ಬೆಂಗಳೂರು : 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರ ವಿಜ್ಞಾನ, ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ದ್ವಿತೀಯ ಭಾಷೆ ಕನ್ನಡ ವಿಷಯದ ಕೀ ಉತ್ತರಗಳನ್ನು ದಿನಾಂಕ:21.06.2024 ರಂದು ಮಂಡಲಿಯ ಜಾಲತಾಣದಲ್ಲಿ http://kseeb.karnataka.gov.inನಲ್ಲಿ ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ದಿನಾಂಕ:23.06.2024ರ ಸಾಯಂಕಾಲ 5.30ಗಂಟೆಯೊಳಗೆ ಮಂಡಲಿಯ ಜಾಲತಾಣದ ಮೂಲಕ ಸಲ್ಲಿಸಲು ತಿಳಿಸಿದೆ. ಮಂಡಲಿಯ ಜಾಲತಾಣ http://kseab.karnataka.gov.in ಲಿಂಕನ್ನು ಬಳಸಿ ಜೂನ್-2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರ ಕೀ ಉತ್ತರಗಳನ್ನು ಅವಲೋಕಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಲಾಗಿದೆ. ಸದರಿ ಮಾಹಿತಿಯನ್ನು ತಮ್ಮ ಜಿಲ್ಲೆಯಲ್ಲಿ ಪ್ರಚುರಪಡಿಸಿ ವಿದ್ಯಾರ್ಥಿಗಳು/ಶಿಕ್ಷಕರಿಗೆ ಮಾಹಿತಿಯು ತಿಳಿಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಮಂಡಲಿಯು ಪರಿಗಣಿಸುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.