ಅರ್ಜೆಂಟೀನಾ: ಅರ್ಜೆಂಟೀನಾದಲ್ಲಿ 7.4 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಭೂಕಂಪನದಿಂದಾಗಿ ಬೆಚ್ಚಿ ಬಿದ್ದಿರುವಂತ ಜನರು, ಮನೆಯಿಂದ ಹೊರ ಓಡಿ ಬಂದು ಬಯಲಿನಲ್ಲಿ ಕೆಲ ಹೊತ್ತು ಕಾಲ ಕಳೆಯುವಂತೆ ಆಗಿದೆ.
ಕೆಲ ತಿಂಗಳ ಹಿಂದಷ್ಟೇ ಮಯನ್ಮಾರ್ ನಲ್ಲಿ ನಡೆದಿದ್ದಂತ ಭೂಕಂಪನದಿಂದ ತೀವ್ರ ಹಾನಿ ಉಂಟಾಗಿತ್ತು. ನೂರಾರು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಬೆನ್ನಲ್ಲೇ ಅರ್ಜೆಂಟೀನಾದಲ್ಲಿ 7.4ರ ತೀವ್ರತೆಯಲ್ಲಿ ಪ್ರಭಲ ಭೂಕಂಪನ ಉಂಟಾಗಿದೆ.
ಅರ್ಜೆಂಟೀನಾದಲ್ಲಿ ಉಂಟಾದಂತ 7.4 ತೀರ್ವತೆಯ ಪ್ರಬಲ ಭೂಕಂಪನದಿಂದಾಗಿ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯಕ್ಕೆ ಸಾವು ನೋವಿನ ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.