ಬೆಂಗಳೂರು:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಹೋರಾಡುತ್ತೇನೆ ಎಂದು ಸಂಸದೆ ಸುಮಲತಾ ಶುಕ್ರವಾರ ಪ್ರತಿಪಾದಿಸಿದರು.
BREAKING: ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು: ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್ ಜಾರಿ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಮೈತ್ರಿ ಪಕ್ಷ ಜೆಡಿಎಸ್ಗೆ ಮಂಡ್ಯ ಕ್ಷೇತ್ರ ಸಿಗಲಿದೆ ಎಂಬ ಮಾಹಿತಿ ಅಂತಿಮವಾಗಿಲ್ಲ, ನಾನು ಖಂಡಿತ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ.”
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ವಿರುದ್ಧ ನಿರ್ಣಯ ಮಂಡನೆಗೆ ಬಿಜೆಪಿ ಬೆಂಬಲ ನೀಡಲಿ: ಡಿ ಕೆ ಶಿವಕುಮಾರ್
”ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟಿಸಲು ನಾನು ಶ್ರಮಿಸುತ್ತಿದ್ದೇನೆ, ಟಿಕೆಟ್ ಅಂತಿಮಗೊಳ್ಳುವವರೆಗೂ ಕಾದು ನಂತರ ಮಾತನಾಡುತ್ತೇನೆ, ಮಂಡ್ಯ ಭಾಗದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಶ್ವಾಸವಿದೆ, ನಾನು ಟಿಕೆಟ್ಗಾಗಿ ಲಾಬಿ ಮಾಡುತ್ತಿಲ್ಲ, ಮಂಡ್ಯ ಜನತೆಗಾಗಿ ಹೋರಾಟ ನಡೆಸುತ್ತಿದ್ದೇನೆ.” ಎಂದು ಹೇಳಿದರು.
“ಟಿಕೆಟ್ ಸಿಗಬೇಕಾದರೆ ಎಲ್ಲಿಂದ ಬೇಕಾದರೂ ಅವಕಾಶ ಸಿಗಬಹುದು. ಆದರೆ ನನಗೆ ಮಂಡ್ಯದ ಜನ ಮುಖ್ಯ, ಜೆಡಿಎಸ್ ನವರು ಏನು ಬೇಕಾದರೂ ಹೇಳಲಿ. ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುವವರೆಗೂ ಕಾಯುತ್ತೇನೆ. ನಂತರ ಮುಂದಿನ ಕ್ರಮವನ್ನು ನಾನು ನಿರ್ಧರಿಸುತ್ತೇನೆ” ಎಂದು ಸುಮಲತಾ ಹೇಳಿದರು.