Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕೆಂಪು ಮಾಂಸ’ ತಿನ್ನುವುದ್ರಿಂದ ಮಧುಮೇಹದ ಅಪಾಯ ಶೇ.50ರಷ್ಟು ಹೆಚ್ಚಾಗ್ಬೋದು : ಹೊಸ ಅಧ್ಯಯನ

06/03/2026 10:05 PM

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM

ಸುಖಿ ದಾಂಪತ್ಯಕ್ಕೆ ಲೈಂಗಿಕ ತೃಪ್ತಿ ಅಗತ್ಯ: ಸಂಗಾತಿಯ ಮನ ಗೆಲ್ಲಲು ಇಲ್ಲಿವೆ ಸರಳ ಸೂತ್ರಗಳು

06/03/2026 9:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯಾರ್ಥಿಗಳ ಗಮನಕ್ಕೆ : `SSLC ಪರೀಕ್ಷೆ-2′ ನೋಂದಣಿಗೆ ಮೇ 24ರ ವರೆಗೆ ಅವಕಾಶ
KARNATAKA

ವಿದ್ಯಾರ್ಥಿಗಳ ಗಮನಕ್ಕೆ : `SSLC ಪರೀಕ್ಷೆ-2′ ನೋಂದಣಿಗೆ ಮೇ 24ರ ವರೆಗೆ ಅವಕಾಶ

By kannadanewsnow5712/05/2024 6:38 AM

ಬೆಂಗಳೂರು: ಎಸ್‌ಎಸ್ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ, ನೋಂದಣಿಗಾಗಿ ಅರ್ಜಿಯನ್ನು ನೀಡಲಾಗಿದೆ. ನುತ್ತೀರ್ಣಗೊಂಡ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಮೇ 9ರಿಂದ ಎಲ್ಲಾ ದಾಖಲೆಗಳನ್ನು ಒಳಗೊಂಡು ಮೇ 24ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು https://kseab. karnataka.gov.in ಹಾಗೂ ಸಹಾಯವಾಣಿ 080- 23310075/76 ಸಂಪರ್ಕಿಸಬಹುದು ಎಂದು ಮಂಡಳಿ ನಿರ್ದೇಶಕ(ಪರೀಕ್ಷೆಗಳು) ಎಚ್.ಎನ್.ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2002-03 ರಿಂದ 2023-24ರ ಎಸ್.ಎಸ್.ಎಲ್.ಸಿ ಪರೀಕ್ಷೆವರೆಗೆ ಪೂರ್ಣಗೊಳಿಸಲಾಗಿಲ್ಲದ [Not Completed] ಹಾಗೂ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಗೈರು ಹಾಜರಾಗಿರುವ ಅರ್ಹ 2 https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಪರೀಕ್ಷೆ-2ಕ್ಕೆ ನೋಂದಣಿ ಮಾಡುವುದು. ಶಾಲಾ ಲಾಗಿನ್‌ನಲ್ಲಿ Registration for 2024 Exam-2 5 ENTER REGISTER NUMBER ಆಯ್ಕೆ ದೊರಕುತ್ತದೆ. ಈ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನೋಂದಣೆ ಸಂಖ್ಯೆಯನ್ನು ನಮೂದು ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಯ ನೋಂದಣೆ ಸಂಖ್ಯೆಯನ್ನು ನಮೂದು ಮಾಡಿ Submit ಕೊಟ್ಟಾಗ ಆ ವಿದ್ಯಾರ್ಥಿಯ ವಿವರಗಳು, ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮಾಧ್ಯಮ, ದೈಹಿಕ ಸ್ಥಿತಿ, ಜನ್ಮ ದಿನಾಂಕ, ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿಷಯಗಳು ತೆರೆದುಕೊಳ್ಳುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

2021-22 ಮತ್ತು 2022-23 ನೇ ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಹಾಗೂ ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಕ್ಕೆ ನೋಂದಾಯಿಸಿಕೊಂಡು ಪೂರ್ಣಗೊಳಿಸಲಾಗಿಲ್ಲದ [Not Completed] ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಸಹಿಗಳು ಮಂಡಳಿಯಲ್ಲಿ ಲಭ್ಯವಿದ್ದು, ಸದರಿ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಲ್ಲಿ ಪುನ: ಇವರುಗಳ ಭಾವಚಿತ್ರ ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

2. 2002ರ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಲು ಈ ಹಿಂದೆ ಇದ್ದಂತೆ MSA ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಮೂಲಕ ಸಲ್ಲಿಸಬಹುದಾಗಿದೆ. ಈ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುವುದಿಲ್ಲ. ಇಂತಹ ಅಭ್ಯರ್ಥಿಗಳ ಎಂ.ಎಸ್.ಎ ಫಾರಂನಲ್ಲಿ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಫೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಅಂಟಿಸಿ ಧೃಡೀಕರಿಸಿ ಸಲ್ಲಿಸಬೇಕು. ಎಂ.ಎಸ್.ಎ ಅರ್ಜಿಗಳನ್ನು ಪರಿಶೀಲಿಸುವಾಗ ಎಂ.ಎಸ್.ಎ ನಲ್ಲಿರುವ ಶಾಲಾ ಸಂಕೇತವು ತಮ್ಮ ಶಾಲೆಯದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಈ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ನಿಗದಿತ ಬ್ಯಾಂಕ್ NEFT ಚಲನ್ ಮೂಲಕ ಪಾವತಿಸಿ ಎಂ.ಎಸ್.ಎ ಅರ್ಜಿ, ಭಾವಚಿತ್ರ, ಶುಲ್ಕ ಪಾವತಿಯ ಚಲನ್‌ನೊಂದಿಗೆ ಮಂಡಳಿಗೆ ಸಲ್ಲಿಸುವುದು. ಈ ಮೂರು ಮಾಹಿತಿಗಳಿದ್ದಲ್ಲಿ ಮಾತ್ರ ಅರ್ಜಿಗಳನ್ನು ಪರಿಗಣಿಸಲಾಗುವುದು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಒಂದು ವೇಳೆ ಈ ವಿದ್ಯಾರ್ಥಿಗಳ ಎಂ.ಎಸ್.ಎ ಗಳು ಶಾಲೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಮಂಡಳಿಯ ವಿಭಾಗೀಯ ಕಛೇರಿಗಳಿಂದ ನಿಗಧಿತ ಶುಲ್ಕ ಪಾವತಿಸಿ ಪಡೆದು ಸಲ್ಲಿಸುವುದು ಕಡ್ಡಾಯ.

3. 2003ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಎಂ.ಎಸ್.ಎ ಮೂಲಕ ಸಲ್ಲಿಸುವ ಪ್ರಸ್ತಾವನೆಯ ಲಕೋಟೆಯ ಮೇಲೆ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಕ್ಕೆ ಅರ್ಜಿಗಳು ಎಂದು ಬರೆಯುವುದು ಹಾಗೂ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಮಂಡಳಿಯ ಅಧಿಕಾರಿಗಳ ಹೆಸರು ಮತ್ತು ಶಾಖೆಯನ್ನು ಲಕೋಟೆಯ ಮೇಲೆ ತಪ್ಪದೇ ಬರೆಯುವುದು.

4. ಮಂಡಳಿ ನಿಗದಿಪಡಿಸಿರುವ ಅಂತಿಮ ದಿನಾಂಕ “ಸಾರ್ವತ್ರಿಕ ರಜಾ ದಿನ” ಎಂಬುದಾಗಿ ಘೋಷಿಸಿದ್ದಲ್ಲಿ ಮಾರನೇ ಕೆಲಸದ ದಿನವನ್ನು ಕೊನೆಯ ದಿನಾಂಕವೆಂದು ಪರಿಗಣಿಸುವುದು. ಈ ಕೆಳಗೆ ನಮೂದಿಸಿರುವ ಮಂಡಳಿಯ ಅಧಿಕಾರಿಗಳು ಮತ್ತು ಉಸ್ತುವಾರಿ ನಿರ್ವಹಿಸುವ ಜಿಲ್ಲೆಗಳ ವಿವರಗಳನ್ನು ನೀಡಿದೆ. ಸಂಬಂಧಿಸಿದ ಶಾಲಾ ಮುಖ್ಯಸ್ಥರು ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳ ಹೆಸರನ್ನು ಲಕೋಟಿಯ ಮೇಲೆ ತಪ್ಪದೇ ಬರೆಯಬೇಕು.

5. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಾಗೂ ವಿಭಿನ್ನಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಪರೀಕೆ-2ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

Students will be allowed to register for SSLC Exam-II till May 24 ವಿದ್ಯಾರ್ಥಿಗಳ ಗಮನಕ್ಕೆ : `SSLC ಪರೀಕ್ಷೆ-2' ನೋಂದಣಿಗೆ ಮೇ 24ರ ವರೆಗೆ ಅವಕಾಶ
Share. Facebook Twitter LinkedIn WhatsApp Email

Related Posts

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM3 Mins Read

ಚಿತ್ರದುರ್ಗ: KSRTC ಬಸ್- ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

06/03/2026 8:46 PM1 Min Read

BREAKING: ಬೆದರಿಕೆ, ನಿಂದನೆ ಆರೋಪದಡಿ ಬಿಗ್ ಬಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR ದಾಖಲು

06/03/2026 8:43 PM1 Min Read
Recent News

‘ಕೆಂಪು ಮಾಂಸ’ ತಿನ್ನುವುದ್ರಿಂದ ಮಧುಮೇಹದ ಅಪಾಯ ಶೇ.50ರಷ್ಟು ಹೆಚ್ಚಾಗ್ಬೋದು : ಹೊಸ ಅಧ್ಯಯನ

06/03/2026 10:05 PM

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

06/03/2026 10:01 PM

ಸುಖಿ ದಾಂಪತ್ಯಕ್ಕೆ ಲೈಂಗಿಕ ತೃಪ್ತಿ ಅಗತ್ಯ: ಸಂಗಾತಿಯ ಮನ ಗೆಲ್ಲಲು ಇಲ್ಲಿವೆ ಸರಳ ಸೂತ್ರಗಳು

06/03/2026 9:57 PM

BREAKING : 183 ಸಿಬ್ಬಂದಿಯೊಂದಿಗೆ ಇರಾನಿನ ಯುದ್ಧನೌಕೆ ಕೊಚ್ಚಿಯಲ್ಲಿ ಸುರಕ್ಷಿತ ಡಾಕಿಂಗ್!

06/03/2026 9:45 PM
State News
KARNATAKA

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ, ನಮಗೆ ನಿರಾಶೆಯಾಗಿದೆ: ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

By kannadanewsnow0906/03/2026 10:01 PM KARNATAKA 3 Mins Read

ದುಬೈ: ಶುಕ್ರವಾರ ಮಂಡನೆಯಾಗಿರುವ ಕರ್ನಾಟಕ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ‘ಪ್ರತ್ಯೇಕ ಸಚಿವಾಲಯ’ ಘೋಷಣೆಯಾಗದಿರುವುದು ಅತೀವ…

ಚಿತ್ರದುರ್ಗ: KSRTC ಬಸ್- ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

06/03/2026 8:46 PM

BREAKING: ಬೆದರಿಕೆ, ನಿಂದನೆ ಆರೋಪದಡಿ ಬಿಗ್ ಬಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR ದಾಖಲು

06/03/2026 8:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: RV ರಸ್ತೆ- ಜಯನಗರ ನಿಲ್ದಾಣಗಳ ನಡುವಿನ ತಾತ್ಕಾಲಿಕ ವೇಗ ನಿಯಂತ್ರಣ

06/03/2026 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.