Current affairs – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು : ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಇ ಮೇಲ್ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ದುಷ್ಕರ್ಮಿಗಳು ಶಂಕರ್ ಬಿದರಿ ಅವರ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಇದನ್ನು ನಂಬಿದ ಬಿದರಿ ಅವರ ಸ್ನೇಹಿತರೊಬ್ಬರು 25 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಶಂಕರ್ ಬಿದರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಇ- ಮೇಲ್ ಐಡಿ ಹ್ಯಾಕ್ ಆಗಿರುವುದು ಶಂಕರ್ ಬಿದರಿ ಅವರ ಗಮನಕ್ಕೆ ಬಂದಿದೆ.
ಘಟನೆ ಸಂಬಂಧ ಶಂಕರ್ ಬಿದರಿ ಅವರು, ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇ ಮೇಲ್ ಹ್ಯಾಕ್ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಬೆಂಗಳೂರು : ತಿಗಳ ಸಮುದಾಯದ ಆರಾಧ್ಯ ದೇವತೆ ದ್ರೌಪದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸಾಹಿತಿ ಎಸ್.ಎಲ್ ಭೈರಪ್ಪ ಅವರ ವಿರುದ್ಧ ವಹ್ನಿಕುಲ ಸಂಘ ಪೊಲೀಸ್ ಠಾಣೆಗೆ ದೂರು ನೀಡಿದೆ.
ಸಾಹಿತಿ ಭೈರಪ್ಪನವರು ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ತಿಗಳ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಸಾರ್ವಜನಿಕವಾಗಿ ತಿಗಳ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ನೀಡುವ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
ರೈತರ ಪ್ರತಿ ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ವರ್ಷಕ್ಕೆ ಕನಿಷ್ಟ 25 ಲೀಟರ್ ಡೀಸೆಲ್ ಬೇಕಾಗುತ್ತದೆ. ಇದಕ್ಕಾಗಿ ವರ್ಷಕ್ಕೊಮ್ಮೆ ಪ್ರತಿ ಲೀಟರ್ ಗೆ 25 ರೂ. ಸಬ್ಸಿಡಿ ನೀಡಲು ಉದ್ಧೇಶಿಸಲಾಗಿದ್ದು, ಗರಿಷ್ಠ 10 ಎಕರೆ ತನಕ ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ಕೊಡುವುದರಿಂದ 48 ಲಕ್ಷ ರೈತರಿಗೆ 1,300 ಕೋಟಿ ರೂ. ಬಜೆಟ್ ನೆರವು ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಈ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಮನವೊಲಿಸುವ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ. ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ದಿನಾಂಕ 05:03:2021 ರೊಳಗಾಗಿ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ ಹೊರಡಿಸಿದೆ. www.ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಿಹಿಸುದ್ದಿಯೊಂದನ್ನು ನೀಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಆಫೀಸ್ ಅಟೆಂಡೆಂಟ್ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತರು ಆರ್ ಬಿಐನ ಅಧಿಕೃತ ಸೈಟ್ ಮೂಲಕ rbi.org.in ಅರ್ಜಿ ಸಲ್ಲಿಸಬಹುದು.
ಆರ್ ಬಿಐ ಕಚೇರಿ ಅಟೆಂಡೆಂಟ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2021. ಈ ನೇಮಕಾತಿ ಅಭಿಯಾನದ ಮೂಲಕ, ಕೇಂದ್ರೀಯ ಬ್ಯಾಂಕ್ ಭಾರತದಾದ್ಯಂತ ಬ್ಯಾಂಕ್ ನ ವಿವಿಧ ಕಚೇರಿಗಳಲ್ಲಿ 841 ಹುದ್ದೆಗಳನ್ನು ಭರ್ತಿ ಮಾಡಲಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: ಫೆಬ್ರವರಿ 24, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 15, 2021
ಆನ್ ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಏಪ್ರಿಲ್ 9 ಮತ್ತು 10, 2021
ಅರ್ಹತೆ ಯ ಮಾನದಂಡ
ವಯಸ್ಸು: 18 ರಿಂದ 25 ವರ್ಷ. ಅಭ್ಯರ್ಥಿಗಳು 02/02/1996 ಕ್ಕಿಂತ ಮುಂಚಿತವಾಗಿ ಜನಿಸಿದವರಾಗಿರಬೇಕು ಮತ್ತು 01/02/2003 ರ ನಂತರ (ಎರಡೂ ದಿನವೂ ಸೇರಿದಂತೆ) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಶೈಕ್ಷಣಿಕ ಅರ್ಹತೆಗಳು
ಅಭ್ಯರ್ಥಿಯು ಅರ್ಜಿ ಸಲ್ಲಿಸುವ ನೇಮಕಾತಿ ಕಚೇರಿಯ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯಿಂದ ಸಂಬಂಧಪಟ್ಟ ರಾಜ್ಯ/ಯುಟಿಯಿಂದ 10ನೇ ತರಗತಿ (ಎಸ್ .C/ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು. ಅಂತಹ ವಿದ್ಯಾರ್ಹತೆಯು ಆ ರಾಜ್ಯ/ಯುಟಿಯ ಮಾನ್ಯತೆ ಪಡೆದ ಮಂಡಳಿಯಿಂದ ಇರಬೇಕು.
ಬೆಂಗಳೂರು : ನೇರಳೆ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಸುತ್ತಿರುವುದರಿಂದಾಗಿ, ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ 2 ಗಂಟೆಗಳ ಕಾಲ ಭೈಯ್ಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.
ಈ ಕುರಿತಂತೆ ಬಿಎಂಆರ್ ಸಿ ಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟ್ರಿನಿಟಿ ಟು ಹಲಸೂರು ಮೆಟ್ರೋ ನಿಲ್ದಾಣದ ನಡುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ, ಎಂ.ಜಿ.ರೋಡ್ ಮೆಟ್ರೋ ನಿಲ್ದಾಣದಿಂದ ಭೈಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣದವರೆಗೆ ತಾತ್ಕಾಲಿಕವಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಎರಡು ಗಂಟೆ ಬಂದ್ ಆಗಲಿದೆ. ದುರಸ್ತಿ ಕಾಮಗಾರಿ ಮುಕ್ತಾಯಗೊಂಡ ನಂತ್ರ 9 ಗಂಟೆಗೆ ಎಂದಿನಂತೆ ನಮ್ಮ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ.
ಜನವರಿಯಲ್ಲಿ ಭಾಷಣ ಮಾಡಿದ ನಂತರ ಪ್ರಧಾನಿ ಭಾರತದ ಜನತೆಗೆ ತಮ್ಮ ಮುಂದಿನ ರೇಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಸ್ಫೂರ್ತಿದಾಯಕ ಕಥೆಗಳನ್ನು ರೆಕಾರ್ಡ್ ಮಾಡುವಂತೆ ಕೇಳಿಕೊಂಡು, ಜನರು ಕರೆ ಮಾಡಲು ಮತ್ತು ರೆಕಾರ್ಡ್ ಮಾಡಲು ಟೋಲ್ ಫ್ರೀ ನಂಬರ್ ಅನ್ನು ಸ್ಥಾಪಿಸಿದರು.
ವಿಜಯಪುರ : ಬಿಎಟಿಸಿ ಬಸ್ ದರ ಹೆಚ್ಚಳದ ನಂತ್ರ, ಸಾರಿಗೆ ಬಸ್ ಪ್ರಯಾಣದ ದರ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ, ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲವೇ ಇಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗಾಗಲೇ ಕಳೆದ ವರ್ಷವೇ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. ಕೊರೋನಾ ಸಂಕಷ್ಟದಿಂದ ಈಗ ಜನರು ತೊಂದರೆಯಲ್ಲಿದ್ದಾರೆ. ಹೀಗಾಗಿ ಮತ್ತೆ ಸಾರಿಗೆ ಬಸ್ ಪ್ರಯಾಣದರವನ್ನು ಯಾವುದೇ ಕಾರಣಕ್ಕೂ ಹೆಚ್ಚಳದ ಪ್ರಸ್ತಾವನೆಯೇ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
ನವದೆಹಲಿ : ದೇಶದಲ್ಲಿ ಕೊರೊನಾ ನಿರ್ಮೂಲನೆಗೆ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಹಿರಿಯ ನಾಗರಿಕರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟವರ ಅನುಕೂಲಕ್ಕಾಗಿ ಮುಂಬರುವ ದಿನಗಳಲ್ಲಿ ಮನೆಯಲ್ಲೇ ಲಸಿಕೆಯನ್ನು ಪಡೆಯಲು ಅವಕಾಶ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಮಾರ್ಚ್ 1 ರಿಂದ ಆರಂಭವಾಗುವ ಲಸಿಕಾ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳು, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಮೊದಲೆರಡು ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದ ಸರ್ಕಾರ, 3 ನೇ ಹಂತದಲ್ಲಿ 27 ಕೋಟಿ ಜನರಿಗೆ ಲಸಿಕೆ ವಿತರಿಸುವ ಉದ್ದೇಶ ಹೊಂದಿದೆ.
ಬೆಂಗಳೂರು : ತಮಿಳುನಾಡು ಸರ್ಕಾರ ಪದೇ ಪದೇ ಮಹದಾಯಿ, ಮೇಕೆದಾಟು ಯೋಜನೆಗಳ ಮೂಲಕ ನದಿ ತಿರುವು ಯೋಜನೆಯಲ್ಲಿ ಕಿರಿಕ್ ಮಾಡುತ್ತಿದೆ. ಇಂತಹ ನದಿ ತಿರುವು ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮಾರ್ಚ್ 27ರಂದು ಮಹದಾಯಿ, ಮೇಕೆದಾಟು ಯೋಜನೆಗೋಸ್ಕರ ಬಂದ್ ಕರೆ ನೀಡುವ ಜೊತೆಗೆ, ತೈಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಮಾರ್ಚ್ 5ರೊಳಗೆ ಕಾವೇರಿ ಯೋಜನೆ ಕೈಬಿಡಲು ಗಡುವು ಇದ್ದು, ರಾಜ್ಯ ಸಂಸದರು ಚಕಾರವೆತ್ತುತ್ತಿಲ್ಲ. ಹೀಗಾಗಿ ಮಾರ್ಚ್ 6ರಂದು ಸಂಸದರನ್ನು ಹರಾಜು ಹಾಕುತ್ತೇವೆ. ಮಾರ್ಚ್ 13ರಂದು ಕನ್ನಂಬಾಡಿ ಚಲೋ, ಮಾರ್ಚ್.20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ತಮಿಳುನಾಡು ಸರ್ಕಾರ ನದಿ ತಿರುವು ಯೋಜನೆ ಕೈಬಿಡದೇ ಇದ್ದರೇ ಮಾರ್ಚ್ 27ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಕೇವಲ ನದಿ ನೀರು ಯೋಜನೆ ಕೈಬಿಡುವಂತೆ ಅಷ್ಟೇ ಕರ್ನಾಟಕ ಬಂದ್ ನಡೆಸೋದಿಲ್ಲ. ಇದರೊಂದಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಏರಿಕೆ ಖಂಡಿಸಿಯೂ ಪ್ರತಿಭಟನೆ ನಡೆಸಲಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ಗ್ರಾನೈಟ್ ಲೂಟಿ ವಿರುದ್ಧವೂ ಧರಣಿ ನಡೆಸಲಾಗುವುದು ಎಂಬುದಾಗಿ ಹೇಳಿದರು.
