ಮಂಡ್ಯ: ಸುಮಲತಾ ಅಂಬರೀಶ್‌ಗೆ ಮಂಡ್ಯ ಲೋಕಸಭಾ ಟಿಕೇಟ್ ಮಿಸ್ ಆಗಿದೆ ಎನ್ನಲಾಗಿದ್ದು, ಈ ಮೂಲಕ ಬಿಜೆಪಿ ಟಿಕೆಟ್ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದ ಸುಮಲತಾ ಅವರಿಗೆ ದೊಡ್ಡ ಶಾಕ್ ಎದುರಾಗಿದೆ. ಸದ್ಯ ಕೋಲಾರ. ಹಾಸನ, ಮಂಡ್ಯ ಜೆಡಿಎಸ್ ಪಾಲಾಗಿದೆ ಎನ್ನಲಾಗಿದೆ.
ಈ ನಡುವೆ ತಮಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎನ್ನುವ ಮಾಹಿತಿಯನ್ನು ಪಡೆದುಕೊಂಡಿರುವ ಸುಮಲತಾ ಅಂಬರೀಶ್ ಅವರು ಮುಂದಿನ ನಡೆಯನ್ನು ಕಾರ್ಯಕರ್ತರ ಸಭೆ ಬಳಿಕ ಮಾಹಿತಿಯನ್ನು ನೀಡುವೆ ಅಂಥ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.