ಬೆಂಗಳೂರು : 2025ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಸ್ ಪ್ರತಿ ಪಡೆಯಲು ಹಾಗೂ ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ಶ್ರೀ ಯೂನಿವರ್ಸಿಟಿ ಕೋರ್ಸ್ ಸ್ಟೇಟ್ ಲೆವೆಲ್ ಪರೀಕ್ಷಾ ನಿಯಮಾವಳಿ 1997ರ ನಿಯಮ 29(1) ಹಾಗೂ 30(1)ರ ಪ್ರಕಾರ 2025 ರ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸದರಿ ಕಾರಣಕ್ಕಾಗಿ ಮಾರ್ಚ್-2025 ರ ಪರೀಕ್ಷೆ-1 ಕ್ಕೆ ಹಾಜರಾದ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು:-
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಸ್ಕ್ಯಾನ್ಸ್ ಪ್ರತಿ ಪಡೆದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ /ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಷಯಗಳಿಗೆ ಪ್ರತ್ಯೇಕವಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
3.ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು, ಹೊರತುಪಡಿಸಿ ಇನ್ನಾವುದೇ ವಿಧಾನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
4.ನಿಗದಿಯಾಗಿರುವ ಶುಲ್ಕವನ್ನು ಆನ್‌ಲೈನ್ ಮೂಲಕ KARNATAKA-ONE-PAYMENT GATEWAY ಮುಖಾಂತರ ಪಾವತಿಸಲು ಅವಕಾಶವಿರುತ್ತದೆ. ಬೆಂಗಳೂರು-ಒನ್, ಕರ್ನಾಟಕ-ಒನ್. ಗ್ರಾಮ-ಒನ್, OFFLINE CHALLAN ಗಳನ್ನು ಸಂಬಂಧಿಸಿದ ಶಾಖೆಯ ಮೂಲಕ ಪಾವತಿಸಲು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ OFFLINE CHALLAN ಗಳನ್ನು ಯಾವುದೇ ಬ್ಯಾಂಕ್‌ನ ಶಾಖೆಯ ಮೂಲಕ ಪಾವತಿ ಮಾಡಲು ಅವಕಾಶವಿರುತ್ತದೆ.
ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೆ ಅವಶ್ಯಕತೆಯಿದ್ದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ನಿಗದಿತ ದಿನಾಂಕದೊಳಗಾಗಿ ನೊಂದಾಯಿಸಿಕೊಳ್ಳುವುದು.
6.ಉಲ್ಲೇಖಿತ ಸರ್ಕಾರದ ಆದೇಶದಂತೆ ಸ್ಕ್ಯಾನ್ಸ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಕೆಳಕಂಡಂತೆ ಶುಲ್ಕಗಳನ್ನು ನಿಗದಿಪಡಿಸಲಾಗಿದೆ.









