ಮುಂಬೈ: ಜನವರಿ 16 ರಂದು ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದ ಆರೋಪಿಗೆ ಐದು ದಿನಗಳ ಪೊಲೀಸ್ ಕಸ್ಟಡಿ ನೀಡುವಾಗ ಮುಂಬೈ ನ್ಯಾಯಾಲಯವು ದಾಳಿಕೋರ ಬಾಂಗ್ಲಾದೇಶದವನಾಗಿರುವುದರಿಂದ ಅಂತರರಾಷ್ಟ್ರೀಯ ಪಿತೂರಿಯ ಅನುಮಾನವನ್ನು ತಳ್ಳಿಹಾಕುವಂತಿಲ್ಲ ಎಂಬುದಾಗಿ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ. ಅಂತರರಾಷ್ಟ್ರೀಯ ಪಿತೂರಿಯ ಅನುಮಾನ ಅಸಾಧ್ಯವೆಂದು ಹೇಳಲಾಗುವುದಿಲ್ಲ. ಆದ್ದರಿಂದ, ತನಿಖಾಧಿಕಾರಿಗೆ ಸಾಕಷ್ಟು ಸಮಯವನ್ನು ನೀಡಬೇಕಾಗಿದೆ. ಆದ್ದರಿಂದ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸೈಫ್ ಅಲಿ ಖಾನ್ ದಾಳಿ ಪ್ರಕರಣದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ಇಂದು ಮಧ್ಯಾಹ್ನ ಬಾಂದ್ರಾ ನ್ಯಾಯಾಲಯಕ್ಕೆ ಕರೆತರಲಾಯಿತು. ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದರು. ಇದನ್ನು ಪ್ರತಿವಾದಿ ವಕೀಲರು ವಿರೋಧಿಸಿದರು. ಅಂತಿಮವಾಗಿ ವಾದ ಪ್ರತಿವಾದ ಆಲಿಸಿದಂತ ಕೋರ್ಟ್ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
BREAKING NEWS: ನಟ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣ: ಆರೋಪಿ ಶೆಹಜಾದ್ ಗೆ 5 ದಿನ ಪೊಲೀಸ್ ಕಸ್ಟಡಿಗೆ
BREAKING : ಡಿಸಿಎಂ ಡಿಕೆ ಶಿವಕುಮಾರ್ ನೆಕ್ಸ್ಟ್ ‘CM’ ಅಗಲಿ ಎಂದು ‘ತ್ರಿಶೂಲ’ ನೀಡಿ ಆಶೀರ್ವದಿಸಿದ ಅರ್ಚಕರು!