ಮಂಡ್ಯ: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕೆಲ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದ್ರೆ, ಮತ್ತೆ ಕೆಲವರು ಕಡಿಮೆ ಅಂಕ ಗಳಿಸಿದ್ದಾರೆ. ಇನ್ನೂ ಕೆಲವರು ಕಡಿಮೆ ಅಂಕ ಬಂದಿದೆ ಅಂತ ಬೇಜಾರಲ್ಲಿ ಇದ್ದೀರಿ. ಆದ್ರೇ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಮಾಡಬೇಡಿ. ಮುಂದೆ ನಿಮ್ಗೆ ಎರಡು ಪರೀಕ್ಷೆಗಳು ಸಿಕ್ತಾವೆ. ಬರೆದು ಉತ್ತಮ ಅಂಕಗಳಿಸಿ. 

ಹೌದು ವಿದ್ಯಾರ್ಥಿಗಳೇ. ದುಡುಕಿನ ನಿರ್ಧಾರ ಮಾಡಬೇಡಿ. ಹೀಗೆ ದುಡಿಕಿನ ನಿರ್ಧಾರ ಮಾಡಿದಂತ ವಿದ್ಯಾರ್ಥಿಯೊಬ್ಬ, ಮಂಡ್ಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ, ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ ಎನ್ನುವ ಕಾರಣಕ್ಕಾಗಿ ಲಿಖಿತ್(15) ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶಾಲೆಯ ಬಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ನೋಡೋದಕ್ಕೆ ಹೋಗಿದ್ದನು. ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಂತ ವಿಷಯವನ್ನು ಶಿಕ್ಷಕರು ತಿಳಿಸಿದ್ದಾರೆ. ಇದರಿಂದ ಮನನೊಂದು ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಮಾಡ್ಬೇಡಿ. ಇದು ನಮ್ಮ ಕಳಕಳಿ

ವಿದ್ಯಾರ್ಥಿಗಳೇ ಕಡಿಮೆ ಅಂಕ ಬರಲೀ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿರಿ. ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ಮಾಡಬೇಡಿ. ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-2, 3 ಇದ್ದಾವೆ. ಕುಳಿತು ಚೆನ್ನಾಗಿ ಓದಿ ಬರೆಯಿರಿ. ಹೆಚ್ಚು ಅಂಕ ಬರ್ತಾವೆ, ಫೇಲ್ ಆಗಿದ್ರೂ ನೀವು ಪಾಸ್ ಆಗೋದು ಗ್ಯಾರಂಟಿ.

ವರದಿ: ಗಿರೀಶ್ ರಾಜ್, ಮಂಡ್ಯ

‘SSLC ಪರೀಕ್ಷೆಯಲ್ಲಿ ಫೇಲ್’ ಆದ ವಿದ್ಯಾರ್ಥಿಗಳೇ ಗಮನಿಸಿ: ‘ಮರು ಪರೀಕ್ಷೆ’ ದಿನಾಂಕ ಪ್ರಕಟ | SSLC Main Exam-2 Timetable

‘SSLC ಪರೀಕ್ಷೆಯಲ್ಲಿ ಫೇಲ್’ ಆದ ವಿದ್ಯಾರ್ಥಿಗಳೇ ಗಮನಿಸಿ: ‘ಮರು ಪರೀಕ್ಷೆ’ ದಿನಾಂಕ ಪ್ರಕಟ | SSLC Main Exam-2 Timetable

Share.
Exit mobile version