ಚರ್ಮದ ಕಾಂತಿ ಹೆಚ್ಚಿಸುವ ಸಕ್ಕರೆ… ಒಂದ್ಸಲ ಟ್ರೈ ಮಾಡಿ – Kannada News Now


Beauty Tips Lifestyle

ಚರ್ಮದ ಕಾಂತಿ ಹೆಚ್ಚಿಸುವ ಸಕ್ಕರೆ… ಒಂದ್ಸಲ ಟ್ರೈ ಮಾಡಿ

ಸ್ಪೆಷಲ್ ಡೆಸ್ಕ್ : ಸಕ್ಕರೆಯು ದೇಹಕ್ಕೆ ಒಳ್ಳೆಯದಲ್ಲ. ಆದರೆ ಇದು ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನನಿತ್ಯದ ಬಳಕೆಯ ಉಪ್ಪು ಎಲ್ಲಾ ತರಹದ ಚರ್ಮಕ್ಕೆ ಹೊಂದುವುದಿಲ್ಲ, ಆದರೆ ಸಕ್ಕರೆ ಮಾತ್ರ ಚರ್ಮಕ್ಕೆ ಉತ್ತಮ ಪರಿಣಾಮ ಬೀರುತ್ತದೆ. ನೀವು ಟ್ರೈ ಮಾಡಿ ನೋಡಿ…

ಹೈಡ್ರೇಶನ್ : ಉಪ್ಪಿನಲ್ಲಿ ಸೋಡಿಯಂ ಅಂಶ ಅಧಿಕವಾಗಿದ್ದು ಇದು ಚರ್ಮದಲ್ಲಿನ ನೀರಿನ ಅಂಶವೆಲ್ಲಾ ಒಣಗುವಂತೆ ಮಾಡುತ್ತದೆ. ಇದರಿಂದ ಚರ್ಮ ಶುಷ್ಕವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಕ್ಕರೆ ಸಹಾಯಕ್ಕೆ ಬರುತ್ತದೆ. ಸಕ್ಕರೆ ಚರ್ಮದ ಆಳದವರೆಗೆ ತೇವಾಂಶವನ್ನು ಹಿಡಿದಿಡುವಂತೆ ಮಾಡುತ್ತದೆ.

ಡ್ರೈ ಸ್ಕಿನ್ : ಡ್ರೈ ಸ್ಕಿನ್ ನಿಂದಾಗಿ ಅಲರ್ಜಿಯಾಗುತ್ತಿದೆಯೇ? ಇಂತಹ ಸಂದರ್ಭದಲ್ಲಿ ಅಲ್ಭಾ ಹೈಡ್ರಾಕ್ಷಿ ಆಸಿಡ್‌‌‌ನಲ್ಲಿರುವ ಗೈಕೋಲಿಕ್ ಆಸಿಡ್, ಸಕ್ಕರೆಯೊಂದಿಗೆ ಸೇರಿ ಚರ್ಮ ಹಚ್ಚಿದರೆ ಹೊಸ ಚರ್ಮದ ಬೆಳವಣಿಗೆಯಾಗುತ್ತದೆ.

ಸುಕ್ಕು ನಿವಾರಕ : ಚರ್ಮದ ಸುಕ್ಕನ್ನು ಕಡಿಮೆಮಾಡುವುದಲ್ಲದೆ ಸೂರ್ಯನ ತಾಪದಿಂದ ಉಂಟಾಗುವ ಕಲೆಗಳು ಹಾಗೂ ಚರ್ಮದ ಮೇಲಿನ ಗೆರೆಗಳನ್ನು ಕಡಿಮೆಗೊಳಿಸುತ್ತದೆ.

ಸುಕೋಮಲ ಚರ್ಮ : ಉಪ್ಪಿನ ಕಣಗಳಿಗಿಂತ ಅತಿ ಚಿಕ್ಕ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುವ ಕಂದು ಬಣ್ಣದ ಸಕ್ಕರೆಯ ಬಳಕೆ ಚರ್ಮ ಕೋಮಲವಾಗಿರಲು ಸಹಕಾರಿಯಾಗಿದೆ. ಹೀಗಾಗಿ ಕಂದು ಬಣ್ಣದ ಸಕ್ಕರೆಯನ್ನು ನೀರಿನೊಂದಿಗೆ ಬೆರೆಸಿ ಸ್ಕ್ರಬ್ ತಯಾರಿಸಿ ಮುಖಕ್ಕೆ ಹಚ್ಚಿರಿ.