ಮಂಗಳೂರು : ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಸಿಹಿಸುದ್ದಿ ನೀಡಿದ್ದು, ಈ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಗೆ ಪಠ್ಯದ ಶೇ. 70 ರಷ್ಟು ಭಾಗ ಮಾತ್ರ ನಿಗದಿಪಡಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಓದಲೇ ಬೇಕಾಗಿರುವ ಪಠ್ಯ ವಿಷಯಗಳನ್ನು ಶೇ. 70 ಭಾಗದಲ್ಲಿ ಒಳಪಡಿಸಲಾಗಿದೆ. ಪಾಲಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
2 ದಿನದಲ್ಲಿ ಎಸ್ಎಸ್ ಎಲ್ ಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲು ಸಿದ್ಧವಿದ್ದು, ಕೇಂದ್ರದ ಅನುಮತಿ ದೊರೆತ ತಕ್ಷಣವೇ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು : ಫೆಬ್ರವರಿ 28ರ, ಇಂದು ಈಗಾಗಲೇ ಮುಂದೂಡಿಕೆಯಾಗಿದ್ದಂತ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇಂತಹ ಪರೀಕ್ಷೆಗೆ ಹಳೆಯ ಪ್ರವೇಶ ಪತ್ರ ರದ್ದು ಪಡಿಸಲಾಗಿದ್ದು, ಹೊಸ ಪ್ರವೇಶ ಪತ್ರ ಡೌನ್ ಲೋಡ್ ಗೆ ಕೆಪಿಎಸ್ಸಿ ಅನುಮತಿಸಿದೆ. ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಪಾಲಿಸಬೇಕಾದಂತ ಸೂಚನೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ತಿಳಿಸಿದೆ. ಅಂತಹ ಅಭ್ಯರ್ಥಿಗಳ ಸೂಚನೆಗಳು ಈ ಕೆಳಗಿನಂತಿವೆ.
ಎಫ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಇತ್ತೀಚೆಗೆ ಬಸ್, ರೈಲು, ಇತ್ಯಾದಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕಿಂತ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಲು, ಅಭ್ಯರ್ಥಿಗಳು ಹೆಚ್ಚಿನ ಮುನ್ನೆಚ್ಚರಿಕೆಯಿಂದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ
ಅಭ್ಯರ್ಥಿಗಳು ಪರೀಕ್ಷೆಯ ಮೊದನೆಯ ಬೆಲ್ ಆಗುವ ಕನಿಷ್ಟ ಎರಡು ಗಂಟೆಯ ಮೊದಲು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು
ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಅನ್ನು ಕ್ರಮ ಬದ್ಧವಾಗಿ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮ್ಯಾಥಮ್ಯಾಟಿಕಲ್ ಟೇಬಲ್ಸ್, ಸ್ಟೈಡ್ ರೋಲ್ಸ್, ಕ್ಯಾಲುಕುಲೇಟರ್, ಪೇಜರ್, ಮೊಬೈಲ್ ಪೋನ್, ಬ್ಲೂಟೂತ್, ಮಾರ್ಕರ್ಸ್, ವೈಟ್ ಪ್ಲೂಯಿಡ್, ವೈರ್ ಲೆಸ್ ಸೆಟ್ಸ್ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು, ತೆಗೆದುಕೊಂಡು ಹೋಗುವಂತಿಲ್ಲ. ವಿವಿಧ ಸಮಯಗಳಲ್ಲಿ ಬಾರಿಸುವ ಎಚ್ಚರಿಕೆಯ ಗಂಟೆಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಚುರ ಪಡಿಸಿರುವ ಬೆಲ್ ಸಮಯವನ್ನು ನೋಡುವುದು.
ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಮೊದಲನೆಯ ಬೆಲ್ ಆದ ತಕ್ಷಣ ಅಂದರೆ ಮಧ್ಯಾಹ್ನ 2 ನಂತರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ ತಮ್ಮ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು.
ಮೂರನೆಯ ಬೆಲ್ ಅಂದರೆ ಮಧ್ಯಾಹ್ನ 2.30 ಆದ ನಂತ್ರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಅನಮತಿ ನೀಡಲಾಗುವುದಿಲ್ಲ.
ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ರೋಲ್ ನಂಬರ್, ಅಭ್ಯರ್ಥಿಯ ಹೆಸರು ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಮುದ್ರಿಸಲಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಕೊಠಡಿಯ ಮೇಲ್ವಿಚಾರಕು ತಮಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ರೋಲ್ ನಂಬರ್, ಹೆಸರು ಹಾಗೂ ಪ್ರವೇಶ ಪತ್ರದಲ್ಲಿ ಮುತ್ರಿತವಾಗಿರುವ ರೋಲ್ ನಂಬರ್ ಒಂದೇ ಆಗಿದ್ಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೊತೆಗೆ ನಿಮಗೆ ನೀಡುವ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಉತ್ತರ ಪತ್ರಿಕೆಯ ವರ್ಷನ್ ಕೋಡ್ ಒಂದೇ ಆಗಿದ್ಯಾ ಅಂತ ಖಾತ್ರಿ ಪಡಿಸಿಕೊಳ್ಳುವುದು.
ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್, ಕ್ರಮ ಸಂಖ್ಯೆಯನ್ನು ನಾಮಿನಲ್ ರೋಲ್ ನಲ್ಲಿ ಬರೆಯಬೇಕು
ಪರೀಕ್ಷೆಯ ನಿಗದಿತ ಸಮಯ ಮುಗಿಯುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ.(ಕೊನೆಯ ಬೆಲ್ ಅಂದರೆ ಸಂಜೆ 4.30 ಆಗುವವರೆಗೂ)
ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಓಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಬಳಸಬೇಕು.
ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಪರೀಕ್ಷಾ ಕೇಂದ್ರದಲ್ಲಿಯೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.
ಪರೀಕ್ಷಾ ದಿನದಂದು ಒಂದು ವೇಳೆ ಅಭ್ಯರ್ಥಿಗೆ ಕೆಮ್ಮು ಅಥವಾ ನೆಗಡಿ ಅಥವಾ ಜ್ವರ ಇದ್ದರೇ, ಪರೀಕ್ಷಾ ಕೇಂದ್ರದ ಉಪ ಮುಖ್ಯಸ್ಥರಿಗೆ ತಿಳಿಸುವುದು.
ಓಎಂಆರ್ ಉತ್ತರ ಪತ್ರಿಕೆಯ ಕೆಳಭಾಗದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಅಭ್ಯರ್ಥಿಗಳು ಸಹಿ ಮಾಡಬೇಕು.
ಬೆಂಗಳೂರು : ರಾಜ್ಯ ಸರ್ಕಾರವು ಮಾಸಾಶನ ಪಡೆಯುವ ವಿಧವೆಯರಿಗೆ, ವೃದ್ಧರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ 59 ಸಾವಿರ ಪ್ರಕರಣಗಳಿಗೆ ಪಿಂಚಣಿ ಹಣ ಪಾವತಿಯಾಗಿಲ್ಲ. ಇದರಿಂದ ಫಲಾನುಭವಿಗಳಿ ಪಿಂಚಣಿಗಾಗಿ ಅಲೆದಾಡುವಂತಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಇಲಾಖೆಯಲ್ಲಿ ಈವರೆಗೆ 59 ಸಾವಿರ ಪ್ರಕರಣಗಳಿಗೆ ಪಿಂಚಣಿ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಕೊರೊನಾ ಸಂಕಷ್ಟದಲ್ಲಿ ಮಾಸಾಶನದ ಆಸರೆಯಲ್ಲಿದ್ದ ಸಾವಿರಾರು ವಿಧವೆಯರು, ವೃದ್ಧರಿಗೆ ಮಾಸಾಶನ ಪಾವತಿಯಾಗದೇ ಇರುವುದು ಜೀವನ ನಿರ್ವಹಣೆಗೆ ಕಷ್ಟವಾಗಿದೆ.
ರಾಜ್ಯದಲ್ಲಿ ಒಟ್ಟು 59 ಸಾವಿರ ಪ್ರಕರಣಗಳಿಗೆ ಪಿಂಚಣಿ ಹಣ ಪಾವತಿಯಾಗಿಲ್ಲ ಎನ್ನಲಾಗಿದ್ದು. ಈ ಪೈಕಿ ಬೆಂಗಳೂರು 46,093, ಬೆಳಗಾವಿ 2,596, ಮಂಡ್ಯ 1,828, ರಾಯಚೂರು 1,810, ಯಾದಗಿರಿ 1,450, ತುಮಕೂರು, ಬಳ್ಳಾರಿ, ಕೊಪ್ಪಳ, ಮೈಸೂರು ಜಿಲ್ಲೆಗಳಲ್ಲಿ ತಲಾ 3,236 ಪ್ರಕರಣಗಳಿಗೆ ಪಿಂಚಣಿ ನೀಡಬೇಕಿದೆ ಎನ್ನಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರವು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ಬಿಗ್ ಶಾಕ್ ನೀಡಿದ್ದು, ಮಾರ್ಚ್ 31 ರೊಳಗೆ ಬಿಪಿಎಲ್ ಕಾರ್ಡ್ ಗಳನ್ನು ಸ್ವಯಂ ಪ್ರೇರಿತವಾಗಿ ವಾಪಸ್ ನೀಡದಿದ್ದರೆ ಇಲಾಖೆ ಅಧಿಕಾರಿಗಳೇ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಿದ್ದಾರೆ.
ರಾಜ್ಯದಲ್ಲಿ ಅಂದಾಜು 10 ಲಕ್ಷ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ಕಲೆ ಹಾಕಿದೆ. ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಯ ಅಧಿಕಾರಿಗಳು, ಸರ್ಕಾರಿ ನೌಕರರು, ವೃತ್ತಿ ತೆರಿಗೆ ಪಾವತಿಸುವ ನೌಕರರು, ಗ್ರಾಮೀಣಾ ಪ್ರದೇಶದಲ್ಲಿ 3 ಹೆಕ್ಟರ್ ಕ್ಕಿಂತ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು, ನಾಲ್ಕು ಚಕ್ರದ ವಾಹನ ಇರುವ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಆಹಾರ ಇಲಾಖೆ ಪತ್ತೆ ಹಚ್ಚಿದೆ.
ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವವರು ಸ್ವಯಂ ಪ್ರೇರಿತವಾಗಿ ಮಾರ್ಚ್ 31 ರೊಳಗೆ ಕಾರ್ಡ್ ಹಿಂದುರಿಗಿಸಬೇಕು. ಇಲ್ಲದಿದ್ದರೆ ಕ್ರೀಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಆಹಾರ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಜನವರಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯುತ್ತಿದ್ದು, ಕಡಿತಗೊಂಡಿರುವ ಪಠ್ಯಕ್ರಮದ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಉಲ್ಲೇಖ ಪತ್ರದಲ್ಲಿ ತಿಳಿಸಲಾಗಿತ್ತು. ಅದರಂತೆ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಅಭ್ಯಾಸ ದೃಷ್ಟಿಯಿಂದ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ತಲಾ ಎರಡು ಮಾದರಿ ಪ್ರಶ್ನೆಗಳನ್ನು ರಚಿಸಿ ಮಂಡಳಿ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಶಿವಮೊಗ್ಗ : ಮಾರ್ಚ್ 2021 ರಲ್ಲಿ ನಡೆಯುವ ಪದವಿ ಪರೀಕ್ಷಾ ಸಂಬಂಧ ಪರೀಕ್ಷಾ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿ ಕುವೆಂಪು ವಿಶ್ವವಿದ್ಯಾಲಯ ಈಗಾಗಲೇ ಅಧಿಕೃತ ಸೂಚನೆ ಹೊರಡಿಸಿದೆ.
ಬಿಎ/ಬಿಎಸ್ಸಿ/ಬಿಕಾಂ/ಬಿಬಿಎ/ಐಟಿಐ/ಬಿಸಿಎ/ಬಿ ಎಸ್ ಡಬ್ಲ್ಯೂ/ಬಿ ಎಸ್ಸಿ ಪದವಿ ಪರೀಕ್ಷೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಸೂಚಿಸಿ ಕುವೆಂಪು ವಿವಿ ಆದೇಶ ಹೊರಡಿಸಿದೆ.
ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
100 ರೂ ದಂಡದೊಂದಿಗೆ 28:02:21 ಕೊನೆಯ ದಿನಾಂಕ
500 ರೂ ದಂಡದೊಂದಿಗೆ 1:3:21 ರಿಂದ 03:03:21 ಅವಕಾಶ
ಪರೀಕ್ಷೆ ತೆಗೆದುಕೊಳ್ಳಲು ನಿಯಮಾನುಸಾರ ಅರ್ಹರಾದ ಅಭ್ಯರ್ಥಿಗಳು ತಮ್ಮ ‘Student portal’ ನಲ್ಲಿ ಲಾಗಿನ್ ಆಗಿ ಅರ್ಜಿ /ಪರೀಕ್ಷಾ ಶುಲ್ಕ ಪಾವತಿಸಿ ನಂತರ ಚಲನ್ ಗಳನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.. ಶುಲ್ಕ ಸಂಬಂಧ ಮಾಹಿತಿಗಾಗಿ ಕಾಲೇಜು ಕಛೇರಿ/ ಕುವೆಂಪು ವಿವಿಯ ವೆಬ್ ಸೈಟ್ http://www.kuvempu.ac.in/eng/index.php) ವೀಕ್ಷಿಸಬಹುದಾಗಿದೆ.
ಬೆಂಗಳೂರು : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ. ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ದಿನಾಂಕ 05:03:2021 ರೊಳಗಾಗಿ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ ಹೊರಡಿಸಿದೆ. www.ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಡಿಜಿಟಲ್ ಡೆಸ್ಕ್ : ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ರಾಹುಲ್ ಗಾಂಧಿ ಕೇರಳಕ್ಕೆ ತೆರಳಿದ್ದರು, ಈ ವೇಳೆ ಅವರು ಸಮುದ್ರಕ್ಕೆ ತೆರಳಿ ಮೀನುಗಾರರೊಂದಿಗೆ ಈಜಿದ್ದಾರೆ. ಈ ವೇಳೆ ಅವರ ಫಿಟ್ ನೆಟ್ ಫೋಟೋ ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ರಾಹುಲ್ ಗಾಂಧಿಗೆ ಫಿಟ್ ನೆಟ್ ಟಿಪ್ಸ್ ಕೇಳಿದ್ದಾರೆ.
ಚಮೋಲಿ : ಉತ್ತರಖಾಂಡದ ಚಮೋಲಿಯಲ್ಲಿ ಫೆಬ್ರವರಿ 7ರಂದು ಸಂಭವಿಸಿದಂತ ಹಿಮಸ್ಪೋಟಕ ಪ್ರಕರಣದಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ.
72 ನೇ ಶವವು ಶುಕ್ರವಾರ ಸಂಜೆ ತಡವಾಗಿ ಪತ್ತೆಯಾಗಿದ್ದು, ಮೃತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. ಹಿಮಪಾತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಶನಿವಾರ 21 ನೇ ದಿನವೂ ಮುಂದುವರೆದಿದೆ ಎಂದು ಚಮೋಲಿಯ ವಿಪತ್ತು ನಿರ್ವಹಣಾ ಅಧಿಕಾರಿ ಎನ್ ಕೆ ಜೋಶಿ ಶನಿವಾರ ಮಾಹಿತಿ ನೀಡಿದ್ದಾರೆ.
ಹಿಮಪಾತಕ್ಕೆ ಒಳಗಾದ ಪ್ರದೇಶಗಳಲ್ಲಿ ಇದುವರೆಗೆ 72 ಶವಗಳು ಪತ್ತೆಯಾಗಿದ್ದು, ಈ ಪೈಕಿ 41 ಜರನ್ನು ಗುರುತಿಸಲಾಗಿದೆ, ಇನ್ನೂ 131 ಜನರು ಕಾಣೆಯಾಗಿದ್ದಾರೆ ಎಂದು ಎನ್ ಕೆ ಜೋಶಿ ಶನಿವಾರ ಮಾಹಿತಿ ನೀಡಿದ್ದಾರೆ.
ಬೆಂಗಳೂರು : ನಾಳೆ ರಾಜ್ಯಾದ್ಯಂತ ಎಫ್ ಡಿ ಎ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಪರೀಕ್ಷಾ ಕೊಠಡಿ ತಲುಪವವರೆಗೂ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಹೌದು, ಪರೀಕ್ಷೆ ಅಕ್ರಮ ತಡೆಗಟ್ಟುವಲ್ಲಿ ಸಿಸಿಬಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ನಾಳೆ ಪ್ರಶ್ನೆ ಪತ್ರಿಕೆ ಮುದ್ರಣದಿಂದ ಜಿಲ್ಲಾವಾರು ಹಂಚಿಕೆ ಸೇರಿ, ಪ್ರಶ್ನೆ ಪತ್ರಿಕೆ ಕೊಠಡಿ ತಲುಪಪವರೆಗೂ ಬಿಗಿ ಭದ್ರತೆ ವಹಿಸಲಾಗುತ್ತದೆ , ನಾಳೆ ಬೆಳಗ್ಗೆ 10 ಗಂಟೆಯಿಂದ ಪರೀಕ್ಷೆ ನಡೆಯಲಿದೆ .
ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಜನವರಿ 24ರಂದು ನಿಗದಿಯಾಗಿದ್ದಂತ ಪ್ರಶ್ನೆ ಪತ್ರಿಕೆ ಸೋರಿಕೆ ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿಯು ನಾಳೆ ನಡೆಯಲಿರುವಂತ ಎಫ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಕೇಂದ್ರದಲ್ಲಿ ಮೊಬೈಲ್ ಜಾಮರ್ ಅಳವರಿಸಿರುವಂತ ಆಯೋಗವು, ಕಿವಿಯೋಲೆಗೂ ನಿಷೇಧ ಹೇರಿದೆ. ಇದರ ಜೊತೆಗೆ ಜನವರಿ 24ರ ಪ್ರವೇಶ ಪತ್ರ ರದ್ದುಪಡಿಸಲಾಗಿದೆ. ಪರೀಕ್ಷೆ ದಿನ ಫೆಬ್ರವರಿ 28 ಎಂದು ನಮೂದಿಸಿರುವ ಪ್ರವೇಶಪತ್ರ ಹೊಂದಿರುವವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದಾಗಿ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.
ಇನ್ನೂ ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಪೋನ್ ನಿಷೇಧಿಸಲಾಗಿದೆ. ಮೈಕ್ರೋಚಿಪ್, ಬ್ಲೂ ಟೂಥ್, ವೈಫೈ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ, ಲೋಹದ ವಸ್ತುವನ್ನು ಅಭ್ಯರ್ಥಿಗಳು ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದೆ.
ಸಿನಿಮಾ ಡೆಸ್ಕ್ : ಕಿಚ್ಚ ಸುದೀಪ್ ನಿರೂಪಣೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.
ಯೆಸ್, ನಟ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 8ನೇ ಆವೃತ್ತಿ ಆರಂಭಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ, ಯಾರೆಲ್ಲಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಇಲ್ಲಿದೆ ಬಿಗ್ ಬಾಸ್ ಮನೆಗೆ ಹೋಗುವವರ ಸಂಭಾವ್ಯ ಪಟ್ಟಿ.
ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ
ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ ಅಲಿಯಾಸ್ ನಟಿ ಗೀತಾ ಭಾರತಿ ಭಟ್,
ರಘು ಗೌಡ.
ಸ್ಯಾಂಡಲ್ ವುಡ್ ನಟ ಕಿರಣ್ ಶ್ರೀನಿವಾಸ್,
ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನೀಲ್ ರಾವ್,
ಲವ್ ಗುರು ರಾಜೇಶ್
ನಟಿ ಸಮೀಕ್ಷಾ
ಅಗ್ನಿ ಸಾಕ್ಷಿಯ ಸುಕೃತಾ
ಅಮೃತವರ್ಷಿಣಿಯ ರಜಿನಿ
ಹಾಸ್ಯ ನಟ ತಬಲಾ ನಾಣಿ
ಸರಿಗಮಪ ಖ್ಯಾತಿಯ ಹನುಮಂತ
ತರಂಗ ವಿಶ್ವ
ಸುದ್ದಿವಾಹಿನಿ ನಿರೂಪಕ ಅಮರ್ ಪ್ರಸಾದ್. ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಅನ್ನು ಶುರು ಮಾಡುತ್ತಿದ್ದು, ಬಿಗ್ ಬಾಸ್ ಪ್ರಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಬೆಳಗಾವಿ : ಅಕ್ರಮವಾಗಿ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಗೋಕಾಕ್ ತಾಲೂಕಿನ ಹುನಕುಪ್ಪ ಗ್ರಾಮದಲ್ಲಿ ನಡೆದಿದೆ.
ಬಂಧಿತರನ್ನು ಗೋಪಾಲ್, ಸೊರಗಾಂವಿ, ಸಿದ್ದಾಪುರ, ಭೀಮಪ್ಪ ಹೆಗಡೆ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 156 ಜಿಲೆಟಿನ್ ಕಡ್ಡಿ ಸೇರಿದಂತೆ ಹಲವು ಸ್ಪೋಟಕಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಕುಡಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ., ಈ ಆರೋಪಿಗಳು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಕಲ್ಲು ಸ್ಪೋಟ ನಡೆಸಲು ಜಿಲೆಟಿನ್ ಸಂಗ್ರಹಿಸಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ನವದೆಹಲಿ : ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಿರುವಂತ ಕೇಂದ್ರ ಸರ್ಕಾರ, ಈಗ ಎರಡನೇ ಹಂತದ ಕೊರೋನಾ ಲಸಿಕೆಯನ್ನು ಸಾರ್ವಜನಿಕರಿಗಾಗಿ ಮಾರ್ಚ್ 1ರಿಂದ ಆರಂಭಿಸುತ್ತಿದೆ. ಇಂತಹ ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯೋದಕ್ಕೆ ಪ್ರತಿ ಡೋಸ್ ಗೆ ರೂ.250 ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಕೇಂದ್ರ ಸರ್ಕಾರವು, ಸಿಜಿಎಚ್ ಎಸ್ ಮತ್ತು ಇತರೆ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಪಿಎಂಜೆಎವೈ ಅಡಿಯಲ್ಲಿ 10,000 ಖಾಸಗಿ ಆಸ್ಪತ್ರೆಗಳು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಜಿಎಚ್ ಎಸ್ ಮತ್ತು ಇತರ ಖಾಸಗಿ ಆಸ್ಪತ್ರೆಗಳ ಅಡಿಯಲ್ಲಿ 600ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು ಹಾಕಿವೆ ಎಂದು ತಿಳಿಸಿದೆ.
Private hospitals functioning as COVID-19 Vaccination Centres may recover a charge subject to a ceiling of Rs 250 per person per dose: Government of India
ಇನ್ನೂ ಮುಂದುವರೆದು, ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯೋದಕ್ಕೆ ಪ್ರತಿ ಡೋಸ್ ಗೆ ರೂ.250 ದರವನ್ನು ನಿಗದಿ ಪಡಿಸಿದೆ. ಈ ಮೂಲಕ ದೇಶದಲ್ಲಿ ಮಾರ್ಚ್ 1ರಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವಂತ ಕೊರೋನಾ ಪ್ರತಿ ಡೋಸ್ ಗೆ ರೂ.250 ದರವನ್ನು ನೀಡಬೇಕಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 523 ಜನರಿಗೆ ಕೊರೋನಾ ಸೋಂಕು ತಗುಲಿದ್ದು, . ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,50,730 ಕ್ಕೆ ಏರಿಕೆಯಾಗಿದೆ.
ಇಂದು ಆಸ್ಪತ್ರೆಯಿಂದ 380 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,32,747 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.ಸದ್ಯ, ರಾಜ್ಯದಲ್ಲಿ 5638 ಸಕ್ರಿಯ ಪ್ರಕರಣಗಳು ಇವೆ.
ಕಿಲ್ಲರ್ ಕೊರೊನಾ ಸೋಂಕಿಗೆ ಆರು ಜನ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,326 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 121 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲಿ ಇಂದು ಹೊಸದಾಗಿ 329 ಜನರಿಗೆ ಸೋಂಕು ತಗುಲಿದ್ದು, 243 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 3835 ಸಕ್ರಿಯ ಪ್ರಕರಣಗಳಿದೆ. ಇಂದು ಬೆಂಗಳೂರಿನಲ್ಲಿ 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ನವದೆಹಲಿ : ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಿರುವಂತ ಕೇಂದ್ರ ಸರ್ಕಾರ, ಈಗ ಎರಡನೇ ಹಂತದ ಕೊರೋನಾ ಲಸಿಕೆಯನ್ನು ಸಾರ್ವಜನಿಕರಿಗಾಗಿ ಮಾರ್ಚ್ 1ರಿಂದ ಆರಂಭಿಸುತ್ತಿದೆ. ಇಂತಹ ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯೋದಕ್ಕೆ ಪ್ರತಿ ಡೋಸ್ ಗೆ ರೂ.250 ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಕೇಂದ್ರ ಸರ್ಕಾರವು, ಸಿಜಿಎಚ್ ಎಸ್ ಮತ್ತು ಇತರೆ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಪಿಎಂಜೆಎವೈ ಅಡಿಯಲ್ಲಿ 10,000 ಖಾಸಗಿ ಆಸ್ಪತ್ರೆಗಳು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಜಿಎಚ್ ಎಸ್ ಮತ್ತು ಇತರ ಖಾಸಗಿ ಆಸ್ಪತ್ರೆಗಳ ಅಡಿಯಲ್ಲಿ 600ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು ಹಾಕಿವೆ ಎಂದು ತಿಳಿಸಿದೆ.
ಇನ್ನೂ ಮುಂದುವರೆದು, ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯೋದಕ್ಕೆ ಪ್ರತಿ ಡೋಸ್ ಗೆ ರೂ.250 ದರವನ್ನು ನಿಗದಿ ಪಡಿಸಿದೆ. ಈ ಮೂಲಕ ದೇಶದಲ್ಲಿ ಮಾರ್ಚ್ 1ರಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವಂತ ಕೊರೋನಾ ಪ್ರತಿ ಡೋಸ್ ಗೆ ರೂ.250 ದರವನ್ನು ನೀಡಬೇಕಾಗಿದೆ.
Private hospitals functioning as COVID-19 Vaccination Centres may recover a charge subject to a ceiling of Rs 250 per person per dose: Government of India
ನವದೆಹಲಿ : ಈಗಾಗಲೇ ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಿರುವಂತ ಕೇಂದ್ರ ಸರ್ಕಾರ, ಈಗ ಎರಡನೇ ಹಂತದ ಕೊರೋನಾ ಲಸಿಕೆಯನ್ನು ಸಾರ್ವಜನಿಕರಿಗಾಗಿ ಮಾರ್ಚ್ 1ರಿಂದ ಆರಂಭಿಸುತ್ತಿದೆ. ಇಂತಹ ಕೊರೋನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯೋದಕ್ಕೆ ರೂ.250 ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.
Private hospitals functioning as COVID-19 Vaccination Centres may recover a charge subject to a ceiling of Rs 250 per person per dose: Government of India
ಸಿನಿಮಾ ಡೆಸ್ಕ್ : ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 8ನೇ ಆವೃತ್ತಿ ಆರಂಭಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ, ಯಾರೆಲ್ಲಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಟಿ ರಾಗಿಣಿ ಇರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆ ಆಗಿರುವ ನಟಿ ರಾಗಿಣಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಇನ್ನೂ,. ಈ ಗಾಳಿ ಸುದ್ದಿ ಬಗ್ಗೆ ನಟಿ ರಾಗಿಣಿ ಸ್ಪಷ್ಟನೆ ನೀಡಿದ್ದು, ಸದ್ಯ ನಾನು ನನ್ನ ಸಿನಿಮಾ ಕಂಪ್ಲೀಟ್ ಮಾಡಬೇಕಿದೆ, ನನಗೆ ಅಂತ ಸ್ವಲ್ಪ ಸಮಯ ಬೇಕು, ನಾನು ಬಿಗ್ ಬಾಸ್ ತಂಡದೊಂದಿಗೆ ಸ್ವಲ್ಪ ಕ್ಲೋಸ್ ಆಗಿದ್ದೇನೆ, ಇಂತಹ ಪ್ರಶ್ನೆಗೆ ನಾನು ಉತ್ತರಿಸದೇ ಇರೋದು ಸರಿ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತನಾಡಿದರು.
ಇದರ ಜೊತೆಗೆ, ಹಾಗೆ ಸುಮ್ಮನೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ಕಿರಣ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕಿರಣ್ ಈ ಬಾರಿಯ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದ್ದು, ಯಾವುದಕ್ಕೂ ಕಾದು ನೋಡಬೇಕು.
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 523 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 6 ಜನರು ಚಿಕಿತ್ಸೆ ಫಲಕಾರಿಯಾಗಲೇ ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 523 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 9,50,730ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 380 ಜನರು ಸೇರಿದಂತೆ ಇದುವರೆಗೆ 9,32,747 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 5,638 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಇನ್ನೂ ಬೆಂಗಳೂರು ನಗರದಲ್ಲಿ 329 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 4,05,325ಕ್ಕೆ ಏರಿಕೆಯಾದ್ರೇ, ಇಂದು 243 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ನಗರದಲ್ಲಿ 3,835 ಸಕ್ರೀಯ ಸೋಂಕಿತರಿದ್ದಾರೆ.
ಇಂದು ಕೊರೋನಾ ಸೋಂಕಿತರಾದಂತ ಬೆಂಗಳೂರು ನಗರದಲ್ಲಿ ಐವರು ಹಾಗೂ ಧಾರವಾಡದಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 12,326ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗ : ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದಂತ ಎಂ.ಜಯ್ಯಣ್ಣ ಅವರ ನಿಧನದಿಂದಾಗಿ ತೆರವಾಗಿದ್ದಂತ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಯ ಸಭೆ ನಡೆಯಿತು. ಇಂತಹ ಸಮಿತಿಯ ಸಭೆಯಲ್ಲಿ ಸಮಿತಿ ಪ್ರಧಾನ ಸಂಚಾಲಕರಾದಂತ ಡಾ.ಬಂಜಗೆರೆ ಜಯಪ್ರಕಾಶ್ ಅವರು ಅಧ್ಯಕ್ಷರನ್ನಾಗಿ ಪಿ.ಕೋದಂಡರಾಮಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಇನ್ನೂ ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಬಿ.ಎ.ಲಿಂಗಾರೆಡ್ಡಿಯನ್ನು ಆಯ್ಕೆ ಮಾಡಲಾಗಿದೆ. ಇಂತಹ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಫೆ.28ರ ನಾಳೆ ಮಧ್ಯಾಹ್ನ 12.30ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.
ಮಂಡ್ಯ : ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಹಿನ್ನೀರಿಗೆ ಬಂದು ಸಖತ್ ಮೋಜು, ಮಸ್ತಿ, ಪಾರ್ಟಿ ಮಾಡಿರುವ ಘಟನೆ, ಈಗ ಬೆಳಕಿಗೆ ಬಂದಿದೆ. ಇಂತಹ ಘಟನೆಯಿಂದಾಗಿ ಸಾರ್ವಜನಿಕರು ನಮಗಿಲ್ಲದ ಅವಕಾಶ ಅವರಿಗ್ಯಾಕೆ ಎಂಬುದಾಗಿ ಕಿಡಿಕಾರಿದ್ದಾರೆ.
ಕೆಎಆರ್ ಎಸ್ ಡ್ಯಾಂ ನ ಹಿನ್ನೀರಿನಲ್ಲೇ ಶಾಮಿಯಾನ ಹಾಕಿ, ಭರ್ಜರಿ ಭೋಜನ ಕೂಟ, ಸೇರಿದಂತೆ ಅನೇಕ ಮೋಜು ಮಸ್ತಿಯನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಮಾಡಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಡ್ಯಾಂ ಹಿನ್ನೀರಿನ ಪ್ರದೇಶ ನಿರ್ಬಂಧಿತ ಪ್ರದೇಶವಾಗಿದೆ. ನಡೆದಾಡಕ್ಕೂ ಅವಕಾಶವಿಲ್ಲ. ಇಂತದ್ದರಲ್ಲಿ ಅಲ್ಲಿಯೇ ಶಾಮಿಯಾನ ಹಾಕಿ, ಭೋಜನಕೂಟ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಹಿಂದೆ ಇಲ್ಲಿ ಪಾರ್ಟಿ ಮಾಡಿದ್ದಕ್ಕೆ ಆಯೋಜಕರು, ಭಾಗವಹಿಸಿದ್ದವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಈಗ ಪೊಲೀಸರೇ ಮಾಡಿದ್ದಾರೆ. ಅವರವಿರುದ್ಧವೂ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಚಾಮರಾಜನಗರ : ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಸ್ವಪಕ್ಷದವರೇ ಬೇರೆ ಪಕ್ಷದವರಿಗೆ ಬಿಟ್ಟುಕೊಡುವಂತಾಯ್ತು. ಇದಕ್ಕೆ ಮೇಯರ್ ಚುನಾವಣೆಯಲ್ಲಿ ಒಬ್ಬ ನಾಯಕರಿಗೆ ಹಿನ್ನಡೆ ಉಂಟು ಮಾಡಬೇಕೆಂದು ಎಂಬುದಾಗಿ ಡಿಕೆ ಶಿವಕುಮಾರ್ ವಿರುದ್ಧ ಪ್ರಾಸಂಗಿಕವಾಗಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷವನ್ನು ಹಿಂದೂ ಧರ್ಮ ವಿರೋಧಿ ಎನ್ನಲಾಗುತ್ತಿದೆ. ರಾಜಕಾರಣವೇ ಹಿಂದುತ್ವವೇ ಬೇರೆ. ಕಾಂಗ್ರೆಸ್ ಹಿಂದುತ್ವದ ವಿರೋಧಿಯೇ ಹೊರತು, ಹಿಂದು ಧರ್ಮದ ವಿರೋಧಿಯಲ್ಲ ಎಂದರು.
ಮುಂದುವರೆದು ಮಾತನಾಡಿದಂತ ಅವರು, ಮೇಯರ್ ಚುನಾವಣೆಯಲ್ಲಿ ಒಬ್ಬ ನಾಯಕರಿಗೆ ಹಿನ್ನಡೆ ಉಂಟು ಮಾಡಬೇಕೆಂದು ಸ್ವಪಕ್ಷದವರೇ ಮೇಯರ್ ಸ್ಥಾನವನ್ನು ಬೇರೆ ಪಕ್ಷಕ್ಕೆ ಬಿಟ್ಟುಕೊಟ್ಟರು ಎಂಬುದಾಗಿ ಹೇಳುವ ಮೂಲಕ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹಾಸನ : ಜಿಲ್ಲೆ ಅರಸಿಕೆರೆಯಲ್ಲಿ 4 ರಿಂದ 5 ಕಸಾಯಿಖಾನೆಗಳು ಅನಧಿಕೃತವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇವುಗಳ ವಿರುದ್ದ ಕ್ರಮಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಸಿಕೆರೆ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸಂಗ್ರಹ ಮಾಡಿದ ಸುಮಾರು 1 ಟನ್ ಗೋಮಾಂಸವನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ ಅಲ್ಲದೇ ಅನಧಿಕೃತವಾಗಿ ಮೂಳೆಗಳ ಸಂಗ್ರಹಣೆ ಮಾಡಿರುವುದು ತಿಳಿದು ಬಂದಿದೆ.
ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹಾಸನ ಜಿಲ್ಲೆಗೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ಗೋಪಾಲಕರು ಈ ವಿಷಯವನ್ನು ಗಮನಕ್ಕೆ ತಂದಿದ್ದರು.
ಗೌಗ್ಯಾನ ಫೌಂಡೇಷನ್ ಸ್ವಯಂ ಸೇವಕರ ಸಹಾಯದಿಂದ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಗೋಮಾಂಸ ಮತ್ತು ಮೂಳೆಗಳನ್ನು ವಷಪಡಿಸಿಕೊಂಡಿದ್ದಾರೆ.
