Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM

BIG NEWS: ರಾಜ್ಯದ ವಿದ್ಯಾರ್ಥಿಗಳೇ ‘SSLC, PUC ಪರೀಕ್ಷೆ’ಗಳಲ್ಲಿ ‘ಉತ್ತೀರ್ಣತಾ ಅಂಕ’ ಬದಲಾವಣೆ, ಇಲ್ಲಿದೆ ಪುಲ್ ಡೀಟೆಲ್ಸ್

15/10/2025 3:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ವಿದ್ಯಾರ್ಥಿಗಳೇ ‘SSLC, PUC ಪರೀಕ್ಷೆ’ಗಳಲ್ಲಿ ‘ಉತ್ತೀರ್ಣತಾ ಅಂಕ’ ಬದಲಾವಣೆ, ಇಲ್ಲಿದೆ ಪುಲ್ ಡೀಟೆಲ್ಸ್
KARNATAKA

BIG NEWS: ರಾಜ್ಯದ ವಿದ್ಯಾರ್ಥಿಗಳೇ ‘SSLC, PUC ಪರೀಕ್ಷೆ’ಗಳಲ್ಲಿ ‘ಉತ್ತೀರ್ಣತಾ ಅಂಕ’ ಬದಲಾವಣೆ, ಇಲ್ಲಿದೆ ಪುಲ್ ಡೀಟೆಲ್ಸ್

By kannadanewsnow0915/10/2025 3:14 PM

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಎನ್ನುವಂತೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾಗಲು ನಿಗದಿ ಪಡಿಸಿರುವಂತ ಉತ್ತೀರ್ಣತಾ ಅಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.

ಈ ಕುರಿತಂತೆ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

1.ಪ್ರಪ್ರಥಮ ಬಾರಿಗೆ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಉನ್ನತೀಕರಣ.

ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ ಒಟ್ಟು 800 ಸರ್ಕಾರಿ ಶಾಲೆಗಳನ್ನು ಒಂದೇ ಬಾರಿಗೆ ಉನ್ನತೀಕರಿಸಿ, ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (Karnataka Public Schools) ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ, ಪ್ರತಿ ಶಾಲೆಯನ್ನು ₹4.00ಕೋಟಿ ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಸದರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೆ ಒಂದೇ ಸೂರಿನಡಿ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು.

ಮೊದಲ ಹಂತದಲ್ಲಿ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಸಹಯೋಗದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ 500 ಶಾಲೆಗಳನ್ನು KPS ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದರ ಜೊತೆಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ನಿಧಿಯ ಮೂಲಕ 200 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು.

ಹಾಗೆಯೇ, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (CEPMIZ) ವತಿಯಿಂದ 10 ತಾಲೂಕುಗಳಲ್ಲಿ 100 KPS ಶಾಲೆಗಳನ್ನು ಉನ್ನತೀಕರಿಸಲು ಪ್ರತ್ಯೇಕ ಡಿ.ಪಿ.ಆರ್ ತಯಾರಿಸಲಾಗುವುದು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ರಿಂದ 3  KPS ಶಾಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ 4 to 5 KPS ಶಾಲೆಗಳನ್ನಾಗಿ ಉನ್ನತೀಕರಣ.

ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿಯನ್ನು ರಚಿಸಲಾಗುವುದು. ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ, ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶೈಕ್ಷಣಿಕ ವಾತಾವರಣವನ್ನು ಒದಗಿಸುವಲ್ಲಿ KPS ಶಾಲೆಗಳು ಪ್ರಮುಖ ಪಾತ್ರವಹಿಸಲು ಸಹಕಾರಿಯಾಗಲಿವೆ.

2.SSLC & PUC ಪರೀಕ್ಷೆಗಳಲ್ಲಿ ಉತ್ತೀರ್ಣತಾ ಅಂಕಗಳಲ್ಲಿ ಬದಲಾವಣೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಿ.ಬಿ.ಎಸ್.ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡಾ 33 ರಷ್ಟು ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತುತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆಯಬೇಕೆಂಬ ನಿಯಮವಿರುತ್ತದೆ. ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸಿಬಿಎಸ್‌ಇ ಹಾಗೂ ನೆರೆರಾಜ್ಯಗಳ ಉತ್ತೀರ್ಣತಾ ಮಾನದಂಡವನ್ನು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಸಹ ಅನ್ವಯವಾಗುವಂತೆ ಏಕರೂಪ ಪದ್ದತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಂಡಲಿ ನಿಯಮಗಳಲ್ಲಿ ತಿದ್ದುಪಡಿ ತರಲು ಕರಡು ನಿಯಮದ ಅಧಿಸೂಚನೆಯಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡಲು 15 ದಿನಗಳ ಕಾಲಾವಕಾಶ ನೀಡಿ ರಾಜ್ಯಪತ್ರ ಹೊರಡಿಸಲಾಗಿತ್ತು.

