ಶಿವಮೊಗ್ಗ : ಜನವರಿ.21, 2026ರಂದು ರಾಜ್ಯ ಸುರಭಿ ಶ್ರೀ ಪ್ರಶಸ್ತಿಯನ್ನು ಬೆಳಿಗ್ಗೆ 10-30ಕ್ಕೆ ಸಾಗರದ ಸಿಗಂದೂರು ರಸ್ತೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಜಿ.ರಾಮಚಂದ್ರ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುರಭಿ ವಾಣಿ ಪತ್ರಿಕೆಯ 12ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಶಿ ಮಹಾಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯ ವಹಿಸಲಿದ್ದಾರೆ ಎಂದರು.
ಕಡೆನಂದಿಹಳ್ಳಿಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ತೊಗರ್ಸಿ ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿರುವರು. ಸಂಸದ ಬಿ.ವೈ.ರಾಘವೇಂದ್ರ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದ, ಶಾಸಕ ಗೋಪಾಲಕೃಷ್ಣ ಬೇಳೂರು ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಹರತಾಳು ಹಾಲಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ, ಎಂ.ಎಸ್.ಅರುಣಕುಮಾರ್ ಉಪಸ್ಥಿತರಿರುವರು ಎಂದು ಹೇಳಿದರು.
ಕಾರವಾರದ ಮಾಜಿ ಶಾಸಕ ಗಂಗಾಧರ ಎನ್. ಭಟ್, ಭಟ್ಕಳ ಸಿಪಿಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ, ದಾವಣಗೆರೆ ಸಮಾಜ ಸೇವಕ ವಾಸುದೇವ ರಾಯ್ಕರ್, ಚಿತ್ರ ನಟ ಮತ್ತು ನಿರ್ದೆಶಕ ಕಿಶನ್, ಕುಬಟೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪ್ರಶಾಂತ್ ಪಿ.ಎಸ್. ಅವರಿಗೆ ಸುರಭಿ ಶ್ರೀ ರಾಜ್ಯ ಪ್ರಶಸ್ತಿ, ಡಾ. ಪ್ರಭು ಸಾಹುಕಾರ ಸೊರಬ, ಮೋಹನ ಕೇಶವ ಶೇಟ್ ಸಾಗರ (ಸಮಾಜಸೇವೆ), ಮಂಜುನಾತ ಜಿ. ವಿಠ್ಠಲ್‌ಕರ್ ದಾವಣಗೆರೆ (ಸಾಮಾಜಿಕ ಕ್ಷೇತ್ರ), ಗಂಗಾಧರಪ್ಪ ಸಾಗರ (ನಿವೃತ್ತ ಯೋಧರು), ನಾಗರಾಜ್ ಎಂ. (ಮುದ್ರಣ ಕ್ಷೇತ್ರ), ಹನುಮಂತ ರಾವ್ ಇ. ಪಾಲನಕರ್ ದಾವಣಗೆರೆ (ಸಂಘಟನೆ) ಇವರಿಗೆ ಸುರಭಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಸುರಭಿ ಸಂಸ್ಥೆಯು 7 ವರ್ಷಗಳಿಂದ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಜ. 21ರಂದು ಪೂಜ್ಯ ಕಾಶಿ ಜಗದ್ಗುರುಗಳನ್ನು ಸ್ವಾಗತಿಸಿ ಬೈಕ್ ಮತ್ತು ಕಾರು ರ‍್ಯಾಲಿ ಯೊಂದಿಗೆ ದೈವಜ್ಞ ಕಲ್ಯಾಣ ಮಂಟಪಕ್ಕೆ ಕರೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಮಠದ 10ಕ್ಕೂ ಹೆಚ್ಚು ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಕೆ.ವಿ.ಪ್ರವೀಣ್, ಎಸ್.ಜಿ.ಹಿರೇಮಠ, ಚಂದ್ರಶೇಖರ್, ಎಸ್.ಸಿ.ಗಂಗಾಧರ ಗೌಡ, ವಾಣಿಶ್ರೀ ಹಾಜರಿದ್ದರು.
ಏಪ್ರಿಲ್ ನಿಂದ ಪ್ಲಾಸ್ಟಿಕ್ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ








