂಗುವುದು) 1-0-0
ರೋಗ ಲಕ್ಷಣಗಳು ಸೌಮ್ಯ ಸ್ವರೂಪದಲ್ಲಿದ್ದರೇ / For Mild Symptoms
ಮಂಡ್ಯ : ಮದ್ದೂರು ತಾಲ್ಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಮಳೆ ನೀರು ಸಮರ್ಪಕವಾಗಿ ಹರಿದು ಹೋಗದೆ ಜಮೀನುಗಳಲ್ಲಿ ನಿಂತು ಕೊಳ್ಳುವ ಮೂಲಕ ಬೆಳೆಗಳು ನಾಶವಾಗಿವೆ ಎಂದು ಆರೋಪಿಸಿ ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನೀರು ತುಂಬಿದ ಜಮೀನಿಗಿಳಿದು ರೈತರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದ ಕಾರಣ ಮಳೆ ನೀರು ಜಮೀನಿನಲ್ಲಿ ನಿಂತುಕೊಂಡು ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ ಎಂದು ಬೆಂ – ಮೈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಅಪ್ಪೇಗೌಡ ಮಾತನಾಡಿ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡದ ಕಾರಣ ಕೆ.ಕೋಡಿಹಳ್ಳಿ ಹಾಗೂ ಅಗರಲಿಂಗನದೊಡ್ಡಿ ಗ್ರಾಮಗಳ ಮಳೆ ನೀರು ಹಾಗೂ ಚರಂಡಿ ನೀರು ಸಮರ್ಪಕವಾಗಿ ಮುಂದಕ್ಕೆ ಹೋಗದೆ ಜಮೀನುಗಳಲ್ಲಿ ಎರಡು ಅಡಿ ನೀರು ಸಂಗ್ರಹವಾಗಿ ಬೆಳೆಗಳು ನಾಶವಾಗುವ ಸ್ಥಿತಿಗೆ ಬಂದಿದೆ ಹೆದ್ದಾರಿ ಕಾಮಗಾರಿಯನ್ನು ಮಾಡುವ ಮುನ್ನ ಮಳೆ ನೀರು ನಾಲೆಗಳ ಮೂಲಕ ವ್ಯವಸ್ಥಿತವಾಗಿ ಮುಂದಕ್ಕೆ ಹೋಗುತ್ತಿತ್ತು ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಈ ಸಂಬಂಧ ಯಾವುದೇ ಮುಂಜಾಗ್ರತೆ ವಹಿಸದೆ ಹೆದ್ದಾರಿ ಕಾಮಗಾರಿ ಮಾಡಿರುವುದರಿಂದ ಈ ಸಮಸ್ಯೆ ತಲೆದೋರಿದೆ ಶೀಘ್ರವಾಗಿ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಕೊಡಬೇಕು ಹಾಗೂ ಪರಿಹಾರ ವಿತರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೈಪಾಸ್ ರಸ್ತೆ ಕಾಮಗಾರಿಯನ್ನು ತಡೆದು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯುವ ರೈತ ಮಹದೇವು ಮಾತನಾಡಿ ನಾನು ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ಜೀವನ ಮಾಡುತ್ತಿದ್ದೆ ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ವೇಳೆ ಜೀವನ ನಿರ್ವಹಣೆ ಮಾಡಲು ಕಷ್ಟವಾದ ಕಾರಣ ಸ್ವಗ್ರಾಮಕ್ಕೆ ಬಂದು ಬೇಸಾಯ ಮಾಡಲು ನಿರ್ಧರಿಸಿ ಒಂದುವರೆ ಎಕರೆಯನ್ನು ಬೇರೆಯವರ ಜಮೀನನ್ನು ಪಾಲಿಗೆ ಪಡೆದು ಸಾವಿರಾರು ರೂಪಾಯಿ ಸಾಲ ಮಾಡಿ ರಾಗಿ ಬೆಳೆಯನ್ನು ಬೆಳೆದಿದ್ದೆ ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿದ್ದ ರಾಗಿ ಫಸಲು ಮಳೆ ನೀರಿನಿಂದ ಸಂಪೂರ್ಣವಾಗಿ ರಾಗಿ ಬೆಳೆ ನಾಶವಾಗಿದ್ದು ಇದರಿಂದ ಮತ್ತಷ್ಟು ಸಾಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ನವದೆಹಲಿ :ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಎಲ್ಲಾ ಚುನಾವಣಾ ಪ್ರಚಾರ ಸಮಾವೇಶಗಳನ್ನು ರದ್ದುಪಡಿಸಿದ್ದಾರೆ.
ಕೊರೊನಾ ವೈರಸ್ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಚುನಾವಣಾ ಪ್ರಚಾರ ಸಮಾವೇಶವನ್ನೂ ರದ್ದು ಮಾಡಲಾಗಿದ್ದು, ತಾವೂ ಕೂಡಾ ಪ್ರಚಾರದಲ್ಲಿ ಭಾಗಿ ಆಗೋದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಇನ್ನಿತರ ರಾಜಕೀಯ ಪಕ್ಷಗಳೂ ಕೂಡಾ ಈ ಸಂದರ್ಭದಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಬಾರದು, ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು , ಯೋಚಿಸಿ ತೀರ್ಮಾನ ಮಾಡಿ ಎಂದು ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
In view of the Covid situation, I am suspending all my public rallies in West Bengal.
I would advise all political leaders to think deeply about the consequences of holding large public rallies under the current circumstances.
ಬೆಂಗಳೂರು : ರಾಜ್ಯ ಸರ್ಕಾರ ಈಗಾಗಲೇ ನೌಕರರ ಸಂಘಗಗಳನ್ನು ಬೇಡಿಕೆ ಈಡೇರಿಕೆ ಕುರಿತಂತೆ ಚರ್ಚಿಸಲು ಆಹ್ವಾನಿಸಿದೆ. ವೇತನ ಹೆಚ್ಚಳ ಮಾಡುವ ಭರವಸೆಯನ್ನು ನೀಡಿದೆ. ಸಿಎಂ ಹಾಗೂ ಸಾರಿಗೆ ಸಚಿವರು ಕೂಡ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಮುಷ್ಕರ ನಿರತ ನೌಕರರು ಸಂಧಾನದ ಮುಖಾಂತರ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕಳೆದ 30 ವರ್ಷಗಳಿಂದ ನಾನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನಾಗಿ ಸಂಘವನ್ನು ಪ್ರತಿನಿಧಿಸುತ್ತಿದ್ದೇನೆ. 1992ರಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ನಿಗಮಗಳಲ್ಲಿ ಕೆಲಸ ಮಾಡುತ್ತಿದ್ದ 996 ಚಾಲಕರು ಮತ್ತು ನಿರ್ವಾಹಕರುಗಳನ್ನು ವಿವಿಧ ಕಾರಣಗಳಿಂದ ವಜಾ ಮಾಡಲಾಗಿತ್ತು. ವಜಾ ಮಾಡಿದ್ದ ಎಲ್ಲಾ 996 ನೌಕರರನ್ನು ಪುನರ್ ನೇಮಕಗೊಳಿಸುವಲ್ಲಿ ಯಶಸ್ವಿಯಾಗಿದ್ದೆನು.
ಇದೀಗ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಅನಿರ್ಧಿಷ್ಟಾವಧಿಯ ಮುಷ್ಕರದಲ್ಲಿ ಸಿಂಹಪಾಲು ನೌಕರರು ಪರಿಶಿಷ್ಟ ಜಾತಿ, ಪಂಗಡದವೇ ಭಾಗವಹಿಸಿ, ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಮುಷ್ಕರ ಕಾನೂನು ಬಾಹಿರ, ಕಾರ್ಮಿಕ ಕಾನೂನಿನ ವಿರುದ್ಧ ನಡೆಯುತ್ತಿದೆ. ನೌಕರರು ಸರ್ಕಾರದ ಭರವಸೆಗಳಿಗೆ ಓಗೊಟ್ಟು ಮುಷ್ಕರ ಮುಂದೂಡಬೇಕಾಗಿತ್ತು. ಸಂಖ್ಯಾಬಲ ಇದೆ ಎಂದು ನೌಕರರನ್ನು ಅಪಾಯಕ್ಕೆ ದೂಡುವುದು ಯಾವುದೇ ನಾಯಕತ್ವದ ಗುಣವಲ್ಲ ಮುಗ್ದ ನೌಕರರಿಗೆ ಇದರಿಂದ ತೊಂದರೆಗಳು ನಿಶ್ಚಿತ ಎಂದಿದ್ದಾರೆ.
ಆದುದ್ದರಿಂದ ಮುಷ್ಕರ ನಿರತ ಸಾರಿಗೆ ನೌಕರರು ಸಂಧಾನದ ಮುಖಾಂತರ ಸಂಘಟನೆಗೆ ಮತ್ತು ಆಡಳಿತ ಮಂಡಳಿಯ ಜೊತೆಗೆ ಚರ್ಚಿಸುವ ಮುಖಾಂತರ ಪರಿಹಾರ ಕಂಡುಕೊಳ್ಳಬೇಕು. ಮುಷ್ಕರದಲ್ಲಿ ಭಾಗವಹಿಸೋದನ್ನು ಬಿಟ್ಟು, ಕರ್ತವ್ಯಕ್ಕೆ ಹಾಜರಾಗಿ, ಮುಂದಾಗುವ ಅನಾಹುತಗಳಿಗೆ ಎಡೆಮಾಡಿಕೊಡದೆ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಸ್ಪೆಷಲ್ ಡೆಸ್ಕ್ : ಇತ್ತೀಚೆಗೆ, ಕೊರೊನಾಗೆ ಸಂಬಂಧಿಸಿದ ಒಂದು ಪ್ರಮುಖ ಮಾಹಿತಿಬೆಳಕಿಗೆ ಬಂದಿದೆ. ಅವರ ಪ್ರಕಾರ, ಪುರುಷರು ಮಹಿಳೆಯರಿಗಿಂತ ಕೊರೊನಾಕ್ಕೆ ಹೆಚ್ಚು ಬಲಿಪಶುಗಳಾಗುತ್ತಿದ್ದಾರೆ. ಇದರ ಹಿಂದಿನ ಕಾರಣವೆಂದರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆ ಇರುತ್ತದೆ. ಅವರ ರೋಗನಿರೋಧಕತೆಯು ಕೊರೊನಾವನ್ನು ನಿಭಾಯಿಸಲು ಸಾಧ್ಯವಿಲ್ಲ ಮತ್ತು ಅದು ನಿರ್ಣಾಯಕ ಹಂತವನ್ನು ತಲುಪುತ್ತದೆ. ಈ ಪುರುಷ ಹಾರ್ಮೋನ್ ನ ಕೊರತೆಯು ಸಹ ಹೆಚ್ಚಿನ ಸಂಖ್ಯೆಯ ಪುರುಷರ ಸಾವಿಗೆ ಕಾರಣವಾಗುತ್ತಿದೆ.
ಟೆಸ್ಟೋಸ್ಟೆರಾನ್ ನ ಕೆಲಸ
ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದು ವೈರಸ್ ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಹೆಚ್ಚಾಗಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮೇಲೆ ಅವಲಂಬಿತವಾಗಿರುತ್ತದೆ. ಟೆಸ್ಟೋಸ್ಟೆರಾನ್ ನಮ್ಮ ದೇಹದ ಹೆಚ್ಚಿನ ರೋಗನಿರೋಧಕ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದೆ. ಇದು ವೈರಸ್ ವಿರುದ್ಧ ಪ್ರತಿಕಾಯಗಳನ್ನು ತಯಾರಿಸಲು ಸಹಾಯ ಮಾಡುವುದನ್ನು ಸಹ ಒಳಗೊಂಡಿರುತ್ತದೆ.
ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟಗಳು ಮತ್ತು ಕಾರ್ಯ
ಟೆಸ್ಟೋಸ್ಟೆರಾನ್ ಹಾರ್ಮೋನ್ ಪುರುಷರು ಮತ್ತು ಮಹಿಳೆಯರಿಬ್ಬರ ದೇಹದಲ್ಲಿದೆ. ಆದರೆ ಇದು ಪ್ರಾಥಮಿಕವಾಗಿ ಪುರುಷ ಹಾರ್ಮೋನ್ ಆಗಿದೆ ಏಕೆಂದರೆ ಇದು ಪುರುಷರ ಲೈಂಗಿಕ ಜೀವನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಿದ್ದರೆ, ಅವರ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಒಂದು ಅಧ್ಯಯನದ ಪ್ರಕಾರ, ಟೆಸ್ಟೋಸ್ಟೆರಾನ್ ನ 60 ಪ್ರತಿಶತವು ಮಹಿಳೆಯರಲ್ಲಿ ಸಾಕಾಗುತ್ತದೆ, ಮತ್ತು ಪುರುಷರಲ್ಲಿ 68 ಪ್ರತಿಶತಕ್ಕಿಂತ ಕಡಿಮೆ ಇರುತ್ತದೆ.
ಪುರುಷರಲ್ಲಿ 68 ಪ್ರತಿಶತದಷ್ಟು ಈ ಹಾರ್ಮೋನ್ ಇದ್ದರೂ ಸಹ ಉರಿಯೂತ-ವಿರೋಧಿ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಿಲ್ಲ. ಮಹಿಳೆಯರಲ್ಲಿ 60 ಪ್ರತಿಶತ ಹಾರ್ಮೋನ್ ಇದ್ದರೂ ಸಹ, ಅವರ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅವರು ಪ್ರತಿಕಾಯಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಟೆಸ್ಟೋಸ್ಟೆರಾನ್ ನ ಅಗತ್ಯ
ಕೊರೊನಾ ಹರಡುವಿಕೆಯ ನಂತರ, ವೈರಸ್ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಇದೇ ರೀತಿಯ ಸಂಶೋಧನೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆ ಎಂದು ತೋರಿಸಿದೆ. ಇದರಿಂದಾಗಿ ಪುರುಷರು ಕೊರೋನಾ ವೈರಸ್ ಗೆ ಹೆಚ್ಚು ಬಾಧಿತರಾಗುತ್ತಾರೆ ಎಂದು ತಿಳಿದು ಬಂದಿದೆ.
ನವದೆಹಲಿ: ದೇಶದ ದೈನಂದಿನ ಎಣಿಕೆ 2 ಲಕ್ಷ ಗಡಿ ದಾಟುವುದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಮಾರಣಾಂತಿಕ ರೋಗದ ಎರಡನೇ ಅಲೆಯು ವಿಶೇಷವಾಗಿ ಒಂದರಿಂದ ಐದು ವರ್ಷದ ನಡುವಿನ ಮಕ್ಕಳನ್ನು ಹೆಚ್ಚು ಬಾಧಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ‘ತುಂಬಾ ಅಪಾಯಕಾರಿ’ ಎಂದು ಕರೆದಿರುವ ಶಿಶುವೈದ್ಯರು, ವೈರಸ್ ನವಜಾತ ಶಿಶು ಮತ್ತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯ ಪೀಡಿಯಾಟ್ರಿಕ್ ಇನ್ಟೆನ್ಸಿವಿಸ್ಟ್ ಡಾ. ಧೀರೇನ್ ಗುಪ್ತಾ ಅವರು ಮಾತನಾಡುತ್ತಾ, 2020 ಕ್ಕೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
“ಈ ಬಾರಿ, ಕೋವಿಡ್ ಮಕ್ಕಳಲ್ಲಿಯೂ ಕಂಡುಬರುತ್ತದೆ…ನವಜಾತ ಮಕ್ಕಳು ಸಹ ಸೋಂಕಿಗೆ ಒಳಗಾಗುತ್ತಿದ್ದಾರೆ”, ಎಂದು ಎಲ್ ಎನ್ ಜೆಪಿ ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯಸ್ಥ ಡಾ. ರಿತು ಸಕ್ಸೇನಾ ಹೇಳಿದರು.
‘ಈ ಹೊಸ ಅಲೆ ಆರಂಭವಾಗಿರುವುದರಿಂದ ಈವರೆಗೆ 7ರಿಂದ 8 ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಅವರಲ್ಲಿ ಕಿರಿಯವನು ನವಜಾತ ಶಿಶುವಾಗಿದ್ದು, ಆಸ್ಪತ್ರೆಯಲ್ಲಿಯೇ ಸೋಂಕಿಗೆ ಒಳಗಾಗಿದೆ. ಇದಲ್ಲದೆ, 15 ರಿಂದ 30 ವರ್ಷ ವಯಸ್ಸಿನ ಸುಮಾರು 30 ಪ್ರತಿಶತ ಯುವಕರು ಸಹ ಸೋಂಕಿಗೆ ಒಳಗಾಗಿದ್ದಾರೆ”, ಎಂದು ಸಕ್ಸೇನಾ ಹೇಳಿದರು.
ಆರೋಗ್ಯ ಇಲಾಖೆ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ ದೆಹಲಿಯಲ್ಲಿ 16,699 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಧನಾತ್ಮಕತೆಯ ಪ್ರಮಾಣ ಶೇ.20ಕ್ಕೆ ತೀವ್ರ ಏರಿಕೆಯಾಗಿದೆ ಮತ್ತು ಗುರುವಾರ 112 ಜನ ಸಾವನ್ನಪ್ಪಿದ್ದಾರೆ. ಧನಾತ್ಮಕತೆಯ ಪ್ರಮಾಣವು ಶೇಕಡಾ 20.22 ರಷ್ಟಿದೆ, ಇದು ದೆಹಲಿಯಲ್ಲಿ ಇಲ್ಲಿಯವರೆಗೆ ಅತ್ಯಧಿಕ ಸಾವಿನ ಪ್ರಮಾಣವಾಗಿದೆ. ಆದರೆ ಇಲ್ಲಿಯವರೆಗೆ ದಾಖಲಾದ ಸಾವಿನ ಸಂಖ್ಯೆ 11652 ಆಗಿದೆ.
ರಾಷ್ಟ್ರೀಯ ರಾಜಧಾನಿ ಬುಧವಾರ 17252 ಹೊಸ ಸೋಂಕುಗಳನ್ನು ದಾಖಲಿಸಿದೆ, ಇದು ಇಲ್ಲಿಯವರೆಗೆ ಅತಿ ಹೆಚ್ಚು ಏಕ ದಿನದ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯವರೆಗೆ ದೆಹಲಿಯಲ್ಲಿ ಅತಿ ಹೆಚ್ಚು ಒಂದೇ ದಿನದ ಏರಿಕೆ – 8,593 ಪ್ರಕರಣಗಳು – 2020 ರ ನವೆಂಬರ್ 11 ರಂದು ವರದಿಯಾಗಿವೆ, ಆದರೆ ನವೆಂಬರ್ 18 ರಂದು ನಗರದಲ್ಲಿ 131 ಕೋವಿಡ್-19 ಸಾವುಗಳು ದಾಖಲಾಗಿವೆ, ಇದು ಇಲ್ಲಿಯವರೆಗೆ ಅತಿ ಹೆಚ್ಚು ಏಕ ದಿನದ ಸಾವಿನ ಸಂಖ್ಯೆಯಾಗಿದೆ. ಕಳೆದ ವರ್ಷದ ನವೆಂಬರ್ ಮಧ್ಯಭಾಗದಲ್ಲಿ ಧನಾತ್ಮಕತೆಯ ದರವು ಶೇಕಡಾ ೧೫ ಕ್ಕಿಂತ ಹೆಚ್ಚಾಗಿತ್ತು.
ಬೆಂಗಳೂರು : ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ರಾಗಿದ್ದ ಪ್ರೊ.ಎಂ ಎ ಹೆಗ್ಡೆ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದಂತ ಪ್ರೊ.ಎಂ.ಎ.ಹೆಗಡೆ ಅವರಿಗೆ ಏಪ್ರಿಲ್ 13ರಂದು ಕೊರೋನಾ ಸೋಂಕು ತಗುಲಿತ್ತು. ಇಂತಹ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೇ ಇಂದು ತೀವ್ರ ಉಸಿರಾಟದ ತೊಂದರೆ ಅನುಭವಿಸಿದಂತ ಅವರು, ಚಿಕಿತ್ಸೆಗೆ ಪ್ರತಿಸ್ಪಂದಿಸದೇ, ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ.