ಬಾಗಲಕೋಟೆ : ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲೂ ನಿರ್ಧರಿಸಿದ್ದರು. ಆದ್ರೇ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು. ಹೀಗಿದ್ದೂ ವಿರೋಧದ ನಡುವೆಯೂ ಮದುವೆಯಾಗಿದ್ದಂತ ಯುವ ಜೋಡಿಗಳಿಗೆ ಮತ್ತೆ ಪೋಷಕರೇ ನೆಮ್ಮದಿಯಾಗಿ ಜೀವನ ಮಾಡೋದಕ್ಕೆ ಅಡ್ಡಿಯಾಗಿದ್ದರು. ಇದರಿಂದಾಗಿ ಯುವ ಜೋಡಿಗಳಿಬ್ಬರು ರಕ್ಷಣೆ ನೀಡುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ರಕ್ಷಣೆಗಾಗಿ ಆಗಮಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆಯ ನವನಗರದ ನಿವಾಸಿಗಳಾದಂತ ನವೀನ್ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು ಅಕ್ಕಪಕ್ಕದಲ್ಲೇ ಮನೆಯಿದ್ದರಿಂದ ಪರಿಚಿತರಾಗಿದ್ದರು. ಪರಿಚಯ ಪ್ರೇಮಕ್ಕೂ ತಿರುಗಿತ್ತು. ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಂತ ಇಬ್ಬರ ಪ್ರೇಮಕ್ಕೆ ಕುಟುಂಬದ ಪೋಷಕರು ಅಡ್ಡಿಯಾಗಿದ್ದರು.
ಇಬ್ಬರು ಪ್ರೀತಿಸಲು ಶುರು ಮಾಡಿದಾಗ ಯುವತಿ ಮಹಜಬಿನ್ ಗೆ 12 ವರ್ಷವಾಗಿತ್ತು. ಈಗ 19 ವರ್ಷವಾಗಿರುವ ಕಾರಣ ನವೀನ್ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆ.16ರಂದು ಮದುವೆಯಾಗಿದ್ದರು. ಇದಕ್ಕೆ ಯುವತಿಯ ಸಹೋದರ ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೇ, ಜೀವ ಬೆದರಿಕೆ ಕೂಡ ಹಾಕಿದ್ದಾರೆ.
ಹೀಗಾಗಿ ಬಾಗಲಕೋಟೆಯ ಎಸ್ ಪಿ ಕಚೇರಿಗೆ ಆಗಮಿಸಿದಂತ ನವೀನ್ ಭಜಂತ್ರಿ ಹಾಗೂ ಮಹಜಬಿನ್ ರಕ್ಷಣೆಗಾಗಿ ಕೋರಿಕೊಂಡರು. ಈ ಸಂದರ್ಭದಲ್ಲೇ ಯುವತಿಯ ಸಹೋದರ ಎಸ್ ಪಿ ಕಚೇರಿಯಲ್ಲೇ ಯುಕನಿಗೆ ಕಪಾಳ ಮೋಕ್ಷ ಮಾಡಿದ್ರೇ, ಯುವತಿಯ ತಂದೆ ಎಸ್ ಪಿ ಕಾಲಿಗೆ ಬಿದ್ದು, ಮಗಳನ್ನು ಕಳುಹಿಸಿಕೊಡುವಂತೆ ದುಂಬಾಲು ಬಿದ್ದಂತ ಘಟನೆಯೂ ನಡೆದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದಂತ ಎಸ್ ಪಿ ಲೋಕೇಶ್ ಜಗಲಾಸರ್, ಇಬ್ಬರು ವಯಸ್ಕರಾಗಿದ್ದು, ಮದುವೆಯಾಗಿದ್ದಾರೆ. ಅವರ ಜೀವನ ನಿರ್ಧಾರ ಅವರಿಗೆ ಬಿಟ್ಟದ್ದು. ರಕ್ಷಣೆಕೋರಿ ನಮ್ಮ ಬಳಿ ಬಂದಿರುವ ಕಾರಣ, ರಕ್ಷಣೆಗಾಗಿ ನವನಗರ ಠಾಣೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೋಷಕರು ನೊಂದಿರುವ ಕಾರಣ, ಎರಡುಕಡೆಯವರನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.
ಬಾಗಲಕೋಟೆ : ಬಾದಾಮಿಯ ಐತಿಹಾಸಿಕ ಕ್ಷೇತ್ರದ ಅಗಸ್ತ್ಯತೀರ್ಥ ಹೊಂಡದ ಮೇಲಿರುವ 96 ಮನೆಗಳ ಸ್ಥಳಾಂತರಕ್ಕೆ 6.16 ಕೋಟಿ ರೂ.ಗಳ ಯೋಜನಾ ವರದಿಗೆ ಭಾರತೀಯ ಪುರಾತತ್ವ ಇಲಾಖೆಯು ಒಪ್ಪಿಗೆ ನೀಡಿದ್ದು, ಪುರರ್ವಸತಿ ಕಾರ್ಯ ಶಿಘ್ರದಲ್ಲಿ ನಡೆಯಲಿದೆ ಎಂದು ಯೋಜನೆಯ ನೋಡಲ್ ಅಧಿಕಾರಿಯೂ ಆಗಿರುವ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ ಹೇಳಿದರು.
ನವನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಹೊಂಡದ ಮೇಲೆ 96 ಮನೆಗಳು ಇರುವದರಿಂದ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಕೈಗೊಳ್ಳಲು ಸಾದ್ಯವಾಗುತ್ತಿರಲಿಲ್ಲ. ಕಳೆದ 40 ವರ್ಷಗಳಿಂದ ಮನೆಗಳ ಸ್ಥಳಾಂತರ ಕಾರ್ಯ ಕೈಗೊಂಡರೂ ಸಹ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
ಭಾರತೀಯ ಪುರಾತತ್ವ ಇಲಾಖೆಯು 2003 ರಲ್ಲಿ ಸ್ಥಳಾಂತರಕ್ಕೆ ಎರಡು ಮುಕ್ಕಾಲು ಕೋಟಿ ರೂ.ಗಳ ಡಿಪಾಜಿಟ್ ಮಾಡಿ ಹಲವಾರು ಪ್ರಯತ್ನಗಳು ನಡೆಸಿದರು. ಹೆಚ್ಚಿನ ಪರಿಹಾರಕ್ಕಾಗಿ ಯುಕೆಪಿ ಮಾದರಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಸಿದ ಹಿನ್ನಲೆಯಲ್ಲಿ ಅಡಚಣೆಯಾಗಿತ್ತು. ನಂತರ 36 ಕೋಟಿ ರೂ.ಗಳಿಗೆ ಯೋಜನೆ ರೂಪಿಸಲಾಯಿತ್ತು. ಆದರೆ ಕಳೆದ 6 ತಿಂಗಳಿನಿಂದ ಜಿಲ್ಲಾಧಿಕಾರಿಗಳು ಈ ಯೋಜನೆಗೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದಾಗ ಇದರ ಬಗ್ಗೆ ಅಧ್ಯಯನ ಮಾಡಿದಾಗ ಹೊಂಡದ ಮೇಲಿರುವ ಜಾಗ ಸರಕಾರಕ್ಕೆ ಸೇರಿರುವ ಬಗ್ಗೆ ತಿಳಿದು ಬಂದಿತು ಎಂದರು.
ಪುನಃ 96 ಮನೆಗಳ ಸ್ಥಳಾಂತರಕ್ಕೆ 6.16 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಅನುಮತಿಗಾಗಿ ಕಳುಹಿಸಲಾಗಿದ್ದು, ಈ ಯೋಜನೆಗೆ ಭಾರತೀಯ ಪುರಾತತ್ವ ಇಲಾಖೆಯು ಒಪ್ಪಿಗೆ ಸೂಚಿಸಿದೆ. ಮನೆಗಳ ಸ್ಥಳಾಂತರಕ್ಕೆ ಬಾದಾಮಿಯ ಚಾಲುಕ್ಯ ನಗರದಲ್ಲಿರುವ 3 ಎಕರೆ ಜಮೀನನ್ನು ಎಕರೆಗೆ 50 ಲಕ್ಷದಂತೆ ಒಟ್ಟು 1.50 ಕೋಟಿ ರೂ.ಗಳಲ್ಲಿ ಖರೀದಿಸಲಾಗುತ್ತಿದ್ದು, ಈ ಜಮೀನಿನಲ್ಲಿ ಲೇಔಟ್ ಮಾಡಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಅಂಗನವಾಡಿ, ಶಾಲೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿಯಾಗುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದೆ ಎಂದರು.
ಈಗಾಗಲೇ ಅಗಸ್ತ್ಯತೀರ್ಥದ ಮೇಲಿರುವ 96 ಮನೆಗಳಿಗೆ ಅಭಿವೃದ್ದಿ ಪಡಿಸಲಾಗುತ್ತಿರುವ ಲೇಔಟ್ನಲ್ಲಿ 30*30 ಅಳತೆಯ ಪ್ಲಾಟ್ಗಳನ್ನು ನೀಡಲಾಗುತ್ತಿದೆ. ಮನೆಗಳಿಗೆ ಎರಡು ಪಟ್ಟು ಪರಿಹಾರ ನೀಡಲಾಗುತ್ತಿದೆ. ಮನೆಗಳ ಮೌಲ್ಯಮಾಪನ ಮಾಡಿಲಾಗಿದ್ದು, ಕಡಿಮೆ ಎಂದರೆ 3.50 ಲಕ್ಷದಿಂದ ಹಿಡಿದು ಗರಿಷ್ಠ 22 ಲಕ್ಷಗಳ ವರೆಗೆ ಪರಿಹಾರ ಪಡೆಯಲಿದ್ದಾರೆ. ಕಳೆದ 1964 ರಿಂದ ಮಾಹತಿ ತೆಗೆಯಲಾಗಿ ಆ ಜಾಗ ಸರಕಾರಿ ಜಾಗವಾಗಿರುವದರಿಂದ 15 ದಿನಗಳಲ್ಲಿ ಮನೆಗಳು ಸ್ಥಳಾಂತರಗೊಳ್ಳಲಿದ್ದು, ಪುರರ್ವಸತಿ ಕಾರ್ಯ ಶೀಘ್ರದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದರು.
ಬೆಳಗಾವಿ : ಗೃಹಸಚಿವರು ಹಾಗೂ ಗಣಿ ಸಚಿವರ ಖಡಕ್ ಸೂಚನೆಯ ಮೇರೆಗೆ ರಾಜ್ಯದಲ್ಲಿ ಜಿಲಿಟಿನ್ ಅಕ್ರಮ ಸಂಗ್ರಹಣೆಯ ವಿರುದ್ಧ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಳಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಂತ 158 ಜಿಲಿಟಿನ್ ಕಡ್ಡಿಯನ್ನು ಜಪ್ತಿ ಮಾಡಿರುವಂತ ಪೊಲೀಸರು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಅಕ್ರಮವಾಗಿ ಜಿಲಿಟಿನ್ ಕಡ್ಡಿಗಳನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದಂತ 158 ಜಿಲಿಟಿನ್ ಕಡ್ಡಿ, 51 ಇಡಿ ಕೇಬಲ್ ಹಾಗೂ ಬ್ಲಾಸ್ಟರ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಗೋಪಾಲ, ಗಿರಿಮಲ್ಲಪ್ಪ, ರಾಜೇಶ್ ಬಡಿಗೇರ, ಭೀಮಪ್ಪ ಹೆಗಡೆ ಎಂಬುವರನ್ನು ಬಂಧಿಸಲಾಗಿದೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು : ತಮಿಳುನಾಡು ಸರ್ಕಾರ ಪದೇ ಪದೇ ಮಹದಾಯಿ, ಮೇಕೆದಾಟು ಯೋಜನೆಗಳ ಮೂಲಕ ನದಿ ತಿರುವು ಯೋಜನೆಯಲ್ಲಿ ಕಿರಿಕ್ ಮಾಡುತ್ತಿದೆ. ಇಂತಹ ನದಿ ತಿರುವು ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮಾರ್ಚ್ 27ರಂದು ಮಹದಾಯಿ, ಮೇಕೆದಾಟು ಯೋಜನೆಗೋಸ್ಕರ ಬಂದ್ ಕರೆ ನೀಡುವ ಜೊತೆಗೆ, ತೈಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಮಾರ್ಚ್ 5ರೊಳಗೆ ಕಾವೇರಿ ಯೋಜನೆ ಕೈಬಿಡಲು ಗಡುವು ಇದ್ದು, ರಾಜ್ಯ ಸಂಸದರು ಚಕಾರವೆತ್ತುತ್ತಿಲ್ಲ. ಹೀಗಾಗಿ ಮಾರ್ಚ್ 6ರಂದು ಸಂಸದರನ್ನು ಹರಾಜು ಹಾಕುತ್ತೇವೆ. ಮಾರ್ಚ್ 13ರಂದು ಕನ್ನಂಬಾಡಿ ಚಲೋ, ಮಾರ್ಚ್.20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ತಮಿಳುನಾಡು ಸರ್ಕಾರ ನದಿ ತಿರುವು ಯೋಜನೆ ಕೈಬಿಡದೇ ಇದ್ದರೇ ಮಾರ್ಚ್ 27ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಕೇವಲ ನದಿ ನೀರು ಯೋಜನೆ ಕೈಬಿಡುವಂತೆ ಅಷ್ಟೇ ಕರ್ನಾಟಕ ಬಂದ್ ನಡೆಸೋದಿಲ್ಲ. ಇದರೊಂದಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಏರಿಕೆ ಖಂಡಿಸಿಯೂ ಪ್ರತಿಭಟನೆ ನಡೆಸಲಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ಗ್ರಾನೈಟ್ ಲೂಟಿ ವಿರುದ್ಧವೂ ಧರಣಿ ನಡೆಸಲಾಗುವುದು ಎಂಬುದಾಗಿ ಹೇಳಿದರು.
ಚಿಕ್ಕಮಗಳೂರು : ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಮನೆಗೆ ಮುಸುಕುಧಾರಿಗಳಿಬ್ಬರು ನುಗ್ಗಿ, ಸುಲಿಗೆ ಯತ್ನಿಸಿ, ಪರಾರಿಯಾಗಲು ಯತ್ನಿಸಿದಂತ ವೇಳೆಯಲ್ಲಿ, ಜನರೇ ಕಲ್ಲುಹೊಡೆದು, ದರೋಡೆಕೋರರನ್ನು ಹಿಡಿದಿರುವಂತ ಘಟನೆ ಚಿಕ್ಕಮಗಳೂರಿನ ಎಐಟಿ ಸರ್ಕಲ್ ನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಜ್ಯೋತಿನಗರದ ಮನೆಗೆ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದಿದ್ದಂತ ಇಬ್ಬರು ನುಗ್ಗಿದ್ದಾರೆ. ಮನೆಯಲ್ಲಿದ್ದಂತ ಮಹಿಳೆಯನ್ನು ಕಟ್ಟಿಹಾಕಿ, ಒಡವೆ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಚಂದ್ರೇಗೌಡ ಅವರ ಪುತ್ರಿ ಮನೆಗೆ ಬಂದು ಬಾಗಿಲು ಬೆಲ್ ಒತ್ತಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದಿದ್ದಾಗ, ಕಿಟಕಿಯ ಮೂಲಕ ಒಳಗೆ ನೋಡಿದ್ದಾರೆ.
ಮನೆಯ ಒಳಗಡೆ ದುಷ್ಕರ್ಮಿಗಳು ಮನೆಯವರನ್ನು ಕಟ್ಟಿಹಾಕಿದ್ದನ್ನು ಗಮನಿಸಿದಂತ ಅವರು, ಹೊರಗೆ ಬಂದು ಸಹಾಯಕ್ಕಾಗಿ ಕೋರಿಕೊಂಡಿದ್ದಾರೆ. ಇದರಿಂದಾಗಿ ಚಾಕು ಹಿಡಿದು ಮುಸುಕುಧಾರಿಗಳು ಹೊರ ಓಡಿ ಬಂದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇಂತಹ ಇಬ್ಬರ ಮೇಲೆ ಕಲ್ಲು ತೂರಾಟ ನಡೆಸಿ, ಅಡ್ಡಗಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು : ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಜನವರಿ 24ರಂದು ನಿಗದಿಯಾಗಿದ್ದಂತ ಪ್ರಶ್ನೆ ಪತ್ರಿಕೆ ಸೋರಿಕೆ ಪ ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿಯು ನಾಳೆ ನಡೆಯಲಿರುವಂತ ಎಫ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಕೇಂದ್ರದಲ್ಲಿ ಮೊಬೈಲ್ ಜಾಮರ್ ಅಳವರಿಸಿರುವಂತ ಆಯೋಗವು, ಕಿವಿಯೋಲೆಗೂ ನಿಷೇಧ ಹೇರಿದೆ. ಇದರ ಜೊತೆಗೆ ಜನವರಿ 24ರ ಪ್ರವೇಶ ಪತ್ರ ರದ್ದುಪಡಿಸಲಾಗಿದೆ. ಪರೀಕ್ಷೆ ದಿನ ಫೆಬ್ರವರಿ 28 ಎಂದು ನಮೂದಿಸಿರುವ ಪ್ರವೇಶಪತ್ರ ಹೊಂದಿರುವವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದಾಗಿ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.
ಎಫ್ ಡಿ ಎ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡಿರುವಂ ಕರ್ನಾಟಕ ಲೋಕಸೇವಾ ಆಯೋಗವು, ನಾಳೆ ನಡೆಯುತ್ತಿರುವಂತ ಸ್ಪರ್ಧಾತ್ಮಕ ಪರೀಕ್ಷೆಗೆ ಯುಪಿಎಸ್ಸಿ ಮಾದರಿಯಲ್ಲೇ ಕೆಪಿಎಸ್ಸಿ ಪರೀಕ್ಷೆ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ನಾಳೆ ನಡೆಯುತ್ತಿರುವ ಎಫ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆಯ 433 ಕೇಂದ್ರಗಳನ್ನು ಸೂಕ್ಷ್ಮವೆಂದು ಗುರುತಿಸಿ, ಆ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಮೊಬೈಲ್ ಜಾಮರ್ ಅಳವಡಿಸಿದೆ.
ಇನ್ನೂ ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಪೋನ್ ನಿಷೇಧಿಸಲಾಗಿದೆ. ಮೈಕ್ರೋಚಿಪ್, ಬ್ಲೂ ಟೂಥ್, ವೈಫೈ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ, ಲೋಹದ ವಸ್ತುವನ್ನು ಅಭ್ಯರ್ಥಿಗಳು ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದೆ. ಇದರ ಜೊತೆಗೆ ಹೆಣ್ಣುಮಕ್ಕಳು ಕಿವಿಯೋಲೆ ಧರಿಸಿದ್ದರೇ, ಅದಕ್ಕೂ ಬಿಚ್ಚಿ ಹೊರಗಿಟ್ಟು ಪರೀಕ್ಷೆ ಬರೆಯಬೇಕು. ಈ ಬಗ್ಗೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಪ್ರವೇಶಿಸುವಂತ ವೇಳೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ಇನ್ನೂ ಜನವರಿ 24ರ ಪ್ರವೇಶಪತ್ರ ರದ್ದುಪಡಿಸಲಾಗಿದೆ. ಪರೀಕ್ಷೆ ದಿನ ಫೆಬ್ರವರಿ 28 ಎಂದು ನಮೂದಿಸಿರುವ ಪ್ರವೇಶಪತ್ರ ಹೊಂದಿದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದಾಗಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.
ಕೆಎನ್ಎನ್ ಡೆಸ್ಕ್ : ಬೆಲ್ಲವು ನಮ್ಮ ದೇಹವನ್ನು ಶುದ್ಧೀಕರಿಸುವ, ಜೀರ್ಣಕ್ರಿಯೆಗೆ ಸಹಾಯ ಮಾಡುವ ಮತ್ತು ಉತ್ತಮ ಪ್ರಮಾಣದ ಖನಿಜಗಳನ್ನು ಒದಗಿಸುವ ಸಾಮರ್ಥ್ಯ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಲ್ಲವನ್ನು ನಿಮ್ಮ ನಿತ್ಯದ ಅಗತ್ಯಗಳಿಗೆ ಸಿಹಿಯಾಗಿ ಸ್ವೀಕರಿಸಲು ಬಯಸುವ ಕೆಲವು ಆರೋಗ್ಯ ಲಾಭಗಳು ಇಲ್ಲಿವೆ.
ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ. ಇದು ನಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆದ್ದರಿಂದಲೇ ಅನೇಕರು ಊಟದ ನಂತರ ಬೆಲ್ಲ ವನ್ನು ತಿನ್ನುವುದನ್ನು ಇಷ್ಟಪಡುತ್ತಾರೆ.
ಇದು ಡಿಟಾಕ್ಸ್ ನಂತೆ ಕೆಲಸ ಮಾಡುತ್ತದೆ, ಏಕೆಂದರೆ ಇದು ದೇಹದಿಂದ ವಿಷಕಾರಿ ವಿಷಕಾರಿ ಗಳನ್ನು ಹೊರಹಾಕುವ ಮೂಲಕ ಯಕೃತ್ಅನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಾದ ಸತು ಮತ್ತು ಸೆಲೆನಿಯಂ ಗಳು ತುಂಬಿಕೊಂಡಿದ್ದು, ಇದು ಫ್ರೀ-ರಾಡಿಕಲ್ (ಆರಂಭಿಕ ವಯಸ್ಸನ್ನು ನಿಯಂತ್ರಿಸುವುದು) ಸಹಾಯ ಮಾಡುತ್ತದೆ. ಇದು ಸೋಂಕುಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಬಲಗೊಳಿಸುತ್ತದೆ.
ಪ್ರತಿದಿನ ಒಂದು ತುಂಡು ಬೆಲ್ಲವನ್ನು ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ ಪಿಎಂಎಸ್ ಲಕ್ಷಣಗಳನ್ನು ಎದುರಿಸಲು ನೆರವಾಗುತ್ತದೆ, ಇದು ಮೂಡ್ ಸ್ವಿಂಗ್, ಮುಟ್ಟಿನ ಸೆಳೆತ ಮತ್ತು ಹೊಟ್ಟೆ ನೋವು ಸೇರಿದಂತೆ ಪಿಎಮ್ ಎಸ್ ಲಕ್ಷಣಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಬೆಲ್ಲವು ನೈಸರ್ಗಿಕ ಸಿಹಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೀರ್ಘ ಸಮಯದವರೆಗೆ ಶಕ್ತಿಯನ್ನು ಒದಗಿಸುತ್ತದೆ. ಆದರೆ, ಬೆಲ್ಲವನ್ನು ಮಿತವಾಗಿ ಸೇವಿಸಬೇಕು ಎಂದು ಸಲಹೆ ಮಾಡಲಾಗಿದೆ, ಏಕೆಂದರೆ ಇದು 4 ಕೆ.ಕ್ಯಾಲರಿ/ಗ್ರಾಂ ಗಿಂತ ಸ್ವಲ್ಪ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಮಧುಮೇಹಿ ಅಥವಾ ತೂಕ ಇಳಿಸುವ ಆಹಾರ ಕ್ರಮವನ್ನು ಅನುಸರಿಸುವವರು ಬೆಲ್ಲ ಸೇವನೆಯ ಮೇಲೆ ನಿಗಾ ಇಡಬೇಕು, ಏಕೆಂದರೆ ಇದು ತೂಕ ಹೆಚ್ಚಳ ಮತ್ತು ರಕ್ತದಲ್ಲಿನ ಸಕ್ಕರೆ ಯ ಮಟ್ಟದಲ್ಲಿ ಏರುಪೇರಿಗೆ ಕಾರಣವಾಗಬಹುದು.
ಹೊಸಪೇಟೆ : ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲೇ ಹಾಡುಹಗಲೇ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ ಅವರನ್ನು ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಇಂದು ಹೊಸಪೇಟೆ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ತಾರಿಹಳ್ಳಿಯವರು ಕುರ್ಚಿಯ ಮೇಲೆ ಕುಳಿತುಕೊಂಡು ನೋಟರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಗಮಿಸಿದಂತ ತಾರಿಹಳ್ಳಿಯವರ ಸಂಬಂಧಿ ಮನೋಜ್ ಎಂಬಾತ, ವೆಂಕಟೇಶ್ ತಾರಿಹಳ್ಳಿಗೆ ಕೌಟುಂಬಿಕ ಕಲಹದಿಂದಾಗಿ ರೊಚ್ಚಿಗೆದ್ದು ಕುತ್ತಿಗೆಯ ಭಾಗಕ್ಕೆ ಏಕಾಏಕಿ ಮಚ್ಚಿನಿಂದ ಹೊಡೆದು ಹತ್ಯೆಗೈದಿದ್ದಾನೆ.
ಕೌಟುಂಬಿಕ ಕಲಹದಿಂದ ನ್ಯಾಯಾಲಯದ ಆವರಣದಲ್ಲೇ ವಕೀಲ ವೆಂಕಟೇಶ್ ಮೇಲೆ ಸಂಬಂಧಿ ಮನೋಜ್ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದಾಗಿ, ಸ್ಥಳದಲ್ಲೇ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಕಂಡಂತ ನ್ಯಾಯಾಲಯದ ಆವರಣದಲ್ಲಿದ್ದಂತ ಜನರು ಆತಂಕಗೊಂಡರು. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಆರೋಪಿ ಮನೋಜ್ ನನ್ನು ಬಂಧಿಸಿ, ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯಲ್ಲಿ ಭಾರತದ ಮೊದಲ ಆಟಿಕೆ ಮೇಳವನ್ನು ಉದ್ಘಾಟಿಸಿದರು. ಭಾರತವು ಆಟಿಕೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕು ಮತ್ತು ಜಾಗತಿಕ ಪ್ರೇಕ್ಷಕರಿಗೆ ಸೇವೆ ಯನ್ನು ಒದಗಿಸುವ ಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡುವಂತೆ ಆಟಿಕೆ ತಯಾರಕರಿಗೆ ಮನವಿ ಮಾಡಿದ ಪ್ರಧಾನಿ, ಪರಿಸರ ಸ್ನೇಹಿ ವಸ್ತುಗಳ ಬಳಕೆ ಯನ್ನು ಹೆಚ್ಚಿಸಿ, ಹೊಸತನಕ್ಕೆ ಒತ್ತು ನೀಡುವಂತೆ ರಾಷ್ಟ್ರೀಯ ಕಂಪೆನಿಗಳಿಗೆ ಮನವಿ ಮಾಡಿದ್ದಾರೆ.
100 ಶತಕೋಟಿ ಅಮೆರಿಕನ್ ಡಾಲರ್ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಬಹಳ ಕಡಿಮೆ ಎಂದು ಹೇಳಿದ ಮೋದಿ, ಭಾರತದ ಮಾರುಕಟ್ಟೆಯಲ್ಲಿ ಚೀನಾದ ಆಟಿಕೆಗಳ ಪ್ರಾಬಲ್ಯಕ್ಕೆ ಸವಾಲೊಡ್ಡುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಮುಂದಾಗಿದೆ ಎಂದು ಹೇಳಿದರು.
ದೇಶದಲ್ಲಿ ಮಾರಾಟವಾಗುವ ಆಟಿಕೆಗಳಲ್ಲಿ ಶೇ.85ರಷ್ಟು ಆಮದು ಮಾಡಿಕೊಳ್ಳುತ್ತೇವೆ ಹೀಗಾಗಿ ಇನ್ಮುಂದೆ ಮೇಡ್ ಇನ್ ಇಂಡಿಯಾ ಆಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಇಂದು ಬೆಳಗ್ಗೆ 4.35 ರ ಸುಮಾರಿಗೆ ಗುಜರಾತ್ ನ ಸೂರತ್ ನಿಂದ ಈಶಾನ್ಯಕ್ಕೆ 29 ಕಿ.ಮೀ. ದೂರದಲ್ಲಿ ಹಾಗೂ 15 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರ ಕೇಂದ್ರ ಹೇಳಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಮಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡುವುದು ಬೇಡ ಎಂದು ಬಿಜೆಪಿ ಹಿರಿಯರಿಗೆ ಹೇಳಿದ್ದೇನೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನಂಬಿಕೆಗೆ ಅರ್ಹರಲ್ಲ, ಕುಮಾರಸ್ವಾಮಿ ಯಾರಿಗೆ ಬೇಕಾದರೂ ಸೂಕ್ತರಾಗುತ್ತಾರೆ. ಆ ಅರ್ಥದಲ್ಲಿ ಅವರು ಜೋಕರ್ ಎಂದು ಹೇಳಿದ್ದೇನೆ. ಅವರು ನನಗೆ ಬಚ್ಚಾ ಎಂದರೆ ನನಗೇನು ವ್ಯತ್ಯಾಸವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇಸ್ಟಿಟ್ ಆಟ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಅವರು ಮಲೇಷ್ಯಾ, ಸಿಂಗಾಪುರದಲ್ಲಿ ಇಸ್ಟೇಟ್, ಬೇರೆ ಗ್ಯಾಂಬ್ಲಿಂಗ್ ಆಡಿದ ಫೋಟೋ ನನ್ನ ಬಳಿ ಇದೆ ಎಂದು ಹೇಳಿದರು.
ವಿಜಯಪುರ : ಬಿಎಟಿಸಿ ಬಸ್ ದರ ಹೆಚ್ಚಳದ ನಂತ್ರ, ಸಾರಿಗೆ ಬಸ್ ಪ್ರಯಾಣದ ದರ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ, ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲವೇ ಇಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗಾಗಲೇ ಕಳೆದ ವರ್ಷವೇ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. ಕೊರೋನಾ ಸಂಕಷ್ಟದಿಂದ ಈಗ ಜನರು ತೊಂದರೆಯಲ್ಲಿದ್ದಾರೆ. ಹೀಗಾಗಿ ಮತ್ತೆ ಸಾರಿಗೆ ಬಸ್ ಪ್ರಯಾಣದರವನ್ನು ಯಾವುದೇ ಕಾರಣಕ್ಕೂ ಹೆಚ್ಚಳದ ಪ್ರಸ್ತಾವನೆಯೇ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
ಅದಿಲಾಬಾದ್ : ರೈತರ ಪ್ರತಿಭಟನೆ ಕುರಿಂತೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದು, ನಾನು ಎಂದಿಗೂ ರೈತ ಪ್ರತಿಭಟನೆಯ ವಿರೋಧಿಯಾಗಿಲ್ಲ ಎಂದು ಹೇಳಿದ್ದಾರೆ.
ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ನಾನು ರೈತರ ಪ್ರತಿಭಟನೆ ವಿರೋಧಿಯಲ್ಲ. ರೈತರು ಸಂಘಟಿತರಾಗಿ ಸಾವಯುವ ಕೃಷಿ ಮಾಡಬೇಕು. ಅದಿಲಾಬಾದ್ ನ ಸಾವಿರಾರು ರೈತರು ಈ ಕೃಷಿ ಮಾರ್ಗವನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಭಾಗವತ್ ಹೇಳಿದ್ದಾರೆ.
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 24-01-2021ರಂದು ನಿಗಧಿ ಪಡಿಸಿದ್ದಂತ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತ ಪ್ರವೇಶ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಈ ಬಳಿಕ ದಿನಾಂಕ 28-02-2021ರಂದು ನಾಳೆ ಪರೀಕ್ಷೆಯನ್ನು ನಿಗಧಿ ಪಡಿಸಲಾಗಿದೆ. ಇಂತಹ ಪ್ರವೇಶ ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರ ಡೌನ್ ಲೋಡ್ ಬಗ್ಗೆ ಕೆಪಿಎಸ್ಸಿಯಿಂದ ಅವಕಾಶ ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಯೋಗವು 2019ನೇ ಸಾಲಿನ ರಾಜ್ಯ ಮಟ್ಟದ ವಿವಿಧ ಇಲಾಖೆಗಳಲ್ಲಿ ಮತ್ತು ಕರ್ನಾಟಕ ಭವನ ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 24-01-2021ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಕಟಿಸಲಾದ ಪ್ರವೇಶ ಪತ್ರಗಳನ್ನು ರದ್ದು ಪಡಿಸಿದೆ ಎಂದು ಈ ಮೂಲಕ ತಿಳಿಸಿದೆ.
ಪ್ರಸ್ತುತ ಸದರಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಮರು ನಿಗದಿಯಾದ ದಿನಾಂಕ 28-02-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಲು ಆಯೋಗವು ತೀರ್ಮಾನಿಸಿರುತ್ತದೆ. ಅದರಂತೆ ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಸಹಾಯಕ, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ದಿನಾಂಕ 28-02-2021ಕ್ಕೆ ಪರಿಕ್ಷೃತ ಪ್ರವೇಶ ಪತ್ರಗಳು ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಉಪಯೋಗಿಸಿ, ಪರಿಷ್ಕೃತ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 21-02-2021ರಿಂದ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರವನ್ನು ಈಗಾಗಲೇ ರದ್ದುಪಡಿಸಲಾಗಿದೆ. ಆದುದರಿಂದ ಯಾವುದೇ ಕಾರಣಕ್ಕೂ ದಿನಾಂಕ 24-01-2021ರ ಪ್ರವೇಶ ಪತ್ರವನ್ನು ಸದರಿ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರವನ್ನು ಹಾಜರುಪಡಿಸದಿದ್ದಲ್ಲಿ ಮತ್ತು ದಿನಾಂಕ 24-01-2021ರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ದಿನಾಂಕ 28-02-2021ರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.
ಈ ಹಿನ್ನಲೆಯಲ್ಲಿ ನಾಳೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ನಡೆಯುತ್ತಿರುವಂತ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು, ಕಡ್ಡಾಯವಾಗಿ ಹೊಸ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು, ಪರೀಕ್ಷೆಗೆ ತೆರಳಿ. ಇದನ್ನು ಬಿಟ್ಟು ಹಳೆಯ ಪ್ರವೇಶ ಪತ್ರವನ್ನೇ ತೆಗೆದುಕೊಂಡು ಪ್ರವೇಶ ಪರೀಕ್ಷೆಗೆ ತೆರಳಿದ್ರೇ, ನಿಮಗೆ ಪರೀಕ್ಷೆ ಬರೆಯೋದಕ್ಕೆ ಅನುಮತಿಸೋದಿಲ್ಲ. ಸೋ ಅಭ್ಯರ್ಥಿಗಳು ಕಡ್ಡಾಯವಾಗಿ ದಿನಾಂಕ 28-02-2021ರ ನಾಳೆಯ ಭಾನುವಾರದಂದು ನಡೆಯುತ್ತಿರುವಂತ ಸ್ಪರ್ಧಾತ್ಮಕ ಪರೀಕ್ಷೆಗೆ ಜಾರಿಗೊಳಿಸಲಾದ ಪರಿಷ್ಕೃತ ಪ್ರವೇಶ ಪತ್ರಗಳೊಂದಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋದು ಮರೆಯಬೇಡಿ
ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 24 ಪೈಸೆ ಮತ್ತು ಪ್ರತಿ ಲೀಟರ್ ಗೆ 15 ಪೈಸೆ ಏರಿಕೆ ಮಾಡಿದೆ. ಇದರೊಂದಿಗೆ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91.17 ರೂ., ಡೀಸೆಲ್ ಬೆಲೆ 81.47 ರೂ.ತಲುಪಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ ಗೆ 20-30 ಪೈಸೆಏರಿಕೆ ಯಾಗಿದ್ದು, ಸ್ಥಳೀಯ ಸುಂಕದ ಮಟ್ಟವನ್ನು ಆಧರಿಸಿದೆ.ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಈಗ ಬ್ಯಾರೆಲ್ ಗೆ 66 ಡಾಲರ್ ಗಿಂತ ಲೂಅಧಿಕವಾಗಿದೆ. ಕೆಲ ದಿನಗಳ ಹಿಂದಷ್ಟೇ ಬ್ಯಾರೆಲ್ ಗೆ 60 ಡಾಲರ್ ಗಿಂತ ಕಡಿಮೆ ಇತ್ತು.
