ಬೆಂಗಳೂರು: ರಾಜ್ಯಾಧ್ಯಂತ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಸರ್ವರ್ ಸಮಸ್ಯೆ ಉಂಟಾಗಿ ತೊಂದರೆಯಾಗಿತ್ತು. ಇದೀಗ ಸರ್ವರ್ ಸಮಸ್ಯೆ ಪರಿಹರಿಸಲಾಗಿದ್ದು, ಆಸ್ತಿ ನೋಂದಣಿಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪುನರಾರಂಭಿಸಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋದಿಸಿ ಉಪನೋಂದಣಾಧಿಕಾರಿಗಳು ನೋಂದಣಿ ಸ್ಥಗಿತ ಗೊಳಿಸಿರುವುದಾಗಿ ಸೋಷಿಯಲ್ ದಿನಾಂಕ: 21/10/2024 ರಂದು ಮೀಡಿಯ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿದೆ.
ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಐದಾರು ನೋಂದಣಿಯನ್ನು ಕೆಲಕಾಲ ಉಪನೋಂದಣಾಧಿಕಾರಿಗಳು ಕಂಡುಬಂದಿರುತ್ತದೆ. ಆದರೆ ನಂತರ ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮವಹಿಸಲಾಗಿದೆ. ಪುಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ, ಯಾರೇ ನೋಂದಣಿ ಮಾಡಿಸಿಕೊಳ್ಳಬೇಕಾದವರು ನೋಂದಣಿ ಮಾಡಿಸಬಹುದಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ ಎಂಬುದಾಗಿ ತಿಳಿಸಿದ್ದಾರೆ.
BREAKING: ಹಾಸನದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ನೆಲೆಸಿದ್ದ ಮೂವರು ಬಾಂಗ್ಲಾದೇಶಿಗರು ಅರೆಸ್ಟ್