ಬೆಂಗಳೂರು: 58 ವರ್ಷ ಪೂರ್ಣಗೊಂಡ ನೌಕರರಿಗೆ “ಪ್ರಯಾಸ್” ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಿತರಿಸಿದರು.
ಬೆಂ.ಮ.ಸಾ.ಸಂಸ್ಥೆಯು ಬೆಂಗಳೂರು ನಗರದ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 49 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳನ್ನು ಆಚರಣೆ ಮಾಡುವ ಮೂಲಕ ಸುರಕ್ಷಿತ ಮತ್ತು ಆರಾಮದಾಯಕ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯು ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಮುಖ ಯೋಜನೆಯಾದ ‘ಶಕ್ತಿ ಯೋಜನೆʼ- ಮಹಿಳೆಯರಿಗೆ ಉಚಿತ ಪ್ರಯಾಣ’ವನ್ನು 11 ಜೂನ್ 2023 ರಂದು ಪ್ರಾರಂಭಿಸಿದಾಗಿನಿಂದ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದುವರೆವಿಗೂ ಸುಮಾರು 75.57 ಕೋಟಿ ಕರ್ನಾಟಕದ ಮಹಿಳೆಯರು ಈ ಪ್ರಯಾಣ ಯೋಜನೆಯ ಪ್ರಾಯೋಜನವನ್ನು ಪಡೆದಿರುತ್ತಾರೆ. ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ, ಅದರಂತೆ ಪ್ರತಿದಿನ ಒಟ್ಟು 1,654 ಹೆಚ್ಚುವರಿ ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಪ್ರತಿದಿನ 5637 ಅನುಸೂಚಿಗಳಿಂದ 58300 ಸುತ್ತುವಳಿಗಳನ್ನು 11.52 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಏನಿದು ಪ್ರಯಾಸ್ ಯೋಜನೆ.?
ಪ್ರಾದೇಶಿಕ ಭವಿಷ್ಯ ನಿಧಿ ಕಛೇರಿಯ ಪ್ರಯಾಸ್ ಯೋಜನೆಯಡಿಯಲ್ಲಿ 100ಕ್ಕೂ ಹೆಚ್ಚು ನೌಕರರ ಪಿಂಚಣಿ ಪಾವತಿ ಆದೇಶವನ್ನು ಬೆಂಮಸಾಸಂಸ್ಥೆಯ ನೌಕರರಿಗೆ ವಿತರಿಸಲಾಗುತ್ತಿದೆ. ಪ್ರಯಾಸ್ ಯೋಜನೆಯಡಿಯಲ್ಲಿ ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಪಿಂಚಣಿ ಆದೇಶಗಳನ್ನು ನೀಡುತ್ತಿರುವ ಸ್ಥಾಪಿತ ಸಂಸ್ಥೆಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಒಂದು.
- ಈ ಯೋಜನೆಯಡಿ ನೌಕರರು 58 ವರ್ಷ ತುಂಬಿದ ಮಾಹೆಯಲ್ಲಿಯೇ ಪಿಂಚಣಿ ಪಾವತಿ ಆದೇಶವನ್ನು ಪಡೆಯುವ ಸೌಲಭ್ಯವಾಗಿರುತ್ತದೆ.
- ದಿನಾಂಕ 21.07.2020 ರಿಂದ ಈ ಯೋಜನೆಯು ಪ್ರಾರಂಭವಾಗಿದ್ದು, ಇದು ಪ್ರಾದೇಶಿಕ ಭವಿಷ್ಯನಿಧಿ ಕಛೇರಿಯ ಒಂದು ಪ್ರಯತ್ನವಾಗಿರುತ್ತದೆ.
- ಈ ಯೋಜನೆಗೂ ಮೊದಲು ನೌಕರರು 58 ವರ್ಷ ಪೂರ್ಣಗೊಂಡ ನಂತರ ಪಿಂಚಣಿಗೆ ಸಂಬಂಧಿಸಿದಂತೆ, ಹಲವಾರು ದಾಖಲೆ ಪತ್ರಗಳೊಂದಿಗೆ ಪಿಂಚಣಿ ಸಲುವಾಗಿ ಪ್ರಾದೇಶಿಕ ಭವಿಷ್ಯನಿಧಿ ಕಛೇರಿಗೆ ಅಲೆಯುವ ಪರಿಸ್ಥಿತಿ ಇರುತ್ತದೆ ಹಾಗೂ 2ರಿಂದ 3 ತಿಂಗಳುಗಳವರೆಗೆ ಪಿಂಚಣಿ ಇತ್ಯರ್ಥಪಡಿಸಲು ಸಮಯ ಉಂಟಾಗುತ್ತಿತ್ತು ಹಾಗೂ ವಿವಿಧ ವಿಭಾಗಗಳಿಂದ ವರ್ಗಾವಣೆ ಸಂದರ್ಭಗಳಲ್ಲಿ ಸಕಾಲದಲ್ಲಿ ಅನೆಕ್ಷರ್-ಕೆ ಗಳು ದೊರೆಯದೇ ಸಂಸ್ಥೆಯ ನೌಕರರು 6 ತಿಂಗಳು 1 ವರ್ಷದವರೆಗೆ ಪಿಂಚಣಿ ಇರ್ತರ್ಥವಾಗದೇ ತೊಂದರೆ ಅನುಭವಿಸಿದ್ದಾರೆ.
- ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಛೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೂಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತಿದೆ.
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಯಾಸ್ ಯೋಜನೆಯಡಿ 160 ಪಿಂಚಣಿ ಆದೇಶಗಳನ್ನು ವಿತರಿಸಲಾಗಿದೆ.
- ಪ್ರಸ್ತುತ, ಜೂನ್-2024ರ ಮಾಹೆಯಲ್ಲಿ ಲೆಕ್ಕಪತ್ರ ಇಲಾಖೆಯಿಂದ ಸಂಸ್ಥೆಯ ನೌಕರರಿಗೆ ಪ್ರಯಾಸ್ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸಭೆ ಕರೆದು, ಪಿಂಚಣಿ ಇತ್ಯರ್ಥಪಡಿಸಲು ನೀಡಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಸಕಾಲದಲ್ಲಿ ದಾಖಲೆಗಳನ್ನು ನೀಡುವಂತೆ ತಿಳುವಳಿಕೆ ನೀಡಿದ ಪ್ರಯುಕ್ತ ನೌಕರರು ಸಕಾಲದಲ್ಲಿ ಒದಗಿಸಿದ ದಾಖಲೆಗಳನ್ವಯ ಲೆಕ್ಕಪತ್ರ ಇಲಾಖೆಯಿಂದ ಪಿಂಚಣಿ ಅಭ್ಯರ್ಥನವನ್ನು ಸಿದ್ಧಪಡಿಸಿ, ಪ್ರಾದೇಶಿಕ ಭವಿಷ್ಯನಿಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಒಟ್ಟು 100ಕ್ಕೂ ಹೆಚ್ಚು ಅರ್ಹ ನೌಕರರ ಪಿಂಚಣಿ ಪಾವತಿ ಆದೇಶಗಳನ್ನು ಬಿಡುಗಡೆಗೊಳಿಸುವಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಲು ಸಂತಸವಾಗಿದೆ.
ಬೆಂ.ಮ.ಸಾ.ಸಂಸ್ಥೆಯು ಕೈಗೊಂಡಿರುವ ಕಾರ್ಮಿಕ ಕಲ್ಯಾಣ ಕಾರ್ಯಗಳು
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು 2023-2024 ಸಾಲಿನಲ್ಲಿ ಒಟ್ಟು 250 ಅನುಕಂಪ ಆಧಾರಿತ ಕಿರಿಯ ಸಹಾಯಕ ಕಂ ಡೇಟಾ ಆಪರೇಟರ್ ಗಳನ್ನು ನೇಮಕಾತಿ ಪತ್ರಗಳನ್ನು ವಿತರಣೆ ಮಾಡಿರುತ್ತಾರೆ.
- ಈ ಸಾಲಿನಲ್ಲಿ 2500 ನಿರ್ವಾಹಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.
- ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರಸ್ತುತ ನೀಡುತ್ತಿದ್ದ ರೂ 3.00 ಲಕ್ಷಗಳ ಗುಂಪು ಪರಿಹಾರ ವಿಮಾ ಯೋಜನೆಯ ಮೊತ್ತವನ್ನು ರೂ 00 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದೆ .
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸೇವೆಯಲ್ಲಿರುವ ಎಲ್ಲಾ ನೌಕರರ ಹಾಗೂ ಅವರು ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ರೂ.1.00 ಕೋಟಿಯ ವಿಮಾ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
- 45 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲು ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 05 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿರುತ್ತದೆ.
- ಈ ಸಾಲಿನಲ್ಲಿ ಬೆಂ.ಮ.ಸಾ.ಸಂಸ್ಥೆಗೆ ASRTU ಮತ್ತು SKOCH ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭಿಸಿವೆ.
- ಸಂಸ್ಥೆಗೆ ಇತ್ತೀಚೆಗೆ ಜೂನ್-2024 ಮಾಹೆಯಲ್ಲಿ ಆರೋಗ್ಯ ವರ್ಲ್ಡ್ ಪ್ರತಿಷ್ಠಿತ ಸಂಸ್ಥೆಯಿಂದ ಹೆಲ್ತಿ ಅಂಡ್ ಸೆಫ್ಟಿ ವರ್ಕ್ಪಪ್ಲೇಸ್ ಸಿಲ್ವರ್ ಮಟ್ಟದ ಮಾನ್ಯತೆ ದೊರಕಿರುತ್ತದೆ.
- ಈವರೆವಿಗೂ ಬೆಂ.ಮ.ಸಾ.ಸಂಸ್ಥೆಗೆ ಒಟ್ಟಾರೆ 138 ಪ್ರಶಸ್ತಿ/ಪುರಸ್ಕಾರಗಳು ಲಭಿಸಿರುತ್ತದೆ.
‘ಸ್ವಾಮೀಜಿ’ಗಳು ರಾಜಕೀಯ ಮಾಡುವುದಾದರೇ, ಆ ಪಟ್ಟಕ್ಕೂ ‘ಚುನಾವಣೆ’ ನಡೆಯುವುದು ಒಳಿತಲ್ಲವೇ?: ಗುರುಕಿರಣ್
BREAKING: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ | T20 World Cup 2024