ಹುಬ್ಬಳ್ಳಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಗುಜರಾತ್ ರಾಜ್ಯದ ಅಹಮದಾಬಾದ್ ಹತ್ತಿರವಿರುವ ವಾಟ್ವಾ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.
ರೈಲು ಸಂಖ್ಯೆ 07333 ಎಸ್ಎಸ್ಎಸ್ ಹುಬ್ಬಳ್ಳಿಯಿಂದ ವಾಟ್ವಾಗೆ ಏಪ್ರಿಲ್ 13 ರಿಂದ ಜೂನ್ 15, 2025 ರವರೆಗೆ ಪ್ರತಿ ಭಾನುವಾರದಂದ ಸಂಜೆ 7:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲು ಮರುದಿನ ಸೋಮವಾರ ಸಂಜೆ 6:45 ಗಂಟೆಗೆ ತನ್ನ ಗಮ್ಯಸ್ಥಾನವಾದ ವಾಟ್ವಾವನ್ನು ತಲುಪಲಿದೆ.
ರೈಲು ಸಂಖ್ಯೆ 07334 ವಾಟ್ವಾದಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಏಪ್ರಿಲ್ 14 ರಿಂದ ಜೂನ್ 16, 2025 ರವರೆಗೆ ಪ್ರತಿ ಸೋಮವಾರ ವಾಟ್ವಾದಿಂದ ರಾತ್ರಿ 9:45 ಗಂಟೆಗೆ ಹೊರಡಲಿದೆ. ಈ ರೈಲು ಮಂಗಳವಾರ ರಾತ್ರಿ 7:45ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು 1-ಎಸಿ ಫಸ್ಟ್ ಕಮ್ ಎಸಿ 2 ಟೈರ್, 1-ಎಸಿ 2-ಟೈರ್, 3-ಎಸಿ 3-ಟೈರ್, 8-ಸ್ಲೀಪರ್ ಕ್ಲಾಸ್, 5-ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2-ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.
‘ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ’ ಅವರ ‘ಕಾಡುಗೊಲ್ಲ ಬುಡಕಟ್ಟು ಕುಲಕಥನ’ಕ್ಕೆ ‘ಪುಸ್ತಕ ಸೊಗಡು ಬಹುಮಾನ’
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕನ್ನಡ ಪುಸ್ತಕ ಸೊಗಸು, ಮುದ್ರಣ ಸೊಗಸು ಬಹುಮಾನ ಪ್ರಕಟ