ಯಶಸ್ಸು ಯಾರ ಸ್ವತ್ತು ಅಲ್ಲ. ಬಯಸಿದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಇದು ಅಕ್ಷರಶಃ ನಿಜ ಎಂದು ಯುವ ಉದ್ಯಮಿ ಸಾಬೀತುಪಡಿಸಿದ್ದಾನೆ. ಈತನ ಹೆಸರು ಪರ್ಲ್ ಕಪೂರ್ ಅಂತಾ. ವಯಸ್ಸು ಕೇವಲ 27 ವರ್ಷಗಳು. ಇವ್ರ ಯಶಸ್ಸಿನ ಬಗ್ಗೆ ಕೇಳಿದ ಯಾರಾದರೂ ಆಶ್ಚರ್ಯಚಕಿತರಾಗಲೇಬೇಕು. ಯಕಂದ್ರೆ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಬಿಲಿಯನೇರ್ ಮಟ್ಟಕ್ಕೆ ಏರಿದರು.
ಕೇವಲ 90 ದಿನಗಳಲ್ಲಿ ಅವರು ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದಾರೆ. ಮುಖೇಶ್ ಅಂಬಾನಿ ಮತ್ತು ಗೌತಮ್ ಅಂಬಾನಿ ದೇಶದ ಅತ್ಯಂತ ಶ್ರೀಮಂತರಾಗಿದ್ದು, ವರ್ಷಗಳ ಕಠಿಣ ಪರಿಶ್ರಮದಿಂದ ಶತಕೋಟ್ಯಾಧಿಪತಿಗಳ ಮಟ್ಟಕ್ಕೆ ಏರಿದ್ದಾರೆ. ಆದ್ರೆ, ಈ ಯುವ ಉದ್ಯಮಿ ಈಗ ಅವರಿಗಿಂತ ಕಡಿಮೆ ಸಮಯದಲ್ಲಿ ಬಿಲಿಯನೇರ್ ಆಗಿದ್ದಾರೆ. ಈ ಮೂಲಕ ದೇಶದ ಎಲ್ಲಾ ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.
ಜೈಬರ್ 365 ಕಂಪನಿಯಲ್ಲಿ ಶೇಕಡಾ 90 ರಷ್ಟು ಪಾಲಿದೆ.!
ಯುವ ಬಿಲಿಯನೇರ್ ಗುಜರಾತ್ ಮೂಲದವರು. ಮೇ 2023 ರಲ್ಲಿ, ಅವರು ಜೈಬರ್ 365 ಎಂಬ ಸ್ಟಾರ್ಟ್ ಅಪ್ ಕಂಪನಿಯನ್ನು ಸ್ಥಾಪಿಸಿದರು. ಇದರ ಪ್ರಧಾನ ಕಚೇರಿ ಲಂಡನ್ ನಲ್ಲಿದೆ. ಆದಾಗ್ಯೂ, ಕಂಪನಿಯು ಗುಜರಾತ್’ನ ಅಹಮದಾಬಾದ್’ನಿಂದ ತನ್ನ ಕಾರ್ಯಾಚರಣೆಗಳೊಂದಿಗೆ ಹೆಚ್ಚು ಜನಪ್ರಿಯತೆಯನ್ನ ಗಳಿಸಿದೆ. ಜೈಬರ್ 365 ವೆಬ್ 3, ಎಐ ಆಧಾರಿತ ಓಎಸ್ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಕೇವಲ ಮೂರು ತಿಂಗಳಲ್ಲಿ (90 ದಿನಗಳಲ್ಲಿ) ಇದು 9,840 ಕೋಟಿ ರೂ.ಗೆ ಏರಿದೆ.
ಇದು ಭಾರತ ಮತ್ತು ಏಷ್ಯಾ ಎರಡರಲ್ಲೂ $ 1.2 ಬಿಲಿಯನ್ ಮೌಲ್ಯದ ವೇಗವಾಗಿ ಬೆಳೆಯುತ್ತಿರುವ ಯುನಿಕಾರ್ನ್ ಕಂಪನಿಯಾಗಿ ಹೊರಹೊಮ್ಮಿದೆ. ಅವರ ನಿವ್ವಳ ಮೌಲ್ಯವು 1.1 ಬಿಲಿಯನ್ ಡಾಲರ್ ಆಗಿದ್ದು, ಗುಜರಾತ್ ಉದ್ಯಮಿ ಮುಖ್ಯವಾಗಿ ಅದರಲ್ಲಿ ಶೇಕಡಾ 90ರಷ್ಟು ಪಾಲನ್ನ ಹೊಂದಿದ್ದಾರೆ. ಮೂರು ತಿಂಗಳೊಳಗೆ, ಸ್ಟಾರ್ಟ್ಅಪ್ ಯುನಿಕಾರ್ನ್ ಸ್ಥಾನಮಾನವನ್ನ ಪಡೆಯಿತು. ಸಾಮಾನ್ಯವಾಗಿ, ಇದು ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದರೆ. ಅಂತಹ ಕಂಪನಿಯನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ.
