ಗಯಾನಾ : ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ 20 ವಿಶ್ವಕಪ್ 2024 ರ 9 ನೇ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾವನ್ನು ಸೋಲಿಸುವ ಮೂಲಕ ಉಗಾಂಡಾ ತನ್ನ ಮೊದಲ ವಿಶ್ವಕಪ್ ವಿಜಯವನ್ನು ಸಾಧಿಸಿತು.
ವಿಶ್ವಕಪ್ ಹಂತದಲ್ಲಿ ಉಗಾಂಡಾ ತನ್ನ ಮೊದಲ ಗೆಲುವನ್ನು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಪಪುವಾ ನ್ಯೂ ಗಿನಿಯಾವನ್ನು 3 ವಿಕೆಟ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂ ಗಿನಿಯಾ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಳ್ಳಲು ಪ್ರಾರಂಭಿಸಿತು. ಅಸ್ಸಾದ್ ವಾಲಾ (0), ಟೋನಿ ಉರಾ (1) ಮತ್ತು ಸೆಸೆ ಬಾವು (5) ಬೇಗನೆ ನಿರ್ಗಮಿಸಿದರು ಆದರೆ ಲೆಗಾ ಸಿಯಾಕಾ ಮತ್ತು ಹಿರಿ ರನ್ ಗಳಿಸಿದ್ದರಿಂದ ಪಿಎನ್ ಜಿ ಚೇತರಿಸಿಕೊಂಡಿತು. ಸಿಯಾಕಾ 12 ರನ್ ಗಳಿಸಿದರೆ, ಹಿರಿ 15 ರನ್ ಗಳಿಸಿದರು.
ಉಗಾಂಡಾ ಬೌಲರ್ ಗಳ ದಾಳಿಗೆ ತತ್ತರಿಸಿದ ಪಪುವಾ ನ್ಯೂ ಗಿನಿಯಾ ತಂಡ ಕೇವಲ 77 ರನ್ಗಳಿಗೆ ಅಲೌಟ್ ಆಯಿತು. ಫ್ರಾಂಕ್ ಎನ್ಸುಬುಗಾ ಅವರ 4 ಓವರ್ಗಳಲ್ಲಿ 2 ವಿಕೆಟ್ ಪಡೆದ್ರೆ, ಅಲ್ಪೇಶ್ ರಾಮ್ಜಾನಿ, ಕಾಸ್ಮಾಸ್ ಕೈವುಟಾ ಮತ್ತು ಜುಮಾ ಮಿಯಾಜಿ ತಲಾ ಎರಡು ವಿಕೆಟ್ ಪಡೆದರು, ನಾಯಕ ಬ್ರಿಯಾನ್ ಮಸಾಬಾ ಒಂದು ವಿಕೆಟ್ ಪಡೆದರು.
78 ರನ್ಗಳ ಕಡಿಮೆ ಗುರಿಯನ್ನು ಬೆನ್ನಟ್ಟಿದ ಉಗಾಂಡಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕೇವಲ 6 ರನ್ಗಳಲ್ಲಿ ಔಟಾದರು. ರೋಜರ್ ಮುಕಾಸಾ, ಸೈಮನ್ ಸೀಜಿ ಮತ್ತು ರಾಬಿನ್ಸನ್ ಒಬುಯಾ. ಪಿಎನ್ ಜಿ ಬೌಲರ್ ಗಳು ಹೆಚ್ಚುವರಿ, ವೈಡ್ ಬಾಲ್ ಗಳನ್ನು ಎಸೆಯುವ ಮೂಲಕ ಸಾಕಷ್ಟು ರನ್ ಗಳನ್ನು ಬಿಟ್ಟುಕೊಟ್ಟರು. ಉಗಾಂಡಾದ ಉಪನಾಯಕ ರಿಯಾಜತ್ ಅಲಿ ಶಾ ಆರಂಭದಿಂದಲೂ ಎಚ್ಚರಿಕೆಯಿಂದ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.. ಉಗಾಂಡಾ 10 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ಗಳಿಂದ ಜಯಗಳಿಸಿದರು.
HISTORY IN T20I WORLD CUP 🏆
UGANDA HAS WON THEIR FIRST MATCH EVER IN THE T20I WC….!!!! pic.twitter.com/mJsDueBbgJ
— Johns. (@CricCrazyJohns) June 6, 2024