ಬೆಂಗಳೂರು: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವೆ ಎರಡು ಟ್ರಿಪ್ಗಳ ವಿಶೇಷ ಎಕ್ಸ್ ಪ್ರೆಸ್ ರೈಲುನ್ನು ಓಡಿಸಲಿದೆ. ಈ ರೈಲು ಹಿಂದಿರುಗುವಾಗ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂದು ತಲುಪಲಿವೆ.
ರೈಲು ಸಂಖ್ಯೆ 06567 ಯಶವಂತಪುರ–ನ್ಯೂ ಜಲ್ಪೈಗುರಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 17 ಮತ್ತು 24 ರಂದು ಬೆಳಿಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು, ಮೂರನೇ ದಿನ ಬೆಳಿಗ್ಗೆ 7ಕ್ಕೆ ನ್ಯೂ ಜಲ್ಪೈಗುರಿ ತಲುಪಲಿದೆ. ಹಿಂದಿರುಗುವ ಹಾದಿಯಲ್ಲಿ, ರೈಲು ಸಂಖ್ಯೆ 06568 ನ್ಯೂ ಜಲ್ಪೈಗುರಿ–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು ಏಪ್ರಿಲ್ 20 ಮತ್ತು 27 ರಂದು ಬೆಳಿಗ್ಗೆ 8.30ಕ್ಕೆ ನ್ಯೂ ಜಲ್ಪೈಗುರಿಯಿಂದ ಹೊರಟು, ಮೂರನೇ ದಿನ ಬೆಳಿಗ್ಗೆ 9.55ಕ್ಕೆ ಬೆಂಗಳೂರು ಕಂಟೋನ್ಮೆಂಟ್’ಗೆ ಆಗಮಿಸಲಿದೆ.
ಮಾರ್ಗ ಮಧ್ಯದಲ್ಲಿ ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗೂಟಿ, ಧೋಣೆ, ನಂದ್ಯಾಲ್, ಮಾರ್ಕಾಪುರ ರೋಡ್, ನರಸರಾವ್ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್ಪುರ ಕಿಯೋಂಜರ್ ರೋಡ್, ಭದ್ರಕ್, ಖರಗ್ಪುರ, ಅಂದುಲ್, ಡನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್ ಮತ್ತು ಕಿಶನ್ಗಂಜ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲು ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್ ಹಾಗೂ ಸಾಮಾನ್ಯ ದ್ವಿತೀಯ ದರ್ಜೆ, ಲಗೇಜ್ ಮತ್ತು ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರಲಿದೆ.
IPL ಪಂದ್ಯಾವಳಿ ಹಿನ್ನಲೆ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಸ್ಥಳಗಳಿಗೆ ‘ವಿಶೇಷ BMTC ಬಸ್’ ಸೌಲಭ್ಯ
ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ವಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು








