ತಮಿಳುನಾಡು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿಮಾರನ್ ಅವರ ಮುಂಬರುವ ಚಿತ್ರ ʻವಿದುತಲೈʼ ಚಿತ್ರದ ಸೆಟ್‌ನಲ್ಲಿ 54 ವರ್ಷದ ಸ್ಟಂಟ್‌ಮಾಸ್ಟರ್ ಶನಿವಾರ ಸಾವನ್ನಪ್ಪಿದ್ದಾರೆ.

ಹಲವಾರು ವರ್ಷಗಳಿಂದ ಸ್ಟಂಟ್ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಸುರೇಶ್ ಚೆನ್ನೈನ ವಂಡಲೂರು ಬಳಿ ನಿರ್ಮಿಸಲಾದ ಚಿತ್ರದ ಸೆಟ್‌ನಲ್ಲಿ ಇನ್ನೊಬ್ಬ ಸ್ಟಂಟ್ ಸಂಯೋಜಕರಿಗೆ ಸಹಾಯ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ರೈಲು ದುರಂತದ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು. ಸ್ಟಂಟ್ ಸೀಕ್ವೆನ್ಸ್‌ಗಾಗಿ ಸುರೇಶ್ ಮತ್ತು ಇತರ ಕೆಲವರನ್ನು ಹಗ್ಗದ ‌ಮೂಲಕ ಕ್ರೇನ್‌ಗೆ ಕಟ್ಟಲಾಗಿತ್ತು. ದೃಶ್ಯ ಪ್ರಾರಂಭವಾಗುತ್ತಿದ್ದಂತೆ ಸುರೇಶ್‌ಗೆ ಕಟ್ಟಿದ್ದ ಹಗ್ಗ ತುಂಡಾಗಿದ್ದು, ಸುಮಾರು 20 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸುರೇಶ್‌ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುರೇಶ್ ಸಾವಿನ ಬಗ್ಗೆ ನಿರ್ಮಾಪಕ ವೆಟ್ರಿಮಾರನ್ ಮತ್ತು ನಿರ್ಮಾಪಕರು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

BIGG NEWS : ಇಂದು ʼಹನುಮಮಾಲೆ ವಿಸರ್ಜನೆʼಗಾಗಿ ಅಂಜಿನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ | Anjinadri hill

BIG NEWS: ʻಹಿಜಾಬ್ʼ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇರಾನ್ ಅಥ್ಲೀಟ್‌ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

Share.
Exit mobile version