ಕರಡು ಅಧಿಸೂಚನೆಯ ಪರವಾಗಿ 701 ಪತ್ರಗಳು ಸ್ವೀಕೃತವಾಗಿದ್ದು ಹಾಗೂ ಕೇವಲ 08 ಪತ್ರಗಳಲ್ಲಿ ಇದಕ್ಕೆ ಆಕ್ಷೇಪಿಸಿರುವುದರಿಂದ ಕರಡು ಅಧಿಸೂಚನೆಯಲ್ಲಿನ ನಿಯಮ ತಿದ್ದುಪಡಿಯನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟಾರೆ ಶೇಕಡಾ 33 ಅಂಕಗಳನ್ನು ಪಡೆದು, ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದಲ್ಲಿ ಮತ್ತು ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 30 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಪಟ್ಟಂತೆ, ಅಭ್ಯರ್ಥಿಗಳು ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 30 ಅಂಕಗಳನ್ನು ವಡೆಯಬೇಕು ಹಾಗೂ ಪ್ರತಿ ವಿಷಯದಲ್ಲೂ ಲಿಖಿತ ಮತ್ತು ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದು ಒಟ್ಟಾರೆ ಶೇಕಡಾ 33 (600ಕ್ಕೆ 198) ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ.

ಈ ನೂತನ ನಿಯಮವು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗುವ ಹೊಸ (REGULAR) ವಿದ್ಯಾರ್ಥಿಗಳು, ಪುನರಾವರ್ತಿತ (REPEATER) ಹಾಗೂ ಖಾಸಗಿ (PRIVATE) ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ.

ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ವಿವರಗಳನ್ನು ಮಂಡಳಿ ಪ್ರಕಟಿಸಲಿದೆ.

3.ಮೌಲ್ಯ ಶಿಕ್ಷಣ

  • ವಿಧಾನ ಪರಿಷತ್ ನಲ್ಲಿ ಮಾನ್ಯ ಸದಸ್ಯರುಗಳು ವಿಶೇಷ ಚರ್ಚೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳಿಗನುಗುಣವಾಗಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಸಂಬಂಧ 1 ರಿಂದ 10ನೇ ತರಗತಿಯವರೆಗೆ ಪ್ರತ್ಯೇಕವಾಗಿ ಮೌಲ್ಯ ಶಿಕ್ಷಣವನ್ನು ಅಳವಡಿಸಲು 10 ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ವತಿಯಿಂದ ರಚಿಸಲಾಗಿದೆ.
  • ಈ ಸಂಬಂಧ 10 Core Values (ಮೂಲ ಮೌಲ್ಯಗಳು) ಮತ್ತು ಅದಕ್ಕೆ ಸಂಬಂಧಿಸಿದ Sub values (ಉಪ ಮೌಲ್ಯಗಳು) ಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಲಾಗಿದೆ.

ಮೂಲ ಮೌಲ್ಯಗಳು (Core Values)

  1. ಅನುಭೂತಿ ಮತ್ತು ದಯೆ. (Empathy and Compassion)
  2. ಗೌರವ. (Respect)
  3. ಪ್ರಾಮಾಣಿಕತೆ ಮತ್ತು ಬದ್ಧತೆ. (Honesty and Integrity)
  4. ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ. (Sustainable living and environmental awareness)
  5. ನಾಗರಿಕ ಜವಾಬ್ದಾರಿ. (Civic Responsibility)
  6. ವೈವಿಧ್ಯತೆ, ಸಮತೆ, ಮತ್ತು ಒಳಗೊಳ್ಳುವಿಕೆ. (Diversity, Equity and Inclusion)
  7. ಭಾವನಾತ್ಮಕ ಬುದ್ದಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವ. (Emotional intelligence & Resilience)
  8. ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲ ಕಲ್ಪನೆ. (Scientific temper and creative imagination)
  9. ಸುರಕ್ಷತೆ. (Safety)
  10. ಲಿಂಗ ಸಮಾನತೆ. (Gender Equality)
  • ಸದರಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಡಿಜಿಟಲ್ ಅವತರಣಿಕೆಯನ್ನು ನವೆಂಬರ್ 01 ಕನ್ನಡ ರಾಜ್ಯೋತ್ಸವದಂದು ಸನ್ಮಾನ್ಯ ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.
  • ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಮುದ್ರಿಸಿ ಪ್ರತಿ ವಿದ್ಯಾರ್ಥಿಗೆ ಒಂದು ಚಟುವಟಿಕಾ ಪುಸ್ತಕದಂತೆ ಶಾಲೆಗಳಿಗೆ ಸರಬರಾಜು ಮಾಡಲು KTBS ವತಿಯಿಂದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ.
  • 2025-26ನೇ ಸಾಲಿನಲ್ಲಿ 1984 ಸಂಪನ್ಮೂಲ ವ್ಯಕ್ತಿ(Master Resource Person)ಗಳಿಗೆ ತರಬೇತಿಯನ್ನು DSERT / ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್)ಹಂತದಲ್ಲಿ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ನೀಡಲು ಯೋಜಿಸಲಾಗಿದೆ.
  • ರಾಜ್ಯದ ಸುಮಾರು 96000 ಶಿಕ್ಷಕರಿಗೆ 01 ದಿನದ ತರಬೇತಿಯನ್ನು Cascade mode ನಲ್ಲಿ ಜಿಲ್ಲಾ ಮತ್ತು ಬ್ಲಾಕ್ ಹಂತದಲ್ಲಿ PAB (Planning and Budget) ಅನುಮೋದನೆಯಂತೆ ಆಯೋಜಿಸಲು DSERT ವತಿಯಿಂದ ಯೋಜಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ಕರ್ನಾಟಕ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ದಿನಾಂಕ:14.10.2025 ವರೆಗೆ (ಗ್ರೇಟರ್ ಬೆಂಗಳೂರು ಹೊರತುಪಡಿಸಿ) ಶೇ.91.46 ಪ್ರಗತಿಯನ್ನು ಸಾಧಿಸಲಾಗಿದೆ. ಸದರಿ ಸಮೀಕ್ಷೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರುಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.

ರಾಜ್ಯದ ಶಿಕ್ಷಕರು ಏಪ್ರಿಲ್ /ಮೇ ತಿಂಗಳಲ್ಲಿ ಒಳಮೀಸಲಾತಿ ಸಮೀಕ್ಷೆ ಜೊತೆಗೆ 2025ರ ಸೆಪ್ಟೆಂಬ‌ರ್ 22 ರಿಂದ ರಾಜ್ಯಾದ್ಯಂತ ಹಾಗೂ ಬೆಂಗಳೂರಿನಲ್ಲಿ ಅಕ್ಟೋಬರ್ 4 ರಿಂದ ಲಕ್ಷಾಂತರ ಜನ ಶಿಕ್ಷಕರು ಸಾಕಷ್ಟು ಶ್ರಮವಹಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಸಮೀಕ್ಷೆಯ ಯಶಸ್ವಿಗೆ ಶ್ರಮವಹಿಸಿದ್ದಾರೆ, ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಒತ್ತಡಗಳ ಮಧ್ಯೆಯು ಶಿಕ್ಷಕರು ತುಂಬಾ ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿದ್ದು ಬೆಂಗಳೂರಿನಲ್ಲಿಯೂ ಕೂಡ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.

BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT

BREAKING : ಇನ್ಮುಂದೆ ‘PUC’ ಅಲ್ಲಿ 198 & ‘SSLC’ ಅಲ್ಲಿ 206 ಅಂಕ ಪಡೆದರೆ ಪಾಸ್ : ಸಚಿವ ಮಧು ಬಂಗಾರಪ್ಪ

Share. Facebook Twitter LinkedIn WhatsApp Email

Related Posts

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM2 Mins Read

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM1 Min Read

BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT

15/10/2025 3:09 PM1 Min Read
Recent News

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM

BIG NEWS: ರಾಜ್ಯದ ವಿದ್ಯಾರ್ಥಿಗಳೇ ‘SSLC, PUC ಪರೀಕ್ಷೆ’ಗಳಲ್ಲಿ ‘ಉತ್ತೀರ್ಣತಾ ಅಂಕ’ ಬದಲಾವಣೆ, ಇಲ್ಲಿದೆ ಪುಲ್ ಡೀಟೆಲ್ಸ್

15/10/2025 3:14 PM

SHOCKING : ಅಹಮದಾಬಾದ್ ಕೋರ್ಟ್’ನಲ್ಲಿ ತೀರ್ಪು ನೀಡಿದ ಬಳಿಕ ಜಡ್ಜ್ ಮೇಲೆ ಚಪ್ಪಲಿ ಎಸೆದ ವ್ಯಕ್ತಿ

15/10/2025 3:14 PM
State News
KARNATAKA

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

By kannadanewsnow0915/10/2025 3:41 PM KARNATAKA 2 Mins Read

ಬೀದರ್ : ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ಹಾನಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ…

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM

BIG NEWS: ರಾಜ್ಯದ ವಿದ್ಯಾರ್ಥಿಗಳೇ ‘SSLC, PUC ಪರೀಕ್ಷೆ’ಗಳಲ್ಲಿ ‘ಉತ್ತೀರ್ಣತಾ ಅಂಕ’ ಬದಲಾವಣೆ, ಇಲ್ಲಿದೆ ಪುಲ್ ಡೀಟೆಲ್ಸ್

15/10/2025 3:14 PM

BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT

15/10/2025 3:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.