ಈ ಬಗ್ಗ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಡಾ.ಸಿ.ಸೋಮಶೇಖರ್ ಸಂತಾಪ ಸೂಚಿಸಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ರಾಗಿದ್ದ ಶ್ರೀ ಎಂ ಎ ಹೆಗ್ಡೆ ಅವರ ನಿಧನದಿಂದಾಗಿ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಅಘಾತವಾಗಿದೆ. ಉತ್ತಮ ವಾಗ್ಮಿ ಹಾಗೂ ನಿರ್ಭೀತ ಅಭಿವ್ಯಕ್ತಿ ಗೆ ಹೆಸರಾಗಿದ್ದ ಅವರು ಒಳ್ಳೆಯ ಸ್ನೇಹ ಜೀವಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನೂ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ, ಹಿರಿಯ ವಿದ್ವಾಂಸರೂ ಆದ ಪ್ರೊಫೆಸರ್
ಎಂ.ಎ.ಹೆಗಡೆ ಅವರ ಅಕಾಲಿಕ ಅಗಲಿಕೆಯಿಂದ ಮನಸ್ಸಿಗೆ ಆಘಾತವಾಗಿದೆ. ಸಂಸ್ಕೃತ ವಿದ್ವಾಂಸರಾಗಿದ್ದ ಎಂ.ಎ.ಹೆಗಡೆ ಅವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸುಮಾರು ಮೂರು ವರ್ಷಗಳಿಂದ ಅತ್ಯುತ್ತಮ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಯಕ್ಷಗಾನದ ಬಗ್ಗೆ ಅಪಾರ ಒಲವು ಹೊಂದಿದ್ದ ಶ್ರೀ ಎಂ.ಎ.ಹೆಗಡೆ ಅವರು ಯಕ್ಷಗಾನ ಬಗೆಗಿನ ಹಾಗೂ ಯಕ್ಷಗಾನ ಪ್ರಸಂಗದ ಬಗ್ಗೆ ಒಟ್ಟು ಸುಮಾರು ಇಪ್ಪತ್ತು ಪುಸ್ತಕಗಳನ್ನು ರಚಿಸಿದ್ದರು. ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕದ ದಿಗ್ಗಜ, ಸರಳ, ನೇರ, ದಿಟ್ಟ ಹಾಗೂ ಸಜ್ಜನ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಸಂತಾಪ ಸೂಚಿಸಿದ್ದಾರೆ.
ನವ ದೆಹಲಿ : ಛತ್ತೀಸ್ ಗಡದ ರಾಯ್ ಪುರದಲ್ಲಿ ಆಸ್ಪತ್ರೆಯ ಆಕಸ್ಮಿಕದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಸಂತಾಪ ಸೂಚಿಸಿದ್ದಾರೆ.
ಛತ್ತೀಸ್ ಗಡದ ರಾಯ್ ಪುರ ನಗರದ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಶಾರ್ಟ್ ಸರ್ಕುಟ್ ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು, . ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ದುರ್ಘಟನೆಯ ಬಗ್ಗೆ ಹಿಂದಿಯಲ್ಲಿ ನಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಗಾಂಧಿ, ‘ರಾಯ್ ಪುರದ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡ ದುಃಖಕರ. ಘಟನೆಯಲ್ಲಿ ಮೃತಪಟ್ಟವರಿಗೆ ಶಾಂತಿ ಸಲ್ಲಿಸುತ್ತೇನೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಛತ್ತೀಸ್ ಗಡ ಸರ್ಕಾರಕ್ಕೆ ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿ : ದೇಶದಲ್ಲಿ ಚಿನ್ನಾಭರಣಗಳ ಬೆಲೆ ಕೊಂಚ ಕೊಂಚ ನಿರಂತರವಾಗಿ ಏರಿಕೆಯಾಗುತ್ತಿದೆ, ಇಂದು ಭಾನುವಾರ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ₹4,600 ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹44,150 ರೂ ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹48,160 ರೂಪಾಯಿ ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಕೆಜಿಗೆ ₹68,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹68,600 ಇದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹44,150(22 ಕ್ಯಾರಟ್) ₹48,160 (24 ಕ್ಯಾರಟ್), ಚೆನ್ನೈ: ₹44,520 (22 ಕ್ಯಾರಟ್) ₹48,560 (24 ಕ್ಯಾರಟ್) ಮತ್ತು ದೆಹಲಿಯಲ್ಲಿ : ₹46,260 (22 ಕ್ಯಾರಟ್), ₹50,410 (24 ಕ್ಯಾರಟ್) ದಾಖಲಾಗಿದೆ.
ಬೆಂಗಳೂರು : ಕೊರೋನಾ ಸೋಂಕಿಗೆ ತುತ್ತಾಗಿದ್ದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಅಲ್ಲದೇ ನಾಳೆ ನಡೆಸಲು ಉದ್ದೇಶಿಸಲಾಗಿದ್ದಂತ ಸರ್ವಪಕ್ಷಗಳ ಸಭೆ ನಡೆಸುವ ಕುರಿತಂತೆಯೂ ಚರ್ಚಿಸಿದರು. ರಾಜ್ಯದಲ್ಲಿ ಸಮುದಾಯಕ್ಕೆ ಕೊರೋನಾ ಹರಡಿರೋ ಕಾರಣದಿಂದಾಗಿ ಶೇ.10ರಷ್ಟು ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಕುರಿತಂತೆಯೂ ನಡೆಸಲಾಗುತ್ತಿದೆ ಎನ್ನಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕೊರೋನಾ 2ನೇ ಅಲೆಯ ಅಬ್ಬರವು ಸಮುದಾಯಕ್ಕೂ ಹರಡಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕೂಡ ಕೈ ಮೀರಿ ಹೋಗಿದೆ ಎಂದೇ ಆರೋಗ್ಯ ಸಚಿವರು ತಿಳಿಸಿದ್ದರು. ಈ ಎಲ್ಲಾ ಕಾರಣದಿಂದಾಗಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಒಂದೇ ಪರ್ಯಾಯ ಮಾರ್ಗ ಎನ್ನಲಾಗುತ್ತಿದೆ.
ಇಂದು ಕೊರೋನಾ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವಂತ ಸಿಎಂ ಯಡಿಯೂರಪ್ಪ ಅವರನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿದರು. ಈ ಬಳಿಕ ಮಾತನಾಡಿದಂತ ಅವರು, ತಜ್ಞರ ವರದಿಯನ್ನು ಸಿಎಂ ಭೇಟಿ ಮಾಡಿದಾಗ ನೀಡಿದ್ದೇನೆ. ಸಮುದಾಯಕ್ಕೆ ಕೊರೋನಾ ಹರಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ತಿಳಿಸಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಬೆಂಗಳೂರು ಕೊರೋನಾ ಎರಡನೇ ಅಲೆಯ ಎಫಿಸೋಡ್ ಸೆಂಟರ್ ಆಗಿದೆ. ಇದರಿಂದಾಗಿ ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಗೊಳಿಸೋ ಅಗತ್ಯವಿದೆ. ಸಮುದಾಯಕ್ಕೆ ಕೊರೋನಾ ಹರಡಿರೋದ್ರಿಂದ ಶೇ.10ಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಕೊರೋನಾ ನಿಯಂತ್ರಣಕ್ಕಾಗಿ ಖಂಡಿತವಾಗಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ಜಾರಿಗೊಳಿಸಲಾಗುತ್ತದೆ. ಕಠಿಣ ನಿಮಯ ಜಾರಿಗೊಳಿಸೋದು ಕಂಡಿತವಾಗಿದೆ ಎನ್ನುವ ಮೂಲಕ ನಾಳೆ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯ ಸುಳಿವನ್ನು ನೀಡಿದ್ದಾರೆ.
ಕೊರೋನಾ 2ನೇ ಅಲೆಯ ಅಬ್ಬರ ಇಡೀ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದೆ. ಕೊರೋನಾ 2ನೇ ಅಲೆಯ ಗುಣವೇ ಹೀಗೆ, ವೇಗವಾಗಿ ಹರಡುತ್ತಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಶೇ.10ಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಯ ತುರ್ತು ಅಗತ್ಯವಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಠಿಣ ರೂಲ್ಸ್ ಜಾರಿಗೊಳಿಸಲಾಗುತ್ತದೆ. ಇಂದು ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಬಳಿಕ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಬೆಂಗಳೂರು : ಕೊರೋನಾ ಸೋಂಕಿಗೆ ತುತ್ತಾಗಿದ್ದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಅಲ್ಲದೇ ನಾಳೆ ನಡೆಸಲು ಉದ್ದೇಶಿಸಲಾಗಿದ್ದಂತ ಸರ್ವಪಕ್ಷಗಳ ಸಭೆ ನಡೆಸುವ ಕುರಿತಂತೆಯೂ ಚರ್ಚಿಸಿದರು. ಅಲ್ಲದೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಕುರಿತಂತೆಯೂ ನಡೆಸಲಾಗುತ್ತಿದೆ ಎನ್ನಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕೊರೋನಾ 2ನೇ ಅಲೆಯ ಅಬ್ಬರವು ಸಮುದಾಯಕ್ಕೂ ಹರಡಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕೂಡ ಕೈ ಮೀರಿ ಹೋಗಿದೆ ಎಂದೇ ಆರೋಗ್ಯ ಸಚಿವರು ತಿಳಿಸಿದ್ದರು. ಈ ಎಲ್ಲಾ ಕಾರಣದಿಂದಾಗಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್ ಡೌನ್ ಒಂದೇ ಪರ್ಯಾಯ ಮಾರ್ಗ ಎನ್ನಲಾಗುತ್ತಿದೆ.
ಇಂದು ಕೊರೋನಾ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವಂತ ಸಿಎಂ ಯಡಿಯೂರಪ್ಪ ಅವರನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿದರು. ಈ ಬಳಿಕ ಮಾತನಾಡಿದಂತ ಅವರು, ತಜ್ಞರ ವರದಿಯನ್ನು ಸಿಎಂ ಭೇಟಿ ಮಾಡಿದಾಗ ನೀಡಿದ್ದೇನೆ. ಸಮುದಾಯಕ್ಕೆ ಕೊರೋನಾ ಹರಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ತಿಳಿಸಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಬೆಂಗಳೂರು ಕೊರೋನಾ ಎರಡನೇ ಅಲೆಯ ಎಫಿಸೋಡ್ ಸೆಂಟರ್ ಆಗಿದೆ. ಇದರಿಂದಾಗಿ ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಗೊಳಿಸೋ ಅಗತ್ಯವಿದೆ. ಸಮುದಾಯಕ್ಕೆ ಕೊರೋನಾ ಹರಡಿರೋದ್ರಿಂದ ಶೇ.10ಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಕೊರೋನಾ ನಿಯಂತ್ರಣಕ್ಕಾಗಿ ಖಂಡಿತವಾಗಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ಜಾರಿಗೊಳಿಸಲಾಗುತ್ತದೆ. ಕಠಿಣ ನಿಮಯ ಜಾರಿಗೊಳಿಸೋದು ಕಂಡಿತವಾಗಿದೆ ಎನ್ನುವ ಮೂಲಕ ನಾಳೆ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯ ಸುಳಿವನ್ನು ನೀಡಿದ್ದಾರೆ.
ನವದೆಹಲಿ: ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಿ ದೆಹಲಿಗೆ ಹಿಂದಿರುಗಿದವರು ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಲೇಬೇಕು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
ಏಪ್ರಿಲ್ 4 ರಿಂದ ಏಪ್ರಿಲ್ 17 ರ ನಡುವೆ ಕುಂಭಮೇಳಕ್ಕೆ ಭೇಟಿ ನೀಡಿದ ದೆಹಲಿಯ ನಿವಾಸಿಗಳು ತಮ್ಮ ವಿವರಗಳನ್ನು ದೆಹಲಿ ಸರ್ಕಾರದ ವೆಬ್ಸೈಟ್ನಲ್ಲಿ ಒದಗಿಸಿರುವ ಲಿಂಕ್ನಲ್ಲಿ 24 ಗಂಟೆಗಳ ಒಳಗಾಗಿ ಅಪ್ಲೋಡ್ ಮಾಡಬೇಕು. 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು ಹೊರಡಿಸುವ ಆದೇಶದಲ್ಲಿ ತಿಳಿಸಲಾಗಿದೆ.
ದೆಹಲಿ ಸರ್ಕಾರದ ಆದೇಶ ಪ್ರತಿಕುಂಭಮೇಳಕ್ಕೆ ಭೇಟಿದ ನೀಡಿದವರು ತಮ್ಮ ಮಾಹಿತಿಯನ್ನು ಅಪ್ಲೋಡ್ ಮಾಡಲು ವಿಫಲವಾದರೆ, ಅವರನ್ನು ಎರಡು ವಾರಗಳವರೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತದೆ ಎಂದು ವಿಜಯ್ ದೇವ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬಿಡುಗಡೆಯಾಗಿದ್ದ ಕೋವಿಡ್ ವರದಿಯಲ್ಲಿ ದೆಹಲಿಯಲ್ಲಿ ಹೊಸದಾಗಿ 24,374 ಮಂದಿಗೆ ಸೋಂಕು ಪತ್ತೆಯಾಗಿದೆ . 70,000 ಕೇಸ್ಗಳು ಇನ್ನೂ ಸಕ್ರಿಯವಾಗಿವೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ನೈಜ ಸಮಯದ ಒಟ್ಟು ವಸಾಹತು (ಆರ್ ಟಿಜಿಎಸ್) ಸೌಲಭ್ಯವು ಏಪ್ರಿಲ್ 17, 2021 ರಂದು ವ್ಯಾಪಾರ ಸಮಯದ ಮುಕ್ತಾಯದ ನಂತರ ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಏಪ್ರಿಲ್ 15 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಧಿಸೂಚನೆಯ ಪ್ರಕಾರ, ಏಪ್ರಿಲ್ 18, 2021ರ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಈ ಸೌಲಭ್ಯ ಲಭ್ಯವಿಲ್ಲ. ಹಾಗಾದ್ರೇ.. RTGS ಬಳಕೆದಾರರು ಏನ್ ಮಾಡಬೇಕು ಎನ್ನುವ ಬಗ್ಗೆ ಮುಂದೆ ಓದಿ..
ಆರ್ ಬಿಐ ಸೂಚನೆಯಿಂದಾಗಿ ಆರ್ ಟಿಜಿಎಸ್ ಸೌಲಭ್ಯವನ್ನು ತಾಂತ್ರಿಕವಾಗಿ ನವೀಕರಿಸಲು ನಿನ್ನೆ ಮಧ್ಯರಾತ್ರಿಯಿಂದ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ಎಲ್ಲಾ ಬ್ಯಾಂಕ್ ಗಳು ಗ್ರಾಹಕರಿಗೆ ತಿಳಿಸಿವೆ. ಅಲ್ಲದೇ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಆರ್ ಟಿಜಿಎಸ್ ವ್ಯವಸ್ಥೆಯ ವಿಪತ್ತು ಮರುಪ್ರಾಪ್ತಿ ಸಮಯವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಆರ್ ಟಿಜಿಎಸ್ ನ ತಾಂತ್ರಿಕ ನವೀಕರಣವನ್ನು ಏಪ್ರಿಲ್ 17, 2021 ರ ವ್ಯವಹಾರ ಮುಕ್ತಾಯದ ನಂತರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆರ್ ಟಿಜಿಎಸ್ ಬಳಸದೆ ಹಣ ವರ್ಗಾವಣೆ ಹೇಗೆ?
ಏತನ್ಮಧ್ಯೆ, ಬ್ಯಾಂಕ್ ಗ್ರಾಹಕರು ಈ ಅವಧಿಯಲ್ಲಿ ತಮ್ಮ ಹಣವನ್ನು ಸುಗಮಗೊಳಿಸಲು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ (ಎನ್ಇಎಫ್ಟಿ) ಸೇವೆಯ ಲಾಭವನ್ನು ಪಡೆಯಬಹುದು. ಆರ್ ಟಿಜಿಎಸ್ ಮತ್ತು ಎನ್ ಇಎಫ್ ಟಿ ಎರಡೂ ಡಿಜಿಟಲ್ ಪಾವತಿ ವಿಧಾನಗಳಾಗಿವೆ. ಒಂದೇ ಕ್ಷಣದಲ್ಲಿ ಹಣವನ್ನು ವರ್ಗಾಯಿಸಲು ಬ್ಯಾಂಕ್ ನೀಡುವ ಡಿಜಿಟಲ್ ಪಾವತಿ ವಿಧಾನಗಳಾಗಿವೆ.
ಆದರೆ, ಇವೆರಡರ ನಡುವೆ ಕೆಲವು ವ್ಯತ್ಯಾಸಗಳಿವೆ. ಆರ್ ಟಿಜಿಎಸ್ ವಹಿವಾಟುಗಳು ದೊಡ್ಡ ಪ್ರಮಾಣದ ಹಣವನ್ನು ಕಳುಹಿಸಲು ಬಳಕೆ ಮಾಡಲಾಗುತ್ತಿದೆ. ಒಬ್ಬರು ಆರ್ ಟಿಜಿಗಳ ಮೂಲಕ 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಕಳುಹಿಸಬಹುದು. ಎನ್ ಇಎಫ್ ಟಿ ಸೇವೆಯಲ್ಲಿ ಅಂತಹ ಯಾವುದೇ ಮಿತಿ ಇಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಆರ್ ಟಿಜಿಎಸ್ ಸೇವೆಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಆದ್ಯತೆ ನೀಡಲಾಗುತ್ತದೆ. ಆದರೆ ನೀವು ರೂ 2 ಲಕ್ಷಕ್ಕಿಂತ ಕಡಿಮೆ ವರ್ಗಾವಣೆ ಮಾಡಬೇಕಾದಾಗ ಎನ್ ಇಎಫ್ ಟಿಗೆ ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ಬಳಕೆದಾರರು ಎನ್ ಇಎಫ್ ಟಿ ವಹಿವಾಟುಗಳ ಮೂಲಕ ದಿನಕ್ಕೆ 25 ಲಕ್ಷ ರೂ.ಗಳವರೆಗೆ ವರ್ಗಾಯಿಸಬಹುದು ಎಂಬುದನ್ನು ನೆನಪಿನಲ್ಲಿಡಿ.
ಬಾರಾಮತಿ: ದೇಶದಲ್ಲಿ ಒಂದೆಡೆ ಕೊರೋನಾ ವೈರಸ್ ಭಾರಿ ಏರಿಕೆ ಕಾಣುತ್ತಿದೆ, ಈ ಹಿನ್ನೆಲೆಯಲ್ಲಿ ಜೀವ ರಕ್ಷಕ ಔಷಧಗಳ ಹೆಚ್ಚು ಉತ್ಪಾದನೆಗೆ ಸರ್ಕಾರ ಪಣ ತೊಟ್ಟಿದೆ. ಇದೆಲ್ಲದರ ನಡುವೆ ಕೋವಿಡ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ರೆಮ್ಡೆಸಿವಿರ್ ಚುಚ್ಚುಮದ್ದಿನ ನಕಲಿ ಮಾರಾಟ ಕೂಡ ಹೆಚ್ಚಾಗುತ್ತಿದೆ.
ಮಹಾರಾಷ್ಟ್ರದ ಬಾರಾಮತಿಯಲ್ಲಿ ನಕಲಿ ರೆಮ್ಡೆಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಚುಚ್ಚುಮದ್ದುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಲಿಕ್ವಿಡ್ ಪ್ಯಾರಾಸಿಟಮಲ್ ಬಾಟಲಿಗಳ ಮೇಲೆ ರೆಮ್ಡೆಸಿವಿರ್ ಲೇಬಲ್ ಅಂಟಿಸಿ ಅದನ್ನು ಅಸಲಿ ರೆಮ್ಡೆಸಿವಿರ್ ಚುಚ್ಚುಮದ್ದು ಎಂದು ಮಾರಾಟ ಮಾಡುತ್ತಿದ್ದರು ಎಂದು ಪುಣೆ ಗ್ರಾಮಾಂತರ ಜಿಲ್ಲೆಯ ಡಿಎಸ್ ಪಿ ನಾರಾಯಣ್ ಶಿರಗಾಂವ್ಕರ್ ಹೇಳಿದ್ದಾರೆ.
ಕಾನ್ಪುರದಲ್ಲಿ ರೆಮ್ಡಿಸಿವಿರ್ ಚುಚ್ಚು ಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವೈದ್ಯಕೀಯ ಸಿಬ್ಬಂದಿಗಳನ್ನು ಉತ್ತರ ಪ್ರದೇಶ ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು.
ಬೆಂಗಳೂರು : ಕೇಂದ್ರದ ಸೂಚನೆಯ ವಿರುದ್ಧ ರಾಜ್ಯ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕಹೇಳಿರುವ ಹಳೆಯ ದಾಸ್ತಾನಿನ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆಗೆ ತದ್ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಆದೇಶ ಹೊರಡಿಸಿದೆ ಎಂಬುದು ಶುದ್ಧ ಸುಳ್ಳಾಗಿದ್ದು,ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ಹೇಳಿಕೆ ವಿರುದ್ಧ ಯಾವುದೇ ಆದೇಶ ರಾಜ್ಯ ಕೃಷಿ ಇಲಾಖೆ ಹೊರಡಿಸಿಲ್ಲ ಎಂದಿದ್ದಾರೆ.
ಹಳೆಯ ರಸಗೊಬ್ಬರ ದಾಸ್ತಾನನ್ನು ಹಳೆಯ ದರದಲ್ಲೇ ಮಾರಾಟ ಮಾಡಬೇಕೆಂದು ರಸಗೊಬ್ಬರ ಮಾರಾಟಗಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಸಹ ಮಾಡಲಾಗುತ್ತಿದೆ.ಆದರೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯದ ರೈತರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಡಿ.ಎ.ಪಿ. ರಸಗೊಬ್ಬರಕ್ಕೆ ಬೇಡಿಕೆ 77920 ಮೆ.ಟನ್ ಇದ್ದು, ಈಗಾಗಲೇ 125860 ಮೆ.ಟನ್ ದಾಸ್ತಾನಿರುತ್ತದೆ. ಮುಂಗಾರು ಹಂಗಾಮಿನ (ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ) ಕಾಂಪ್ಲೆಕ್ಸ್ (NPK fertilizer) ರಸಗೊಬ್ಬರಗಳ ಒಟ್ಟು ಬೇಡಿಕೆ 10.03 ಲಕ್ಷ ಮೆ.ಟನ್ ಇದ್ದು ಏಪ್ರಿಲ್ ತಿಂಗಳ ಬೇಡಿಕೆ 1.68 ಲಕ್ಷ ಮೆ.ಟನ್ ಇರುತ್ತದೆ. ಈಗಾಗಲೇ 5.19 ಲಕ್ಷ ಮೆ.ಟನ್ ದಾಸ್ತಾನಿರುತ್ತದೆ ಎಂದಿದ್ದಾರೆ.
ರಸಗೊಬ್ಬರ ಮಾರಾಟಗಾರರು ಯಾವುದೇ ಕಾರಣಕ್ಕೂ ದಾಸ್ತಾನು ಇರುವ ಹಳೆಯ ರಸಗೊಬ್ಬರವನ್ನು ಹೊಸದರದಲ್ಲಿ ವಿತರಿಸದೇ ಹಳೆಯ ದಾಸ್ತಾನನ್ನು ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕೆಂದು ಕೃಷಿ ಸಚಿವರು ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನವದೆಹಲಿ : ನಿಮ್ಮ ಮನೆಗೆ ಬರುವ ಸಣ್ಣ ಅಥವಾ ದೊಡ್ಡ ಸಿಲಿಂಡರ್ ಗಳು ಕೆಂಪು ಅಥವಾ ನೀಲಿ ಬಣ್ಣದಲ್ಲಿರುವುದನ್ನು ನೀವು ಯಾವಾಗಲೂ ನೋಡಿರಬಹುದು. ಇದೇ ವೇಳೆ ಈ ಕಬ್ಬಿಣದ ಸಿಲಿಂಡರ್ ಗಳು ತುಂಬಾ ಭಾರವಾಗಿದ್ದು, ಎತ್ತಲು ಸಾಕಷ್ಟು ತೊಂದರೆ ಆಗುತ್ತದೆ. ಆದರೆ, ಈಗ ಸಿಲಿಂಡರ್ ಬದಲಾಗಲಿದೆ, ಏಕೆಂದರೆ ಭಾರವಾದ ಸಿಲಿಂಡರ್ ಗಳನ್ನು ಈಗ ಲಘು ಸಿಲಿಂಡರ್ ಗಳಿಂದ ಬದಲಾಯಿಸಲಾಗುವುದು. ಅಷ್ಟೇ ಅಲ್ಲ, ಈ ಸಿಲಿಂಡರ್ ಗಳು ಸಹ ಪಾರದರ್ಶಕವಾಗಿರುತ್ತವೆ, ಇದರಿಂದ ಸಿಲಿಂಡರ್ ಖಾಲಿ ಆಗಿದೆಯೇ ಎಂದು ಸುಲಭವಾಗಿ ಕಂಡುಹಿಡಿಯಬಹುದು.
ಇದು ಹೇಗೆ ಸಂಭವಿಸಬಹುದು ಮತ್ತು ಪಾರದರ್ಶಕ ಸಿಲಿಂಡರ್ ಹೇಗಿರುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಇಂಡಿಯನ್ ಆಯಿಲ್ ಸ್ವತಃ ಹೊಸ ಯುಗದ ಸಿಲಿಂಡರ್ ಅನ್ನು ಬಹಿರಂಗಪಡಿಸಿದೆ ಮತ್ತು ಈ ಸಿಲಿಂಡರ್ ಹೇಗಿರುತ್ತದೆ ಎಂಬುದನ್ನು ನೀವು ಫೋಟೋದಲ್ಲಿ ನೋಡಬಹುದು. ಈ ಸಿಲಿಂಡರ್ ನ ವಿಶೇಷತೆ ಏನು ಮತ್ತು ಈ ಸಿಲಿಂಡರ್ ಗಳನ್ನು ಇತರ ಸಿಲಿಂಡರ್ ಗಳಿಂದ ಹೇಗೆ ವಿಭಿನ್ನವಾಗಿದೆ ಎಂಬುದನ್ನು ನೋಡೋಣ…
ಇಂಡಿಯನ್ ಆಯಿಲ್ ಒದಗಿಸಿದ ಮಾಹಿತಿಯ ಪ್ರಕಾರ, ಕಾಂಪೋಸಿಟ್ ಎಲ್ ಪಿಜಿ ಸಿಲಿಂಡರ್ ಗಳನ್ನು ಈಗ ಇಂಡೇನ್ ಪರಿಚಯಿಸುತ್ತಿದೆ. ಪ್ರಸ್ತುತ ದೆಹಲಿ ಮತ್ತು ಹೈದರಾಬಾದ್ ನಲ್ಲಿ ಈ ಸಿಲಿಂಡರ್ ಲಭ್ಯವಿದ್ದು, ಈ ಸಿಲಿಂಡರ್ ಗಾಗಿ ಹತ್ತಿರದ ಸಿಲಿಂಡರ್ ಮಾರಾಟಗಾರರೊಂದಿಗೆ ಮಾತನಾಡಬಹುದು. ಈ ಸಿಲಿಂಡರ್ ಕಬ್ಬಿಣದ ಸಿಲಿಂಡರ್ ನಂತೆ ಅಲ್ಲ, ಆದರೆ ಸಾಕಷ್ಟು ಸ್ಟೈಲಿಶ್ ಮತ್ತು ಲುಕ್ ಸಾಕಷ್ಟು ಭಿನ್ನವಾಗಿರುತ್ತದೆ. ಈ ಸಿಲಿಂಡರ್ ನಲ್ಲಿರುವ ಕ್ಯಾಚ್ ಹ್ಯಾಂಡಲ್ ನಿಂದ ವಿನ್ಯಾಸವು ಸಾಕಷ್ಟು ಭಿನ್ನವಾಗಿದೆ.
Add a new dimension to your modern kitchen with the all-new, composite LPG cylinders from Indane. Currently available in Delhi and Hyderabad only. Contact your nearest #Indane distributor for more details. pic.twitter.com/nGJHIM8pfu
ಈ ಸಿಲಿಂಡರ್ ನ ವಿಶೇಷತೆ ಏನು?
ಈ ಸಿಲಿಂಡರ್ ನ ಮುಖ್ಯಾಂಶವೆಂದರೆ ಇದು ಹಳೆಯ ಸಿಲಿಂಡರ್ ಗಿಂತ ಶೇಕಡಾ ೫೦ ರಷ್ಟು ಕಡಿಮೆ ತೂಕವನ್ನು ಹೊಂದಿದೆ. ಅದೇ ಸಮಯದಲ್ಲಿ, ಜನರು ಈ ಹೊಸ ಲುಕ್ ನ್ನು ಇಷ್ಟಪಡುತ್ತಾರೆ ಮತ್ತು ಕಡಿಮೆ ತೂಕದಲ್ಲಿ ಲಭ್ಯವಿರುತ್ತದೆ. ಇದರಿಂದ ನೀವು ಸಣ್ಣ ಸಿಲಿಂಡರ್ ಗಳನ್ನು ಖರೀದಿಸಬಹುದು. ಈ ಸಿಲಿಂಡರ್ ಪಾರದರ್ಶಕ ದೇಹವನ್ನು ಹೊಂದಿರುವುದರಿಂದ, ಅದು ಈಗ ಎಷ್ಟು ಎಲ್ ಪಿಜಿ ಮಟ್ಟವಾಗಿದೆ ಎಂದು ನೀವು ಹೊರಗಿನಿಂದ ಊಹಿಸಬಹುದು, ನೀವು ಸಿಲಿಂಡರ್ ಅನ್ನು ತೂಕ ಮಾಡುವ ಅಗತ್ಯವಿಲ್ಲ. ಸಿಲಿಂಡರ್ ಗಳನ್ನು ಖರೀದಿಸುವಾಗ ಮಟ್ಟವನ್ನು ನೋಡುವ ಮೂಲಕ ನೀವು ಅವುಗಳನ್ನು ಖರೀದಿಸಬಹುದು.
ಈ ಸಿಲಿಂಡರ್ ಗಳು ಕಬ್ಬಿಣವಾಗಿರುವುದಿಲ್ಲ, ಇದು ನಿಮ್ಮ ಮನೆಯಲ್ಲಿ ತುಕ್ಕು ಗುರುತುಗಳನ್ನು ಸಹ ಉಂಟುಮಾಡುವುದಿಲ್ಲ. ಈ ಸಿಲಿಂಡರ್ ಗಳು ತುಕ್ಕು ಮುಕ್ತವಾಗಿರುತ್ತವೆ, ಆದ್ದರಿಂದ ನೀವು ತುಕ್ಕು ಹಿಡಿಯುವ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಸಿಲಿಂಡರ್ ಗಳು 5 ಮತ್ತು 10 ಕೆಜಿ ತೂಕದಲ್ಲಿ ಲಭ್ಯವಿರಲಿವೆ. ನಿಮ್ಮ ಮನೆಯಲ್ಲಿ ನೀವು ಹೆಚ್ಚು ಸಿಲಿಂಡರ್ ಗಳನ್ನು ಬಳಸದಿದ್ದರೆ, ನಿಮಗೆ ಉಪಯುಕ್ತವಾಗುವ ಈ ಸಣ್ಣ 10 ಕೆಜಿ ಸಿಲಿಂಡರ್ ಅನ್ನು ನೀವು ಖರೀದಿಸಬಹುದು ಮತ್ತು ಅಡುಗೆಮನೆಯನ್ನು ಸುಂದರಗೊಳಿಸಬಹುದು.
ಸುರಕ್ಷತೆಗಾಗಿ ವಿಶೇಷ ಕಾಳಜಿ ತೆಗೆದುಕೊಳ್ಳಲಾಗಿದೆ
ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಇಲ್ಲ ಮತ್ತು ಸಿಲಿಂಡರ್ ಅನ್ನು ಸ್ಟೈಲಿಶ್ ಆಗಿ ಮಾಡುವುದು ಮತ್ತು ಬಳಸುವುದು ಸುರಕ್ಷಿತ ಎಂದು ಇಂಡಿಯನ್ ಆಯಿಲ್ ಹೇಳಿದೆ.
ಲಿಮಾ: ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ ತಿಳಿಸಿದೆ.
ಶನಿವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಒಟ್ಟು 12 ಸೈನಿಕರನ್ನು ಹೊತ್ತ ಹೆಲಿಕಾಪ್ಟರ್ ಅಕ್ರಮ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಜಾಗೃತ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
‘ಸಶಸ್ತ್ರ ಪಡೆಗಳ ಸಿಬ್ಬಂದಿ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಸೇನೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸ್ದಲಾಗಿದೆ.
ನವದೆಹಲಿ : ಏಪ್ರಿಲ್ 27, 28 ಮತ್ತು 30ರಂದು ನಡೆಸಲು ನಿರ್ಧರಿಸಲಾಗಿದ್ದಂತ ಜೆಇಇ ಮುಖ್ಯ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ.
ಈ ಕುರಿತಂತೆ ಕೇಂದ್ರ ಸಚಿವ ಡಾ.ರಮೇಶ್ ಪೊಕ್ರಿಯಾಳ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶಾದ್ಯಂತ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ, ಜೆಇಇ ಮುಖ್ಯ ಪರೀಕ್ಷೆ 2021 ಅನ್ನು ಮುಂದೂಡಿಕೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಈ ಕ್ರಮ ಕೈಗೊಂಡಿದ್ದು, ಮುಂದೂಡಿಕೆ ಮಾಡಲಾಗಿರುವಂತ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
📢 Announcement Given the current #covid19 situation, I have advised @DG_NTA to postpone the JEE (Main) – 2021 April Session.
— Dr. Ramesh Pokhriyal Nishank (@DrRPNishank) April 18, 2021
ಅಂದಹಾಗೇ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,61,500 ಹೊಸ ಕರೋನ ಪ್ರಕರಣಗಳನ್ನು, 1,501 ಸಾವು ಮತ್ತು 1,38,423 ಮಂದಿಯನ್ನು ಡಿಸ್ಜಾರ್ಜ್ ಮಾಡಲಾಗಿದೆ ಅಂತ ತಿಳಿಸಿದೆ. ಒಂದು ವಾರದಲ್ಲಿ 12 ಲಕ್ಷಕ್ಕೂ ಹೆಚ್ಚು ಹೊಸ ಕರೋನ ಪ್ರಕರಣಗಳು ಭಾರತದಲ್ಲಿ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
India reports 2,61,500 new #COVID19 cases, 1,501 fatalities and 1,38,423 discharges in the last 24 hours, as per Union Health Ministry
Total cases: 1,47,88,109 Active cases: 18,01,316 Total recoveries: 1,28,09,643 Death toll: 1,77,150
ಒಟ್ಟು ಪ್ರಕರಣಗಳ ಸಂಖ್ಯೆ: 1,47,88,109 ಸಕ್ರಿಯ ಪ್ರಕರಣಗಳ ಸಂಖ್ಯೆ : 18,01,316 ಚಿಕಿತ್ಸೆ ಪಡೆದು ಬಿಡುಗಡೆಯಾದವರ ಸಂಖ್ಯೆ : 1,28,09,643 ಸಾವಿನ ಸಂಖ್ಯೆ: 1,77,150
ಒಟ್ಟು ಮಂದಿಗೆ ವ್ಯಾಕ್ಸಿನೇಷನ್: 12,26,22,590
ಮಹಾರಾಷ್ಟ್ರ (67,123), ಉತ್ತರ ಪ್ರದೇಶ (27,734), ದೆಹಲಿ (24,375), ಕರ್ನಾಟಕ (17,489), ಮತ್ತು ಛತ್ತೀಸ್ಗಡ (16,083)ದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಸ್ಪೆಷಲ್ ಡೆಸ್ಕ್ : ದೇಶದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿಯೇ ಇದೆ. ಪ್ರತಿದಿನ ಕೊರೊನಾ ವೈರಸ್ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಮತ್ತು ಸಾವಿನ ಅಂಕಿಅಂಶಗಳು ಸಹ ಪ್ರತಿದಿನ ಹೊಸ ದಾಖಲೆಗಳನ್ನು ಮುರಿಯುತ್ತಿವೆ. ದೇಶದ ಎಲ್ಲಾ ಆರೋಗ್ಯ ಸಂಸ್ಥೆಗಳು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರಲು ಜನರಿಗೆ ಸಲಹೆ ಮಾಡುತ್ತಿವೆ. ಕೋವಿಡ್-19 ನ ಈ ಎರಡನೇ ಅಲೆಯನ್ನು ತಪ್ಪಿಸಲು, ನೀವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ನಿಮ್ಮ ಕುಟುಂಬವನ್ನು ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವುದನ್ನು ತಪ್ಪಿಸಬೇಕು. ಈ ಎರಡನೇ ಅಲೆಯ ಕೊರೊನಾ ಮಕ್ಕಳು ಮತ್ತು ಯುವಕರ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ. ಅಂತಹ ಸಂದರ್ಭದಲ್ಲಿ, ಕೋವಿಡ್ ನ ಮತ್ತೊಂದು ಅಲೆಯನ್ನು ತಪ್ಪಿಸಲು ನಿಮ್ಮನ್ನು ನೀವು ದೂರವಿಡುವುದು ನಿಮಗೆ ಬಹಳ ಮುಖ್ಯ. ಯಾವೆಲ್ಲಾ ಸ್ಥಳಗಳಿಂದ ನೀವು ದೂರ ಇರಬೇಕು ತಿಳಿಯಿರಿ…
1.ಸೂಪರ್ ಮಾರ್ಕೆಟ್ ಗಳು
ನೀವು ತಿಂಗಳ ಕಿರಾಣಿ ಶಾಪಿಂಗ್ ಗಾಗಿ ಸೂಪರ್ ಮಾರ್ಕೆಟ್ ಗೆ ಹೋಗುತ್ತಿದ್ದರೆ ಅದನ್ನು ತಪ್ಪಿಸಿ. ಸಾಧ್ಯವಾದಷ್ಟು ಆನ್ ಲೈನ್ ಕಿರಾಣಿ ಶಾಪಿಂಗ್ ಮಾಡಿ. ಹೀಗೆ ಮಾಡುವುದರಿಂದ ನೀವು ಇಲ್ಲಿನ ಜನಸಂದಣಿಯಿಂದ ರಕ್ಷಿಸಲ್ಪಡುತ್ತೀರಿ ಮತ್ತು ನಗದು ಕೌಂಟರ್ ಗಳ ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗಿ ಬರುವುದಿಲ್ಲ.
2.ಮಾರುಕಟ್ಟೆ ಮತ್ತು ಮಾಲ್
ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಮಾರುಕಟ್ಟೆ ಮತ್ತು ಮಾಲ್ ಗೆ ಹೋಗುವುದನ್ನು ನಿಷೇಧಿಸಲಾಗಿದ್ದರೂ, ಕೊರೊನಾದ ಎರಡನೇ ಅಲೆಯು ಮೊದಲಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಇದಲ್ಲದೆ, ಈ ಬಾರಿ ವೈರಸ್ ಮಕ್ಕಳು ಮತ್ತು ಯುವಕರನ್ನು ತನ್ನ ಬೇಟೆಯನ್ನಾಗಿ ಮಾಡುತ್ತಿದೆ. ನೀವು ಮಾಲ್ ಅಥವಾ ಮಾರುಕಟ್ಟೆಗೆ ಹೋದಾಗ, ನೀವು ಸಾವಿರಾರು ಜನರೊಂದಿಗೆ ಸಂಪರ್ಕಕ್ಕೆ ಬರುತ್ತೀರಿ, ಇದು ಸೋಂಕಿನ ಸಾಧ್ಯತೆಗಳನ್ನು ಹಲವು ಪಟ್ಟು ಹೆಚ್ಚಿಸಬಹುದು.
3.ಪ್ರವಾಸಿ ಸ್ಥಳಗಳು
ಬಿಸಿಲು ಹೆಚ್ಚಾದ ಮತ್ತು ವಾರಾಂತ್ಯ ಸಮೀಪಿಸುತ್ತಿದ್ದಂತೆ, ಜನರು ಗಿರಿಧಾಮಕ್ಕೆ ಹೋಗಲು ಯೋಜಿಸಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ, ನಗರದ ಪ್ರವಾಸಿ ಸ್ಥಳಗಳಲ್ಲಿಯೇ ಅನೇಕ ಜನರು ತಮ್ಮ ಕುಟುಂಬಗಳೊಂದಿಗೆ ಸುತ್ತಾಡಲು ಯೋಚಿಸಲು ಪ್ರಾರಂಭಿಸುತ್ತಾರೆ. ನೀವು ಹಾಗೆ ಯೋಚಿಸುತ್ತಿದ್ದರೆ, ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ದೊಡ್ಡ ಅಪಾಯಕ್ಕೆ ದೂಡುತ್ತೀರಿ ಎಂದು ಅರ್ಥ. ಕೊರೊನಾದ ಎರಡನೇ ಅಲೆಯು ಮಾರಣಾಂತಿಕವಾಗಿದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಕೆಲವು ಒಳ್ಳೆಯ ಯೋಜನೆಗಳನ್ನು ಮಾಡಿದರೆ ಒಳ್ಳೆಯದು.
