ಬೆಳಗಾವಿ: ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆಯೋದು ಬಿಟ್ಟು, ಇಬ್ಬರು ವಿದ್ಯಾರ್ಥಿಗಳು ವಿಚಿತ್ರ ಬೇಡಿಕೆಯನ್ನು ಉತ್ತರ ಪತ್ರಿಕೆಯಲ್ಲೇ ಬರೆದು, ಮೌಲ್ಯ ಮಾಪಕರ ಮುಂದಿಟ್ಟಿದ್ದಾರೆ. ಅವರ ಬರವಣಿಗೆಯನ್ನು ಕಂಡು ಮೌಲ್ಯಮಾಪಕರೇ ದಂಗಾಗಿ ಹೋಗಿದ್ದಾರೆ. ಅದೇನು ಅಂತ ಮುಂದೆ ಓದಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯ ಮಾಪಕನ ಕಾರ್ಯವು ಕೇಂದ್ರವೊಂದರಲ್ಲಿ ನಡೆಯುತ್ತಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನದ ವೇಳೆಯಲ್ಲಿ ಮೌಲ್ಯ ಮಾಪಕರು ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೇಡಿಕೆ ಕಂಡು ಬೆರಗಾಗಿ ಹೋಗಿದ್ದಾರೆ.
ನೀವು ಪಾಸ್ ಮಾಡಿದ್ರೆ ನನ್ನನ್ನು ಪೋಷಕರು ಕಾಲೇಜಿಗೆ ಕಳಿಸೋದಿಲ್ಲ
ಓರ್ವ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಪ್ಲೀಸ್ ಮೀಸ್ ಅಂಡ್ ಸರ್. ದಯವಿಟ್ಟು ಪ್ಲೀಸ್ ಪ್ಲೀಸ್ ನಂಗೆ ಪಾಸ್ ಮಾಡಿ. ಪ್ಲೀಸ್ ಸರ್. ಮಿಸ್ ನಂಗೆ ಪಾಸ್ ಮಾಡಿಲ್ಲಾ ಅಂದ್ರೆ ನಮ್ಮ ಮನೆಯಲ್ಲಿ ಮುಂದೆ ಶಾಲೆ ಕಲಿಸುವುದಿಲ್ಲ. ಪ್ಲೀಸ್ ಸರ್ ನಮ್ಮ ಮನೆಯಲ್ಲಿ ನನ್ನ ಅಪ್ಪ ಅಮ್ಮ ಪಾಸ್ ಆಗಿಲ್ಲಾ ಅಂದ್ರೆ ನನ್ನಗೆ ಕಾಲೇಜು ಹಚ್ಚೋದಿಲ್ಲ. ಪ್ಲೀಸ್ ಪ್ಲೀಸ್ ಪ್ಲೀಸ್ ದಯವಿಟ್ಟು ಪಾಲ್ ಮಾಡಿ ಪ್ಲೀಸ್ ಅಂತ ಬೇಡಿಕೆಯನ್ನು ಇಟ್ಟಿದ್ದಾನೆ.
ನನ್ನ ಲವ್ ನಿಮ್ಮ ಕೈಯಲ್ಲಿದ್ದೆ, ಪ್ಲೀಸ್ ಪಾಸ್ ಮಾಡಿ
ಇನ್ನೂ ಮತ್ತೋರ್ವ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಸರ್ ರೀ ಮೇಡಂ ರೀ ನಿಮ್ಮ ಕಾಲ ಬೀಳ್ತೀನಿ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರೆ ಅಷ್ಟೇ ಲವ್ ಮಾಡತ್ತೇನೆ ಅಂದಾಳ ರೀ ನನ್ನ ಹುಡುಗಿ. ಈ 500 ನೀವ ಚಾ ಕುಡಿರಿ. ಸರ್ ರೀ ನನ್ನ ಪಾಸ್ ಮಾಡರಿ ಅಂತ ವಿಚಿತ್ರ ಬೇಡಿಕೆಯನ್ನು ಇರಿಸಿದ್ದಾನೆ.
‘SSC ಪರೀಕ್ಷಾ ಅಕ್ರಮ’ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ’ ಜಾರಿ
BIG NEWS: ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ: ಸಿಎಂ ಸಿದ್ದರಾಮಯ್ಯ ಘೋಷಣೆ