ಮಂಡ್ಯ: ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ ಅಂತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ರಾಜ್ಯದ ಘನತೆ ಹಾಳು ಮಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್ ವಾಗ್ಧಾಳಿ
BREAKING : ಬೆಂಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದುರ್ಮರಣ!
ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ (Mandya) ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ. ಯಶ್-ದರ್ಶನ್ ದೊಡ್ಡ ಶಕ್ತಿ ಬರೋದು ಇದ್ರೆ ಹಾರ್ಟ್ಲಿ ವೆಲ್‌ಕಮ್. ಕರ್ನಾಟಕದಲ್ಲಿ ಯಾವಾಗ ಅಭ್ಯರ್ಥಿ ಪಟ್ಟಿ ಬರುತ್ತೊ ಅವಗ್ಲೆ ನಮ್ಮದು ಕೂಡ ಬರುತ್ತೆ ಅಂತ ಹೇಳಿದರು. ಇನ್ನೂ ಕಳೆದ ಬಾರಿ ನಾನು ನಿಂತಿದ್ದು ಪಕ್ಷೇತರ ಅಭ್ಯರ್ಥಿಯಾಗಿ. ಯಾವುದೇ ಒಂದು ಅನುಭವ ಇಲ್ಲದೆ ಚುನಾವಣೆಗೆ ನಿಂತಿದ್ದೆ. ನನಗೆ ಬೇಕಾದವರು ನಿಮ್ಮ ಜೊತೆ ಇರ್ತೇವೆ ಅಂತ ಗಟ್ಟಿಯಾಗಿ ನಿಂತಿದ್ರು. ಇವಾಗ ಸಂದರ್ಭ ಬೇರೆ ಇರುತ್ತೆ. ಚಿಹ್ನೆಯಿಂದ ನಿಲ್ತೇನೆ, ಪಕ್ಷ ಮತ್ತು ಪಕ್ಷದ ಲೀಡರ್ ಏನು ಹೇಳ್ತಾರೆ ನೋಡಬೇಕು ಅಂತ ಹೇಳಿದರು.