ಪರ್ಲ್ ಕಪೂರ್ ಯಶಸ್ಸಿನ ಪಯಣ ಆರಂಭ.!
ಯುವ ಬಿಲಿಯನೇರ್ ಯಶಸ್ಸಿನ ಪಯಣ ಮೊದಲು (AMPM) ಅಂಗಡಿಯಲ್ಲಿ ಹಣಕಾಸು ಸಲಹೆಗಾರರಾಗಿ ಪ್ರಾರಂಭಿಸಿದರು. ಅವರು ಆಂಟಿಯರ್ ಸೊಲ್ಯೂಷನ್ಸ್’ಗೆ ವ್ಯವಹಾರ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಹೀಗೆ ಅವರ ಪ್ರಯಾಣ ಆರಂಭವಾಯಿತು. ಜೈಬರ್ 365ಕ್ಕಿಂತ ಮೊದಲು, ಕಪೂರ್ ಫೆಬ್ರವರಿ 2022ರಲ್ಲಿ ಬಿಲಿಯನ್ ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿದರು. ಕಪೂರ್ ಲಂಡನ್ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ (CFA ಪಾಥ್ವೇ) ನಲ್ಲಿ ಪದವಿ ಪಡೆದರು. ಅದು ವ್ಯಾಪಾರ ಪ್ರಪಂಚದ ಸಂಕೀರ್ಣತೆಗಳನ್ನ ಅರ್ಥಮಾಡಿಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನ ಪಡೆಯುವಂತೆ ಮಾಡಿತು.
$100 ಮಿಲಿಯನ್ ನೊಂದಿಗೆ ಮೊದಲ ಹೂಡಿಕೆ.!
ಜುಲೈ 2023ರಲ್ಲಿ, ಸ್ಟಾರ್ಟ್ಅಪ್ ಜೈಬರ್ 365 ಕಂಪನಿಯ ಮೊದಲ ಹೂಡಿಕೆಯಲ್ಲಿ 100 ಮಿಲಿಯನ್ ಡಾಲರ್ನೊಂದಿಗೆ ಜಿಗಿದಿದೆ. ಕಂಪನಿಯು SRAM ಮತ್ತು (MRAM) ಗ್ರೂಪ್ನಿಂದ ಶೇಕಡಾ 8.3 ರಷ್ಟು ಹೂಡಿಕೆಯನ್ನ ಪಡೆಯಿತು. ಆಗ ಪರ್ಲ್ ಕಪೂರ್ ಭವಿಷ್ಯವನ್ನ ಕಂಡಿದ್ದು, ಬ್ಲಾಕ್ ಚೈನ್, ಎಐ ಮತ್ತು ಸೈಬರ್ ಸೆಕ್ಯುರಿಟಿಯಂತಹ ಘಾತೀಯ ತಂತ್ರಜ್ಞಾನಗಳು ಜಾಗತಿಕ ಮಟ್ಟದಲ್ಲಿ ವ್ಯಕ್ತಿಗಳನ್ನ ಸಬಲೀಕರಣಗೊಳಿಸಬಹುದು ಎಂದು ನಂಬಿದ್ದರು. ಅಂದಿನಿಂದ, ಅವರು ಕಂಪನಿಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಹೀಗೆ ಅವರ ಯಶಸ್ವಿ ಪ್ರಯಾಣವು ಪ್ರಾರಂಭವಾಯಿತು ಮತ್ತು ಅವರನ್ನ ಯುವ ಬಿಲಿಯನೇರ್ ಮಟ್ಟಕ್ಕೆ ಏರಿಸಿತು.
‘ಭಾರತದ ಸಂಸ್ಕೃತಿ ಮತ್ತು ರಾಮಾಯಣವನ್ನ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ’ : ಸಚಿವ ಅಮಿತ್ ಶಾ
BIGG NEWS : ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಆಗಲಿದೆ : ಪ್ರಧಾನಿ ಮೋದಿ