covid-19 – Kannada News Now


Jobs State

ಮೈಸೂರು : ಕೋವಿಡ್-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಕೋವಿಡ್ ಸೋಂಕು ಸಂಬಂಧಪಟ್ಟಂತೆ ಪರೀಕ್ಷೆಗಳನ್ನು ಹೆಚ್ಚುಗೊಳಿಸುವ ಅಗತ್ಯತೆ ಇರುವುದರಿಂದ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಿನ್ನೆಲೆ ಖಾಸಗಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ದತ್ತಾಂಶ ನಮೂದಕರನ್ನು (Data Entry Operators) ನೇಮಿಸಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಹಿಂಪಡೆದಿಲ್ಲ – ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟನೆ

ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯವಿಲ್ಲದಿದ್ದಲ್ಲಿ Nursing and Paramedical personnel, Diploma Holders, ವಿಜ್ಞಾನ ಪದವೀಧರರನ್ನು ನಿಯೋಜಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೊರೋನಾ ಪರೀಕ್ಷೆಗೆ ನೇಮಕ ಮಾಡಿಕೊಳ್ಳಲಾಗುವವರಿಗೆ ಸರ್ಕಾರವು ನಿಗದಿಪಡಿಸಿರುವ ದರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರಿಗೆ 10,000 ರೂ. ಜೊತೆಗೆ ಪ್ರತಿ ಗಂಟಲುದ್ರವ ತೆಗೆಯುವಿಕೆಗೆ 15 ರೂ, ಹಾಗೂ ದತ್ತಾಂಶ ನಮೂದಕರಿಗೆ 14,000 ರೂ. ಸಂಭಾವನೆಯನ್ನು ಮಾಸಿಕವಾಗಿ ನೀಡಲಾಗುವುದು.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಆಸಕ್ತರು ಸೆಪ್ಟೆಂಬರ್ 30 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಸಂಬಂಧಪಟ್ಟ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮನವಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಶರತ್ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

State

ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿನ ಗುತ್ತಿಗೆ, ಹೊರಗುತ್ತಿಗೆ ನೌಕರರು ಬೇಡಿಕೆ ಈಡೇರಿಸುವವರೆಗೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ. ನಾವು ಪ್ರತಿಭಟನೆಯನ್ನು ಹಿಂಪಡೆದಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ  ವಿಶ್ವರಾಧ್ಯ ಎಚ್. ವೈ ಸ್ಪಷ್ಟ ಪಡಿಸಿದ್ದಾರೆ.

ಇದು ಗಾನ ಗಂಧರ್ವ ‘ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಜೀವನ ‘ಗಾಯನ ಯಾತ್ರೆ’

ಈ ಕುರಿತಂತೆ ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದ ಅವರು, ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಹೊರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಸೇವಾ ಭದ್ರತೆಯನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕಳೆದ ನಿನ್ನೆಯಿಂದ ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ನಿರತರಾಗಿರುವುದಾಗಿ ತಿಳಿಸಿದರು.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಇನ್ನೂ ಮುಂದುವರೆದು ಮಾತನಾಡಿದ ಅವರು, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರು ಪ್ರತಿಭಟನೆಯನ್ನು ಮುಂದುವರೆಸಿದ್ದೇವೆ. ನಾವು ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂಬುದು ಸುಳ್ಳು. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವವರೆಗೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂಬುದಾಗಿ ಸ್ಪಷ್ಟ ಪಡಿಸಿದರು.

ವರದಿ : ವಸಂತ ಬಿ ಈಶ್ವರಗೆರೆ

State

ಶಿವಮೊಗ್ಗ : ಕರೋನಾ ನಿಯಂತ್ರಿಸುವ ಕ್ರಮವಾಗಿ ಮುಂದಿನ 15 ದಿನಗಳ ಕಾಲ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಕರೋನಾ ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸವೇಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 15ದಿನಗಳ ಕಾಲ ಪ್ರತಿದಿನ ಕನಿಷ್ಟ 3ಸಾವಿರ ವ್ಯಕ್ತಿಗಳಿಗೆ ಕರೋನಾ ಪರೀಕ್ಷೆ ನಡೆಸಬೇಕು. ಪ್ರತಿದಿನ 2ಸಾವಿರ ಆರ್‍ಟಿಪಿಸಿಆರ್ ಮತ್ತು 1ಸಾವಿರ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಲ್ಲಿ ಸಹ ಕರೋನಾ ತಪಾಸಣೆ ನಡೆಸಬೇಕು. ಇದಕ್ಕೆ ಅಗತ್ಯವಾದ ತಪಾಸಣಾ ಕಿಟ್‍ಗಳನ್ನು ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ

ಎಲ್ಲಾ ಸಿದ್ಧತೆ: ಕರೋನಾ ಪರೀಕ್ಷೆ ಹೆಚ್ಚಳಕ್ಕೆ ಪೂರಕವಾಗಿ ಪಾಸಿಟಿವ್ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು. ರೋಗ ಲಕ್ಷಣವಿಲ್ಲದ ಕರೋನಾ ಪೀಡಿತರಿಗೆ ಹೋಂ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸಬೇಕು. ಹೋಂ ಕ್ವಾರೆಂಟೈನ್‍ನಲ್ಲಿರುವವರ ಆರೋಗ್ಯದ ಮೇಲೆ ನಿಗಾ ಇರಿಸಲು ವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಚಿಸಬೇಕು. ರೋಗ ಲಕ್ಷಣವಿರುವ ಮತ್ತು ಚಿಕಿತ್ಸೆ ಅಗತ್ಯವಿರುವರನ್ನು ಮಾತ್ರ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಬೇಕು. ಮೆಗ್ಗಾನ್ ಆವರಣದಲ್ಲಿ ಇನ್ನೊಂದು ಆಕ್ಸಿಜನ್ ಪ್ಲಾಂಟ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

BIG BREAKING : ಖ್ಯಾತ ಗಾಯಕ ‘ಎಸ್ ಪಿ ಬಾಲಸುಬ್ರಹ್ಮಣ್ಯಂ’ ವಿಧಿವಶ

ಮೆಗ್ಗಾನ್ ಪರ್ಯಾಯ ವ್ಯವಸ್ಥೆ: ಕರೋನಾ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆ ಹೊರಭಾಗದಲ್ಲಿ ಸೇವಾ ಭದ್ರತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿರಿಸಿ ಹೊರ ಗುತ್ತಿಗೆ ಸಿಬ್ಬಂದಿಗಳು ನಡೆಸುತ್ತ್ರಿರುವ ಪ್ರತಿಭಟನೆ ದುರದೃಷ್ಟಕರ. ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ತಾಂತ್ರಿಕ ಕಾರಣಗಳಿಂದ ಅಂಗೀಕರಿಸಲು ಸರ್ಕಾರದ ಹಂತದಲ್ಲಿ ಸಾಧ್ಯವಾಗಿಲ್ಲ. ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಡಳಿತ ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ 350ಮಂದಿ ಕೊರೋನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸೇವೆ ಸಲ್ಲಿಸಬೇಕಾದವರು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಇದು ಗಾನ ಗಂಧರ್ವ ‘ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಜೀವನ ‘ಗಾಯನ ಯಾತ್ರೆ’

ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸಲಾಗಿದೆ. ಅವರಿಗೆ ಕಾನೂನುಬದ್ಧವಾಗಿ ನೀಡಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕರೋನಾ ಪೀಡಿತರ ಸಂಖ್ಯೆ ಹೆಚ್ಚಳದಿಂದ ಇರುವ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ. ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡುವಂತೆ ಶಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ ಅವರು ಮನವಿ ಮಾಡಿದರು.

ಹಾಡಿನಿಂದ ಅಮರರಾದ ಎಸ್.ಪಿ.ಬಿ : ಡಿಸಿಎಂ ಲಕ್ಷ್ಮಣ್ ಸವದಿ ಶೋಕ

ಕ್ರಿಮಿನಲ್ ಮೊಕದ್ದಮೆ: ಕರೋನಾ ಪೀಡಿತರ ಚಿಕಿತ್ಸೆಗೆ ಯಾವುದೇ ಕುಂದುಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅನುಮೋದನೆಗೊಂಡಿರುವ ಹುದ್ದೆಗಳಿಗೆ ತಕ್ಷಣ ಎರಡು ದಿನಗಳ ಒಳಗಾಗಿ ಪರ್ಯಾಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಇಂತಹ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಅವರು ಶಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಸರ್ಜನ್ ಡಾ.ರಘುನಂದನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

State

ಹಾಸನ : ಜಿಲ್ಲೆಯಲ್ಲಿಂದು 13 ಜನ ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಹೊಸದಾಗಿ 419 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 14,687ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 2,583 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 11,815 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾದ 419 ಕೊರೋನಾ ಸೋಂಕು ಪ್ರಕರಣಗಳಲ್ಲಿ 65 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 50 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 14 ಜನ, 186 ಮಂದಿ ಹಾಸನ ತಾಲ್ಲೂಕು, 7 ಜನ ಹೊಳೆನರಸೀಪುರ ತಾಲ್ಲೂಕು, 70 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 8 ಜನ, ಸಕಲೇಶಪುರ ತಾಲ್ಲೂಕಿನಲ್ಲಿ 17 ಮಂದಿಗೆ ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.

State

KNN ಡಿಜಿಟಲ್ ಡೆಸ್ಕ್ : ಕಳೆದ ಒಂದು ವಾರಗಳಿಂದ ರಾಜ್ಯದಲ್ಲಿ ಜನಪ್ರತಿನಿಧಿಗಳು ಕಿಲ್ಲರ್ ಕೊರೋನಾಗೆ ಬಲಿಯಾಗುತ್ತಿರುವುದು ಮುಂದುವರೆದಿದೆ. ರಾಜ್ಯದಲ್ಲಿ ಕಳೆದ ಒಂದೇ ವಾರದಲ್ಲಿ ಮೂವರು ಜನಪ್ರತಿನಿಧಿಗಳು ಕೊರೋನಾಗೆ ಬಲಿಯಾಗಿದ್ದಾರೆ.

BREAKING : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ತಂಡದ ನಾಯಕ ಜೋನ್ಸ್ ಹೃದಯಾಘಾತದಿಂದ ನಿಧನ

ಕಳೆದ ಇತ್ತೀಚೆಗೆ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಂತ ಅಶೋಕ್ ಗಸ್ತಿಯವರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. ಅವರ ಸಾವು ಇನ್ನೂ ಮಾಸುವ ಮುನ್ನವೇ ಕಳೆದ ನಿನ್ನೆಯಷ್ಟೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೊರೋನಾ ಸೋಂಕಿನಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

BIG BREAKING : ಖ್ಯಾತ ನಿರೂಪಕಿ ಅನುಶ್ರೀಗೂ ಸಿಸಿಬಿಯಿಂದ ನೋಟಿಸ್

ಈ ಸರಣಿ ಇಂದು ಕೂಡ ಮುಂದುವರೆದಿದೆ. ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್, ಆರೋಗ್ಯ ಸ್ಥಿತಿ ಬೆಳಿಗ್ಗೆ ಗಂಭೀರಗೊಂಡಿತ್ತು. ಇದೀಗ ಶಾಸಕ ನಾರಾಯಣ ರಾವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದೇ ವಾರದಲ್ಲಿ ಶಾಸಕ ನಾರಾಯಣ ರಾವ್, ಪರಿಷತ್ ಸದಸ್ಯ ಅಶೋಕ್ ಗಸ್ತಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೇರಿದಂತೆ ಮೂವರು ಜನಪ್ರತಿನಿಧಿಗಳು ಕೊರೋನಾಗೆ ಬಲಿಯಾದಂತೆ ಆಗಿದೆ.

India

ನವದೆಹಲಿ : ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 10ರಂದು ಅಥವಾ ಅದಕ್ಕೂ ಮುನ್ನ ಸಿ ಬಿ ಎಸ್ ಇ ನ 12ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ಸಿಬಿಎಸ್ ಇ ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈ ಮೂಲಕ ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಅ.10ರಂದು ಪ್ರಕಟಗೊಳ್ಳಲಿದೆ ಎಂಬುದಾಗಿ ತಿಳಿದು ಬಂದಿದೆ.

GOOD NEWS : ದೇಶದಲ್ಲಿ ಕಳೆದ 5 ದಿನಗಳಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ.!

ಅಕ್ಟೋಬರ್ 31ರಿಂದ ಪದವಿ ಪೂರ್ವ ಕೋರ್ಸ್ ಗಳ ಶೈಕ್ಷಣಿಕ ಕ್ಯಾಲೆಂಡರ್ ಆರಂಭಗೊಳ್ಳಲಿದೆ. ಮರು ಪರೀಕ್ಷೆಗೆ ಹಾಜರಾದ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಹೊರಬರಲಿದೆ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾಹಿತಿ ನೀಡಿತ್ತು.

12ನೇ ತರಗತಿ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಈ ಹಿಂದೆ ಪೀಠವು ನೀಡಿರುವ ಹೇಳಿಕೆಗಳ ಬಗ್ಗೆಯೂ ತಿಳಿಸಿತ್ತು. ಸಿಬಿಎಸ್ ಇ ಯು ಕಂಪಾರ್ಟ್ ಮೆಂಟ್ ಪರೀಕ್ಷೆಯ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸಬೇಕು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪಡೆಯಲು ಯುಜಿಸಿಯು ಖಚಿತಪಡಿಸಬೇಕು ಎಂದು ಹೇಳಿತ್ತು.

ಈ ನಿರ್ಲಕ್ಷ್ಯವೇ, ಕೇಂದ್ರ ಸಚಿವ ‘ಸುರೇಶ್ ಅಂಗಡಿ’ ನಿಧನಕ್ಕೆ ಕಾರಣವಾಯ್ತಾ.?

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ ನ್ಯಾಯಾಲಯ, ಇದು ಅಸಾಧಾರಣ ಸಮಯವಾಗಿದ್ದು, ವಿದ್ಯಾರ್ಥಿಗಳು ಸಹಾಯ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಈ ಮೂಲಕ 12ನೇ ತರಗತಿ ವಿದ್ಯಾರ್ಥಿಗಳು ಕಂಪಾರ್ಟ್ ಮೆಂಟ್ ಪರೀಕ್ಷೆಗಳಲ್ಲಿ ಭಾಗವಹಿಸುವುದರಿಂದ ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂದು ನಿರ್ದೇಶನ ಕೋರಿ ಅನಿಕಾ ಸಂವೇದಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿದೆ.

ಇವತ್ತು ರಾಜ್ಯ ‘ಕೊರೋನಾ ಹೆಲ್ತ್ ಬುಲೆಟಿನ್’ ಬಿಡುಗಡೆ ಆಗೋದು ಡೌಟ್

India

ನವದೆಹಲಿ : ದೇಶದಲ್ಲಿ ಕೊರೋನಾ ಮಹಾಮಾರಿ ಅಬ್ಬರವನ್ನು ಮುಂದುವರೆಸಿದ ಬೆನ್ನಲ್ಲೇ, ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. ಅದೇ ದೇಶದಲ್ಲಿ ಕಳೆದ 5 ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದಕ್ಕಿಂತ, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದಾಗಿದೆ.

ಈ ನಿರ್ಲಕ್ಷ್ಯವೇ, ಕೇಂದ್ರ ಸಚಿವ ‘ಸುರೇಶ್ ಅಂಗಡಿ’ ನಿಧನಕ್ಕೆ ಕಾರಣವಾಯ್ತಾ.?

ಕಳೆದ 5 ದಿನಗಳಿಂದ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಗುಣಮುಖರಾದವರ ಸಂಖ್ಯೆಯ ಬಗ್ಗೆ ಗಮನಿಸಿದ್ರೇ.. ಶೇ.80ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದಾಗಿ ತಿಳಿದು ಬಂದಿದೆ.

ಇವತ್ತು ರಾಜ್ಯ ‘ಕೊರೋನಾ ಹೆಲ್ತ್ ಬುಲೆಟಿನ್’ ಬಿಡುಗಡೆ ಆಗೋದು ಡೌಟ್

ಅಂದಹಾಗೇ ಸೆಪ್ಟೆಂಬರ್ 19ರಂದು ದೇಶಾದ್ಯಂತ 93,337 ಕೊರೋನಾ ಸೋಂಕಿನ ಪ್ರಕರಣ ಕಂಡು ಬಂದ್ರೇ, ಅಂದೇ ಕೊರೋನಾ ಸೋಂಕಿತರಾದಂತ 95,880 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಸೆ.20ರಂದು ಹೊಸದಾಗಿ 92,605 ಕೇಸ್ ಪತ್ತೆಯಾಗಿದ್ದರೇ, 94,612 ಸೋಂಕಿತರು ಗುಣಮುಖರಾಗಿದ್ದಾರೆ. ಸೆ.21ರಂದು 86,961 ಕೊರೋನಾ ಕೇಸ್ ಪತ್ತೆಯಾಗಿದ್ದರೇ, 93,356 ಸೋಂಕಿತರು ಗುಣಮುಖರಾಗಿದ್ದಾರೆ.

ಬಿಗ್ ನ್ಯೂಸ್ : ಕೊಪ್ಪಳದಲ್ಲಿ ಬ್ಯಾಂಕ್ ದರೋಡೆ : 1 ಕೋಟಿಗೂ ಹೆಚ್ಚು ಹಣ, ಸಿಸಿಟಿವಿ ಹಾರ್ಡ್ ಡಿಸ್ಕ್ ಜೊತೆ ಕಳ್ಳರು ಪರಾರಿ

ಸೆ.22ರಂದು 75,083 ಪ್ರಕರಣಗಳು ಪತ್ತೆಯಾದ್ರೇ, 1,01,468 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಸೆ.23ರಂದು 83,347 ಜನರಿಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದ್ದರೇ, ಅಂದೇ 89,746 ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶಾದ್ಯಂತ 5.7 ಮಿಲಿಯನ್ ಕೊರೋನಾ ಸೋಂಕಿತರಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 9,66,382 ಆಗಿದೆ.

State

ನವದೆಹಲಿ : ಸದಾ ಆರೋಗ್ಯದ ವಿಚಾರಣದಲ್ಲಿ ಕಾಳಜಿ ವಹಿಸುತ್ತಿದ್ದಂತ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ(65) ಕೊರೋನಾ ಸೋಂಕಿನಿಂದ ಕಳೆದ ನಿನ್ನೆ ನಿಧನರಾಗಿದ್ದಾರೆ. ಇಂತಹ ಕೇಂದ್ರ ಸಚಿವರ ನಿಧನಕ್ಕೆ ಅವರು ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೂ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ನಿರ್ಲಕ್ಷ್ಯ ವಹಿಸಿದ್ದೇ ಅವರು ಕಳೆದ ನಿನ್ನೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಲು ಕಾರಣವಾಯ್ತು ಎನ್ನಲಾಗಿದೆ.

ಇವತ್ತು ರಾಜ್ಯ ‘ಕೊರೋನಾ ಹೆಲ್ತ್ ಬುಲೆಟಿನ್’ ಬಿಡುಗಡೆ ಆಗೋದು ಡೌಟ್

ಹೌದು.. ಸೆಪ್ಟೆಂಬರ್ ಮೊದಲ ವಾರದ ಬೆಳಗಾವಿಯಲ್ಲಿ ಹಲ್ಲು ನೋವಿನಿಂದಾಗಿ ಚಿಕಿತ್ಸೆ ಪಡೆದಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಜ್ವರದಿಂದಾಗಿ ಚಿಕಿತ್ಸೆ ಪಡೆದು, ವಿಶ್ರಾಂತಿ ಪಡೆಯಬೇಕಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿಯವರು, ತೀವ್ರ ಜ್ವರವಿದ್ದರೂ ನಿರ್ಲಕ್ಷ್ಯ ವಹಿಸಿ, ಮುಂಬೈಗೆ ಪ್ರಯಾಣ ಮಾಡಿದ್ದಾರೆ.

ಹಲ್ಲು ನೋವಿನಿಂದಾಗಿ ಜ್ವರ ಬಂದಿರಬಹುದು ಎಂಬುದಾಗಿ ಭಾವಿಸಿದ್ದ ಅವರು, ಮುಂಬೈನಿಂದ ಮತ್ತೆ ದೆಹಲಿಗೆ ತೆರಳಿದ್ದರು. ಅಲ್ಲದೇ ದೆಹಲಿಗೆ ತೆರಳಿದ ನಂತ್ರವೂ ಕೊರೋನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳೋದರಲ್ಲಿ ಎರಡು ಮೂರು ದಿನ ತಡ ಮಾಡಿದ್ದಾರೆ.

ಬಿಗ್ ನ್ಯೂಸ್ : ಕೊಪ್ಪಳದಲ್ಲಿ ಬ್ಯಾಂಕ್ ದರೋಡೆ : 1 ಕೋಟಿಗೂ ಹೆಚ್ಚು ಹಣ, ಸಿಸಿಟಿವಿ ಹಾರ್ಡ್ ಡಿಸ್ಕ್ ಜೊತೆ ಕಳ್ಳರು ಪರಾರಿ

ಹೀಗೆ ಜ್ವರದಿಂದಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ ನಂತ್ರ, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದಾಗಿ ಕೇಂದ್ರ ಸಚಿವರ ಆಪ್ತರು ತಿಳಿಸಿದ್ದಾರೆ. ಹೀಗೆ ಆಸ್ಪತ್ರೆಗೆ ದಾಖಲಾದ ನಂತ್ರ ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಅವರಿಗೆ, ಆನಂತ್ರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾದಾಗ ಪ್ಲಾಸ್ಮಾ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೂ ಕಳೆದ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಮಾತ್ರ ದುರಂತವೇ ಸರಿ.

ಯಡಿಯೂರಪ್ಪ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು, ನಾವು ಅವಿಶ್ವಾಸ ಮಂಡಿಸಲು ತೀರ್ಮಾನ ಮಾಡಿದ್ದೇವೆ – ಸಿದ್ದರಾಮಯ್ಯ

ಹಲ್ಲು ನೋವಿನಿಂದಾಗಿ ಕಾಣಿಸಿಕೊಂಡಿದೆ ಎಂಬುದಾಗಿ ಭಾವಿಸಿದ ಜ್ವರದ ಬಗ್ಗೆ ಕೂಡಲೇ ಜಾಗ್ರತೆ ವಹಿಸಿ, ಮುಂಬೈ, ದೆಹಲಿ ಪ್ರಯಾಣ ಮೊಟಕುಗೊಳಿಸಿ ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದಿದ್ದರೇ, ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನ್ನು ಗೆದ್ದು ಬರುತ್ತಿದ್ದರು. ಹೀಗೆ ಅವರು ತೋರಿದ ಒಂದು ಸಣ್ಣ ನಿರ್ಲಕ್ಷ್ಯವೇ ಅವರನ್ನು ಕೊರೋನಾ ಬಲಿ ಪಡೆಯುವಂತೆ ಆಗಿದ್ದು ಮಾತ್ರ ದುರಂತವೇ ಸರಿ.

State

ಬೆಂಗಳೂರು : ರಾಜ್ಯದ ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಸೇರಿದಂದೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರ ಗುತ್ತಿಗೆ ನೌಕರರನ್ನು ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದಿಂದ ಕೊರೋನಾ ಹೆಲ್ತ್ ರಿಪೋರ್ಟ್ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಇಂದು ತಲುಪೋದು ಅನುಮಾನವಾಗಿದೆ. ಹೀಗಾಗಿ ಇಂದಿನ ಕರ್ನಾಟಕ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಆಗೋದು ಅನುಮಾನ ಎನ್ನಲಾಗುತ್ತಿದೆ.

ಇಂದಿನಿಂದ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕೆಲಸಕ್ಕೆ ಬಾಯ್ ಕಾಟ್ : ರಾಜ್ಯದಲ್ಲಿ ವೈದ್ಯಕೀಯ ಸೇವೆ ಡೌಟ್

ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ, ಹೊರಗುತ್ತಿಗೆ ನೌಕರರ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಹೊರ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿನಿಂದ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಕೊರೋನಾ ಕರ್ತವ್ಯದಲ್ಲಿ ವ್ಯತ್ಯವಾಗಲಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಒಂದೇ ವಾರದಲ್ಲಿ 21.43 ಕೋಟಿ ರೂ. ದಂಡ ವಸೂಲಿ

