ನವದೆಹಲಿ: ಶಂಭು ಗಡಿಯನ್ನು ಭಾಗಶಃ ಮತ್ತೆ ತೆರೆಯಲು ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ, “ಹೆದ್ದಾರಿಗಳು ಟ್ರಾಕ್ಟರುಗಳು, ಟ್ರಾಲಿಗಳು, ಜೆಸಿಬಿಗಳನ್ನು ನಿಲ್ಲಿಸಲು ಅಲ್ಲ” ಎಂದು ಅಭಿಪ್ರಾಯಪಟ್ಟಿದೆ. ರೈತರು ತಮ್ಮ ಬೇಡಿಕೆಗಳು ಈಡೇರುವವರೆಗೂ ಸ್ಥಳವನ್ನು ಬಿಡಲು ನಿರಾಕರಿಸುತ್ತಿರುವುದರಿಂದ ಈಗ ಆರು ತಿಂಗಳಿನಿಂದ ಗಡಿಯನ್ನು ಮುಚ್ಚಲಾಗಿದೆ.
ಶಂಭು ಗಡಿಯನ್ನು ಓಪನ್ ಮಾಡುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನದ ವಿರುದ್ಧ ಹರಿಯಾಣದ ಮನವಿಯನ್ನು ಆಲಿಸುತ್ತಿರುವ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠ, ಹಿರಿಯ ನಾಗರಿಕರು, ಆಂಬ್ಯುಲೆನ್ಸ್ಗಳು, ವಿದ್ಯಾರ್ಥಿಗಳು ಮತ್ತು ಅಗತ್ಯ ಸೇವೆಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆದೇಶಿಸಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬೆಂಬಲಿಸಿ ಪಂಜಾಬ್ನ ಹಲವಾರು ರೈತ ಸಂಘಗಳು ದೆಹಲಿಯ ಕಡೆಗೆ ಮೆರವಣಿಗೆ ಪ್ರಾರಂಭಿಸಿದ ದಿನವಾದ ಫೆಬ್ರವರಿ 13 ರಿಂದ ಗಡಿಯನ್ನು ಮುಚ್ಚಲಾಗಿದೆ