ಫೆಬ್ರವರಿ 9ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರನಿರಂತರವಾಗಿ ಏರಿಕೆಯಾಗುತ್ತಿದೆ. 14 ಏರಿಕೆಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 4.22 ರೂ., ದೆಹಲಿಯಲ್ಲಿ ಡೀಸೆಲ್ ಗೆ 4.34 ರೂ.ಏರಿಕೆಯಾಗಿದೆ.
ಬೆಂಗಳೂರು : ಫೆಬ್ರವರಿ 28ರ, ನಾಳೆ ಭಾನುವಾರದಂದು ಈಗಾಗಲೇ ಮುಂದೂಡಿಕೆಯಾಗಿದ್ದಂತ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇಂತಹ ಪರೀಕ್ಷೆಗೆ ಹಳೆಯ ಪ್ರವೇಶ ಪತ್ರ ರದ್ದು ಪಡಿಸಲಾಗಿದ್ದು, ಹೊಸ ಪ್ರವೇಶ ಪತ್ರ ಡೌನ್ ಲೋಡ್ ಗೆ ಕೆಪಿಎಸ್ಸಿ ಅನುಮತಿಸಿದೆ. ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಪಾಲಿಸಬೇಕಾದಂತ ಸೂಚನೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ತಿಳಿಸಿದೆ. ಅಂತಹ ಅಭ್ಯರ್ಥಿಗಳ ಸೂಚನೆಗಳು ಈ ಕೆಳಗಿನಂತಿವೆ.
ಎಫ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಇತ್ತೀಚೆಗೆ ಬಸ್, ರೈಲು, ಇತ್ಯಾದಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕಿಂತ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಲು, ಅಭ್ಯರ್ಥಿಗಳು ಹೆಚ್ಚಿನ ಮುನ್ನೆಚ್ಚರಿಕೆಯಿಂದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ
ಅಭ್ಯರ್ಥಿಗಳು ಪರೀಕ್ಷೆಯ ಮೊದನೆಯ ಬೆಲ್ ಆಗುವ ಕನಿಷ್ಟ ಎರಡು ಗಂಟೆಯ ಮೊದಲು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು
ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಅನ್ನು ಕ್ರಮ ಬದ್ಧವಾಗಿ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮ್ಯಾಥಮ್ಯಾಟಿಕಲ್ ಟೇಬಲ್ಸ್, ಸ್ಟೈಡ್ ರೋಲ್ಸ್, ಕ್ಯಾಲುಕುಲೇಟರ್, ಪೇಜರ್, ಮೊಬೈಲ್ ಪೋನ್, ಬ್ಲೂಟೂತ್, ಮಾರ್ಕರ್ಸ್, ವೈಟ್ ಪ್ಲೂಯಿಡ್, ವೈರ್ ಲೆಸ್ ಸೆಟ್ಸ್ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು, ತೆಗೆದುಕೊಂಡು ಹೋಗುವಂತಿಲ್ಲ. ವಿವಿಧ ಸಮಯಗಳಲ್ಲಿ ಬಾರಿಸುವ ಎಚ್ಚರಿಕೆಯ ಗಂಟೆಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಚುರ ಪಡಿಸಿರುವ ಬೆಲ್ ಸಮಯವನ್ನು ನೋಡುವುದು.
ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಮೊದಲನೆಯ ಬೆಲ್ ಆದ ತಕ್ಷಣ ಅಂದರೆ ಮಧ್ಯಾಹ್ನ 2 ನಂತರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ ತಮ್ಮ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು.
ಮೂರನೆಯ ಬೆಲ್ ಅಂದರೆ ಮಧ್ಯಾಹ್ನ 2.30 ಆದ ನಂತ್ರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ಅನಮತಿ ನೀಡಲಾಗುವುದಿಲ್ಲ.
ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ರೋಲ್ ನಂಬರ್, ಅಭ್ಯರ್ಥಿಯ ಹೆಸರು ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಮುದ್ರಿಸಲಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಕೊಠಡಿಯ ಮೇಲ್ವಿಚಾರಕು ತಮಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ರೋಲ್ ನಂಬರ್, ಹೆಸರು ಹಾಗೂ ಪ್ರವೇಶ ಪತ್ರದಲ್ಲಿ ಮುತ್ರಿತವಾಗಿರುವ ರೋಲ್ ನಂಬರ್ ಒಂದೇ ಆಗಿದ್ಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೊತೆಗೆ ನಿಮಗೆ ನೀಡುವ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಉತ್ತರ ಪತ್ರಿಕೆಯ ವರ್ಷನ್ ಕೋಡ್ ಒಂದೇ ಆಗಿದ್ಯಾ ಅಂತ ಖಾತ್ರಿ ಪಡಿಸಿಕೊಳ್ಳುವುದು.
ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್, ಕ್ರಮ ಸಂಖ್ಯೆಯನ್ನು ನಾಮಿನಲ್ ರೋಲ್ ನಲ್ಲಿ ಬರೆಯಬೇಕು
ಪರೀಕ್ಷೆಯ ನಿಗದಿತ ಸಮಯ ಮುಗಿಯುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ.(ಕೊನೆಯ ಬೆಲ್ ಅಂದರೆ ಸಂಜೆ 4.30 ಆಗುವವರೆಗೂ)
ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಓಎಂಆರ್ ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಬಳಸಬೇಕು.
ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಪರೀಕ್ಷಾ ಕೇಂದ್ರದಲ್ಲಿಯೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.
ಪರೀಕ್ಷಾ ದಿನದಂದು ಒಂದು ವೇಳೆ ಅಭ್ಯರ್ಥಿಗೆ ಕೆಮ್ಮು ಅಥವಾ ನೆಗಡಿ ಅಥವಾ ಜ್ವರ ಇದ್ದರೇ, ಪರೀಕ್ಷಾ ಕೇಂದ್ರದ ಉಪ ಮುಖ್ಯಸ್ಥರಿಗೆ ತಿಳಿಸುವುದು.
ಓಎಂಆರ್ ಉತ್ತರ ಪತ್ರಿಕೆಯ ಕೆಳಭಾಗದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಅಭ್ಯರ್ಥಿಗಳು ಸಹಿ ಮಾಡಬೇಕು.
ನವದಹಲಿ : ಉದ್ಯಮಿ ಮುಕೇಶ್ ಅಂಬಾನಿ ಅವರು ಏಷ್ಯಾದ ಅತೀ ಶ್ರೀಮಂತ ಅನ್ನೋ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾಗಿದ್ದಾರೆ. 8 ಸಾವಿರ ಕೋಟಿ ಅಮೆರಿಕನ್ ಡಾಲರ್ಸ್ ಗೂ ಹೆಚ್ಚು ಆಸ್ತಿಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೆ ಏಷ್ಯಾದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಂತೆ ಮುಕೇಶ್ ಅಂಬಾನಿ 8 ಸಾವಿರ ಕೋಟಿ ರೂ. ಅಮೆರಿಕನ್ ಡಾಲರ್ ಹೊಂದಿದ್ದಾರೆ ಅಂದರೆ 5,84000 ಕೋಟಿ ರೂ. ಗೂ ಹೆಚ್ಚು, ಚೀನಾದ ಶ್ರೀಮಂತ ಉದ್ಯಮಿ ಝೋಂಗ್ ಶನ್ಷನ್ ಸಂಪತ್ತು 2,200 ಕೋಟಿ ಅಮೆರಿಕನ್ ಡಾಲರ್ ಗೆ ಕುಸಿದು, 7,660 ಡಾಲರ್ ಗೆ ಇಳಿದಿದೆ.
ಹುಬ್ಬಳ್ಳಿ : ಆಕೆ ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಕೂಟ ಇಟ್ಟುಕೊಂಡಿದ್ರೇನೋ.. ಇದೇ ಕಾರಣಕ್ಕಾಗಿ ತನ್ನ ಬಳಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನ ಅನೇಕ ನಾಯಕರ ಬೇನಾಮಿ ಕಪ್ಪು ಹಣ ಇದೆ. ಅದನ್ನು ಸಾಲ ಕೊಡ್ತೇನೆ. ನೀವು ಅದಕ್ಕೂ ಮುನ್ನಾ 10 ಸಾವಿರ ಹಣ ಕೊಡಬೇಕು ಎಂಬುದಾಗಿ ಜನರನ್ನು ನಂಬಿಸಿದ್ದಾಳೆ. ಈಕೆಯ ಮಾತನ್ನು ನೀಡಿ ಅನೇಕರು ಹತ್ತು ಸಾವಿರ ಕೂಡ ಕೊಟ್ಟಿದ್ದಾರೆ. ಹೀಗೆ ನೂರಾರು ಜನರಿಂದ ಹಣ ಸಂಗ್ರಹಿಸಿಕೊಂಡ ಆಕೆ, ಇದೀಗ ದಿಢೀರ್ ಲಕ್ಷ ಲಕ್ಷ ದೋಚಿಕೊಂಡು ಎಸ್ಕೇಫ್ ಆಗಿದ್ದಾಳೆ. ಅದೆಲ್ಲಿ..? ಯಾರು ಆಕೆ.? ಎನ್ನುವ ಬಗ್ಗೆ ಮುಂದೆ ಓದಿ.
ಹೌದು.. ಹೀಗೆ ಜನರಿಗೆ ಪಂಗನಾಮ ಹಾಕಿ, ರಾತ್ರೋ ರಾತ್ರಿ ಎಸ್ಕೇಪ್ ಹಾಕಿರೋದು ಹುಬ್ಬಳ್ಳಿಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಎಂಬುವರಾಗಿದ್ದಾರೆ. ನನ್ನ ಬಳಿ ಡಿಕೆ ಶಿವಕುಮಾರ್ ಕಪ್ಪು ಹಣ ಇದೆ. ಅದನ್ನು ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇನೆ ಎಂಬುದಾಗಿ ಜನರಿಗೆ ನಂಬಿಸಿದ್ದಾಳೆ. ನಂಬಿದಂತ ಜನರಿಂದ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿಕೊಂಡು ಎಸ್ಕೇಪ್ ಆಗಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10 ಸಾವಿರ ಹಣವನ್ನು ನೀಡಿದ್ರೇ, ನಿಮಗೆ ಡಿಕೆ ಶಿವಕುಮಾರ್ ಅವರ ಕಪ್ಪು ಹಣವನ್ನು ಸಾಲವನ್ನಾಗಿ ಕೊಡುತ್ತೇನೆ ಎಂಬುದಾಗಿ ಜನರನ್ನು ನಂಬಿಸಿರುವಂತ ಪೂರ್ಣಿಮಾ, ಸುಮಾರು 35ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡಿ, ಎಸ್ಕೇಪ್ ಆಗಿರುವುದಾಗಿ ತಿಳಿದು ಬಂದಿದೆ.
ಹೀಗೆ ಸಾಲಕ್ಕಾಗಿ 35ಕ್ಕೂ ಹೆಚ್ಚು ಜನರು ಹಣ ನೀಡಿ, ಎರಡು ವರ್ಷ ಕಳೆದ್ರೂ ಸಾಲ ನೀಡದ್ದರಿಂದ ಪೂರ್ಣಿಮಾ ಅವರನ್ನು ಕೇಳಿದ್ರೇ.. ನನಗೆ ನೀವು ಹಣವನ್ನೇ ನೀಡಿಲ್ಲ ಎಂಬುದಾಗಿ ಹೇಳಿದ್ದಾರಂತೆ. ಜೊತೆಗೆ ಹಣಕ್ಕಾಗಿ ಬೇಡಿಕೆ, ಹೆಚ್ಚಾಗುತ್ತಿದ್ದಂತೆ ಪೂರ್ಣಿಮಾ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಹಣ ನೀಡಿದವ ಶಂಕರ್ ಎಂಬುವರು ಈಗ ಪೂರ್ಣಿಮಾ ವಿರುದ್ಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹಣ ಕೊಡಿಸುವಂತ ಮನವಿ ಮಾಡಿದ್ದಾರೆ.