ಬೆಂಗಳೂರು: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ರೂಪ್ಸಾ – ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಮೂರು ಟ್ರಿಪ್ಗಳ ವಿಶೇಷ ರೈಲು ಸೇವೆಯನ್ನು ಓಡಿಸಲಿದೆ.
ರೈಲು ಸಂಖ್ಯೆ 06545 ಎಸ್.ಎಂ.ವಿ.ಟಿ. ಬೆಂಗಳೂರು – ರೂಪ್ಸಾ ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ 15, ಏಪ್ರಿಲ್ 22 ಮತ್ತು ಏಪ್ರಿಲ್ 29 ರಂದು (ಬುಧವಾರ) ಸಂಜೆ 04:35 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಿಂದ ಹೊರಟು, ಮರುದಿನ ರಾತ್ರಿ 08:30 ಕ್ಕೆ ರೂಪ್ಸಾ ತಲುಪಲಿದೆ.
ರೈಲು ಸಂಖ್ಯೆ 06546 ರೂಪ್ಸಾ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ 16, ಏಪ್ರಿಲ್ 23 ಮತ್ತು ಏಪ್ರಿಲ್ 30 ರಂದು (ಗುರುವಾರ) ರಾತ್ರಿ 11:30 ಕ್ಕೆ ರೂಪ್ಸಾ ನಿಲ್ದಾಣದಿಂದ ಹೊರಟು, ಶನಿವಾರ ಬೆಳಿಗ್ಗೆ 05:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ರೈಲುಗಳಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೇಟೆ, ಕಾಟ್ಪಾಡಿ, ರೇಣಿಗುಂಟಾ, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್ ಹಾಗೂ ಭದ್ರಕ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 12 ದ್ವಿತೀಯ ದರ್ಜೆ, 4 ಸ್ಲೀಪರ್ ದರ್ಜೆ, 2 ಎಸಿ 3-ಟೈರ್ ಹಾಗೂ 2 ಲಗೇಜ್-ಕಮ್-ಬ್ರೇಕ್ವ್ಯಾನ್ ಬೋಗಿಗಳು ಇರಲಿವೆ.
BREAKING: ಪಿಯುಸಿ ಪರೀಕ್ಷೆ-1, 2ರಲ್ಲಿ ಗಳಿಸಿದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ – ಕೆಇಎ
ಮತದಾರರ ಪಟ್ಟಿಯಲ್ಲಿ ಉಳಿಯುವುದು ನಾಗರಿಕರ ಹಕ್ಕು: ಚುನಾವಣಾ ನೆಪದಲ್ಲಿ ಕುರುಡಾಗಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್!