ಬಹುತೇಕ ಜಿಲ್ಲಾ, ತಾಲೂಕು ಮಟ್ಟದ ಆರೋಗ್ಯ ಇಲಾಖೆಯಲ್ಲಿ ಕೊರೋನಾ ಕರ್ತವ್ಯ ನಿರತರಾಗಿರುವಂತ ಸಿಬ್ಬಂದಿಗಳು ಗುತ್ತಿಗೆ, ಹೊರ ಗುತ್ತಿಗೆ ನೌಕರರಾಗಿದ್ದಾರೆ. ಇಂತಹ ನೌಕರರು ಪ್ರತಿಭಟನೆಯಲ್ಲಿ ನಿರತರಾಗಿರುವ ಕಾರಣ, ಪ್ರತಿಭಟನೆಯ ಬಿಸಿ ಕೊರೋನಾ ಹೆಲ್ತ್ ಬುಲೆಟಿನ್ ಮೇಲೆಯೂ ಪರಿಣಾಮ ಬೀರಲಿದೆ. ಈ ಮೂಲಕ ಇಂದಿನ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಆಗೋದು ಡೌಟ್ ಆಗಿದೆ.

State

ಮಡಿಕೇರಿ : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 31 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 15 ಸೇರಿದಂತೆ ಒಟ್ಟು 46 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಅಶೋಕಪುರಂನ ಅನ್ನಪೂರ್ಣೇಶ್ವರಿ ದೇವಾಲಯ ಸಮೀಪದ 69 ವರ್ಷದ ಮಹಿಳೆ. ವಿರಾಜಪೇಟೆ ತಿಮ್ಮಯ್ಯ ಲೇಔಟ್ ನ ಹೊಸ ಬಡಾವಣೆಯ 36 ವರ್ಷದ ಮಹಿಳೆ. ಮಡಿಕೇರಿ ಕಡಗದಾಳು ಸರ್ಕಾರಿ ಶಾಲೆ ಸಮೀಪದ 58 ವರ್ಷದ ಮಹಿಳೆ. ಮಡಿಕೇರಿ ಕ್ರಿಸ್ಟಲ್ ಹಾಲ್ ಸಮೀಪದ 59 ವರ್ಷದ ಪುರುಷ. ನಾಪೋಕ್ಲು ನೆಲ್ಜಿ ಬಸ್ ನಿಲ್ದಾಣ ಸಮೀಪದ 70 ಮತ್ತು 65 ವರ್ಷದ ಮಹಿಳೆಯರು. ಮಡಿಕೇರಿ ನಾಪೋಕ್ಲು ಸರ್ಕಾರಿ ಶಾಲೆ ಸಮೀಪದ 63 ವರ್ಷದ ಮಹಿಳೆ. ಕುಶಾಲನಗರ ಕುವೆಂಪು ಬಡಾವಣೆಯ 7 ವರ್ಷದ ಬಾಲಕಿ. ಕುಶಾಲನಗರ ನೆಹರು ಬಡಾವಣೆಯ 9 ವರ್ಷದ ಬಾಲಕ ಮತ್ತು 46 ವರ್ಷದ ಪುರುಷ. ಮಡಿಕೇರಿ ಮಹದೇವಪೇಟೆಯ ಗೆಜ್ಜೆ ಸಂಗಪ್ಪ ಚೌಲ್ಟ್ರಿಯ 24, 23, 26, 23, 24, 26, 25, 24, 26 ಮತ್ತು 22 ವರ್ಷದ ಪೊಲೀಸ್ ಇಲಾಖೆಯ ಪುರುಷ ಸಿಬ್ಬಂದಿಗಳು. ವಿರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 62 ವರ್ಷದ ಮಹಿಳೆ, 20 ವರ್ಷದ ಪುರುಷ, 17 ವರ್ಷದ ಬಾಲಕ, 24 ವರ್ಷದ ಪುರುಷ ಮತ್ತು 8 ವರ್ಷದ ಬಾಲಕ.