4.ಪಾರ್ಕ್ ಅಥವಾ ಪ್ಲೆ ಗ್ರೌಂಡ್
ಕಳೆದ ಒಂದು ವರ್ಷದಿಂದ ಮಕ್ಕಳು ಮನೆಯಲ್ಲಿ ಕುಳಿತುತು ಹೆಚ್ಚು ಆಟ ಆಡುತ್ತಿದ್ದಾರೆ. ದಿನವಿಡೀ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಆಟಗಳನ್ನು ಆಡುತ್ತಾ, ಅಧ್ಯಯನ ಮಾಡುತ್ತಿದ್ದರು, ಇದೀಗ ಅವರು ಉದ್ಯಾನವನಕ್ಕೆ ಹೋಗಿ ಇತರ ಮಕ್ಕಳೊಂದಿಗೆ ಆಡಲು ಇಷ್ಟಪಡುತ್ತಿದ್ದಾರೆ. . ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಉದ್ಯಾನವನ ಅಥವಾ ಆಟದ ಮೈದಾನಕ್ಕೆ ಕಳುಹಿಸುವುದು ಅಪಾಯವಿಲ್ಲದೆ ಇಲ್ಲ. ಮಕ್ಕಳು ಮನೆಯಲ್ಲಿ ಆಟವಾಡಲು ನೀವು ವ್ಯವಸ್ಥೆ ಮಾಡಿದರೆ ಒಳ್ಳೆಯದು.
5.ಫಿಟ್ ನೆಸ್ ಸೆಂಟರ್
ನೀವು ಫಿಟ್ನೆಸ್ ಫ್ರೀಕ್ ಆಗಿದ್ದರೆ ಜಾಗರೂಕರಾಗಿರಿ ಮತ್ತು ಜಿಮ್ ಗೆ ಹೋಗುವ ಬಗ್ಗೆ ಈ ಸಮಯದಲ್ಲಿ ಸ್ವಲ್ಪ ಯೋಚಿಸಿ. ವಾಸ್ತವವಾಗಿ, ಹೊಸ ಕೊರೊನಾ ಅಲೆಯು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರನ್ನು ಗುರಿಯಾಗಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ತೂಕದ ವ್ಯಾಯಾಮ ಇತ್ಯಾದಿ ಮಾಡಿದರೆ ಒಳ್ಳೆಯದು.
6.ಪಾರ್ಟಿಗಳಿಗೆ ಹಾಜರಾಗುವುದು
ನಗರವನ್ನು ಇನ್ನೂ ಲಾಕ್ ಡೌನ್ ಮಾಡದಿರಬಹುದು ಆದರೆ ನೀವು ಈಗ ಜಾಗರೂಕ ನಾಗರಿಕರಾಗಿ ಪಕ್ಷದ ಕಾರ್ಯಗಳು ಇತ್ಯಾದಿಗಳನ್ನು ತಪ್ಪಿಸಬೇಕು. ಈ ಪಾರ್ಟಿಗಳನ್ನು ಮನೆಯಲ್ಲಿ ವ್ಯವಸ್ಥೆ ಮಾಡುವ ಮತ್ತು ಸಾಮಾಜಿಕ ಕೂಟವನ್ನು ಉತ್ತೇಜಿಸುವ ಅನೇಕ ಜನರಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಜನರು ಕೊರೊನಾ ವೈರಸ್ ಗೆ ಹೆಚ್ಚು ಒಡ್ಡಿಕೊಳ್ಳುತ್ತಾರೆ.
7.ಈಜು ಕೊಳ
ಬೇಸಿಗೆಯಲ್ಲಿ, ಜನರು ಮಕ್ಕಳಿಗೆ ಈಜು ತರಗತಿಗೆ ಕಳುಹಿಸುತ್ತಾರೆ, ಆದರೆ ಈ ಬಾರಿ ನೀವು ನಿಮ್ಮ ಮಕ್ಕಳನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಇದಲ್ಲದೆ, ವಯಸ್ಕರು ಇದೀಗ ಸಾರ್ವಜನಿಕ ಈಜು ಕೊಳಕ್ಕೆ ಹೋಗುವುದನ್ನು ತಪ್ಪಿಸಬೇಕು.
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.
ಎನ್ ಟಿಎ ಜೆಇಇ ಮೇನ್ 2021 ಏಪ್ರಿಲ್ ಪರೀಕ್ಷೆಯನ್ನು 27, 28, 29 ಮತ್ತು 30 ಏಪ್ರಿಲ್ ರಂದು ದೇಶಾದ್ಯಂತವಿವಿಧ ನಗರಗಳಲ್ಲಿ ನಡೆಸಲು ಮುಂದಾಗಿತ್ತು. ಆದರೆ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ.
ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ 2021ರ ಜೆಇಇ ಮುಖ್ಯ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
ಈ ಕುರಿತಂತೆ ಕೇಂದ್ರ ಸರ್ರಾಕ ಮಾಹಿತಿ ನೀಡಿದ್ದು, ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆಯಲಿಂದಾಗಿ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗುತ್ತಿದೆ. ಜೆಇಇ ಮುಖ್ಯ ಪರೀಕ್ಷೆಯ ಮುಂದಿನ ದಿನಾಂಕವನ್ನು 15 ದಿನಗಳ ನಂತ್ರ ಪ್ರಕಟಿಸುವುದಾಗಿ ತಿಳಿಸಿದೆ.
ಶಹ್ದೋರ್ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಆಮ್ಲಜನಕದ ಕೊರತೆಯಿಂದ 6 ಮಂದಿ ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಶಹ್ದೂಲ್ ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 6 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಕ್ಸಿಜನ್ ಪೂರೈಕೆಯಿಲ್ಲದೆ ತಡರಾತ್ರಿ ಐಸಿಯುನಲ್ಲಿದ್ದ ರೋಗಿಗಳಿಗೆ ಉಸಿರಾಟದ ತೊಂದರೆಯಾಗಿದ್ದು, ಬೆಳ್ಳಂಬೆಳಗ್ಗೆ ಒಬ್ಬೊಬ್ಬರಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ : ಕುಂಭಮೇಳದಲ್ಲಿ ಪಾಲ್ಗೊಂಡ 2000ಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ, ಮಧ್ಯಪ್ರದೇಶ, ದೆಹಲಿ, ಒಡಿಶಾ ಸೇರಿದಂತೆ ಅನೇಕ ರಾಜ್ಯಗಳು ಕುಂಭಮೇಳದಿಂದ ಹಿಂದಿರುಗುವ ಯಾತ್ರಿಗಳಿಗೆ 14 ದಿನ ಹೋಮ್ ಕ್ವಾರಂಟೈನ್ ಅನ್ನು ಆಪ್ ನೇತೃತ್ವದ ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ.
ದೇಶದ ವಿವಿಧೆಡೆಗಳಿಂದ ಕುಂಭಮೇಳದಲ್ಲಿ ಭಾಗವಹಿಸಿದ್ದಂತ ಅನೇಕರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಕರ್ನಾಟಕದಲ್ಲಿ ಕುಂಭಮೇಳದಲ್ಲಿ ಭಾಗವಹಿಸಿ ಬಂದವರಿಗೆ ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆ ಮಾಡಿಸೋದು ಕಡ್ಡಾಯಗೊಳಿಸಲಾಗಿದೆ. ಅತ್ತ ದೆಹಲಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳ ಹಿನ್ನಲೆಯಲ್ಲಿ ಆಪ್ ನೇತೃತ್ವದ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.
ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ಸಾಗುವ ಯಾತ್ರಿಗಳು 14 ದಿನ ಹೋಮ್ ಕ್ವಾರಂಟೈನ್ ಆಗಬೇಕು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಸರ್ಕಾರ ಎಚ್ಚರಿಕೆ ನೀಡಿದೆ. ದೆಹಲಿಯಿಂದ ಹೋಗಿ ಕುಂಭಮೇಳದಲ್ಲಿ ಪಾಲ್ಗೊಂಡವರು ತಮ್ಮ ಮಾಹಿತಿಯನ್ನು ಸರ್ಕಾರದ ವೆಬ್ ಸೈಟ್ ಗೆ ನೀಡಬೇಕು. ಮಾಹಿತಿ ನೀಡದಿದ್ದಲ್ಲಿ ಅವರನ್ನು ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಎಚ್ಚರಿಸಿದೆ.
ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆಗಳಿಗೆ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ರಾಜ್ಯಗಳಿಗೆ ಮುಂದಿನ ವಾರದೊಳಗೆ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ.
ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಹರ್ಷವರ್ಧನ್ ರಾಜ್ಯ ಸಚಿವರೊಂದಿಗೆ ಪರಾಮರ್ಶೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನಿಂದ ಹೆಚ್ಚು ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದ ಒಳಗಾಗಿ ಸುಮಾರು 1.17 ಕೋಟಿ ಡೋಸ್ ಲಸಿಕೆ ಪೂರೈಸಲಾಗುವುದು. ಜತೆಗೆ, 6,300ಕ್ಕೂ ಹೆಚ್ಚು ವೆಂಟಿಲೇಟರ್ಗಳನ್ನೂ ಒದಗಿಸಲಾಗುವುದು ಎಂದೂ ಹೇಳಿದ್ದಾರೆ.
‘ಈವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ 14.15 ಕೋಟಿ ಡೋಸ್ ಲಸಿಕೆ ಕಳುಹಿಸಿಕೊಟ್ಟಿದೆ. ಅದರಲ್ಲಿ ವ್ಯರ್ಥವಾಗಿರುವ ಲಸಿಕೆಗಳೂ ಸೇರಿ 12.57 ಕೋಟಿ ಡೋಸ್ ಲಸಿಕೆ ಬಳಸಲಾಗಿದೆ. ಇನ್ನು 1.50 ಕೋಟಿ ಡೋಸ್ ಲಸಿಕೆಗಳು ರಾಜ್ಯ ಸರ್ಕಾರಗಳ ಬಳಿ ಲಭ್ಯವಿವೆ. ಇದಲ್ಲದೆ ಇನ್ನೂ 1.17 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ವಾರದ ಒಳಗೆ ಪೂರೈಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕೊರೊನಾ ಸ್ಥಿತಿ ಕೈ ಮೀರಿದೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರವೇ ಹೇಳಿದ್ದು, ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ ಎಂದು ಹೇಳಿದ್ದಾರೆ.
