ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಕೃಷಿಯಿಂದ ಶಾಶ್ವತ ನಷ್ಟ, ರೈತರು ಸಾಲದ ಸುಳಿಯಲ್ಲಿ ಮುಳುಗಿದ್ದಾರೆ. ಕೃಷಿಯ ಬಗ್ಗೆ ನಾವು ಆಗಾಗ ಕೇಳುವ ಮಾತುಗಳಿವು. ಆದ್ರೆ, ಇಂದಿನ ದಿನಗಳಲ್ಲಿ ಯುವ ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಆಧುನಿಕ ಪದ್ಧತಿಯಲ್ಲಿ ಬೆಳೆ ಬೆಳೆದು ಅಪಾರ ಆದಾಯ ಗಳಿಸುತ್ತಿದ್ದಾರೆ. ಗುಜರಾತ್’ನ ಅಹಮದಾಬಾದ್’ನಲ್ಲಿ ರೈತರೊಬ್ಬರು ಎರಡು ತಿಂಗಳಲ್ಲಿ ಎರಡೂವರೆ ಲಕ್ಷ ಸಂಪಾದಿಸಿ ಮಾದರಿಯಾಗಿದ್ದಾರೆ. ಹೇಗೆ ಎಂದು ತಿಳಿಯೋಣ.
ಅನೇಕ ರೈತರು ಈಗಾಗಲೇ ತಮ್ಮ ಹೊಲವನ್ನ ತೊರೆದು ಕೆಲಸ ಮಾಡಲು ನಗರಗಳಿಗೆ ಹೋಗುತ್ತಿದ್ದಾರೆ. ಅಲ್ಲದೇ ಕೆಲವರಿಗೆ ಕೃಷಿ ಮಾಡಿದರೂ ಹೆಚ್ಚಿನ ಲಾಭ ಸಿಗುತ್ತಿಲ್ಲ. ಯಾವುದೇ ಬೆಳೆ ಬೆಳೆಯುವ ಮೊದಲು ಸಾಕಷ್ಟು ಅನುಭವ ಹೊಂದಿರಬೇಕು. ಆಗ ಕೃಷಿಯಲ್ಲಿ ಮಿಂಚಬಹುದು. ಆದ್ರೆ, ಕೆಲವು ಯುವ ರೈತರು ಋತುಮಾನಕ್ಕೆ ಅನುಗುಣವಾಗಿ ಬೆಳೆಗಳನ್ನ ಬೆಳೆಯುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಜೀವನದಲ್ಲಿ ಸರಿಯಾದ ಮಾರ್ಗದರ್ಶಕರನ್ನ ಕಂಡುಕೊಂಡರೆ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆ ಸಾಧ್ಯ ಎಂಬುದಕ್ಕೆ ಪ್ರಗತಿಪರ ರೈತ ಸಾಕ್ಷಿ. ರಾಯ್ ಬರೇಲಿ ಜಿಲ್ಲೆಯ ವಿಜಯ್ ಕುಮಾರ್ ಅವರು ತಮ್ಮ ಪೂರ್ವಿಕರ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ಆದ್ರೆ, ಅವರ ಸಂಬಂಧಿಯೊಬ್ಬರು ತೋಟಗಾರಿಕೆ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
ಒಂದು ದಿನ ಸಂಬಂಧಿ ಪವನ್ ವರ್ಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಬಂದು ಕಲ್ಲಂಗಡಿ ಬೆಳೆಯಲು ಸೂಚಿಸಿದಾಗ ಅವರ ಸಲಹೆಯಂತೆ ಕಲ್ಲಂಗಡಿ ಕೃಷಿ ಆರಂಭಿಸಿದರು. ಈಗ ಈ ಬೇಸಾಯವು ಕಡಿಮೆ ವೆಚ್ಚ ಮತ್ತು ಹೆಚ್ಚಿನ ಲಾಭದ ಕಾರಣ ಇತರ ಬೆಳೆಗಳಿಗೆ ಹೋಲಿಸಿದರೆ ಬಹಳ ಲಾಭದಾಯಕವಾಗಿದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಉತ್ತಮ ಬೆಲೆಗೆ ಸುಲಭವಾಗಿ ಮಾರಾಟವಾಗುತ್ತದೆ. ರಾಯ್ ಬರೇಲಿ ಜಿಲ್ಲೆಯ ಶಿವಗಢ ಪೊಲೀಸ್ ಠಾಣೆ ವ್ಯಾಪ್ತಿಯ ಪದ್ರಾ ಖುರ್ದ್ ಗ್ರಾಮದ ನಿವಾಸಿ ವಿಜಯ್ ಕುಮಾರ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಇಡೀ ಸೀಸನ್’ನಲ್ಲಿ ಸುಮಾರು 50 ರಿಂದ 60 ಸಾವಿರ ರೂಪಾಯಿ. ಖರ್ಚು ಕಳೆದರೆ ಸೀಸನ್’ನಲ್ಲಿ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಲಾಭ ಬರುತ್ತದೆ ಎಂದರು. ಇತರೆ ಬೆಳೆಗಳಿಗಿಂತ ಹೆಚ್ಚು ಲಾಭ ನೀಡುವ ಬೆಳೆ ಇದಾಗಿದೆ ಎಂದು ವಿಜಯ್ ತಿಳಿಸಿದರು. ಇಲ್ಲಿ ಬೆಳೆಯುವ ಕಲ್ಲಂಗಡಿಗಳನ್ನ ರಾಯ್ ಬರೇಲಿ ಮತ್ತು ಲಖನೌ ಮಾರುಕಟ್ಟೆಗೆ ಮಾರಾಟಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಅಂಬಾನಿ – ಟಾಟಾ ಹೊಸ ಯೋಜನೆ : ಈಗ ‘ಪೆಟ್ರೋಲ್’ ಖರೀದಿಸುವ ಅಗತ್ಯವಿಲ್ಲ!
ಜೂನ್ 2024ರಿಂದ ‘ಡಿಸ್ನಿ+ ಬಳಕೆದಾರ’ರು ಪಾಸ್ವರ್ಡ್ ಹಂಚಿಕೊಳ್ಳುವುದಕ್ಕೆ ನಿರ್ಬಂಧ
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ‘ಮೋದಿ ಮತ್ತೊಮ್ಮೆ’ ವಾತಾವರಣ: ಬಿವೈ ವಿಜಯೇಂದ್ರ ಅಭಿಪ್ರಾಯ