ಬೋರ್ ವೆಲ್ ಕೊರೋಸುವ ಕಾಮಗಾರಿಯಲ್ಲಿ ಅವ್ಯವಹಾರ : ತನಿಖೆಗೆ ಪರಿಷತ್ ನಲ್ಲಿ ಪಕ್ಷಾತೀತವಾಗಿ ಒತ್ತಾಯ

ಕುಶಾಲನಗರ ದೊಡ್ಡಾತೂರುವಿನ 50 ವರ್ಷದ ಪುರುಷ. ವಿರಾಜಪೇಟೆ ಜೈನ್ ಬೀದಿಯ 20 ವರ್ಷದ ಮಹಿಳೆ. ಶನಿವಾರಸಂತೆ ವಿಘ್ನೇಶ್ವರ ಚೌಲ್ಟ್ರಿ ಸಮೀಪದ 52 ವರ್ಷದ ಮಹಿಳೆ. ಅಮ್ಮತ್ತಿಯ ಒಂಟಿ ಅಂಗಡಿ ರಸ್ತೆಯ ಕುಂಬರಿ ಗ್ರಾಮದ 33 ವರ್ಷದ ಮಹಿಳೆ. ವಿರಾಜಪೇಟೆ ಶ್ರೀಮಂಗಲ ಕುರ್ಚಿ ಗ್ರಾಮ ಮತ್ತು ಅಂಚೆಯ 61 ವರ್ಷದ ಮಹಿಳೆ ಮತ್ತು 32 ವರ್ಷದ ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಸುಂಟಿಕೊಪ್ಪ ನರ್ಗಾನೆ ಗ್ರಾಮದ 52 ವರ್ಷದ ಮಹಿಳೆ. ಮಡಿಕೇರಿ ಹೊಸ ಬಡಾವಣೆಯ ರಿಮಾಂಡ್ ಹೋಂ ಹಿಂಭಾಗದ 53 ವರ್ಷದ ಪುರುಷ. ನಾಪೆÇೀಕ್ಲು ರಾಮಮಂದಿರ ಸಮೀಪದ 65 ವರ್ಷದ ಪುರುಷ. ಮಡಿಕೇರಿ ಕಕ್ಕಬ್ಬೆ ಅಂಚೆಯ ಕುಂಜಿಲ ಗ್ರಾಮದ 49 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿ ಗ್ರಾಮದ 58 ವರ್ಷದ ಪುರುಷ. ಪಿರಿಯಾಪಟ್ಟಣ ಬೆಣಗುಂದ ಗ್ರಾಮದ 40 ವರ್ಷದ ಪುರುಷ. ಸೋಮವಾರಪೇಟೆ ಶನಿವಾರಸಂತೆ ಮುಖ್ಯ ರಸ್ತೆಯ 25 ವರ್ಷದ ಪುರುಷ. ಕೂಡಿಗೆ ಕೃಷಿ ವಸತಿಗೃಹದ 44 ವರ್ಷದ ಪುರುಷ. ಸೋಮವಾರಪೇಟೆ ಶನಿವಾರಸಂತೆಯ ನಿಡ್ತಾದಲ್ಲಿನ 47 ವರ್ಷದ ಪುರುಷ. ಮಡಿಕೇರಿ ಗೌಳಿಬೀದಿಯ 27 ವರ್ಷದ ಮಹಿಳೆ.

BIG BREAKING : ಡ್ರಗ್ಸ್ ಕೇಸ್ ಆರೋಪಿಗಳೊಂದಿಗೆ ಸಂಪರ್ಕ : ಸಿಸಿಬಿಯ ‘ಎಸಿಪಿ ಮುಧವಿ’ ಅಮಾನತು

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಓಂಕಾರ್ ಬಡಾವಣೆಯ 4 ನೇ ಬ್ಲಾಕ್ ನ 68 ವರ್ಷದ ಮಹಿಳೆ. ಮಡಿಕೇರಿ ತಾಳತ್ತಮನೆಯ ಕೂರ್ಗ್ ಐಸ್ ರೆಸಾರ್ಟ್ ಸಮೀಪದ 22 ಮತ್ತು 46 ವರ್ಷದ ಮಹಿಳೆಯರು. ಕುಶಾಲನಗರ ಕಾವೇರಿ ಹಾಸ್ಪೆಟೆಲ್ ಸಮೀಪದ ರಸ್ಸೆಲ್ ಲೇಔಟ್ ನ 50 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2394 ಆಗಿದ್ದು, 1951 ಮಂದಿ ಗುಣಮುಖರಾಗಿದ್ದಾರೆ. 412 ಸಕ್ರಿಯ ಪ್ರಕರಣಗಳಿದ್ದು, 31 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 356 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.