ನಾಳೆ ಕಂದಾಯ ಸಚಿವ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಜಿಟಲ್ ಡೆಸ್ಕ್ : ಬ್ಯಾಂಕುಗಳಲ್ಲಿ ಗೃಹ ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು ಸಾಧ್ಯವಾಗದಿದ್ದರೆ, ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಸರಳವಾಗಿ ಹೇಳುವುದಾದರೆ, ಸಿಬಿಲ್ ಸ್ಕೋರ್ ಒಬ್ಬ ವ್ಯಕ್ತಿಯ ಕ್ರೆಡಿಟ್ ವರ್ತಿನೆಸ್ ಅನ್ನು ಪ್ರತಿನಿಧಿಸುವ ಮೂರು ಅಂಕಿಗಳ ಸಂಖ್ಯೆಯಾಗಿದೆ. ಹೆಚ್ಚು ಸ್ಕೋರ್ ನಿಮ್ಮ ಕ್ರೆಡಿಟ್ ಯೋಗ್ಯತೆ ಉತ್ತಮವಾಗಿದೆ.
ನೀವು ನಿಮ್ಮ ಮನೆ ಸಾಲದ ಮಾಸಿಕ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಮಾಡದಿದ್ದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನೀವು ಒಂದೇ ಮಾಸಿಕ ಕಂತನ್ನು ತಪ್ಪಿಸಿಕೊಂಡರೆ, ನಿಮ್ಮ ಸಿಬಿಲ್ ಸ್ಕೋರ್ 50-70 ಪಾಯಿಂಟ್ ಕಡಿಮೆಯಾಗಬಹುದು..
ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೇಗೆ ಸುಧಾರಿಸಬಹುದು?
ನಿಮ್ಮ ತಪ್ಪಿದ ಮಾಸಿಕ ಕಂತನ್ನು ಮುಂದಿನ ಇಎಂಐ ನೊಂದಿಗೆ ತಡವಾಗಿ ಶುಲ್ಕದೊಂದಿಗೆ ಪಾವತಿಸುವ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಲಭವಾಗಿ ಸುಧಾರಿಸಬಹುದು. ನಿಮ್ಮ ಸಿಬಿಲ್ ಸ್ಕೋರ್ ನಂತರ ನಿಧಾನವಾಗಿ ಮತ್ತೆ ಸುಧಾರಿಸುತ್ತದೆ.
ಮಾಸಿಕ ಕಂತುಗಳ ಮರುಪಾವತಿ ಮಾಡದಮೇಲಿನ ಇತರ ದಂಡಗಳು
ನಿಮ್ಮ ಸಾಲಯೋಗ್ಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರ ಜೊತೆಗೆ, ಮಾಸಿಕ ಕಂತುಗಳನ್ನು ಮರುಪಾವತಿಮಾಡದಿರುವುದು ವಿಳಂಬ ಶುಲ್ಕ ಮತ್ತು ದಂಡವನ್ನು ಸಹ ಕರೆಯುತ್ತದೆ. ಸಾಮಾನ್ಯವಾಗಿ, ಬ್ಯಾಂಕುಗಳು ನಿಮ್ಮ ಮಾಸಿಕ ಕಂತುಗಳಲ್ಲಿ 1-2% ಅನ್ನು ದಂಡವಾಗಿ ವಿಧಿಸುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ನೀವು ವಿಳಂಬ ಶುಲ್ಕದ ಜೊತೆಗೆ ಸುಸ್ತಿಯಾದ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ನಿಮ್ಮ ಮನೆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?
ಉದ್ಯೋಗ ನಷ್ಟ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ನಿಮ್ಮ ಗೃಹ ಸಾಲಗಳನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಆದಷ್ಟು ಬೇಗ ಸಾಲ ನೀಡುವ ಬ್ಯಾಂಕ್ ಅಥವಾ ಎನ್ ಬಿಎಫ್ ಸಿಯನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ, ಬ್ಯಾಂಕುಗಳು ನಿಮ್ಮ ಸಮಸ್ಯೆಯನ್ನು ಆಲಿಸಬಹುದು ಮತ್ತು ನಿಮ್ಮ ಮರುಪಾವತಿ ಸಮಯವನ್ನು 90 ದಿನಗಳವರೆಗೆ ವಿಸ್ತರಿಸಬಹುದು.
ನೀವು 90 ದಿನಗಳಲ್ಲಿ ಯಾವುದೇ ಮಾಸಿಕ ಕಂತನ್ನು ಮರುಪಾವತಿ ಮಾಡದಿದ್ದರೆ, ಬ್ಯಾಂಕುಗಳು ನಿಮ್ಮ ಸಾಲವನ್ನು ಎನ್ ಪಿಎಯ ಅನುತ್ಪಾದಕ ಆಸ್ತಿಎಂದು ಗುರುತಿಸಬಹುದು ಮತ್ತು ನಂತರ ಬ್ಯಾಂಕ್ ಸರ್ಫೇಸಿ ಕಾಯ್ದೆ 2002 ರ ಪ್ರಕಾರ ನಿಮ್ಮ ಮನೆಯನ್ನು ಬಿಡ್ಡಿಂಗ್ ಗೆ ಒಳಪಡಿಸುತ್ತದೆ.
ನಿಮ್ಮ ಮಾಸಿಕ ಕಂತುಗಳನ್ನು ಕಡಿಮೆ ಮಾಡಲು ನೀವು ನಿಮ್ಮ ಸಾಲದ ಅವಧಿಯನ್ನು ಹೆಚ್ಚಿಸಬಹುದು. ಆದಾಗ್ಯೂ, ಹಾಗೆ ಮಾಡುವುದರಿಂದ ದೀರ್ಘಾವಧಿಯಲ್ಲಿ ನೀವು ಬ್ಯಾಂಕಿಗೆ ಪಾವತಿಸುತ್ತಿರುವ ಒಟ್ಟಾರೆ ಬಡ್ಡಿಯನ್ನು ಹೆಚ್ಚಿಸುತ್ತದೆ.
ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹರಿದ್ವಾರದ ಕುಂಭಮೇಳದಿಂದ ಹಿಂದಿರುಗುವ ದೆಹಲಿ ಜನರಿಗೆ ಎರಡು ವಾರಗಳ ಗೃಹ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಏಪ್ರಿಲ್ 17, 2021ರಂದು ಹೊರಡಿಸಿದ ಆದೇಶದಲ್ಲಿ ಡಿಡಿಎಂಎ, ಕುಂಭಮೇಳದಲ್ಲಿ ಭಾಗವಹಿಸಿ ಹರಿದ್ವಾರದಿಂದ ಹಿಂದಿರುಗುತ್ತಿರುವ ದೆಹಲಿಯ ಎಲ್ಲ ನಿವಾಸಿಗಳು ರಾಷ್ಟ್ರ ರಾಜಧಾನಿಗೆ ಆಗಮಿಸಿದಾಗ 14 ದಿನಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ಹೇಳಿದೆ.
ಏಪ್ರಿಲ್4 ಮತ್ತು ಏಪ್ರಿಲ್ 17 ರ ನಡುವೆ ಕುಂಭಮೇಳಕ್ಕೆ ಭೇಟಿ ನೀಡಿದ ದೆಹಲಿ ನಿವಾಸಿಗಳು ದೆಹಲಿ ಸರ್ಕಾರದ ಪೋರ್ಟಲ್ ನ ಲಿಂಕ್ ನಲ್ಲಿ ವಿವರಗಳನ್ನು (ಹೆಸರು, ದೆಹಲಿಯ ವಿಳಾಸ, ಸಂಪರ್ಕ ಸಂಖ್ಯೆ, ಐಡಿ ಪುರಾವೆ, ದೆಹಲಿಯಿಂದ ಹೊರಡುವ ದಿನಾಂಕ ಮತ್ತು ಇಲ್ಲಿಗೆ ಬರುವ ದಿನಾಂಕ) ಅಪ್ ಲೋಡ್ ಮಾಡಬೇಕಾಗಿದೆ ಎಂದು ಅದು ಹೇಳಿದೆ.
ವಿಜಯಪುರ : ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಏ.19 ರಂದು ನಡೆಯಬೇಕಿದ್ದ ಅಕ್ಕಮಹಾದೇವಿ ಮಹಿಳಾ ವಿವಿಯ ಯುಜಿ, ಪಿಜಿ ಪರೀಕ್ಷೆ ಮುಂದೂಡಿಕೆಯಾಗಿದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ವಿವಿ ಈ ಸಂಬಂಧ ಪ್ರಕಟಣೆ ಹೊರಡಿಸಿದೆ.ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿಬರಲು ಸಮಸ್ಯೆ ಆದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವಿವಿ ಮಾಹಿತಿ ನೀಡಿದೆ.
ಏಪ್ರಿಲ್ 19ರಂದು ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಪರೀಕ್ಷೆ ಕುರಿತ ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ವಿವಿಯ ಕುಲಸಚಿವರು (ಮೌಲ್ಯಮಾಪನ) ಸುತ್ತೋಲೆ ಹೊರಡಿಸಿದ್ದಾರೆ.
ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಏಪ್ರಿಲ್ 19, 20 ಮತ್ತು 21 ರಿಂದ ನಡೆಯಬೇಕಿದ್ದ ಪದವಿಪೂರ್ವ ಮತ್ತು ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಶನಿವಾರ ಮುಂದೂಡಿದೆ. ವಿಶ್ವವಿದ್ಯಾನಿಲಯವು ಪದವಿಪೂರ್ವ ಕೋರ್ಸ್ಗಳ ಮೊದಲ ಮತ್ತು ಮೂರನೇ ಸೆಮಿಸ್ಟರ್ ಮತ್ತು ಮೂರನೇ ಮತ್ತು ಐದನೇ ಸೆಮಿಸ್ಟರ್ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಮುಂದೂಡಿದೆ.