ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿ ಗಂಟೆಗಟ್ಟಲೆ ನರಕಯಾತನೆ ಅನುಭವಿಸಿದ ವಿದ್ಯಾರ್ಥಿನಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡ ರೈಲು ನಿಲ್ದಾಣದಲ್ಲಿ ಈ ಘಟನೆಯ ನಡೆದಿದ್ದು, ದುವ್ವಾಡದ ಕಾಲೇಜೊಂದರಲ್ಲಿ ಎಂಸಿಎ ಓದುತ್ತಿರುವ ವಿದ್ಯಾರ್ಥಿನಿ ಶಶಿಕಲಾ, ನಿಲ್ದಾಣದಲ್ಲಿ ಓಡುತ್ತಿದ್ದ ರೈಲಿನಿಂದ ಕೆಳಗಿಳಿಯುವ ವೇಳೆ ಆಕಸ್ಮಿಕವಾಗಿ ಪ್ಲಾಟ್ಫಾರ್ಮ್ ಜಾರಿ ಬಿದ್ದಿದ್ದಾಳೆ. ಈ ಅನಿರೀಕ್ಷಿತ ಘಟನೆಯಿಂದ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದ ಯುವತಿ ನರಕಯಾತನೆ ಅನುಭವಿಸಬೇಕಾಯ್ತು.

ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ವಿದ್ಯಾರ್ಥಿನಿಯನ್ನ ಹೊರತರುವ ಕಠಿಣವಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಈ ವಿಷಯ ರೈಲ್ವೇ ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಸ್ಥಳಕ್ಕಾಗಮಿಸಿದ ರೈಲ್ವೆ ರಕ್ಷಣಾ ತಂಡ, ವಿದ್ಯಾರ್ಥಿನಿ ಸಿಲುಕಿದ್ದ ಪ್ಲಾಟ್ಫಾರ್ಮ್ ಒಡೆದು ರಕ್ಷಿಸಲಾಗಿದೆ. ಒಟ್ಟಾರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

https://twitter.com/IndiaObservers/status/1600451838939365380?s=20&t=wBnToxMjnMzEM3GDE60Yaw

 

ಅದೇನೇ ಇರಲಿ, ರೈಲಿನಲ್ಲಿ ಹತ್ತುವಾಗ.. ಇಳಿಯುವಾಗ.. ಅದರಲ್ಲೂ ಓಡುತ್ತಿರುವ ರೈಲನ್ನ ಹಿಡಿಯುವುದು.. ಓಡುತ್ತಿರುವ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸುವುದು ನಿಲ್ಲಿಸಿ. ಈ ಮೂಲಕ ಇಂತಹ ಅವಘಡಗಳನ್ನ ತಪ್ಪಿಸಬಹುದು.

 

BIGG NEW : RBI ನಿಂದ ಮಹತ್ವದ ನಿರ್ಧಾರ : ವಿವಿಧ ಮಾರುಕಟ್ಟೆಗಳ ವಹಿವಾಟಿನ ಸಮಯ ವಿಸ್ತರಣೆ | RBI extends trading hours

‘ಅಪೌಷ್ಟಿಕತೆ’ ನಿವಾರಣೆಗೆ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ : ಸಿಎಂ ಬೊಮ್ಮಾಯಿ |Basavaraj Bommai

ಮತ್ತೆ ಬಂತಾ ‘ಝಾಂಬಿ ವೈರಸ್’.? ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸೋ ವ್ಯಕ್ತಿಗಳ ಆಘಾತಕಾರಿ ವಿಡಿಯೋ ವೈರಲ್

Share.
Exit mobile version