ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಮಾನ್ಯವಾಗಿ ಕಪ್ಪು ಬೆಳ್ಳುಳ್ಳಿ ಬಗ್ಗೆ ಜನರಿಗೆ ಅಷ್ಟಾಗಿ ಪರಿಚಯವಿಲ್ಲ. ಇದು ಅದೆಷ್ಟೋ ಆರೋಗ್ಯದ ಸಮಸ್ಯೆಗಳನ್ನು ಸುಧಾರುತ್ತದೆ ಎಂದು ಹೇಳಾಗುತ್ತದೆ. ಆಹಾರ ತಜ್ಞರ ಪ್ರಕಾರ ಕಪ್ಪು ಬೆಳ್ಳುಳ್ಳಿ ಔಷಧಿ ರೂಪದ ಆಹಾರ. ಕಪ್ಪು ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಅಡುಗೆಗೆ ರುಚಿ ಕೂಡ ಹೆಚ್ಚಿಸುತ್ತದೆ ಆದರೆ ಅದೆಷ್ಟೋ ಜನರಿಗೆ ಇದರ ವಾಸನೆ ಆಗಿಬರುವುದಿಲ್ಲ. ಹೀಗಾಗಿ ಕಪ್ಪು ಬೆಳ್ಳುಳ್ಳಿ ಸೇವನೆಯನ್ನು ಬಿಟ್ಟು ಅದೆಷ್ಟೋ ಪೋಷಕಾಂಶಗಳಿಂದ ವಂಚಿತರಾಗುತ್ತಾರೆ ಎಂದು ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಇನ್ನು ಕಪ್ಪು ಬೆಳ್ಳುಳ್ಳಿ ಹೇಗೆ ತಯಾರಿಸುತ್ತಾರೆ ಎಂದರೆ, ಬಿಳಿ ಬೆಳ್ಳುಳ್ಳಿಯನ್ನು ಹುದುಗಿಸುವ ಮೂಲಕ ಕಪ್ಪು ಬೆಳ್ಳುಳ್ಳಿಯನ್ನು ಮಾಡುತ್ತಾರೆ. ಬಿಳಿ ಬೆಳ್ಳುಳ್ಳಿಯಲ್ಲಿರುವ ಎಲ್ಲಾ ಅಂಶಗಳು ಕಪ್ಪು ಬೆಳ್ಳುಳ್ಳಿಯಲ್ಲಿದ್ದು, ಹುದುಗುವಿಕೆಯಿಂದಾಗಿ ಕಪ್ಪು ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಉಂಟಾಗುತ್ತವೆ. ಹಾಗಾಗಿ ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಗಿಂತ ಭಿನ್ನವಾಗುತ್ತದೆ. ಈ ಕಪ್ಪು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಣ್ಣಪುಟ್ಟ ಕಾಯಿಲೆಯಿಂದ ಹಿಡಿದ ಕ್ಯಾನ್ಸರ್‌ನಂತಹ ಭಯಾನಕ ರೋಗಗಳನ್ನೂ ತೆಡಯಬಹುದು ಎಂದು ಹೇಳಲಾಗುತ್ತದೆ.
ಯಕೃತ್ ಸಮಸ್ಯೆ ಇದ್ದವರಿಗೆ ಕಪ್ಪು ಬೆಳ್ಳುಳ್ಳಿ ಸೇವನೆ ತುಂಬಾ ಪರಿಣಾಮಕಾರಿಯಾಗಿದೆ. ಕಪ್ಪು ಬೆಳ್ಳುಳ್ಳಿಯನ್ನು ಹಿತವಾಗಿ ಮಿತವಾಗಿ ಊಟದೊಂದಿಗೆ ಸೇವಿಸಿದರೆ ಪಿತ್ತಜನಕಾಂಗವು ನಿರವಿಶೀಕರಣಗೊಳ್ಳುತ್ತಲೇ ಇರುತ್ತದೆ ಹಾಗು ಯಕೃತ್ತಿಗೆ ಯಾವುದೇ ತೊಂದರೆ ಉಂಟು ಮಾಡಿದೇ ಆರೋಗ್ಯವಾಗಿರಿಸುತ್ತದೆ.
ಕಪ್ಪು ಬೆಳ್ಳುಳ್ಳಿ ಸೇವನೆ ದೇಹದಲ್ಲಿನ ಜೀವಕೋಶಗಳನ್ನು ನಿಯಂತ್ರಿಸುತ್ತದೆ. ಈ ಮೂಲಕ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು.
ಖಾಳಿ ಹೊಟ್ಟೆಯಲ್ಲಿ ದಿನಂಪ್ರತಿ ಒಂದರೆಡು ಎಸಳು ಕಪ್ಪು ಬೆಳ್ಳುಳ್ಳಿಯನ್ನು ತಿಂದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆದುಹಾಕುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಹಾಗು ಬಿಪಿಯನ್ನು ಕಂಟ್ರೋಲ್‌ನಲ್ಲಿ ಇರಿಸುತ್ತದೆ.
ಅಹಾರ ತಜ್ಞರು ಹೇಳುವ ಪ್ರಕಾರ ಕಪ್ಪು ಬೆಳ್ಳುಳ್ಳಿ ಇದೊಂದು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಇದು ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ. ಬುದ್ಧಿಮಾಂದ್ಯ ಇದ್ದವರಿಗೆ ಕಪ್ಪು ಬೆಳ್ಳುಳ್ಳಿ ತಿನಿಸಿದರೆ ನಿಧಾನವಾಗಿ ಅವರ ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.