ಮಳವಳ್ಳಿ: ಸುತ್ತೂರು ಮಠ ಸಮಾಜದ ಬಡ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಕೇಂದ್ರ ಬೃಹತ್ ಉಕ್ಕು ಮತ್ತು ಬೃಹತ್ ಕೈಗಾರಿಕಾ ಇಲಾಖೆ ಸಚಿವರು ಹಾಗೂ ಮಂಡ್ಯ ಜಿಲ್ಲೆಯ ಸಂಸದರಾದ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದರು.
ಅವರು ಇಂದು ಶ್ರೀ ಶಿವರಾತ್ರಿಶ್ವರ ಶಿವಯೋಗಿ ಮಹಾಸ್ವಾಮೀಜಿಯವರ 1066 ನಾನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಳವಳ್ಳಿ ಏಷ್ಯಾ ಖಂಡಕ್ಕೆ ಮೊದಲು ವಿದ್ಯುತ್ ಕಲ್ಪಿಸಿದ ಮೊದಲ ಸ್ಥಳವಾಗಿದ್ದು ಮಳವಳ್ಳಿ ಅನೇಕ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಕಳೆದ ಬಾರಿ ಸುತ್ತೂರು ಜಾತ್ರೆಗೆ ತೆರಳಿದ್ದಾಗ ಮಠದ ಸ್ವಾಮೀಜಿಗಳೊಂದಿಗೆ ನಮ್ಮ ಜಿಲ್ಲೆಯಲ್ಲಿ ಸುತ್ತೂರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ಮಾಡಲು ಮನವಿ ಸಲ್ಲಿಸಿದ್ದೆ ಎಂದು ಹೇಳಿದರು.
ಸುತ್ತೂರು ಮಠಕ್ಕೂ ನಮ್ಮ ಕುಟುಂಬಕ್ಕೂ 1962 ರಿಂದಲೂ ನಂಟು ಇದೆ. ಮಾಜಿ ಪ್ರಧಾನಿ ಮಂತ್ರಿ ಹೆಚ್.ಡಿ ದೇವೆಗೌಡ ಅವರು ರಾಜಕೀಯ ಪ್ರವೇಶ ಮಾಡಿದಾಗಿನಿಂದಲ್ಲೂ ಸುತ್ತೂರು ಮಠದ ಆಶಿರ್ವಾದ ನಮ್ಮ ಕುಟುಂಬದ ಮೇಲೆ ಇದೆ. ನಮ್ಮ ತಂದೆ ಸುತ್ತೂರು ಮಠವನ್ನು ಎಂದಿಗೂ ಮರೆಯಬೇಡ ಎಂದು ನನಗೆ ಹೇಳುತ್ತಿದ್ದರು ಎಂದು ತಿಳಿಸಿದರು.
ರಾಷ್ಟ್ರಪತಿಗಳು ಪ್ರಥಮ ಬಾರಿಗೆ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಇನ್ನೂ ಮುಂದೆ ಜಿಲ್ಲೆಗೆ ಅಭಿವೃದ್ಧಿ ಕೆಲಸಗಳು ಹೆಚ್ಚುತ್ತಿವೆ. ಕೇವಲ ರಾಜ್ಯವಲ್ಲದೆ ಅನೇಕ ಅಂತಾರಾಷ್ಟ್ರೀಯ ದೇಶಗಳಲ್ಲೂ ಬಡ ವರ್ಗಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆಯನ್ನು ಸುತ್ತೂರು ಮಠ ನೀಡಿದೆ ಎಂದು ಹೇಳಿದರು.
ಸುತ್ತೂರು ಮಠವು ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯ ಕೇಂದ್ರ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction








